ಜನವರಿ 2023

ಜೋಶ್

ವರ್ಸೇ ಇನ್ನೋವೇಷನ್ ಪ್ರೈವೇಟ್ ಲಿಮಿಟೆಡ್ ಸಹವರ್ತಿಯಾದ ಜೋಶ್ ಗೆ ಸ್ವಾಗತ, ಇದರ ನೋಂದಾಯಿ ಕಛೇರಿಯ ವಿಳಾಸ ಹೆಲಿಯೋಸ್ ಬಿಸಿನೆಸ್ ಪಾರ್ಕ್ ಔಟರ್ ರಿಂಗ್ ರಸ್ತೆ, ಕಾಡುಬೀಸನಹಳ್ಳಿ, ಬೆಂಗಳೂರು – 560 103, ಕರ್ನಾಟಕ, ಭಾರತ, (“ವರ್ಸೆ”, “ನಾವು”, “ನಮ್ಮ”, “ನಮ್ಮೊಂದಿಗೆ” ಅಥವಾ “ಜೋಶ್”). ಸೇವೆಗಳ ಪ್ರಚಾರ ಮತ್ತು ಸೇವೆ ಒದಗಿಸಲು ಜೋಶ್ ನಮ್ಮ ಬ್ರಾಂಡ್ ಆಗಿದೆ. ಭವಿಷ್ಯದಲ್ಲಿ ಮೊಬೈಲ್ ಅಪ್ಲಿಕೇಷನ್ ಅಥವಾ ಡೆಸ್ಕ್ ಟಾಪ್ ವರ್ಷನ್ ನ್ನು ಯಾವುದೇ ಮಾಧ್ಯಮ ಅಥವಾ ಯಾವುದೇ ವಿಧಾನದಲ್ಲಿ ಡೌನ್ ಲೋಡಿಂಗ್, ಇನ್ ಸ್ಟಾಲಿಂಗ್ ಮತ್ತು ಮೊಬೈಲ್ ಅಪ್ಲಿಕೇಷನ್ ಗಳ ಬಳಕೆ ಮಾಡುವ ಮೊದಲು ನೀವು ನಿಯಮಗಳು ಮತ್ತು ಷರತ್ತುಗಳನ್ನು ಎಚ್ಚರಿಕೆಯಿಂದ ಓದಬೇಕು ಮತ್ತು ಅರ್ಥಮಾಡಿಕೊಳ್ಳಬೇಕು (“ಸೇವೆಗಳು” ಅಥವಾ “ಪ್ಲಾಟ್ ಫಾರ್ಮ್” ಒಟ್ಟಾಗಿ ಓದುವುದು) ಈ ಷರತ್ತುಗಳು ಮತ್ತು ನಿಯಮಗಳ ಉದ್ದೇಶಗಳಿಗಾಗಿ ವರ್ಸೇಯ ಯಾವುದೇ ಉಲ್ಲೇಖವು ಅದರ ಅಂಗಸಂಸ್ಥೆಗಳು, ಸಹಸಂಸ್ಥೆಗಳು, ಪೋಷಕ ಕಂಪನಿ ಮತ್ತು ಸೋದರಿ ಕಂಪನಿ ಕಾಳಜಿಗಳನ್ನು ಒಳಗೊಂಡಿರುತ್ತದೆ. ಈ ಸೇವಾ ನಿಯಮಗಳು, ಗೌಪ್ಯತಾ ನೀತಿ ಮತ್ತು ಸಮುದಾಯ ಮಾರ್ಗಸೂಚಿಗಳು ಹಾಗೂ ಇತರ ಎಲ್ಲಾ ಅನ್ವಯಿತ ಕಾನೂನುಗಳು ಮತ್ತು ನಿಬಂಧನೆಗಳು (ಒಟ್ಟಾಗಿ “ಕಾನೂನು ನಿಯಮಗಳು’’ ಅಥವಾ “ನಿಬಂಧನೆಗಳು”) ನೀವು ನೋಂದಾಯಿತ ಬಳಕೆದಾರ ಅಥವಾ ವಿಸಿಟರ್ (ಅಂದರೆ ನೀವು ಹಾಗೆಯೇ ಮೊಬೈಲ್ ಅಥವಾ ಕಂಪ್ಯೂಟರ್ ನಂತಹ ಇತರ ಸಾಧನಗಳ ಮೂಲಕ ಅನಿಯಮಿತವಾಗಿ ವೇದಿಕೆ ಮೂಲಕ ಬ್ರೌಸ್ ಮಾಡುವುದು ಅಥವಾ ನೋಂದಾಯಿಸದೇ ವೇದಿಕೆಯನ್ನು ಬಳಸುವುದು ಎಂದರ್ಥ) ಆಗಿದ್ದರೂ ಕೂಡ ವೇದಿಕೆಗೆ ಪ್ರವೇಶ ಮತ್ತು ಅದರ ಬಳಕೆಯನ್ನು ನಿಯಂತ್ರಿಸುತ್ತದೆ.

2000ರ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಅನುಸಾರ ಪ್ರಕಟಿಸಲಾದ ಒಪ್ಪಂದದ (“ನಿಯಮಗಳು”) ನಿಯಮಗಳನ್ನು ನೀವು ಓದುತ್ತೀರಿ. 2000ರ ಮಾಹಿತಿ  ತಂತ್ರಜ್ಞಾನ (ಸೂಕ್ತ ಭದ್ರತಾ ಚಟುವಟಿಕೆಗಳು ಮತ್ತು ಕಾರ್ಯವಿಧಾನಗಳು ಮತ್ತು ಸೂಕ್ಷ್ಮ ವೈಯಕ್ತಿಕ ದತ್ತಾಂಶ ಅಥವಾ ಮಾಹಿತಿ) ನಿಯಮಗಳು ಸೇರಿದಂತೆ ಅದಕ್ಕೆ ಸಂಬಂಧಿಸಿದ ನಿಯಮಗಳ ಜತೆಗೆ ಓದಲಾಗುತ್ತಿದೆ, 2011 ಮತ್ತು 2021ರ ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ನಿಯಮಗಳು, ಮತ್ತು ಯಾವುದಾದರೂ ತಿದ್ದುಪಡಿಗಳು ಸಂಬಂಧವನ್ನು ನಿಯಂತ್ರಿಸುತ್ತದೆ ಮತ್ತು ನಿಮ್ಮ ಹಾಗೂ ನಮ್ಮ ನಡುವಿನ ಒಪ್ಪಂದದಂತೆ ಇದು ಕಾರ್ಯ ನಿರ್ವಹಿಸುತ್ತದೆ ಹಾಗೂ ನೀವು ವೇದಿಕೆಯನ್ನು ಪ್ರವೇಶಿಸುವ ಮತ್ತು ಅದನ್ನು ಬಳಸುವ ನಿಯಮಗಳ ಬಗ್ಗೆ ತಿಳಿಸಲಾಗಿದ್ದು, ನಮಗೆ ಸಂಬಂಧಿಸಿದ ವೆಬ್ ಸೈಟ್ ಗಳು, ಸೇವೆಗಳು, ಅಪ್ಲಿಕೇಷನ್ಸ್ , ಉತ್ಪನ್ನಗಳು ಮತ್ತು ವಿಷಯಗಳ ಬಗ್ಗೆ ನಿಯಂತ್ರಣ ಹೊಂದಿದೆ. (ಒಟ್ಟಾಗಿ “ಸೇವೆಗಳು”)

ನೀವು ವೇದಿಕೆಯಲ್ಲಿ ವಿಷಯ ನೋಡಲು ಪ್ರವೇಶಿಸುವುದು, ಬಳಸುವುದು ಅಥವಾ ಡೌನ್ ಲೋಡಿಂಗ್ ಮಾಡಿದಲ್ಲಿ, ನೀವು ಈ ನಿಬಂಧನೆಗಳಿಗೆ ಬದ್ಧರಾಗಿರುವುದಾಗಿ ಒಪ್ಪಿಕೊಂಡಂತಾಗುತ್ತದೆ.

1. ಸಾಮಾನ್ಯ

ಎ. ಜೋಶ್ ಒಂದು ವಿಶಿಷ್ಟ ಮೊಬೈಲ್ ಮತ್ತು ಡೆಸ್ಕ್ ಟಾಪ್ ಅಪ್ಲಿಕೇಷನ್ ಅಥವಾ ಸಾಫ್ಟ್ ವೇರ್  ತಂತ್ರಜ್ಞಾನವಾಗಿದ್ದು, ಅದು ನಿಮ್ಮ ವಿಷಯವನ್ನು ನೋಡಲು, ರಚಿಸಲು ಮತ್ತು ಹಂಚಿಕೊಳ್ಳಲು ನಿಮಗೆ ಪ್ರವೇಶವನ್ನು ಒದಗಿಸುತ್ತದೆ. (“ವಿಷಯ”) 

ಬಿ. ಈ ಒಪ್ಪಂದದ ಉದ್ದೇಶಕ್ಕಾಗಿ ವರ್ಸೇಗೆ ಸಂಬಂಧಿಸಿದ ಯಾವುದೇ ಉಲ್ಲೇಖ ವರ್ಸೇಯ ಅಂಗಸಂಸ್ಥೆಗಳು, ಸಹಸಂಸ್ಥೆಗಳು, ಪೋಷಕ ಕಂಪನಿ, ಮತ್ತ ಸೋದರಿ ಸಂಸ್ಥೆಗಳನ್ನು ಒಳಗೊಂಡಿರಬಹುದು.

ಸಿ. ಪಾರಿಭಾಷಿಕ ಪದಗಳು “ನೀವು”, “ನಿಮ್ಮ”, “ಬಳಕೆ” ಮತ್ತು “ಬಳಕೆದಾರ” ಸಂದರ್ಭಕ್ಕೆ ತಕ್ಕಂತೆ ಓದಬಹುದು ಮತ್ತು ನಿಮ್ಮನ್ನುಉಲ್ಲೇಖಿಸುತ್ತದೆ.

ಡಿ. ಈ ಸೇವಾ ನಿಬಂಧನೆಗಳು, ಗೌಪ್ಯತಾ ನೀತಿ ಸಮುದಾಯ ನೀತಿಗಳಂತೆಯೇ ಇತರ ಅನ್ವಯಿತ ಕಾನೂನುಗಳು ಮತ್ತು ನಿಯತ್ರಣಗಳು ನೀವು ನೋಂದಾಯಿತ ಬಳಕೆದಾರ ಅಥವಾ ವಿಸಿಟರ್ ಆಗಿದ್ದರೂ ಕೂಡ ವೇದಿಕೆಯ ಪ್ರವೇಶ ಹಾಗೂ ಬಳಕೆಯನ್ನು ನಿಯಂತ್ರಿಸುತ್ತವೆ. (ಅಂದರೆ ನೀವು ಯಾವುದೇ ಮಿತಿಯಿಲ್ಲದೇ ಕಂಪ್ಯೂಟರ್ ಸಾಧನ ಅಥವಾ ಮೊಬೈಲ್ ಅಥವಾ ಇತರ ಉಪಕರಣದ ಮೂಲಕ ಅಥವಾ ಇಲ್ಲದಿದ್ದರೆ, ಬ್ರೌಸ್ ಮಾಡಿ ನೋಂದಾಯಿಸಿದೇ ವೇದಿಕೆಯನ್ನು ಬಳಸಬಹುದು.

ಇ. ವರ್ಸೇಯು ನಿಮಗೆ ಈ ಮೂಲಕ, ಭವಿಷ್ಯದಲ್ಲಿ ಅಭಿವೃದ್ಧಿಪಡಿಸಲಾಗುವ ಕಂಪ್ಯೂಟರ್, ಮೊಬೈಲ್ ಫೋನ್ ಗಳು, ಟ್ಯಾಬ್ಲೆಟ್ಸ್ ಗಳು, ಪೋರ್ಟೆಬಲ್ ಇಂಟರ್ ನೆಟ್ ಸಾಧನಗಳು ಅಥವಾ ಇತರ ಯಾವುದೇ  ತಂತ್ರಜ್ಞಾನ/ಮೋಡ್ಸ್/ಮಾಧ್ಯಮಗಳಲ್ಲಿ ವೇದಿಕೆಯನ್ನು ಪ್ರವೇಶಿಸಲು ಮತ್ತು ಬಳಸಲು ವಿಶೇಷವಲ್ಲದ, ವರ್ಗಾಯಿಸಲಾಗದ ಸೀಮಿತ ಪರವಾನಗಿಯನ್ನು ನೀಡುತ್ತದೆ.

ಎಫ್. ನೀವು ವೇದಿಕೆ ಪ್ರವೇಶಿಸುವ ಮತ್ತು/ಅಥವಾ ಬಳಸುವ ಮೂಲಕ ಅದರಲ್ಲಿ ಯೂಸರ್ ಪ್ರೊಫೈಲ್ ಅಕೌಂಟ್ ನ್ನು ವೇದಿಕೆಯಲ್ಲಿ ರಚಿಸುವ ಮೂಲಕ (“ಖಾತೆ”), ನೀವು ಈ ಕಾನೂನು ನಿಯಮಗಳಲ್ಲಿನ ನಿಯಮಗಳನ್ನು ಓದಿದ್ದೀರಿ, ಸ್ವೀಕರಿಸಿದ್ದೀರಿ ಜಾರಿಗೊಳಿಸಿದ್ದೀರಿ ಮತ್ತು ಅದಕ್ಕೆ ಬದ್ಧರಾಗಿರುತ್ತೀರಿ ಎಂದು ಪರಿಗಣಿಸಲಾಗುತ್ತದೆ.

2. ವ್ಯಾಖ್ಯೆಗಳು

ಎ. “ಗೌಪ್ಯ ಮಾಹಿತಿ’’ ಅಂದರೆ, ಪ್ರಕ್ರಿಯೆಗಳು, ವಿಧಾನಗಳು, ವ್ಯವಸ್ಥೆಗಳು, ವ್ಯವಹಾರ ಮಾಹಿತಿಗಳು, ಕ್ಲೈಂಟ್ ಮಾಹಿತಿ ಇತ್ಯಾದಿ ಒಳಗೊಂಡು ಸೀಮಿತವಾಗಿರದ ಯಾವುದೇ ಮಾಹಿತಿಯನ್ನು ವರ್ಸೇಯು ಗೌಪ್ಯವೆಂದು ಪರಿಗಣಿಸುತ್ತದೆ ಮತ್ತು ಯಾವುದೇ ಸಂದರ್ಭದಲ್ಲಿ ಅದು ಬಳಕೆದಾರರಿಗೆ ಬಹಿರಂಗಪಡಿಸುತ್ತದೆ.

ಬಿ. “ಬೌದ್ಧಿಕ ಆಸ್ತಿ” ಎಂಬುದು, ಯಾವುದೇ ಅನ್ವೇಷಣೆ, ರಚನೆ, ಕೆಲಸ, ಅಲ್ಗಾರಿಥಮ್, ಸಂಪನ್ಮೂಲ ಸಂಕೇತ, ವಸ್ತುಸಂಕೇತ ಅಥವಾ ಇತರ ಸಂಕೇತ, ವಿನ್ಯಾಸ, ಗೌಪ್ಯತಾ ಮಾಹಿತಿ, ಉತ್ಪನ್ನ ಹಾಗೂ ಇತರೆ ಗಳಿಸಿದ ವಸ್ತುಗಳು, ಗಳಿಸುವ ಪ್ರಕ್ರಿಯೆಯಲ್ಲಿರುವ ವಸ್ತುಗಳು, ಅಥವಾ ಸನ್ನದಾಗಿ ಗಳಿಸಲು ಅರ್ಹವಾದವುಗಳು, ಹಕ್ಕುಸ್ವಾಮ್ಯ, ಟ್ರೇಡ್ ಮಾರ್ಕ್, ಟ್ರೇಡ್ ಗೌಪ್ಯತೆ, ಅಥವಾ ಇತರ ಯಾವುದೇ ರೀತಿಯ ಬೌದ್ಧಿಕ ಆಸ್ತಿಯನ್ನು ಉಲ್ಲೇಖಿಸುತ್ತದೆ.

ಸಿ. “ವಿಷಯ” ವು ವೀಡಿಯೋ, ಚಿತ್ರಣ, ಟಿಪ್ಪಣಿಗಳು ಮತ್ತು ಜಾಹೀರಾತುಗಳನ್ನು ಒಳಗೊಂಡ ಆದರೆ ಸೀಮಿತವಲ್ಲದ ಯಾವುದೇ ಮತ್ತು ಎಲ್ಲಾ ಪ್ರದರ್ಶಿತಗೊಳ್ಳುವ ಸಲಕರಣೆಗಳು/ಕೃತಿಗಳನ್ನು ಉಲ್ಲೇಖಿಸುತ್ತದೆ.

3. ನಿಯಮಗಳು ಮತ್ತು ಅರ್ಹತೆಗಳ ಸ್ವೀಕಾರ

3.1 ನಿಯಮಗಳ ಸ್ವೀಕಾರ

ಎ. ವೇದಿಕೆಯಲ್ಲಿ ಡೌನ್ ಲೋಡಿಂಗ್, ಇನ್ ಸ್ಟಾಲಿಂಗ್, ಭೇಟಿ ಕೊಡುವುದು ಅಥವಾ ಬ್ರೌಸಿಂಗ್ ಮಾಡುವುದು ಸೇರಿ, ಆದರೆ ಯಾವುದೇ ಸೀಮಿತವಾಗಿರದೆ ಬೇರೆ ಯಾವುದೇ ಸೇವೆಗಳನ್ನು ಬಳಸುವುದು ಮತ್ತು/ಅಥವಾ ನೋಂದಾಯಿಸುವ ಮೂಲಕ ನೀವು ವರ್ಸೇಯು ವೇದಿಕೆಯಲ್ಲಿ ಕಾಲಕಾಲಕ್ಕೆ ಪ್ರಕಟಿಸುವ ಎಲ್ಲಾ ನಿಯಮಗಳು ಮತ್ತು ಷರತ್ತುಗಳು ಹಾಗೆಯೇ ಇತರೆಲ್ಲಾ ಆಪರೇಟಿಂಗ್ ನಿಯಮಗಳು, ನೀತಿಗಳು ಮತ್ತು ಕಾರ್ಯ ವಿಧಾನಗಳಿಗೆ ಒಪ್ಪುತ್ತೀರಿ ಮತ್ತು ಯಾವುದೇ ಕಾಲಕಾಲಕ್ಕೆ “ನಿಯಮಗಳ ಮಾರ್ಪಾಡು” 22 ಷರತ್ತಿನ ಅಡಿಯಲ್ಲಿ ಕೆಳಗೆ ತಿಳಿಸಲಾದಂತೆ ವರ್ಸೇಯು ಕಾಲ ಕಾಲಕ್ಕೆ ನಿಮಗೆ ಯಾವುದೇ ಸೂಚನೆ ನೀಡದೆ ನಿಯಗಳನ್ನು ಅಪ್ ಡೇಟ್ ಮಾಡಬಹುದು.

ಬಿ. ಒಂದು ವೇಳೆ ಸಂಸ್ಥೆ, ಕಂಪನಿ ಅಥವಾ ಸರ್ಕಾರದ ಶಾಖೆಯ ಸಂದರ್ಭದಲ್ಲಿ, ನೀವು ನಿಮ್ಮ ಕಂಪನಿ ಅಥವಾ ಸಂಸ್ಥೆಯನ್ನು ಪ್ರತಿನಿಧಿಸುವ ಮತ್ತು ಖಾತ್ರಿ ನೀಡುವ ಅಧಿಕಾರ ನಿಮಗೆ ಕಾನೂನಾತ್ಕವಾಗಿದೆ ಮತ್ತು ನಿಮ್ಮ ಕಂಪನಿ ಅಥವಾ ಸಂಸ್ಥೆಯು ನಿಯಮಗಳ ಕಟ್ಟುಪಾಡು ಮತ್ತು ನಿಬಂಧನೆಗಳಿಗೆ ಬದ್ಧವಾಗಿರಬೇಕಾಗುತ್ತದೆ. ಇಲ್ಲಿ ನಮೂದಿಸಲಾದ ‘ನೀವು’ ಅಥವಾ ‘ನಿಮ್ಮ’ ಎಂಬ ಎಲ್ಲಾ ಉಲ್ಲೇಖಗಳು ನಿಮ್ಮ ಕಂಪನಿ ಅಥವಾ ಸಂಸ್ಥೆಯನ್ನು ಪ್ರತಿನಿಧಿಸುತ್ತವೆ.

ಸಿ. ಈ ಒಪ್ಪಂದವು ವಿಷಯಗಳು, ಮಾಹಿತಿ, ಮತ್ತು ಇತರ ವಸ್ತುಗಳು ಅಥವಾ ಸೇವೆಗಳನ್ನು ವೇದಿಕೆಗೆ ಕೊಡುಗೆ ನೀಡುವ ಬಳಕೆದಾರರು, ವೇದಿಕೆಯನ್ನು ವ್ಯಕ್ತಿಗತವಾಗಿ ಬಳಕೆ ಮಾಡುವವರು ಮತ್ತು ವೇದಿಕೆಯಲ್ಲಿ ತಮ್ಮದೇ ಪುಟಗಳನ್ನು ಹೊಂದಿರುವ ಬಳಕೆದಾರರು ಸೇರಿದಂತೆ ಯಾವುದೇ ಮಿತಿಯಿಲ್ಲದೇ, ವೇದಿಕೆಯ ಎಲ್ಲಾ ಬಳಕೆದಾರರಿಗೆ ಅನ್ವಯವಾಗುತ್ತದೆ.

ಡಿ. ಇದಕ್ಕೆ ಪೂರಕವಾಗಿ, ವರ್ಸೇಯ ಹೆಚ್ಚುವರಿ ನಿಯಮಗಳಿಗನುಸಾರ ಕಾಲಕಾಲಕ್ಕೆ ವೇದಿಕೆಯ ಮೂಲಕ ಕೆಲವೊಂದು ಸೇವೆಗಳನ್ನು ನೀಡಲಾಗುವುದು; ಈ ಉಲ್ಲೇಖದೊಂದಿಗೆ ಈ ಒಪ್ಪಂದದಲ್ಲಿ ಅಳವಡಿಸಲಾದ ಹೆಚ್ಚುವರಿ ನಿಯಮಗಳು ಮತ್ತು ನಿಬಂಧನೆಗಳನುಸಾರ ನೀವು ಇಂತಹ ಸೇವೆಗಳನ್ನು ಬಳಸಬಹುದಾಗಿದೆ.

3.2 ಅರ್ಹತೆ

ಕ. ವೇದಿಕೆಯ ಬಳಕೆ ಮತ್ತು ಪ್ರವೇಶವು 1872ರ ಭಾರತೀಯ ಒಪ್ಪಂದ ಕಾಯ್ದೆಯಡಿಯಲ್ಲಿನ ಒಪ್ಪಂದದ ಪ್ರಕಾರ ಕಾನೂನಾತ್ಮಕವಾಗಿ ಬದ್ಧರಾಗುವ ಅನರ್ಹರಲ್ಲದ ಅಥವಾ ಅಸಮರ್ಥರೆಂದು ಘೋಷಿಸಲಾದ ಎಲ್ಲ ವ್ಯಕ್ತಿಗಳಿಗೆ ಲಭ್ಯವಿರುತ್ತದೆ. ಒಂದು ವೇಳೆ, ನೀವು ಅಪ್ರಾಪ್ರರಾಗಿದ್ದರೆ, ಅಂದರೆ, 18 ವರ್ಷ ವಯೋಮಾನಕ್ಕಿಂತ ಕೆಳಗಿನವರು, ನೀವು ವೇದಿಕೆಯಲ್ಲಿ ಬಳಕೆದಾರರಾಗಿ ನೋಂದಾಯಿಸಿಕೊಳ್ಳಬಾರದು ಅಥವಾ ವೇದಿಕೆಯನ್ನು ಬಳಸಬಾರದು ಅಥವಾ ಪ್ರವೇಶಿಸಬಾರದು. ಅಪ್ರಾಪ್ರರಾಗಿ ನೀವು ವೇದಿಕೆಯನ್ನು ಪ್ರವೇಶಿಸಬೇಕು ಅಥವಾ ಬಳಕೆ ಮಾಡಬೇಕು ಎಂದು ಬಯಸಿದಲ್ಲಿ, ಆಗ ನಿಮ್ಮ ಕಾನೂನು ಪಾಲಕರು ಅಥವಾ ಪೋಷಕರು ವೇದಿಕೆ ಪ್ರವೇಶಿಸಲು ಅಥವಾ ಬಳಸಲು ಅವಕಾಶವಿದೆ.

ಬಿ. ವರ್ಸೇಯ ಗಮನಕ್ಕೆ ಇಂತಹ ವಿಷಯ ಬಂದರೆ ಅಥವಾ ಅದು ನೀವು 18 ವರ್ಷ ವಯಸ್ಸಿಗಿಂತ ಕೆಳಗಿನವರು ಎಂದು ಪತ್ತೆಯಾದಲ್ಲಿ ಇಂತಹ ಬಳಕೆ ಮತ್ತು/ಅಥವಾ ವೇದಿಕೆಗೆ ನೀಡಿರುವ ಪ್ರವೇಶ ನಿರಾಕರಿಸಿ ಅದನ್ನು ರದ್ದುಗೊಳಿಸುವ ಹಕ್ಕನ್ನು ವರ್ಸೇ ಕಾಯ್ದಿರಿಸಿಕೊಂಡಿದೆ.

ಸಿ. ನಿಮ್ಮ ಖಾತೆಯನ್ನು ನಮ್ಮ ನಿಯಮಗಳು ಅಥವಾ ನೀತಿಗಳು ಅಥವಾ ಮಾನಕಗಳ ಉಲ್ಲಂಘನೆಗಾಗಿ ಈ ಹಿಂದೆ ನಿಷ್ಕ್ರಿಯಗೊಳಿಸಲಾಗಿಲ್ಲ; ಹಾಗೂ

ಡಿ. ನೀವು ಈ ನಿಯಮಗಳು ಮತ್ತು ಎಲ್ಲಾ ಅನ್ವಯಗೊಳ್ಳುವ ದೇಶೀಯ ಹಾಗೂ ಅಂತಾರಾಷ್ಟ್ರೀಯ ನಿಯಮಗಳು ಮತ್ತು ನಿಬಂಧನೆಗಳನ್ನು ಅನುಸರಿಸಬೇಕಾಗುತ್ತದೆ.

4. ನಿಮ್ಮ ಖಾತೆ, ಬಳಕೆದಾರರ ಮಾಹಿತಿ ಮತ್ತು ಪಾವತಿಸಿದ ಚಂದಾದಾರಿಕೆ ಬಳಕೆ ಶುಲ್ಕಗಳು

4.1 ನಿಮ್ಮ ಖಾತೆ ಮತ್ತು ಬಳಕೆದಾರ ಮಾಹಿತಿ: ವೇದಿಕೆಯಲ್ಲಿ ಅಗತ್ಯವಿರುವ ಲಾಗಿನ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ನಂತರವಷ್ಟೇ ನೀವು ವಿಷಯಗಳನ್ನು ಸೃಜಿಸಲು ಸಾಧ್ಯವಾಗುತ್ತದೆ ಮತ್ತು ವೇದಿಕೆಯನ್ನು ಡೌನ್ ಲೋಡಿಂಗ್ ಮಾಡಿದರೆ ನೀವು ಎಡಿಟಿಂಗ್ ಟೂಲ್ಸ್ ಗೆ ಪ್ರವೇಶ ಪಡೆಯುವುದಿಲ್ಲ ಎಂಬುದನ್ನು ನೀವು ತಿಳಿದುಕೊಳ್ಳಬೇಕಾಗುತ್ತದೆ. ವೇದಿಕೆಯಲ್ಲಿ ಅಕೌಂಟ್ ತೆರೆಯಲು ನೀವು ಒದಗಿಸಿದ ಮಾಹಿತಿ ಕಾನೂನುಬದ್ಧ, ಸೂಕ್ತ, ಖಚಿತ, ನವೀಕೃತ ಮತ್ತು ನಿಮಗಷ್ಟೇ ಸೇರಿದೆ ಮತ್ತು ವರ್ಸೇಯಿಂದ ದೃಢೀಕರಿಸಬಹುದಾಗಿದೆ ಎಂದು ನೀವು ಒಪ್ಪಿರುತ್ತೀರಿ. ನೀವು ನಮಗೆ ಒದಗಿಸಿದ ಇಂತಹ ವಿವರಗಳನ್ನು ಸಂಪೂರ್ಣವಾಗಿ ಮತ್ತು ಪ್ರಸ್ತುತತೆಗೆ ಹೊಂದಿಕೊಳ್ಳುವಂತೆ ಸೂಕ್ತವಾಗಿ ನವೀಕರಿಸಿ ನಿರ್ವಹಿಸುವುದ ಬಹಳ ಮುಖ್ಯವಾಗಿದೆ.

ನಿಮ್ಮ ಖಾತೆಯಲ್ಲಿ ಉಂಟಾಗುವ ಚಟುವಟಿಕೆಗಳಿಗೆ ನೀವು ಏಕಮಾತ್ರ ಜವಾಬ್ದಾರರೆಂದು ನೀವು ಒಪ್ಪಿಕೊಂಡಿರುತ್ತೀರಿ. ದಯವಿಟ್ಟು ನಿಮ್ಮ ಪಾಸ್ ವರ್ಡ್ ನ್ನು ಗೋಪ್ಯವಾಗಿಡಿ ಮತ್ತು ಅಂತಹ ಖಾತೆಯನ್ನು ಕಡ್ಡಾಯವಾಗಿ ವೈಯಕ್ತಿಕ ಉದ್ದೇಶಗಳಿಗಾಗಿ ಮಾತ್ರ ಬಳಸಿರಿ.

ನಿಮ್ಮ ಬಳಕೆದಾರ ಖಾತೆಯನ್ನು ಯಾವುದೇ ಸಮಯದಲ್ಲಿ ಅನರ್ಹಗೊಳಿಸುವ ಹಕ್ಕನ್ನು ನಾವು ಹೊಂದಿದ್ತು, ಮತ್ತು ಯಾವುದೇ ವಿಷಯವನ್ನು ನೀವು ಅಪ್ ಲೋಡ್ ಮಾಡಿದ ಅಥವಾ ಶೇರ್ ಮಾಡಿದಲ್ಲಿ ಯಾವುದೇ ಸಮಯದಲ್ಲಿ ನಾವು ನಿಷ್ಕ್ರಿಯಗೊಳಿಸಬಹುದು ಅಥವಾ ಅದನ್ನು ತೆಗೆದುಹಾಕುವ ಹಕ್ಕು ನಮಗಿದೆ. ನೀವು ಈ ನಿಯಮಗಳನ್ನು ಅನುಸರಿಸಲು ವಿಫಲವಾದಲ್ಲಿ, ಅಥವಾ ನಿಮ್ಮ ಖಾತೆಯಲ್ಲಿ ಯಾವುದಾದರೂ ಚಟುವಟಿಕೆ ಉಂಟಾದಲ್ಲಿ ನಮ್ಮ ಸ್ವವಿವೇಚನೆಯಲ್ಲಿ ಸೇವೆಗಳಿಗೆ ಸರಿಹೊಂದದಿದ್ದಲ್ಲಿ ಅಥವಾ ಮೂರನೇ ತಂಡದ ಹಕ್ಕುಗಳನ್ನು ಉಲ್ಲಂಘಿಸಿದಲ್ಲಿ ಅಥವಾ ಅನುಸರಿಸದಿದ್ದಲ್ಲಿ , ಅಥವಾ ಯಾವುದೇ ಅನ್ವಯಿತ ಕಾನೂನು ಅಥವಾ ನಿಯಂತ್ರಕಗಳನ್ನು ಉಲ್ಲಂಫಿಸಿದಲ್ಲಿ ಕೂಡ ಖಾತೆ ನಿಷ್ಕ್ರಿಯಗೊಳಿಸಬಹುದು, ನಂಬಿಕಾರ್ಹ, ಸ್ಪಷ್ಟ ಮತ್ತು ಸೂಕ್ತ ಕಾರಣಗಳೊಂದಿಗೆ ಅಂತಹ ಮನವಿಗಾಗಿ ನಮ್ಮನ್ನು grievance.officer@myjosh.in ಸಂಪರ್ಕಿಸಿ.

4.2 ಪಾವತಿ ಚಂದಾದಾರಿಕೆ: ಬಳಕೆದಾರರ ಈ ನಿಯಮಗಳು ಮತ್ತು ಇತರ ಷರತ್ತುಗಳು ಮತ್ತು ನಿಯಮಗಳ ಸ್ವೀಕಾರದ ಆಧಾರದ ಮೇಲೆ ನಾವು ಕೆಲವೊಂದು ನಿಗದಿತ ಆಯ್ಕೆಯ ಸೇವಾ ಚಂದಾದಾರಿಕೆಗಳನ್ನು ಒದಗಿಸುತ್ತೇವೆ. ಬಳಕೆದಾರರ ಸ್ವೀಕಾರದ ಮೇಲೆ ನಾವು ಆಯ್ಕೆ ಮಾಡಿದ ನಿರ್ದಿಷ್ಟ ಸೇವೆಗಳ ಆದಾರದ ಮೇಲೆ ಚಂದಾದಾರಿಕೆ ಮತ್ತು / ಅಥವಾ ಸದಸ್ಯತ್ವ ಶುಲ್ಕವನ್ನು ವಿಧಿಸುವ ಹಕ್ಕನ್ನು ನಾವು ಕಾಯ್ದಿರಿಸಿದ್ದೇವೆ. ನೀವು ಚಂದಾದಾರಿಕೆ ಖರೀದಿಸಿದಾಗ, ಸಂಪೂರ್ಣ ಮತ್ತು ನಿಖರ ಪಾವತಿ ಮತ್ತು ಪೇಮೆಂಟ್ ಗೇಟ್ ವೇ ಪ್ರೊವೈಡರ್/ ಪಾವತಿ ಸಿಸ್ಟಂ ಪ್ರಾಸೆಸರ್ ಗೆ ಅವಶ್ಯವಿರುವ ಮಾಹಿತಿಯನ್ನು ನಮಗೆ ನೀಡಬೇಕಾಗುತ್ತದೆ. ಪಾವತಿ ವಿವರಗಳನ್ನು ಸಲ್ಲಿಸುವ ಮೂಲಕ ನೀವು ಪಾವತಿ ವಿವರಗಳನ್ನು ಬಳಸಿಕೊಂಡು ಚಂದಾದಾರಿಕೆ ಪಡೆಯಲು ಅರ್ಹರಾಗಿದ್ದೀರಿ ಎಂದು ನೀವು ಭರವಸೆ ನೀಡುತ್ತೀರಿ. ನಾವೊಂದು ವೇಳೆ ಪಾವತಿ ಅಧಿಕೃತತೆಯನ್ನು ಅಥವಾ ಯಾವುದೇ ಅಧಿಕೃತತೆಯನ್ನು ರದ್ದುಮಾಡಿದರೆ, ನಾವು ವೇದಿಕೆಯಲ್ಲಿನ ನಿಮ್ಮ ಚಂದಾದಾರಿಕೆ ಆಧರಿತ ಸೇವೆಗಳಿಗೆ ಪ್ರವೇಶಿಸುವುದನ್ನು ರದ್ದುಗೊಳಿಸಬಹುದು ಅಥವಾ ಅಮಾನತುಗೊಳಿಸಬಹುದು. ನಾವು ಚಂದಾದಾರಿಕೆ ಆಧರಿತ ಸೇವೆಗಳ ಮತ್ತು ಜೋಶ್ ಜೆರ್ಮ್ಸ್ ರಿವಾರ್ಡ್ಸ್ ಪ್ರೋಗ್ರಾಂಗಳಿಗಾಗಿ ಬಳಕೆದಾರರಿಂದ ಪಾವತಿ ಸ್ವೀಕರಿಸಲು ಮೂರನೇ ವ್ಯಕ್ತಿ ಪಾವತಿ ಗೇಟ್ ವೇ ಮತ್ತು ಪಾವತಿ ಸಿಸ್ಟಂ ಪ್ರೊವೈಡರ್ ಗಳ ಸೇವೆಗಳನ್ನು ಬಳಸುತ್ತೇವೆ.

5. ಜೋಶ್ ಜೆಮ್ಸ್ ಮತ್ತು ರಿವಾರ್ಡ್ಸ್

 ಬಳಕೆದಾರರಿಗೆ ಪ್ರೋಗ್ರಾಂ ನ ಲಭ್ಯತೆಗಾಗಿ ಜೋಶ್ ರಿವಾರ್ಡ್ ಪ್ರೋಗ್ರಾಂ (“ಪ್ರೋಗ್ರಾಂ”) ನ್ನು ಒದಗಿಸುತ್ತದೆ. ಇದು ವೇದಿಕೆಗಳ ನಿಯಮಗಳೊಂದಿಗೆ ಈ ನಿಯಮಗಳ ಕಲಂ 3ರಲ್ಲಿ ನಮೂದಿಸಿರುವುದಕ್ಕೆ ಅನುಗುಣವಾಗಿ ನೋಂದಾಯಿಸಿ ಅರ್ಹರೆನಸಿದವರಿಗೆ ಸೇವೆಗಳನ್ನು ಬಳಸಿಕೊಳ್ಳುವ ಬಳಕೆದಾರರಿಗೆ ಮುಕ್ತವಾಗಿದೆ.

ಜೋಶ್ ವೇದಿಕೆಯನ್ನು ನಿರಂತರ ಮತ್ತು ಬಳಕೆ ಮುಂದುವರೆಸುವ ಬಳಕೆದಾರರಿಗೆ ವಿವಿಧ ರೂಪದಲ್ಲಿ ಜೋಶ್ ಲಾಯಲ್ಟಿ ಪಾಯಿಂಟ್ ಗಳನ್ನು ನೀಡುತ್ತದೆ. ಈ ಲಾಯಲ್ಟಿ ಪಾಯಿಂಟ್ ಗಳನ್ನು ಜೋಶ್ ವೇದಿಕೆಯಲ್ಲಿ ವಿವಿಧ ಚಟುವಟಿಕೆಗಳು/ ಕಾರ್ಯಗಳನ್ನು ನಿರ್ವಹಿಸುವುದಕ್ಕಾಗಿ ನೀಡಲಾಗುತ್ತದೆ. ಪ್ರತಿಯೊಬ್ಬ ಬಳಕೆದಾರ ತಮ್ಮ ವಿಷಯಗಳು, ಸ್ನೇಹಿತರ ಉಲ್ಲೇಖ ಮತ್ತು ಜೋಶ್ ತನ್ನ ವೇದಿಕೆಯ ನಿಗದಿಗೊಳಿಸಿದಂತೆ ಬಳಕೆದಾರ ಸಮಯ ಕಳೆಯುವುದರೊಂದಿಗೆ ಅವನು/ಅವಳು ತಮ್ಮ ಪ್ರೊಫೈಲ್ ಪೂರ್ಣಗೊಳಿಸಿದಂತಹ ಪ್ರತಿಯೊಬ್ಬ ಬಳಕೆದಾರನು ಲಾಯಲ್ಟಿ ಪಾಯಿಂಟ್ ಗಳಿಸುತ್ತಾರೆ (“ಜೋಶ್ ಜೆಮ್ಸ್”) ವೇದಿಕೆಯಲ್ಲಿ ಬಳಕೆದಾರರು ನಿರ್ವಹಿಸಿದ ಪ್ರತಿಯೊಂದು ಚಟುವಟಿಕೆಗಳಿಗೂ ಜೋಶ್ ಜೆಮ್ಸ್ ಕೊಡಲಾಗುತ್ತದೆ. ಜೋಶ್ ಜೆಮ್ಸ್ ನ ಮೌಲ್ಯವು ಕಾರ್ಯಕ್ರಮದ ನೀತಿಗಳ ಸಂರಚನಾತ್ಮಕ ಮತ್ತು ಕ್ರಿಯಾತ್ಮಕ ಅಂಶಗಗಳಿಗುಣವಾಗಿ ಅವಲಂಬಿಸಿರುತ್ತದೆ. ವೇದಿಕೆಯನ್ನು ನಿರಂತರವಾಗಿ ಬಳಸುವುದಕ್ಕೆ ಜೋಶ್ ಜೆಮ್ಸ್ ಗಳನ್ನು ನೀಡಲಾಗುತ್ತದೆ.ಮತ್ತು ಜೋಶ್ ಜೆಮ್ಸ್ ಗಳನ್ನು ಜೋಶ್ ವೇದಿಕೆಯಿಂದಲೇ ಖರೀದಿಸಬೇಕಾಗುತ್ತದೆ ಹಾಗೂ ಎಲ್ಲಾ ಪಾವತಿಗಳನ್ನು ಅನ್ವಯಿತ ಕಾನೂನುಗಳಿಗೆ ಅನುಸಾರವಾಗಿ ಮೂರನೇ ವ್ಯಕ್ತಿಯ ಪಾವತಿ ಸಂಗ್ರಾಹಕರಿಂದ ಪ್ರಕ್ರಿಯೆಗೊಳಪಡಿಸಲಾಗುತ್ತದೆ.

ಜೋಶ್ ತನ್ನ ಸ್ವಂತ ವಿವೇಚನೆಯಿಂದ ಬಳಕೆದಾರರ ಚಟುವಟಿಕೆಗಳಿಗೆ ಅನುಪಾತದ ಆಧಾರದಲ್ಲಿ ಸ್ವೀಕರಿಸಲಾದ ಅಂತಹ ಅಂಕಗಳ ಸಂಖ್ಯೆ ಒಳಗೊಂಡಂತೆ ಈ ರೀತಿಯ ಒಂದು ಅಥವಾ ಯಾವುದೇ ಜೋಶ್ ಜೆಮ್ಸ್ ಗಳ ಸೇರುವಿಕೆಯ ವಿಧಾನವನ್ನು ಬದಲಾಯಿಸುವ ಹಕ್ಕನ್ನು ಕಾಯ್ದಿರಿಸಿಕೊಂಡಿದೆ. ಮುಂದೆ, ಬಳಕೆದಾರನು ಆಫರ್ ಅವಶ್ಯಕತೆಗಳನ್ನು ಪೂರೈಸದ ಬಳಕೆದಾರನನ್ನು ಅನರ್ಹಗೊಳಿಸುವ ಹಕ್ಕನ್ನು ಜೋಶ್ ತಾನೇ ಕಾಯ್ದಿರಿಸಿಕೊಂಡಿದೆ, ಅಥವಾ ಆಫರ್ ಗಳ ದುರ್ಬಳಕೆ ಅಥವಾ ವಂಚನೆ ಅಥವಾ ಅನುಮಾನಾಸ್ಪದ ವ್ಯವಹಾರ/ಚಟುವಟಿಕೆ ಅಥವಾ ಕಾನೂನಿನ ಅವಶ್ಯಕತೆ ಅಥವಾ ಅನ್ವಯವಾಗುವ ನಿಯಮಗಳು ಮತ್ತು ನಿಬಂಧನೆಗಳ ಅಡಿಯಲ್ಲಿ ಆದರೆ ಸೀಮಿತವಲ್ಲದ, ಯಾವುದೇ ಪಾಯಿಂಟ್ ಗಳನ್ನು ಸ್ವೀಕರಿಸುವಾಗಲೂ ಕೂಡ ಜೋಶ್ ಅನರ್ಹಗೊಳಿಸುವ ಹಕ್ಕು ಹೊಂದಿದೆ. ಹಾಗೆಯೇ ಜೋಶ್ ಯಾವುದೇ ಸಮಯದಲ್ಲಿ ಪಾಯಿಂಟ್ ಗಳನ್ನು ನೀಡುವ ಯಾವುದೇ ಹೊಸ ರೀತಿಯ ವಿಧಾನಗಳನ್ನು ಬದಲಾಯಿಸುವ ಅಥವಾ ನೀಡುವ ಅಥವ ರದ್ದುಗೊಳಿಸುವ ಹಕ್ಕನ್ನು ಕಾಯ್ದಿರಿಸಿಕೊಂಡಿದೆ. ಹಾಗೆಯೇ ಜೋಶ್ ತನ್ನ ಸ್ವವಿವೇಚನೆಯಿಂದ ಜೋಶ್ ಜೆಮ್ಸ್ ಗೆ ಯಾವುದೇ ಎಕ್ಸ್ ಪಾಯರಿ ಅವಧಿಯನ್ನು ಕೂಡ ನಿಗದಿಪಡಿಸಬಹುದು.

ಜೋಶ್ ಜೆಮ್ಸ್

ಯಾರು ಜೋಶ್ ಜೆಮ್ಸ್ ಗಳಿಸಬಹುದು?

ಬಳಕೆದಾರರ 18 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯೋಮಾನದವರಾಗಿದ್ದು ನಮ್ಮ ಸೇವೆಗಳನ್ನು ಬಳಸುತ್ತಿರುವವರಾದರೆ ಅಧಿಕೃತ ಪಾವತಿ ವಿಧಾನಗಳನ್ನು ಬಳಸಿಕೊಂಡು ನಮ್ಮಿಂದ ವರ್ಚುವಲ್ “ಜೋಶ್ ಜೆಮ್ಸ್” (“ಜೆಮ್ಸ್”) ನ್ನು ಖರೀದಿಸಬಹುದು ಮತ್ತು ನಮ್ಮಿಂದ ಲಭ್ಯವಾಗುವಂತೆ ಮತ್ತು ಅಧಿಕೃಗೊಳಿಸಲಾದ ಪಾವತಿ ಪೂರೈಕೆದಾರರ ಮೂಲಕ.

ಯಾರು ಈ ಕಾರ್ಯಕ್ರಮದ ಪ್ರಯೋಜನ ಪಡೆಯಬಹುದು?

  • ಬಳಕೆದಾರರು, 18 ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರಿಗೆ ಈ ಕಾರ್ಯಕ್ರಮದ ಬಳಕೆಯು ಲಭ್ಯವಿರುತ್ತದೆ.
  • ಬಳಕೆದಾರರು ಜೋಶ್ ಜೆಮ್ಸ್ ಗಳಿಸಬಹುದು ಮತ್ತು ಇತರ ಬಳಕೆದಾರರಿಗೆ ಜೆಮ್ಸ್ ಉಡುಗೊರೆ ನೀಡಬಹುದು, ಹಣದ ಮೌಲ್ಯದ ಮೂಲಕ, ಜೆಮ್ಸ್ ನ್ನು ಉಡುಗೊರೆಯಾಗಿ ಪಡೆಯಬಹುದು 18 ಅಥವಾ ಅದಕ್ಕಿಂತ ಹೆಚ್ಚಿನ ವಯೋಮಾನದವರಾದಲ್ಲಿ ಜೆಮ್ಸ್ ನ್ನು ಪಡೆಯಬಹುದು ಮತ್ತು ಹಿಂತೆಗೆದುಕೊಳ್ಳಲೂಬಹುದು.

ನೀವು ಕಾಲಕಾಲಕ್ಕೆ ವೇದಿಕೆಯಲ್ಲಿ ಈ ಕೆಳಗೆ ಲಭ್ಯವಿರುವ ಉತ್ಪನ್ನಗಳು ಮತ್ತು ಇನ್ ಸೆಂಟಿವ್ ಗಳು ನಿಮಗೆ ಲಭ್ಯವಾಗುವಂತೆ ಮಾಡುತ್ತೇವೆ.

ಜೆಮ್ಸ್ ಗಳಿಸುವುದು ಮತ್ತು ಖರೀದಿಸುವುದು

  • ಜೋಶ್ ಜೆಮ್ಸ್ ನ ಬೆಲೆಯು ಖರೀದಿಯ ಅವಧಿಯಲ್ಲಿ ಪ್ರಕಟಿಸಲಾಗುತ್ತದೆ. ಜೋಶ್ ಜೆಮ್ಸ್ ಗಾಗಿನ ಎಲ್ಲಾ ಶುಲ್ಕಗಳು ಮತ್ತು ಪಾವತಿಗಳನ್ನು ಪಾವತಿ ಸಂಗ್ರಹಗಾರ ಸೇವಾ ಪ್ರೊವೈಡರ್ ನಲ್ಲಿ ಲಭ್ಯವಿರುವ ವಿವಿಧ ಪಾವತಿ ವಿಧಾನಗಳ ಮೂಲಕ ಖರೀದಿಯ ಸಮಯದಲ್ಲಿ ಭಾರತೀಯ ರೂಪಾಯಿಗಳಲ್ಲಿ ಮಾಡಲಾಗುತ್ತದೆ.
  •  ನೀವು ಖರೀದಿಸಿರುವ ಯಾವುದೇ ಜೋಶ್ ಜೆಮ್ಸ್ ಪಾವತಿಗೆ ನೀವು ಜವಾಬ್ದಾರರಾಗಿರುತ್ತೀರಿ. ಒಂದೊಮ್ಮೆ ನಿಮ್ಮ ಖರೀದಿಯು ಪೂರ್ಣಗೊಂಡಾಗ ನಿಮ್ಮ ಬಳಕೆದಾರ ಖಾತೆಗೆ ಜೋಶ್ ಜೆಮ್ಸ್ ಕ್ರೆಡಿಟ್ ಆಗುವುದು ಮತ್ತು ಯಾವುದೇ ಹಿಂದಿರುಗಿಸುವ ಮನವಿಗೆ ಅವಕಾಶವಿರುವುದಿಲ್ಲ.
  • ನೀವೊಂದು ವೇಳೆ ನಿಮ್ಮ ಖರೀದಿಯಲ್ಲಿ ಏನಾದರೂ ಬದಲಾವಣೆ ಮಾಡಬೇಕೆಂದಿದ್ದಲ್ಲಿ ದಯವಿಟ್ಟು ಕೆಳಗೆ ರಚಿಸಲಾದ ಈ ಮೇಲ್ ವಿಳಾಸವನ್ನು ಸಂಪರ್ಕಿಸಿ. ಈ ಬದಲಾವಣೆ ಮಾಡಲು ಸಾಧ್ಯವಿಲ್ಲದಿದ್ದರೆ ನಾವು ನಿಮಗೆ ತಿಳಿಸುತ್ತೇವೆ. ದಯವಿಟ್ಟು ಗಮನಿಸಿ ಬದಲಾವಣೆಗಳು ದರ ಹಾಗೂ ಖರೀದಿಯ ಇತರ ಅಂಶಗಳ ಮೇಲೆ ಪ್ರಭಾವ ಬೀರುತ್ತದೆ. ಆದ್ದಾಗ್ಯೂ, ನೀವೊಂದು ವೇಳೆ ಜೆಮ್ಸ್ ಖರೀದಿಸಿದರೆ, ಖರೀದಿ ಪ್ರಕ್ರಿಯೆ ಪೂರ್ಣಗೊಂಡ ತಕ್ಷಣವೇ ನಾವು ನಿಮಗೆ ಜೆಮ್ಸ್ ಗಳನ್ನು ಪೂರೈಸಲು ಪ್ರಾರಂಭಿಸುತ್ತೇವೆ ಎಂಬುದಾಗಿ ನೀವು ಒಪ್ಪಿಕೊಳ್ಳುತ್ತೀರಿ ಮತ್ತು ತಿಳಿಸುತ್ತೀರಿ ಹಾಗಾಗಿ ಖರೀದಿಯ ಒಪ್ಪಂದವನ್ನು ರದ್ದುಗೊಳಿಸುವ ಅಥವಾ ಹಿಂತೆಗೆದುಕೊಳ್ಳುವ ನಿಮ್ಮ ಹಕ್ಕು ಈ ಹಂತದಲ್ಲಿ ಕಳೆದುಹೋಗುತ್ತದೆ.

ನೀವು ಜೆಮ್ಸ್ ನ್ನು ಹೇಗೆ ಬಳಸಬಹುದು

  • ಜೆಮ್ಸ್ ನ್ನು ವೋಚರ್ಸ್ / ರಿಯಾಯಿತಿ ಕೂಪನ್ ಗಳನ್ನು ಖರೀದಿಸಲು ಬಳಸಬಹುದಾಗಿದೆ. ಜೆಮ್ಸ್ ನ್ನು ನಗದು, ಅಥವಾ ಕಾನೂನಾತ್ಮಕ ಟೆಂಡರ್, ಅಥವಾ ಕರೆನ್ಸಿ, ಧರ್ಮ, ಅಥವಾ ಯಾವುದೇ ರಾಜಕೀಯ ಅಸ್ತಿತ್ವ, ಅಥವಾ ಇತರ ಯಾವುದೇ ರೀತಿಯ ಸಾಲಗಳಿಗೆ ವಿನಿಮಯ ಮಾಡಲು ಬಳಸಲಾಗುವುದಿಲ್ಲ.
  • ಜೆಮ್ಸ್ ನ್ನು ನಮ್ಮ ವೇದಿಕೆಯಲ್ಲಿ ಮತ್ತು ನಮ್ಮ ಸೇವೆಗಳ ಭಾಗವಾಗಿ ಮಾತ್ರ ಬಳಸಬಹುದಾಗಿದೆ ಮತ್ತು ನಮ್ಮಿಂದ ನಿಯೋಜಿಸಲ್ಪಡದೇ ಇರುವುದರ ಹೊರತಾಗಿ ಇತರ ಯಾವುದೇ ಪ್ರಚಾರಗಳು, ಕೂಪನ್ ಗಳು, ರಿಯಾಯಿತಿ ಅಥವಾ ವಿಶೇಷ ಆಫರ್ ಗಳೊಂದಿಗೆ ಜೋಡಿಸುವುದು ಅಥವಾ ಸಂಯೋಜಿಸಲಾಗುವುದಿಲ್ಲ.
  • ನಾವು ಲಿಖಿತವಾಗಿ ಅನುಮತಿ ವ್ಯಕ್ತಪಡಿಸದ ಹೊರತಾಗಿ ಜೆಮ್ಸ್ ಇತರ ಯಾವುದೇ ಸೇವಾ ಬಳಕೆದಾರರು ಅಥವಾ ಮೂರನೇ ತಂಡಕ್ಕೆ ಜೆಮ್ಸ್ ನ್ನು ವಹಿಸುವುದು ಅಥವಾ ಸ್ಥಳಾಂತರಿಸಲಾಗುವುದಿಲ್ಲ. ನಮ್ಮ ಹೊರತಾಗಿ ಮಾರಾಟ, ವಿನಿಮಯ, ವಹಿಸುವಿಕೆ ಅಥವಾ ಯಾವುದೇ ಇತರ ಜೆಮ್ಸ್ ನ್ನು ವಿಲೇವಾರಿ ಮಾಡುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.
  • ಸಂಗ್ರಹಿತ ಜೆಮ್ಸ್ ಗಳು ಆಸ್ತಿಯನ್ನು ಪ್ರತಿನಿಧಿಸುವುದಿಲ್ಲ ಮತ್ತು ಅವುಗಳನ್ನು ವರ್ಗಾಯಿಸುವಂತಿಲ್ಲ: (ಎ) ಮರಣದ ವೇಳೆ; (ಬಿ) ದೇಶೀಯ ಸಂಬಂಧಗಳ ವಿಷಯದ ಭಾಗವಾಗಿ; ಅಥವಾ (ಸಿ) ಇಲ್ಲದಿದ್ದಲ್ಲಿ ಕಾನೂನಿನ ಕಾರ್ಯಾಚರಣೆಯಿಂದ.
  • ನಮ್ಮ ಲಿಖಿತ ಒಪ್ಪಿಗೆಯಿಲ್ಲದೇ ವಹಿಸಿದ ಜೆಮ್ಸ್ ನ್ನು ಮಾರಾಟ ಅಥವಾ ವರ್ಗಾಯಿಸುವುದು ಕಡ್ಡಾಯವಾಗಿ ಉಲ್ಲಂಘನೆಯಾಗಿರುತ್ತದೆ. ಸೇವೆಗಳ ಬಳಕೆದಾರರು ಯಾರಾದರೂ ಇದನ್ನುಉಲ್ಲಂಘಿಸಿದಲ್ಲಿ ಅವನು/ಳ ಖಾತೆಯನ್ನು ನಮ್ಮಿಂದ ಸ್ಥಗಿತಗೊಳಿಸಲ್ಪಡುವುದು. ಅವನ ಅವಳ ಖಾತೆಯಿಂದ ಜೆಮ್ಸ್ ನ್ನು ಮುಟ್ಟುಗೋಲು ಹಾಕಿಕೊಳ್ಳಬಹುದು ಮತ್ತು /ಅಥವಾ ಯಾವುದೇ ಹಾನಿ ದಾವೆ ಮತ್ತು ವ್ಯವಹಾರ ವೆಚ್ಚಗಳ ಹೊಣೆಗಾರಿಕೆಗೂ ಒಳಪಡಬಹುದು.
  • ಯಾವುದೇ ಕಾರಣಕ್ಕೆ ಬಳಕೆದಾರರ ಖಾತೆಯು ರದ್ದುಗೊಂಡರೆ ಆಗ ಬಳಕೆದಾರರ ಎಲ್ಲಾ ಜೆಮ್ಸ್ ಸ್ವಯಂಚಾಲಿತವಾಗಿ ಮುಕ್ತಾಯಗೊಳ್ಳುತ್ತದೆ.
  • ನಮಗೆ ಸೂಕ್ತ ಕಾರಣಗಳಿದ್ದಾಗ ಇಂತಹ ಜೆಮ್ ಗಳನ್ನು ನಿರ್ವಹಣೆ , ನಿಯಂತ್ರಣ, ಮಾರ್ಪಾಡು ಮತ್ತು /ಅಥವಾ ತೆಗೆದುಹಾಕುವ ಹಕ್ಕನ್ನು ನಾವು ಹೊಂದಿರುತ್ತೇವೆ ಎಂದು ನೀವು ಒಪ್ಪಿಕೊಂಡಿರುತ್ತೀರಿ. ನೀವು ಈ ನೀತಿಯನ್ನು ಉಲ್ಲಂಘಿಸಿದ್ದೀರಿ ಎಂದು ನಾವು ಸಮಂಜಸವಾಗಿ ಭಾವಿಸಿದಲ್ಲಿ, ನೀವು ಯಾವುದೇ ಇತರ ಅನ್ವಯಿತ ಕಾನೂನು ಅಥವಾ ನಿಯಂತ್ರಣ ಅಥವಾ ಕಾನೂನು, ಭದ್ರತೆ ಅಥವಾ ತಾಂತ್ರಿಕ ಕಾರಣಗಳು ಮತ್ತು ಅಂತಹ ಹಕ್ಕನ್ನು ನಮ್ಮ ಚಟುವಟಿಕೆಯ ಆಧಾರದಲ್ಲಿ ನಾವು ನಿಮ್ಮ ಮೇಲೆ ಯಾವುದೇ ಹೊಣೆಗಾರಿಕೆಯನ್ನು ಹೊಂದಿರುವುದಿಲ್ಲ.
  • ಒಂದು ವೇಳೆ ನಾವು ನಮ್ಮ ಸೇವೆಯಿಂದ ಜೆಮ್ಸ್ ನ್ನು ಸಂಪೂರ್ಣವಾಗಿ ತೆಗೆದುಹಾಕಲು ನಿರ್ಧರಿಸಿದರೆ, ಅದಕ್ಕೆ ಸೂಕ್ತ ಸೂಚನೆಯನ್ನು ನಾವು ನಿಮಗೆ ನೀಡುತ್ತೇವೆ.
  • ಲಭ್ಯವಿರುವ ವಿಷಯಗಳಿಗೆ ಸಂಬಂಧಿಸಿದಂತೆ ನೀವು ನೀವು ಇನ್ನೊಬ್ಬ ಬಳಕೆದಾರರು ಅಪ್ ಲೋಡ್ ಮಾಡಿದ ಅಥವಾ ಸ್ಟ್ರೀಮ್ ಮಾಡಿದ ಬಳಕೆದಾರ ವಿಷಯದ ಗುಣಮಟ್ಟ ಮಾಪನ ಮಾಡಲು ಅಥವಾ ನಿಮ್ಮ ಮೆಚ್ಚುಗೆಯನ್ನು ತೋರಿಸಲು ಜೆಮ್ಸ್ ಬಳಸಬಹುದು (“ಕಂಟೆಂಟ್ ಪ್ರೊವೈಡರ್”) 
  • ಸೇವೆಗಳಲ್ಲಿ ಈ ಫಂಕ್ಷನಾಲಿಟಿ ಲಭ್ಯವಿದ್ದಲ್ಲಿ, ನೀವು ಯೂಸರ್ ಕಂಟೆಂಟ್ ನ ಕೆಳಗಡೆ ಇರುವ “ಗೀವ್ ಜೆಮ್ಸ್” ಬಟನ್ ಗೆ ಕ್ಲಿಕ್ ಮಾಡುವ ಮೂಲಕ ಯೂಸರ್ ಕಂಟೆಂಟ್ ಗೆ ಜೆಮ್ಸ್ ನ ಕೊಡುಗೆ ನೀಡಬಹುದು.
  • ನೀವು ಯೂಸರ್ ಕಂಟೆಂಟ್ ನ ಐಟಂ ಗೆ ಜೆಮ್ಸ್ ಕೊಡುಗೆ ನೀಡಿದಾಗ, ಈ ಜೆಮ್ ನಿಮ್ಮ ಖಾತೆಯಿಂದ ತೆಗೆಯಲ್ಪಡುತ್ತದೆ ಮತ್ತು ಕಂಟೆಂಟ್ ಪ್ರೊವೈಡರ್ ಅಕೌಂಟ್ ನಲ್ಲಿ ಕಂಟೆಂಟ್ ಪ್ರೊವೈಡರ್ ಜೆಮ್ಸ್ ಆಗಿ ಮಾರ್ಪಡುತ್ತದೆ.
  • ನೀವು ಜೆಮ್ಸ್ ನ್ನು ಇನ್ನೊಬ್ಬ ಬಳಕೆದಾರನಿಗೆ ಬಹಿರಂಗವಾಗಿ ನೀಡುತ್ತೀರಿ ಹಾಗಾಗಿ ಸೇವೆಗಳ ( ಜೆಮ್ಸ್ ಗಳನ್ನು ಪಡೆಯುವವರ ವಿವರ ಸೇರಿದಂತೆ) ಇತರ ಬಳಕೆದಾರರು ನಿಮ್ಮ ಹೆಸರು , ಯೂಸರ್ ಐಡಿ ಮತ್ತು ನೀವು ನೀಡಿದ ಜೆಮ್ಸ್ ನ ವಿವರಗಳನ್ನು ನೋಡುತ್ತಾರೆ ಎಂಬುದನ್ನು ದಯವಿಟ್ಟು ಗಮನಿಸಿ.
  • ಬಳಕೆದಾರರಿಂದ ಖರೀದಿಸಲಾದ ಜೆಮ್ಸ್ ಗೆ ಯಾವುದೇ ರೀಫಂಡ್ ಅಥವಾ ಶುಲ್ಕ ವಾಪಸ್ ಮಾಡುವುದಕ್ಕೆ ಅವಕಾಶವಿಲ್ಲ.

ಕೂಪನ್ಸ್

ಯಾರು ಕೂಪನ್ಸ್ ಖರೀದಿಸಬಹುದು ?

  •  ನಮ್ಮ ಸೇವೆಗಳ ಬಳಕೆದಾರರು 18 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯೋಮಾನದವರಾಗಿದ್ದರೆ ನಮ್ಮ ಅಧಿಕೃತ ಮಾರಾಟಗಾರರಿಂದ ರಿಯಾಯಿತಿ ಕೂಪನ್ (“ಕೂಪನ್ಸ್”) ಗಳನ್ನು ಜೆಮ್ಸ್ ವಿನಿಮಯ ಮಾಡಿಕೊಳ್ಳುವ ಮೂಲಕ ಕೂಪನ್ಸ್ ಗಳನ್ನು ಖರೀದಿಸಬಹುದು.

ಕೂಪನ್ಸ್ ಖರೀದಿಸುವುದು

  • ಪ್ರಕಟಿಸಿದ ಬೆಲೆಗಳು ನಿಮ್ಮ ಕಾನೂನಿನನ್ವಯದಡಿಯಲ್ಲಿ ಅಗತ್ಯವಿರುವ ತೆರಿಗೆಗಳನ್ನು ಒಳಗೊಂಡಿರುತ್ತವೆ. ಒಂದು ವೇಳೆ ಯಾವುದೇ ಕೂಪನ್ ಗಳು ಸರಕು ಮತ್ತು ಸೇವಾ ತೆರಿಗೆಗೆ (“ಜಿಎಸ್ ಟಿ”) ಒಳಪಟ್ಟಿದ್ದು, ನೀವು ಮಾರಾಟಗಾರರಿಗೆ ಅನ್ವಯಗೊಳ್ಳುವ ಜಿಎಸ್ ಟಿ ಯನ್ನು ಪಾವತಿಸದಿದ್ದರೆ, ಅಂತಹ ಜಿ ಎಸ್ ಟಿ ಮತ್ತು ಯಾವುದೇ ಸಂಬಂಧಿತ ದಂಡಗಳು ಅಥವಾ ಬಡ್ಡಿಗಳನ್ನು ಸಂಬಂಧಿತ ತೆರಿಗೆ ಪ್ರಾಧಿಕಾರಕ್ಕೆ ಪಾವತಿಸುವುದು ನಿಮ್ಮ ಜವಾಬ್ದಾರಿಯಾಗಿರುತ್ತದೆ.
  • ಯಾವುದೇ ಸಾಮಾನ್ಯ ಅಥವಾ ನಿರ್ದಿಷ್ಟ ಪ್ರಕರಣಗಳಲ್ಲಿ ನಾವು ನಮ್ಮ ಸ್ವಂತ ವಿವೇಚನೆಯಿಂದ ನಮಗೆ ಸೂಕ್ತವೆಂದು ತೋರುವಂತಹ ವಿನಿಮಯ ದರವನ್ನು ನಿರ್ವಹಿಸುವ, ನಿಯಂತ್ರಿಸುವ, ನಿಬಂಧಿಸುವ, ಮಾರ್ಪಡಿಸುವ ಮತ್ತು/ಅಥವಾ ಅಂತಹ ವಿನಿಮಯ ದರವನ್ನು ತೆಗೆದುಹಾಕುವ ಸಂಪೂರ್ಣ ಹಕ್ಕು ಹೊಂದಿದ್ದೇವೆ ಮತ್ತು ಕಾರ್ಯಗಳ ಮೇಲಿನ ಆಧಾರದ ಮೇಲೆ ನಾವು ಯಾವುದೇ ಹೊಣೆಗಾರಿಕೆಯನ್ನು ಹೊಂದಿರುವುದಿಲ್ಲ ಎಂಬುದಾಗಿ ನೀವು ಒಪ್ಪಿಕೊಂಡಿರುತ್ತೀರಿ.
  • ನೀವೊಂದು ವೇಳೆ ನೀವು ಖರೀದಿಸುವ ಕೂಪನ್ಗಳನ್ನು ಬದಲಾಯಿಸಬೇಕೆಂದಿದ್ದರೆ ಆಗ ಕಂಪನಿ ಹಂಚಿಕೆ ಕೂಪನ್ ನ ನೀತಿ ಸಂಹಿತೆ ಅನ್ವಯಗೊಳ್ಳುತ್ತದೆ.
  • ಈ ನಿಯಮಗಳಲ್ಲಿ ತಿಳಿಸಿರುವುದನ್ನು ಹೊರತುಪಡಿಸಿ, ಎಲ್ಲಾ ಕೂಪನ್ ಗಳ ಮಾರಾಟವು ಅಂತಿಮವಾಗಿರುತ್ತದೆ. ಮತ್ತು ಯಾವುದೇ ಖರೀದಿ ಮಾಡಿದ ಕೂಪನ್ ಗಳಿಗೆ ನಾವು ಮರುಪಾವತಿಯನ್ನು ನೀಡುವುದಿಲ್ಲ. ನೀವು ಕೂಪನ್ ಗಳಿಗಾಗಿ ಜೆಮ್ಸ್ ಗಳನ್ನು ವಿನಿಮಯ ಮಾಡಿಕೊಂಡಿದ್ದಲ್ಲಿ ಅಂತಹ ಜೆಮ್ಸ್ ಗಳನ್ನು ನಿಮ್ಮ ಬಳಕೆದಾರ ಖಾತೆಯಿಂದ ಕಳೆಯಲಾಗುವುದು ಮತ್ತು ಕೂಪನ್ ಗಳಿಗೆ ಕ್ರೆಡಿಟ್ ಮಾಡಲಾಗುತ್ತದೆ.
  • ಕೂಪನ್ ಗಳನ್ನು ಯಾವುದೇ ಕಾರಣಕ್ಕಾಗಿ ನಗದು ಆಗಿ ಪರಿವರ್ತಿಸುವುದು ಅಥವಾ ಜೆಮ್ಸ್ ಗಾಗಿ ಪರಿವರ್ತನೆ ಅಥವಾ ವಿನಿಮಯ ಅಥವಾ ಮರುಪಾವತಿ ಮಾಡಲಾಗುವುದಿಲ್ಲ ಅಥವಾ ವೆಚ್ಚಮರಳಿಸಲಾಗುವುದಿಲ್ಲ.
  • ಬಳಕೆದಾರರಿಂದ ವಿನಿಮಯ ಅಥವಾ ಸ್ವೀಕರಿಸಲ್ಪಟ್ಟ ಕೂಪನ್ ಗಳನ್ನು ಯಾವುದೇ ಆಸ್ತಿಯೆಂದು ಪರಿಗಣಿಸುವುದಿಲ್ಲ ಮತ್ತು ವರ್ಗಾಯಿಸಲ್ಪಡುವುದಿಲ್ಲ. : (ಎ) ಮರಣದ ಸಂದರ್ಭ ; (ಬಿ)ಯಾವುದೇ ದೇಶೀಯ ಸಂಬಂಧಗಳ ಕಾರಣದ ಸಂದರ್ಭ ; ಅಥವಾ (ಸಿ) ಇಲ್ಲದಿದ್ದರೆ ಕಾನೂನಿನ ಅಳವಡಿಕೆಯಿಂದ
  • ಒಂದು ವೇಳೆ ಬಳಕೆದಾರನಿಂದ ವಿನಿಮಯ ಅಥವಾ ಸ್ವೀಕರಿಸಿದ ಮಾಡಿದ ಕೂಪನ್ ಗಳು ದೋಷಪೂರಿತ ಅಥವಾ ಹಾನಿಗೊಳಗಾಗಿವೆ ಎಂಬುದು ಕಂಡುಬಂದಲ್ಲಿ ನಾವು ನಮ್ಮ ಸ್ವಂತ ವಿವೇಚನೆಯಲ್ಲಿ ನಿರ್ಧರಿಸಿ ಈ ಹಿಂದೆ ವಿನಿಮಯ ಮಾಡಿದ ಕೂಪನ್ ಗಳ ಪ್ರತಿಯನ್ನು ಬದಲಾಯಿಸಬಹುದು.
  • ಯಾವುದೇ ಬಳಕೆದಾರರ ಖಾತೆಯಲ್ಲಿ ಪ್ರೋಗ್ರಾಂ ಅನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಅಥವಾ ಈ ನೀತಿಗಳನ್ನು ಉಲ್ಲಂಘಿಸುತ್ತಿರುವುದು ಗಮನಕ್ಕೆ ಬಂದಲ್ಲಿ ಖಾತೆಯನ್ನು ರದ್ದುಗೊಳಿಸುವ ಅಥವಾ ಸೂಕ್ತ ಕ್ರಮ ತೆಗೆದುಕೊಳ್ಳುವ ಹಕ್ಕನ್ನು ನಾವು ಕಾಯ್ದಿರಿಸಿದ್ದೇವೆ.

ಜೆಮ್ಸ್ ಹಿಂತೆಗೆದುಕೊಳ್ಳುವುದು

  • ಯಾವುದೇ ಸಮಯದಲ್ಲಿ, ಕಂಟೆಂಟ್ ಪ್ರೊವೈಡರ್/ಬಳಕೆದಾರ ಅವನ/ಅವಳ ಖಾತೆಯನ್ನು ನೈಜ ಸಮಯದಲ್ಲಿ ಪರಿಶೀಲಿಸುವ ಮೂಲಕ ಅವರು ಎಷ್ಟು ಜೆಮ್ಸ್ ಗಳನ್ನು ಸಂಗ್ರಹಿಸಿದ್ದಾರೆಂದು ನೋಡಬಹುದಾಗಿದೆ.
  • ಕಂಟೆಂಟ್ ಪ್ರೊವೈಡರ್ / ಬಳಕೆದಾರರು ತಮ್ಮ ಬಳಕೆದಾರ ಖಾತೆಯಲ್ಲಿನ ಸಂಬಂಧಿತ ಆಯ್ಕೆಗಳನ್ನು ಆಯ್ಕೆ ಮಾಡುವ ಮೂಲಕ, ವಿತ್ತೀಯ ಪರಿಹಾರಕ್ಕಾಗಿ (ಭಾರತೀಯ ರಾಷ್ಟ್ರೀಯ ರೂಪಾಯಿಯಲ್ಲಿ ನಾಮನಿರ್ದೇಶನಗೊಳ್ಳಲು) ಜೆಮ್ಸ್ ಅನ್ನು ಹಿಂಪಡೆಯಲು ಆಯ್ಕೆ ಮಾಡಬಹುದು ಬಳಕೆದಾರರು ಗಳಿಸಿದ ಜೆಮ್ಸ್ ಗಳ ಸಂಖ್ಯೆ ಸೇರಿದಂತೆ ವಿವಿಧ ಅಂಶಗಳ ಆಧಾರದ ಮೇಲೆ ಅನ್ವಯವಾಗುವ ವಿತ್ತೀಯ ಪರಿಹಾರವನ್ನು ನಾವು ಲೆಕ್ಕ ಹಾಕುತ್ತೇವೆ.
  •  ಜೆಮ್ಸ್ ಗಳ ಹಿಂಪಡೆಯುವಿಕೆಯು ಈ ಕೆಳಗಿನ ನಿಯಮಗಳಿಗೆ ಒಳಪಟ್ಟಿರುತ್ತದೆ ಮತ್ತು ಇಂತಹ ಹಿಂಪಡೆಯುವಿಕೆ ಸಂದರ್ಭದಲ್ಲಿ ನಿಮಗೆ ಒದಗಿಸಲಾದ ಹಿಂಪಡೆಯುವಿಕೆ ಸೂಚನೆಗಳಲ್ಲಿ ನೀಡಲಾದ ಯಾವುದೇ ಹೆಚ್ಚುವರಿ ಮಾಹಿತಿಯು ಹಿಂದಿರುಗಿಸುವ ಮೊತ್ತಗಳ ದೈನಂದಿನ ಮಿತಿ ಒಳಗೊಂಡಂತೆ ಹಿಂಪಡೆಯುವ ಮೊತ್ತ ಪಡೆಯುವ ಸಂದರ್ಭದಲ್ಲಿ ಹಿಂಪಡೆಯುವ ದರವನ್ನು ಪ್ರದರ್ಶಿಸಲಾಗುತ್ತದೆ.
  • ಯಾವುದೇ ಇಂತಹ ಹಿಂದಿರುಗಿಸುವ ಗುಣಲಕ್ಷಣಗಳನ್ನು ನಿರ್ವಹಿಸುವ, ನಿಯಂತ್ರಿಸುವ, ನಿಬಂಧಿಸುವ, ಮಾರ್ಪಡಿಸುವ ಮತ್ತು/ಅಥವಾ ಅಂತಹ ವಿನಿಮಯ ದರವನ್ನು ತೆಗೆದುಹಾಕುವ ಸಂಪೂರ್ಣ ಹಕ್ಕು ನಾವು ಹೊಂದಿದ್ದೇವೆ ಮತ್ತು ಅನ್ವಯವಾಗುವ ಕಾನೂನು, ಭದ್ರತೆ ಅಥವಾ ತಾಂತ್ರಿಕ ಕಾರಣಗಳಆಧಾರದ ಮೇಲೆ ನಾವು ಯಾವುದೇ ಹೊಣೆಗಾರಿಕೆಯನ್ನು ಹೊಂದಿರುವುದಿಲ್ಲ ಎಂಬುದಾಗಿ ನೀವು ಒಪ್ಪಿಕೊಂಡಿರುತ್ತೀರಿ.
  • ಅನ್ವಯಿತ ನಗದು ಪಾವತಿಯನ್ನು ನೇರವಾಗಿ ನಿಮ್ಮ ನಾಮನಿರ್ದೇಶಿತ ಬ್ಯಾಂಕ್ ಖಾತೆ/ಯುಪಿಐ ಐಡಿ ಅಥವಾ ಇತರ ಮೂರನೇ ಪಾರ್ಟಿಯ ಚಾನಲ್ ಅಕೌಂಟ್ (ಒಂದು ವೇಳೆ ಅನ್ವಯಗೊಂಡಲ್ಲಿ) ಗೆ ಮಾಡಲಾಗುತ್ತದೆ.
  • ನಿಮ್ಮ ಮೊದಲ ಮತ್ತು ಕೊನೆಯ ಹೆಸರು ಬ್ಯಾಂಕ್ ಖಾತೆಗೆ ಸರಿಹೊಂದಬೇಕು ಮತ್ತು ಅದನ್ನು ಪರಿಶೀಲಿಸಬೇಕಾಗುತ್ತದೆ. ನೀವು ನಿಮ್ಮ ಖಾತೆಯ ಮಾಹಿತಿಯನ್ನು ಸರಿಯಾಗಿ ಒದಗಿಸಿದ್ದೀರಿ ಎಂಬುದನ್ನು ಖಾತ್ರಿಪಡಿಸುವುದು ನಿಮ್ಮ ಜವಾಬ್ದಾರಿಯಾಗಿರುತ್ತದೆ. ನಿಮ್ಮಿಂದ ಒದಗಿಸಲಾದ ತಪ್ಪು ಬ್ಯಾಂಕ್ ಖಾತೆ/ಯುಪಿಐ ಐಡಿ ಮಾಹಿತಿಯಿಂದಾಗಿ ಯಾವುದೇ ನಷ್ಟ ಉಂಟಾದಲ್ಲಿ ಅದಕ್ಕೆ ನೀವೇ ಕಾರಣರಾಗಿರುತ್ತೀರಿ. ಇ ಮೇಲ್ ವಿಳಾಸ, ನಿಮ್ಮ ಖಾತೆಯಲ್ಲಿರುವ ಹೆಸರಿಗೆ ಸರಿಯಾಗಿ ಮೊದಲ ಮತ್ತು ಕೊನೆಯ ಹೆಸರಿನಲ್ಲಿನ ವ್ಯತ್ಯಾಸ ಮತ್ತು ಖಾತೆಯನ್ನು ಸರಿಯಾಗಿ ಪರಿಶೀಲಿಸದಿದ್ದಲ್ಲಿ, ನಿಗದಿತ ಬ್ಯಾಂಕ್ ಖಾತೆ/ಯುಪಿಐ ಐಡಿ ಗೆ ಹಣಪಾವತಿಯನ್ನು ಕಳುಹಿಸಲಾಗುವುದಿಲ್ಲ. ಆಗ ನಮ್ಮ ಸ್ವಂತ ವಿವೇಚನೆಯಲ್ಲಿ ನೀವು ನಿಮ್ಮ ಗುರುತಿಗೆ ಸಂಬಂಧಿಸಿದ (ಮೊದಲ ಮತ್ತು ಕೊನೆಯ ಹೆಸರು ಮತ್ತು ಐಡಿ ನಂಬರ್ ಸೇರಿದಂತೆ ಪರಿಶೀಲನೆ ಮಾಡುವುದು) ಮಾಹಿತಿಯನ್ನು ಪರಿಶೀಲನೆಗಾಗಿ ಕಳುಹಿಸಿ ಎಂದು ನೀವು ಮನವಿ ಮಾಡಬಹುದು.
  • ನಿಮ್ಮ ಗ್ರಾಹಕ ದಾಖಲೆಗಳನ್ನು ತಿಳಿದುಕೊಳ್ಳಿರಿ ಎಂದು ಯಾವುದೇ ಪಾವತಿ ಮಾಡುವ ಮೊದಲು ನಿಮ್ಮ ಗುರುತು, ವಯಸ್ಸು (ನಿಮ್ಮ ರಾಜ್ಯದ ಗುರುತಿನ ಚೀಟಿಯ ಫೋಟೋಕಾಪಿ, ಅಥವಾ ಅಥವಾ ಇತರ ಪುರಾವೆಗಳನ್ನು ಬೇಕೆಂದಾಗ ವಿನಂತಿಸುವ ಮೂಲಕ) ಮತ್ತು ಅರ್ಹತೆಗಳನ್ನು ಪರಿಶೀಲಿಸುವ ಹಕ್ಕನ್ನು ನಾವು ಕಾಯ್ದಿರಿಸಿದ್ದೇವೆ.
  • ನಾವು ಎಲ್ಲಾ ವಾಪಸಾತಿ ವಿನಂತಿಗಳನ್ನು ಸಮಯೋಚಿತವಾಗಿ ಪೂರೈಸುವ ಗುರಿಯನ್ನು ಹೊಂದಿದ್ದರೂ, ನಿರ್ದಿಷ್ಟ ಅವಧಿಯೊಳಗೆ (ಹಿಂತೆಗೆದುಕೊಳ್ಳುವ ಸಮಯದಲ್ಲಿ ನಿಗದಿಪಡಿಸಿದ ಯಾವುದೇ ಅಂದಾಜು ಸಮಯಗಳನ್ನು ಒಳಗೊಂಡಂತೆ) ನಾವು ಯಾವುದೇ ಖಾತರಿ ನೀಡುವುದಿಲ್ಲ ಮತ್ತು ನಾವು ನಿಮಗೆ ಅಥವಾ ಯಾವುದೇ ಮೂರನೇ ವ್ಯಕ್ತಿಗೂ ಅಂತಹ ಸಮಯದಲ್ಲಿ ಹಿಂತೆಗೆದುಕೊಳ್ಳುವ ಮನವಿಯನ್ನು ಪೂರ್ಣಗೊಳಿಸಲು ವಿಫಲವಾಗಿದ್ದಲ್ಲಿ ನಾವು ಅದಕ್ಕೆ ಜವಾಬ್ದಾರರಾಗಿರುವುದಿಲ್ಲ.
  • ಈ ಪಾವತಿಗಳ ಮೇಲೆ ಅನ್ವಯವಾಗುವ ಕಾನೂನುಗಳ ಅಡಿಯಲ್ಲಿ ವಿಧಿಸಲಾದ ಯಾವುದೇ ತೆರಿಗೆಗಳಿಗೆ ನೀವು ಒಳಪಟ್ಟಿದ್ದರೆ, ಸಂಬಂಧಿತ ತೆರಿಗೆ ಪ್ರಾಧಿಕಾರಕ್ಕೆ ಅಂತಹ ತೆರಿಗೆಗಳನ್ನು್ (ಯಾವುದೇ ಸಂಬಂಧಿತ ದಂಡಗಳು ಅಥವಾ ಬಡ್ಡಿಯನ್ನು ಒಳಗೊಂಡಂತೆ) ಪಾವತಿಸಲು ನೀವು ಜವಾಬ್ದಾರರಾಗಿರುತ್ತೀರಿ. ಅನ್ವಯವಾಗುವ ಕಾನೂನಿನ ಮೂಲಕ ನಾವು ಅದನ್ನು ಮಾಡಬೇಕಾಗಿದೆ ಎಂದು ನಿರ್ಧರಿಸಿದರೆ ಅಂತಹ ಪಾವತಿಯನ್ನು ಮಾಡುವ ಮೊದಲು ಯಾವುದೇ ಅನ್ವಯವಾಗುವ ತೆರಿಗೆಗಳನ್ನು ಕಡಿತಗೊಳಿಸುವ ಹಕ್ಕನ್ನು ನಾವು ಕಾಯ್ದಿರಿಸುತ್ತೇವೆ. ತೆರಿಗೆಗಳಿಗೆ ಸಂಬಂಧಿಸಿದಂತೆ ನಿಮ್ಮಿಂದ ಪ್ರಮಾಣೀಕರಣಗಳನ್ನುವಿನಂತಿಸಲು ಮತ್ತು ತೆರಿಗೆ ಅಧಿಕಾರಿಗಳಿಗೆ ಪಾವತಿಸಿದ ಮತ್ತು/ ಅಥವಾ ನಿಮಗೆ ಪಾವತಿಗಳಿಂದ ತಡೆಹಿಡಿಯಲಾಗದ ಮೊತ್ತವನ್ನು ವರದಿ ಮಾಡುವ ಹಕ್ಕನ್ನು ನಾವು ಕಾಯ್ದಿರಿಸಿದ್ದೇವೆ.
  • ನೀವು ಈ ನಿಯಮಗಳನ್ನು ಉಲ್ಲಂಘಿಸಿದಲ್ಲಿ ನಿಮ್ಮ ಖಾತೆಯಿಂದ ಜೆಮ್ಸ್ ಕಳೆಯುವ ಹಕ್ಕನ್ನು ನಾವು ಕಾಯ್ದಿರಿಸಿಕೊಂಡಿದ್ದೇವೆ.
  • ನಾವು ಯಾವುದೇ ಸಮಯದಲ್ಲಿ ಜೆಮ್ಸ್ ನ್ನು ವಜಾಗೊಳಿಸಬಹುದು. ನಾವೊಂದು ವೇಳೆ ಜೆಮ್ಸ್ ಇನ್ ಸೆಂಟಿವ್ ವಜಾಗೊಳಿಸುವಂತಿದ್ದರೆ, ನಾವು ನಿಮಗೆ ಮುಂಚಿತವಾಗಿ ನೊಟೀಸ್ ಕೊಟ್ಟು ನಿಮ್ಮ ಬ್ಯಾಂಕ್ ಖಾತೆ/ಯುಪಿಐ ಐಡಿಗೆ ಜೆಮ್ಸ್ ವ್ಯಾಲ್ಯೂವನ್ನು ಸಶಕ್ತಗೊಳಿಸಲು ತಿಳಿಸುತ್ತೇವೆ. ನಾವು ಸೂಕ್ತ ಕಾರಣಗಳಿದ್ದಾಗ (ನೀವು ಈ ನಿಯಮಗಳನ್ನು ಉಲ್ಲಂಘಿಸಿದಲ್ಲಿ, ನೀವು ಯಾವುದಾದರೂ ಅನ್ವಯಿತ ಕಾನೂನು ಅಥವಾ ನಿಯಂತ್ರಣ ಅಥವಾ ಕಾನೂನು, ಭದ್ರತೆ ಅಥವಾ ತಾಂತ್ರಿಕ ಕಾರಣಗಳು ಸೇರಿದಂತೆ ನಿಯಮಗಳನ್ನು ಉಲ್ಲಂಘಿಸಿದಲ್ಲಿ) ಯಾವುದೇ ನೋಟಿಸ್ ನೀಡದೆ ಜೆಮ್ಸ್ ಆಪರೇಷನ್ ಇನ್ ಸೆಂಟಿವ್ ಕ್ಯಾನ್ಸಲ್ ಮಾಡಬಹುದು. ಇತರ ಯಾವುದೇ ಸಂದರ್ಭದಲ್ಲಿ ನೀವು ಈ ನಿಯಮಗಳಲ್ಲಿ ನಿಗದಿಗೊಳಿಸಿದ ಕಾರ್ಯ ವಿಧಾನಗಳನ್ನು ಬಳಸಿಕೊಂಡು ನಗದಾಗಿ ಪರಿವರ್ತಿಸದಿರುವ ಇನ್ ಸೆಂಟಿವ್ ಗಳನ್ನು ನಿಗದಿತ ದಿನಾಂಕಕ್ಕಿಂತ ಮುಂಚಿತವಾಗಿ ಸಂಗ್ರಹಗೊಂಡ ಯಾವುದೇ ಜೆಮ್ಸ್ ಗಳಿಗೆ ಸಂಬಂಧಿಸಿದಂತೆ ಯಾವುದೇ ಹಣಕಾಸು ಪರಿಹಾರ ಪಡೆಯಲು ನೀವು ಯಾವುದೇ ಹಕ್ಕು ಅಥವಾ ಅರ್ಹತೆಯನ್ನು ಹೊಂದಿರುವುದಿಲ್ಲ.

6. ಜೋಶ್ ನಲ್ಲಿ ಕ್ರಿಯೇಟರ್ ಗೆ (ವಿಷಯ ರಚನೆಕಾರ) ಟಿಪ್

ಜೋಶ್ ನಲ್ಲಿನ ಕ್ರಿಯೇಟರ್ ನ ವಿಷಯಗಳನ್ನು ನೀವು ಆನಂದಿಸುತ್ತಿದ್ದರೆ, ನೀವು ಅವರ ಪ್ರೊಫೈಲ್ ಗೆ ಮಾನಿಟರ್ ಟಿಪ್ (ಹಣಕಾಸು ನೆರವು) ಕಳುಹಿಸಬಹುದು. ಕ್ರಿಯೇಟರ್ ಶೇಕಡ 100ರಷ್ಟು ಟಿಪ್ ಮೊತ್ತವನ್ನು ಪಡೆಯುತ್ತಾರೆ. (ನಮ್ಮ ಪಾವತಿ ಪ್ರೊವೈಡರ್ ಶುಲ್ಕವು ಅನ್ವಯಗೊಳ್ಳುತ್ತದೆ) ನೀವು ಕಳುಹಿಸಿದ ಟಿಪ್ ಮೊತ್ತವನ್ನು ಜೋಶ್ ಸ್ವೀಕರಿಸುವುದಿಲ್ಲ.

6.1 ಜೋಶ್ ನಲ್ಲಿ ಯಾರು ಟಿಪ್ಸ್ ನೀಡಬಹುದು

ಜೋಶ್ ನಲ್ಲಿ ಟಿಪ್ ನೀಡಲು:

ನೀವು 18 ವರ್ಷ ವಯಸ್ಸು ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರು

ಟಿಪ್ಸ್ ನಿಮ್ಮ ಸ್ಥಳದಲ್ಲಿ ಲಭ್ಯವಿರಬೇಕು (ಈ ಫೀಚರ್ ಪ್ರಸ್ತುತ ಎಲ್ಲೆಡೆ ಲಭ್ಯವಿಲ್ಲ)

ಬಿಸಿನೆಸ್ ಅಕೌಂಟ್ ಗಳು ಭಾಗವಹಿಸಲು ಅರ್ಹವಾಗಿರುವುದಿಲ್ಲ.

ಟಿಪ್ಸ್ ನ ನಿರ್ಬಂಧಗಳು

ನೀವು ಎಷ್ಟು ಮತ್ತು ಯಾವಾಗೆಲ್ಲಾ ಟಿಪ್ ನೀಡಬಹುದು ಎಂಬುದರ ಬಗ್ಗೆ ಕೆಲವೊಂದು ಮಿತಿಗಳಿವೆ.

  • ನೀವು ಪ್ರತಿ ದಿನ ನಿಗದಿತ ಪ್ರಮಾಣದ ಟಿಪ್ ನ್ನು ಮಾತ್ರ ನೀಡಬಹುದು, ಮತ್ತು ನೀವು ಗರಿಷ್ಟ ಪ್ರಮಾಣದ ಟಿಪ್ ನ್ನು ನೀಡಬಹುದು. ಇದು ಅನ್ವಯಿತ ನಿಯಮಗಳಿಗೆ ಅನುಸಾರವಾಗಿ ಅನ್ವಯಗೊಳ್ಳುತ್ತದೆ.

ನಮ್ಮ ಸೇವಾ ಟಿಪ್ಸ್ ನಿಬಂಧನೆಗಳಲ್ಲಿನ ಟಿಪ್ಸ್ ಮೇಲಿನ ನಿರ್ಬಂಧನೆಗಳ ಬಗ್ಗೆ ಹೆಚ್ಚು ತಿಳಿಯಿರಿ.

ಜೋಶ್ ನಲ್ಲಿ ಹೇಗೆ ಟಿಪ್ ಗಳನ್ನು ನೀಡಬಹುದು

1. ನಿಮ್ಮ ಜೋಶ್ ಆಪ್ ನಲ್ಲಿ, ಕ್ರಿಯೇಟರ್ಸ್ ಪ್ರೊಫೈಲ್ ಗೆ ಹೋಗಿ ನೀವು ಟಿಪ್ ನ್ನು ಲೈಕ್ ಮಾಡಬೇಕು.

2. ಅವರ ಪ್ರೊಪೈಲ್ ನಲ್ಲಿ, ಟಿಪ್ಸ್ ಗಳನ್ನು ಟ್ಯಾಪ್ ಮಾಡಿ. ನೀವೊಂದು ವೇಳೆ, ಪ್ರೊಪೈಲ್ ನಲ್ಲಿ ಟಿಪ್ಸ್ ನೋಡಿಲ್ಲದಿದ್ದರೆ, ಅವು ಈ ಸಂದರ್ಭದಲ್ಲಿ ಟಿಪ್ಸ್ ಗಳನ್ನು ಸ್ವೀಕರಿಸಲು ಲಭ್ಯವಾಗುವುದಿಲ್ಲ.

3. ಟ್ಯಾಪ್ ಮಾಡಿ ಟಿಪ್ ಕಳುಹಿಸಿ, ನೀವು ನಿಗದಿತ ಮೊತ್ತದ ಟಿಪ್ ಆಯ್ಕೆ ಮಾಡಬಹುದು, ಅಥವಾ ಕಸ್ಟಮ್ ಟಿಪ್ ಮೊತ್ತವನ್ನು ಸೇರಿಸಿ ನಂತರ ನೆಕ್ಸ್ಟ್ ಐಕಾನ್ ಟ್ಯಾಪ್ ಮಾಡಿ. (ಪಾವತಿ ಪಾಲುದಾರ ಶುಲ್ಕವು ಅನ್ವಯಿಸುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಂಡಿರಿ)

4. ನಿಮ್ಮ ಪಾವತಿ ವಿಧಾನವನ್ನು ಆಯ್ಕೆ ಮಾಡಿ ಮತ್ತು ಪಾವತಿ ಖಾತರಿಯನ್ನು ಟ್ಯಾಪ್ ಮಾಡಿ.

ನೀವೊಂದು ವೇಳೆ, ಪಾವತಿ ವಿಧಾನವನ್ನು ಈ ಹಿಂದೆ ಸೆಟ್ ಮಾಡಿಲ್ಲದಿದ್ದಲ್ಲಿ, ನಿಮ್ಮ ಜೋಶ್ ಅಕೌಂಟ್ ಗೆ ಪೇಮೆಂಟ್ ಕಾರ್ಡ್ ನ್ನು ಸೇರಿಸಲು ಹೇಳಲಾಗುತ್ತದೆ.

6.2 ಜೋಶ್ ನಲ್ಲಿ ಟಿಪ್ ಸ್ವೀಕರಿಸುವುದು

ಜೋಶ್ ನಲ್ಲಿ ಒಬ್ಬ ಕ್ರಿಯೇಟರ್ ಆಗಿ ನಿಮ್ಮ ವ್ಯೂವರ್ ಗಳು ನಿಮ್ಮ ಜೋಶ್ ಪ್ರೊಫೈಲ್ ಗೆ ನೇರವಾಗಿ ಟಿಪ್ಸ್ ಗಳನ್ನು ಕಳುಹಿಸಬಹುದು. ನಿಮಗೆ ಪಾವತಿಯನ್ನು ಪ್ರಕ್ರಿಯೆಗೊಳಪಡಿಸಲು ನಾವು ಮೂರನೇ ವ್ಯಕ್ತಿಗಳ ಪಾವತಿ ಪ್ರೊವೈಡರ್ ಗಳೊಂದಿಗೆ ಪಾಲುದಾರಿಕೆ ಮಾಡಿಕೊಂಡಿದ್ದೇವೆ.

ಗಮನಿಸಿ: ನೀವು ಟಿಪ್ ಮೊತ್ತದ 100% ನ್ನು ನಿಮ್ಮಲ್ಲಿ ಉಳಿಸಿಕೊಳ್ಳುತ್ತೀರಿ. (ಪಾಲುದಾರ ಪ್ರಾಸೆಸಿಂಗ್ ಶುಲ್ಕ ಪಾವತಿಯ ನಂತರ)

6.2.1 ಜೋಶ್ ನಲ್ಲಿ ಯಾರು ಟಿಪ್ ಗಳನ್ನು ಸ್ವೀಕರಿಸಬಹುದು.

ಜೋಶ್ ನಲ್ಲಿ ಟಿಪ್ಸ್ ಸ್ವೀಕರಿಸಲು ಅರ್ಹತೆ ಗಳಿಸಲು ನೀವು ಈ ಕೆಳಗಿನ ಅರ್ಹತೆಗಳನ್ನುಹೊಂದಿದಲ್ಲಿ ನೀವು ಅರ್ಜಿ ಸಲ್ಲಿಸಬಹುದು:

  • ನಿಮಗೆ 18 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯೋಮಾನದವರಾಗಿರಬೇಕು.
  • ನಿಮ್ಮ ಖಾತೆಯು ಉತ್ತಮ ಸ್ಥಿತಿಯಲ್ಲಿರಬೇಕು ಮತ್ತು ನಮ್ಮ ಸಮುದಾಯ ಮಾರ್ಗಸೂಚಿಗಳು ಮತ್ತು ಸೇವಾ ನಿಯಮಗಳಿಗೆ ಅನುಗುಣವಾಗಿರಬೇಕು. 
  • ನೀವು ವೈಯಕ್ತಿಕ ಖಾತೆಯನ್ನು ಕಡ್ಡಾಯವಾಗಿ ಹೊಂದಿರಬೇಕು. ವ್ಯವಹಾರ ಖಾತೆಗಳು ಭಾಗವಹಿಸಲು ಅನರ್ಹವಾಗಿವೆ. ಗಮನಿಸಿ: ಒಂದು ವೇಳೆ ನೀವು ಅರ್ಜಿ ಸಲ್ಲಿಸಿದಾಗ ಅರ್ಹರಲ್ಲವೆಂದು ಕಂಡುಬಂದಲ್ಲಿ, ನೀವು ಮೂವತ್ತು (30) ದಿನಗಳ ನಂತರ ಪುನಃ ಅರ್ಜಿ ಸಲ್ಲಿಸಬಹುದಾಗಿದೆ. ಹಾಗೆಯೇ, ಒಂದು ವೇಳೆ ನಿಮ್ಮ ಖಾತೆಯು ಅರ್ಹತೆ ಮಾನದಂಡವನ್ನು ಉಲ್ಲಂಘಿಸಿದಲ್ಲಿ, ನೀವು ಶಾಶ್ವತವಾಗಿ ಅಥವಾ ತಾತ್ಕಾಲಿಕವಾಗಿ ಟಿಪ್ಸ್ ಸ್ವೀಕರಿಸುವುದನ್ನು ತೆಗೆದುಹಾಕಬಹುದು.

6.2.2 ಜೋಶ್ ನಲ್ಲಿ ಟಿಪ್ಸ್ ಸ್ವೀಕರಿಸಲು ಹೇಗೆ ಅರ್ಜಿ ಸಲ್ಲಿಸುವುದು.

ಟಿಪ್ಸ್ ಗಳನ್ನು ಸ್ವೀಕರಿಸಲು ಅರ್ಜಿ ಸಲ್ಲಿಸುವುದು.

1. ಜೋಶ್ ಆಪ್ ನಲ್ಲಿ ಕೆಳಗಡೆ ಪ್ರೊಫೈಲ್ ನ್ನು ಟ್ಯಾಪ್ ಮಾಡುವುದು

2. ಮೇಲೆ ಮೆನು ಬಟನ್ ಟ್ಯಾಪ್ ಮಾಡುವುದು

3. ಕ್ರಿಯೇಟರ್ ಟೂಲ್ಸ್ ನ್ನು ಟ್ಯಾಪ್ ಮಾಡಿ , ನಂತರ ಟಿಪ್ಸ್ ಗಳನ್ನು ಟ್ಯಾಪ್ ಮಾಡಿ

4. ಅಪ್ಲೈ ಐಕಾನ್ ಟ್ಯಾಪ್ ಮಾಡಿ

5. ಆನ್ ಸ್ಕ್ರೀನ್ ಸೂಚನೆಗಳನ್ನು ಅನುಸರಿಸಿರಿ. ಒಂದು ವೇಳೆ ನೀವು ಖಾತೆಯನ್ನು ರಚಿಸಿಲ್ಲದಿದ್ದಲ್ಲಿ, ನಿಮ್ಮನ್ನು ಅವರ ಪಾವತಿಯ ಪಾರ್ಟ್ ನರ್ ಚೆಕ್ ಔಟ್ ಪೇಜ್ ಗೆ ಕರೆದುಕೊಂಡು ಹೋಗಲಾಗುವುದು. ಕೆಲವೊಂದು ಅಂಶಗಳನ್ನು ಗಮನದಲ್ಲಿಡಬೇಕಾಗುತ್ತದೆ.

 ನೀವು ಸ್ವೀಕರಿಸಿದ ತಕ್ಷಣ ನೀವು ನಿಮ್ಮ ಡ್ಯಾಶ್ ಬೋರ್ಡ್ ನಲ್ಲಿ ನಿಮ್ಮ ಟಿಪ್ಸ್ ಗಳನ್ನು ನೋಡಲು ಸಾಧ್ಯವಿರುತ್ತದೆ, ಆದರೆ ನಿಮ್ಮ ಡ್ಯಾಶ್ ಬೋರ್ಡ್ ನಲ್ಲಿ ಟಿಪ್ಸ್ ಪ್ರದರ್ಶಿತಗೊಳ್ಳಬೇಕಾದರೆ ಇಪ್ಪತ್ತನಾಲ್ಕು ಗಂಟೆ (24) ಗಳನ್ನು ತೆಗೆದುಕೊಳ್ಳುತ್ತದೆ.

ಒಂದೊಮ್ಮೆ ಪಾವತಿ ಪಾಲುದಾರ ನಿಮ್ಮ ಟಿಪ್ಸ್ ನ್ನು ಪ್ರಾಸೆಸ್ ಮಾಡಿದಲ್ಲಿ, ಅದು ಸ್ವಯಂಚಾಲಿತವಾಗಿ ವಾರದ ಆಧಾರದಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ ಡೆಪಾಸಿಟ್ ಆಗುತ್ತದೆ. ನೀವು ಪಾವತಿ ಪಾಲುದಾರನ ಮೂಲಕ ನಿಮ್ಮ ಪಾವತಿ ಪಾಲುದಾರನ ಬ್ಯಾಂಕ್ ಖಾತೆ ಮಾಹಿತಿಯನ್ನು ಅಪ್ ಡೇಟ್ ಮಾಡಬಹುದಾಗಿದೆ.

7. ನಮ್ಮ ಮಾಲಿಕತ್ವ ಮತ್ತು ಹಕ್ಕುಗಳು

7.1 ವೇದಿಕೆಯಲ್ಲಿನ ಎಲ್ಲಾ ಹಕ್ಕುಗಳು, ಶೀರ್ಷಿಕೆಗಳು ಮತ್ತು ಹಿತಾಸಕ್ತಿಗಳನ್ನು ವರ್ಸೇಯಲ್ಲಿ ಉಳಿಸಿಕೊಳ್ಳಲಾಗುತ್ತದೆ ಮತ್ತು ಈ ಒಪ್ಪಂದದ ನಿಯಮಗಳು ಮತ್ತು ನಿಬಂಧನೆಗಳ ಅನುಸಾರವಾಗಿ ವೇದಿಕೆಯನ್ನು ಬಳಸಲಷ್ಟೇ ಒಪ್ಪಂದವು ನಿಮಗೆ ಪರವನಾನಗಿಯನ್ನು ನೀಡುತ್ತದೆ. ಈ ಒಪ್ಪಂದದ ಪ್ರಕಾರ ಯಾವುದೇ ಮಾಲೀಕತ್ವ ಆಸ್ತಿಯನ್ನು ವರ್ಸೇ ನಿಮಗೆ ನೀಡುವುದಿಲ್ಲ, ಮತ್ತು ಎಲ್ಲಾ ಹಕ್ಕುಗಳು, ಶೀರ್ಷಿಕೆ ಮತ್ತು ಆಸ್ತಿಯಲ್ಲಿನ ಹಿತಾಸಕ್ತಿಯು ವರ್ಸೇಯೊಂದಿಗೆ ಮುಂದುವರೆಯುತ್ತದೆ ಎಂಬುದಾಗಿ ನೀವು ಈ ಮೂಲಕ ಒಪ್ಪಿಕೊಂಡು, ಖಾತರಿಪಡಿಸಿಕೊಂಡಿರುತ್ತೀರಿ.

7.2 ವರ್ಸೆಯು ನಿಮ್ಮ ವೈಯಕ್ತಿಕ ಸಂತೋಷ, ಸ್ವಯಂ ಅಭಿವ್ಯಕ್ತಿ ಮತ್ತು ಸಾರ್ವಜನಿಕರ ಮಾನ್ಯತೆಯ ಸಾಧ್ಯತೆಗಾಗಿ ನಿಮಗೆ ವೇದಿಕೆಗೆ ಉಚಿತ ಪರವಾನಗಿ ಒದಗಿಸುತ್ತದೆ. ನಿಮಗೆ ವೇದಿಕೆಗೆ ನೀಡಲಾದ ಪರವಾನಗಿಗೆ ಪ್ರತಿಯಾಗಿ ನೀವು ವೇದಿಕೆಯಲ್ಲಿ ಇತರ ಯಾವುದೇ ಬಳಕೆದಾರರ ವಿಷಯವನ್ನು ಬಳಸುವುದರಿಂದ ವರ್ಸೇ ಆದಾಯ ಗಳಿಸಬಹುದು, ಸದಭಿಪ್ರಾಯ ಹೆಚ್ಚಿಸಿಕೊಳ್ಳಬಹುದು ಅಥವಾ ಅದು ತನ್ನ ಮೌಲ್ಯವನ್ನು ಹೆಚ್ಚಿಸಿಕೊಳ್ಳಬಹುದು ಎಂಬುದಾಗಿ ನೀವು ಒಪ್ಪುತ್ತೀರಿ ಮತ್ತು ಅಂಗೀಕರಿಸುತ್ತೀರಿ. ಹಾಗೂ ಯಾವುದೇ ಮಿತಿಯಿಲ್ಲದ, ಜಾಹೀರಾತು, ಪ್ರಾಯೋಜಕತ್ವಗಳು, ಪ್ರಚಾರಗಳು, ಮಾರ್ಕೆಟಿಂಗ್ ಮತ್ತು ಕಂಟೆಂಟ್ ಮಾರ್ಕೆಟಿಂಗ್ ಸೇರಿದಂತೆ ಇತರ ಯಾವುದೇ ಮಾಧ್ಯಮ ಮತ್ತು ಬಳಕೆಯ ಬಳಕೆಯ ದತ್ತಾಂಶ ಮತ್ತು ನೀವು ಅಂತಹ ಯಾವುದೇ ಆದಾಯವನ್ನು ಹಂಚಿಕೊಳ್ಳುವ ಸದಭಿಪ್ರಾಯ ಅಥವಾ ಮೌಲ್ಯವನ್ನು ಹಂಚಿಕೊಳ್ಳುವ ಹಕ್ಕು ಕೂಡ ಹೊಂದಿಲ್ಲ. ಹಾಗೆಯೇ ಮುಂದುವರೆದು ನೀವು ವೇದಿಕೆಯಲ್ಲಿ ನೀವು ಅಪ್ ಲೋಡ್ ಮಾಡಿದ ಯೂಸರ್ ಕಂಟೆಂಟ್ ನಿಂದ ಆದಾಯ ಸ್ವೀಕಾರ ಅಥವಾ ಇತರ ಪರಿಗಣನೆಗಳನ್ನು ಸ್ವೀಕರಿಸಲೂ ಕೂಡ ನಿಮಗೆ ಯಾವುದೇ ಹಕ್ಕಿಲ್ಲ ಅಥವಾ ಇಲ್ಲಿ ವಿವರಿಸಿದಂತೆ ವರ್ಸೇ ಮತ್ತು ಅಥವಾ ಇತರ ಬಳಕೆದಾರರಿಂದ ಅದರ ಬಳಕೆ ಮತ್ತು ನೀವು ಯಾವುದೇ ಹಕ್ಕುಗಳನ್ನು ಚಲಾಯಿಸುವುದನ್ನು ನಿಷೇಧಿಸಲಾಗಿದೆ. (1) ನೀವು ಅಥವಾ ಇತರ ಬಳಕೆದಾರರು ವೇದಿಕೆಯಲ್ಲಿ ಅಪ್ ಲೋಡ್ ಮಾಡಿದ ವಿಷಯಗಳು ಅಥವಾ (2) ನೀವು ಪ್ಲಾಟ್ ಫಾರ್ಮ್ ಮೂಲಕ ಮೂರನೇ ವ್ಯಕ್ತಿಯ ಸೇವೆಗಾಗಿ (ಉದಾ: ನೀವು ಯಾವುದೇ ಯುಜಿಸಿ ರಚಿತ ಮತ್ತು ಇತರ ಅಪ್ಲಿಕೇಷನ್ ಗಳಿಗಾಗಿ ಹಣ ಮಾಡಲು ವೇದಿಕೆಯ ಮೂಲಕ ಅಪ್ ಲೋಡ್ ಮಾಡಿದ ಇತರ ಸಣ್ಣ ವೀಡಿಯೋಗಳು ಅಪ್ ಲೋಡ್ ಮಾಡುವುದು) ಅಪ್ ಲೋಡ್ ಮಾಡುವ ಯಾವುದೇ ಬಳಕೆದಾರರ ವಿಷಯದಿಂದ ಹಣ ಗಳಿಸುವುದು ಅಥವಾ ಪರಿಗಣನೆ ಗಳಿಸಲು ಬಯಸುವುದನ್ನು ನಿಷೇಧಿಸಲಾಗಿದೆ.

8. ನಿಮ್ಮ ಪರವಾನಗಿ ಮತ್ತು ವೇದಿಕೆ/ಸೇವೆಗಳ ಬಳಕೆ

8.1 ವರ್ಸೇಯ ನಿಯಮಗಳನುಸಾರ ಅದು ವೇದಿಕೆಯ ವೈಯಕ್ತಿಕ ಮತ್ತು ವಾಣಿಜ್ಯೇತರ ಬಳಕೆ ಮಾಡಲು ನಿಮಗೆ ಸೀಮಿತವಾಗಿ ವರ್ಗಾವಣೆ ಮಾಡಲಾಗದ, ವಿಶೇಷವಲ್ಲದ, ಹಿಂತೆಗೆದುಕೊಳ್ಳಬಹುದಾದ ಪರವಾನಗಿ ನೀಡುತ್ತದೆ.

8.2 ವೇದಿಕೆಯ ಮೂಲಕ ವರ್ಸೇಯಿಂದ ನೀಡಲಾಗುವ ಸೇವೆಗಳಿಗೆ ಬಳಕೆದಾರರು ಮುಂಚಿತವಾಗಿ ನೋಂದಣಿ ಮಾಡಬೇಕಾಗುತ್ತದೆ. ಸೇವೆಗಳಿಗೆ ಪ್ರವೇಶ ಪಡೆಯಲು ನೀವು ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಖಾತೆಯನ್ನು ರಚಿಸುವ ಅವಶ್ಯಕತೆಯಿರುತ್ತದೆ. ಇಂತಹ ನೋಂದಣಿ ಪ್ರಕ್ರಿಯೆಯ ಭಾಗವಾಗಿ ನೀವು ನಮಗೆ ಅನ್ವಯಿತ ನೋಂದಣಿ ನಮೂನೆಯಿಂದ ನಂಬಲರ್ಹವಾದ ಪ್ರಸ್ತುತ ಲಭ್ಯವಿರುವ ನಿಖರ ಮತ್ತು ಸಂಪೂರ್ಣ ಮಾಹಿತಿಯನ್ನು ನೀಡಬೇಕಾಗುತ್ತದೆ. ನೀವು ವಿಶಿಷ್ಟ ಪಾಸ್ ವರ್ಡ್ ಮತ್ತು ಯೂಸರ್ ನೇಮ್ ಆಯ್ಕೆ ಮಾಡುವ ಅವಶ್ಯಕತೆಯಿರುತ್ತದೆ ಮತ್ತು ಈ ಸೇವೆಗಳಿಗೆ ಪ್ರವೇಶ ಪಡೆಯಲು ಬಯಸಿದಾಗ ನೀವು ಅದನ್ನು ನಮೂದಿಸಬೇಕಾಗುತ್ತದೆ. ವೇದಿಕೆಯಲ್ಲಿ ಬಹು ಬಳಕೆದಾರರಿಂದ ಒಂದೇ ಖಾತೆ ಮತ್ತು ಪಾಸ್ ವರ್ಡ್ ಮೂಲಕ ವೇದಿಕೆಗೆ ಪ್ರವೇಶಿಸಲು ನೀವು ಅರ್ಹರಾಗಿರುವುದಿಲ್ಲ. ನಾವು ವೇದಿಕೆಯ ಯಾವುದೇ ಭಾಗವನ್ನು ಪ್ರಾಕ್ಸಿ ಸರ್ವರ್ ಗಳಲ್ಲಿ ಪಡೆಯಲು ಬಯಸುವುದಿಲ್ಲ ಎಂದು ನೀವು ಒಪ್ಪುತ್ತೀರಿ ಮತ್ತು ಅರ್ಥಮಾಡಿಕೊಂಡಿದ್ದೀರಿ. ನಿಮ್ಮ ಪಾಸ್ ವರ್ಡ್ ಮತ್ತು ಖಾತೆಯ ಗೌಪ್ಯತೆಯನ್ನು ಕಾಪಾಡಿಕೊಳ್ಳುವುದು ನಿಮ್ಮ ಜವಾಬ್ದಾರಿಯಾಗಿರುತ್ತದೆ. ನೀವು ನಿಮ್ಮ ಖಾತೆಯಡಿಯಲ್ಲಿ ಯಾವುದೇ ಚಟುವಟಿಕೆಗಳು ಸಂಭವಿಸುವುದಕ್ಕೆ (ನಮಗೆ ಮತ್ತು ಇತರರಿಗೆ) ನೀವೇ ಏಕಮಾತ್ರ ಜವಾಬ್ದಾರರಾಗಿರುತ್ತೀರಿ. ಖಾತೆಯನ್ನು ರಚಿಸುವಾಗ, ನೀವು ನಿಮ್ಮ ಬಗ್ಗೆ ನಿಖರ ಮಾಹಿತಿ ಒದಗಿಸಬೇಕು ಮತ್ತು ವೈಯಕ್ತಿಕ ಉದ್ದೇಶಕ್ಕಾಗಿ ಕೇವಲ ಒಂದೇ ಖಾತೆಯನ್ನು ರಚಿಸಬೇಕು.

8.3 ನಿಮ್ಮ ಖಾತಾ ಮಾಹಿತಿಯನ್ನು ಮತ್ತು ಪಾಸ್ ವರ್ಡ್ ನ್ನು ಇತರರೊಂದಿಗೆ ಹಂಚಿಕೊಳ್ಳಬಾರದು ಅಥವಾ ಇತರ ಯಾರದೇ ಖಾತೆಯನ್ನು ನೀವು ಬಳಸಬಾರದು. ನಿಮ್ಮ ಖಾತೆಯಲ್ಲಿ ಸಂಭವಿಸುವ ಯಾವುದೇ ಮತ್ತು ಎಲ್ಲಾ ಚಟುವಟಿಕೆಗಳಿಗೆ ನೀವೇ ಸಂಪೂರ್ಣ ಜವಾಬ್ದಾರರಾಗಿರುತ್ತೀರಿ. ನಿಮ್ಮ ಖಾತೆಯ ಅನಧಿಕೃತ ಬಳಕೆ ಅಥವಾ ಭದ್ರತೆಯ ಯಾವುದೇ ಉಲ್ಲಂಘನೆಯ ಬಗ್ಗೆ ನಮಗೆ ತಕ್ಷಣವೇ ತಿಳಿಸಲು ಒಪ್ಪಿರುತ್ತೀರಿ. ಅಂತಹ ಸಂದರ್ಭದಲ್ಲಿ ನಾವು ನಿಮ್ಮ ಖಾತೆಯನ್ನು ಪುನರ್ ಪಡೆಯಲು ಸಹಾಯ ಮಾಡುತ್ತೇವೆ; ಹಾಗಿದ್ದರೂ ನಾವು ನಿಮ್ಮ ಖಾತೆಯನ್ನು ಮರುಸ್ಥಾಪನೆಯಾಗುತ್ತದೆ ಅಥವಾ ನಿಮ್ಮ ಖಾತೆಯಲ್ಲಿ ಇದ್ದ ವಿಷಯಗಳನ್ನು ಮರುಪಡೆಯಲಾಗುತ್ತದೆ ಎಂಬ ಯಾವುದೇ ಖಾತರಿಯನ್ನು ನೀಡುವುದಿಲ್ಲ. ನಿಮ್ಮ ಖಾತೆ ಅಥವಾ ಪಾಸ್ ವರ್ಡ್ ನ ಅನಧಿಕೃತ ಬಳಕೆಯಿಂದಾಗುವ ಯಾವುದೇ ಹಾನಿಗೆ ನಾವು ಜವಾಬ್ದಾರರಾಗಿರುವುದಿಲ್ಲ. ಆದ್ದಾಗ್ಯೂ, ನಿಮ್ಮ ಖಾತೆ ಅಥವಾ ಪಾಸ್ ವರ್ಡ್ ನ್ನು ಬೇರೆ ಯಾರೋ ಬಳಸಿದ ಪರಿಣಾಮ ಕಂಪನಿ ಅಥವಾ ಇನ್ನೊಂದು ತಂಡದಿಂದ ಉಂಟಾದ ನಷ್ಟಗಳಿಗೆ ನೀವೇ ಜವಾಬ್ದಾರರಾಗಿರುತ್ತೀರಿ.

8.4 ಫೇಸ್ ಬುಕ್ ಮೂಲಕ ನೋಂದಣಿ: ನೀವು ಸೇವೆಗಳಿಗಾಗಿ ಫೇಸ್ ಬುಕ್ ಯೂಸರ್ ನೇಮ್ ಮತ್ತು ಪಾಸ್ ವರ್ಡ್ ಬಳಸಿ ನೋಂದಣಿ ಮಾಡಬಹುದು (“ಫೇಸ್ ಬುಕ್ ಕನೆಕ್ಟ್”). ನೀವು 18 ವರ್ಷ ಕೆಳಗಡೆಯವರಾಗಿದ್ದರೆ, ನೀವು ನಿಮ್ಮ ಪೋಷಕ ಅಥವಾ ಕಾನೂನು ಪೋಷಕರ ಮೇಲ್ವಿಚಾರಣೆಯಲ್ಲಿ ಫೇಸ್ ಬುಕ್ ಕನೆಕ್ಟ್ ಬಳಸಿಕೊಂಡು ಸೇವೆಗಳನ್ನು ಬಳಸಿಕೊಳ್ಳಬಹುದು. ಫೇಸ್ ಬುಕ್ ಕನೆಕ್ಟ್ ಬಳಸುವುದರಿಂದ ನಿಮ್ಮ ವೈಯಕ್ತಿಕ ಮಾಹಿತಿ, ಪ್ರೊಫೈಲ್, ಇಷ್ಟದ ವಿಷಯ ಹಾಗೂ ಇತರ ಸಂಬಂಧಿತ ಮಾಹಿತಿಯ ಆಧಾರದ ಮೇಲೆ ಸೇವೆಗಳನ್ನು ಬಳಸುವಾಗ ನಿಮ್ಮ ಅನುಭವವನ್ನು ವೈಯಕ್ತಿಕಗೊಳಿಸಲು ಮತ್ತು ವರ್ಧಿಸಲು ನಮಗೆ ಅನುಮತಿ ಸಿಗುತ್ತದೆ. ನೀವು ಈ ಫೀಚರ್ ನ್ನು ಬಳಸುವಾಗ ಸೇವೆಗಳಲ್ಲಿನ ನಿಮ್ಮ ಚಟುವಟಿಕೆಯ ಕುರಿತು ಮಾಹಿತಿಗೆ ನೀವು ಸ್ಪಷ್ಟವಾಗಿ ಸಮ್ಮತಿಸುತ್ತೀರಿ. ನಿಮ್ಮ ಖಾತೆ/ಖಾಸಗಿ ಸೆಟ್ಟಿಂಗ್ ಗಳನ್ನು ಬದಲಾಯಿಸುವ ಮೂಲಕ ಫೇಸ್ ಬುಕ್ ಕನೆಕ್ಟ್ ಮೂಲಕ ಹಂಚಿಕೊಳ್ಳಲಾಗುವ ಮಾಹಿತಿಯನ್ನು ನಿಯಂತ್ರಿಸಬಹುದಾಗಿದೆ. ಈ ಫೀಚರ್ ನ್ನು ಬಳಸಲು ಮತ್ತು ನಿಮ್ಮ ಫೇಸ್ ಬುಕ್ ಖಾತೆಯ ನಿಯಮಗಳೊಂದಿಗೆ ಯಾವುದೇ ಅನುಸರಣೆಗೆ ನೀವು ಏಕಮಾತ್ರ ಜವಾಬ್ದಾರರಾಗಿರುತ್ತೀರಿ. ಫೇಸ್ ಬುಕ್ ನ ಮೂಲಕ ನೋಂದಣಿಯಾಗುವ ಮೂಲಕ ನೀವು ಇಲ್ಲಿ ಹೇಳಿರುವ ನಿಯಮಗಳಿಗೆ ಮತ್ತು ಫ್ಲಾಟ್ ಫಾರ್ಮ್ ನ ಸೂಕ್ತ ಸ್ಥಳದಲ್ಲಿ ಪೋಸ್ಟ್ ಮಾಡಲಾಗುವ ಯಾವುದೇ ನಿರ್ದಿಷ್ಟ ಹಾಗೂ ಹೆಚ್ಚುವರಿ ನಿಯಮಗಳಿಗೆ ನೀವು ಸಮ್ಮತಿಸುತ್ತೀರಿ. ಪ್ರತಿಯೊಂದು ನೋಂದಣಿಯು ಒಬ್ಬ ವೈಯಕ್ತಿಕ ಬಳಕೆದಾರನಿಗೆ ಮಾತ್ರವಾಗಿರುತ್ತದೆ.

8.5 ನಿಮ್ಮ ಪ್ರವೇಶ ಹಾಗೂ ಸೇವೆಯ ಬಳಕೆಯು ಈ ನಿಯಮಗಳು ಮತ್ತು ಎಲ್ಲಾ ಅನ್ವಯಿತ ಕಾನೂನು ಮತ್ತು ನಿಬಂಧನೆಗಳಿಗೆ ಅನುಸಾರವಾಗಿರುತ್ತದೆ. ನೀವು ಏನೂ ಮಾಡುವಂತಿಲ್ಲ:

  • ನೀವು ಈ ನಿಯಮಗಳಿಗೆ ಸಂಪೂರ್ಣವಾಗಿ ಮತ್ತು ಕಾನೂನಾತ್ಮಕವಾಗಿ ಒಪ್ಪಲು ಸಮರ್ಥರಾಗಿಲ್ಲದಿದ್ದಾಗ ಪ್ರವೇಶ ಹಾಗೂ ಸೇವೆಗಳನ್ನು ಬಳಸುವಂತಿಲ್ಲ.
  •  ಪ್ರವೇಶ ಹಾಗೂ ಸೇವೆಗಳ ಬಳಕೆಯ ಸಂದರ್ಭದಲ್ಲಿ ಕಾನೂನಿಗೆ ವಿರುದ್ಧ, ತಪ್ಪುದಾರಿಗೆ ಎಳೆಯುವ, ತಾರತಮ್ಯ ತೋರುವ ಅಥವಾ ಮೋಸದಿಂದ ಕೂಡಿದ ಚಟುವಟಿಕೆಗಳನ್ನು ಮಾಡುವಂತಿಲ್ಲ.
  • ಅನಧಿಕೃತ ಪ್ರತಿಗಳನ್ನು ಮಾಡಿ ಮಾರ್ಪಡಿಸುವುದು, ಅಳವಡಿಸುವುದು, ಅನುವಾದಿಸುವುದು, ರಿವರ್ಸ್ ಇಂಜಿನಿಯರ್, ಚದುರಿಸುವುದು, ಸೇವೆಗಳ ಇತರ ಯಾವುದೇ ಉತ್ಪನ್ನ ಕೃತಿಗಳನ್ನು ರಚಿಸುವುದು ಅಥವಾ ಡಿಕಂಪೈಲ್ ಮಾಡುವುದು ಅಥವಾ ಯಾವುದೇ ಕಡತ, ಟೇಬಲ್ ಗಳು ಅಥವಾ ಡಾಕ್ಯುಮೇಂಟೇಷನನ್ನು (ಅಥವಾ ಯಾವುದೇ ಅದರ ಭಾಗ) ಒಳಗೊಂಡಂತೆ ಯಾವುದೇ ವಿಷಯನ್ನು ಸೃಜಿಸುವುದು ಅಥವಾ ಯಾವುದೇ ಸಂಪನ್ಮೂಲ ಸಂಕೇತವನ್ನು ರಚಿಸಲು ನಿರ್ಧರಿಸುವುದು ಅಥವಾ ಪ್ರಯತ್ನಿಸುವುದು, ಕ್ರಮಾವಳಿಗಳು, ಸೇವೆಗಳಿಂದ ರಚಿಸಲ್ಪಟ್ಟ ವಿಧಾನಗಳು ಅಥವಾ ತಂತ್ರಜ್ಞಾನಗಳು ಅಥವಾ ಇತರ ಯಾವುದೇ ರಚಿಸಲ್ಪಟ ಕೆಲಸಗಳು;
  • ಯಾವುದೇ ಸೇವೆ ಅಥವಾ ಇಂತಹ ಯಾವುದೇ ಉತ್ಪನ್ನಕರ ಕೆಲಸಗಳನ್ನು ಸಂಪೂರ್ಣವಾಗಿ ಅಥವಾ ಭಾಗಶಃವಾಗಿ, ವಿತರಣೆ, ಪರವಾನಗಿ, ವರ್ಗಾವಣೆ, ಅಥವಾ ಮಾರಾಟ ಮಾಡುವಂತಹ ಕೆಲಸಗಳು
  •  ಶುಲ್ಕ ಅಥವಾ ದರಗಳಿಗಾಗಿ ಸೇವೆಗಳನ್ನು ಮಾರುಕಟ್ಟೆ, ಬಾಡಿಗೆ ಅಥವಾ ಭೋಗ್ಯಕ್ಕೆ ನೀಡುವುದು ಅಥವಾ ಸೇವೆಗಳನ್ನು ಯಾವುದೇ ಅಥವಾ ಜಾಹೀರಾತು ಅಥವಾ ಯಾವುದೇ ವಾಣಿಜ್ಯ ಮನವಿಗಳನ್ನು ನಿರ್ವಹಿಸಲು ಬಳಸುವುದು.
  • ಸಂವಹನ ಮಾಡುವುದು ಅಥವಾ ವಾಣಿಜ್ಯ ಜಾಹೀರಾತು ಅಥವಾ ವಿಜಾÕಪನೆ ಅಥವಾ ಸ್ಪ್ಯಾಮಿಂಗ್ ಸೇರಿದಂತೆ ಯಾವುದೇ ವಾಣಿಜ್ಯ       ಅಥವಾ ಅನಧಿಕೃತ ಉದ್ದೇಶಕ್ಕಾಗಿ ಜಾಹೀರಾತುಗಳನ್ನು ನಮ್ಮ ಲಿಖಿತ ಒಪ್ಪಿಗೆ ಇಲ್ಲದೇ ಸೇವೆಗಳನ್ನು ಬಳಸುವುದು.
  • ಸೇವೆಗಳ ಸರಿಯಾದ ಕಾರ್ಯ ನಿರ್ವಹಣೆಯಲ್ಲಿ ಮಧ್ಯೆಪ್ರವೇಶಿಸುವುದು ಅಥವಾ ಮಧ್ಯೆಪ್ರವೇಶಿಸಲು ಪ್ರಯತ್ನಿಸುವುದು, ನಮ್ಮ ವೆಬ್ಸೈಟ್ ಅಥವಾ ಯಾವುದೇ ಸೇವೆಗಳಿಗೆ ಸಂಪರ್ಕಿತಗೊಂಡ ನೆಟ್ ವರ್ಕ್ ಗಳನ್ನು ಅಡ್ಡಿಪಡಿಸುವುದು ಅಥವಾ ಸೇವೆಗಳಿಗೆ ಪ್ರವೇಶ ನಿರ್ಬಂಧಿಸಲು ಅಥವಾ ತಡೆಗಟ್ಟಲು ನಾವು ಬಳಸಬಹುದಾದ ಯಾವುದೇ ಕ್ರಮಗಳನ್ನು ಪರ್ಯಾಯಗೊಳಿಸುವುದು.
  • ಸೇವೆಗಳನ್ನು ಅಥವಾ ಅದರ ಭಾಗವನ್ನು ಇತರ ಯಾವುದೇ ಕಾರ್ಯಕ್ರಮ ಅಥವಾ ಉತ್ಪನ್ನವನ್ನು ಅಳವಡಿಸುವುದು. ಇಂತಹ ಸಂದರ್ಭಗಳಲ್ಲಿ ನಾವು ನಮ್ಮ ಸ್ವಂತ ವಿವೇಚನೆಯಲ್ಲಿ ಸೇವೆಗಳನ್ನು ನಿರಾಕರಿಸುವ ಅಥವಾ ಸೇವೆಗಳ ಪ್ರವೇಶಿಸುವ ಮಿತಿಯನ್ನು ನಿರಾಕರಿಸುವ ಹಕ್ಕನ್ನು ಹೊಂದಿದ್ದೇವೆ.
  • ನಮ್ಮ ಸೇವೆಗಳೊಂದಿಗೆ ಸಂವಹನ ಮಾಡಲು ಅಥವಾ ಮಾಹಿತಿ ಸಂಗ್ರಹಿಸಲು ಸ್ವಯಂಚಾಲಿತ ಸ್ಕ್ರಿಪ್ಟ್ ಗಳನ್ನು ಬಳಸಿರಿ.
  • ನೀವು ಅಥವಾ ನಿಮ್ಮನ್ನು ಇತರ ವ್ಯಕ್ತಿ ಅಥವಾ ಸಂಸ್ಥೆಗಳಂತೆ ಸೋಗು ಹಾಕುವುದು ಅಥವಾ ನೀವು ಅಪ್ ಲೋಡ್ ಮಾಡುವ, ಪೋಸ್ಟ್ ಮಾಡುವ, ರವಾನಿಸುವ, ವಿತರಿಸುವ ಅಥವಾ ಸೇವೆಗಳಿಂದ ಲಭ್ಯವಾಗುವಂತೆ ಮಾಡುವ ಯಾವುದೇ ವಿಷಯ ಸೇರಿದಂತೆ ಯಾವುದೇ ವ್ಯಕ್ತಿ ಅಥವಾ ಅಸ್ತಿತ್ವದ ಜೊತೆಗೆ ನಿಮ್ಮನ್ನು ಅಥವಾ ನಿಮ್ಮ ಸಂಬಂಧವನ್ನು ತಪ್ಪಾಗಿ ಹೇಳುವುದು ಅಥವಾ ನಿರೂಪಿಸುವುದು.
  • ಇನ್ನೊಬ್ಬರನ್ನು ಬೆದರಿಸುವುದು ಅಥವಾ ಕಿರುಕುಳ ನೀಡುವುದು ಅಥವಾ ಲೈಂಗಿಕವಾಗಿ ಅಶ್ಲೀಲ ವಿಷಯ ಬಳಸುವುದು, ಹಿಂಸೆ ಅಥವಾ ಜನಾಂಗ, ಲಿಂಗ, ಧರ್ಮ, ರಾಷ್ಟ್ರೀಯತೆ, ವಿಶೇಷಚೇತನತೆ, ಲೈಂಗಿಕ ದೃಷ್ಟಿನೋಟ ಅಥವಾ ವಯಸ್ಸಿನ ಆಧಾರದ ಮೇಲೆ ತಾರತಮ್ಯ ಮಾಡುವುದು.
  • ಇತರ ಬಳಕೆದಾರರೊಂದಿಗೆ ವಿಮರ್ಶೆಗಳನ್ನು ಬಿಕರಿ ಮಾಡುವುದು ಅಥವಾ ನಕಲಿ ವಿಮರ್ಶೆಗಳನ್ನು ಬರೆಯುವುದು ಅಥವಾ ನಿವೇದನೆ ಮಾಡುವುದು ಇತ್ಯಾದಿ ಆಸಕ್ತಿಯ ಸಂಘರ್ಷ ಸೃಜಿಸುವಂತಹ ಅಥವಾ ಸೇವೆಗಳ ಉದ್ದೇಶವನ್ನು ದುರ್ಬಲಗೊಳಿಸುವ ರೀತಿಯಲ್ಲಿ ಸೇವೆಯನ್ನು ಬಳಸುವುದು.
  • ಸೇವೆಗಳನ್ನು ಅಪ್ ಲೋಡ್, ರವಾನಿಸು, ವಿತರಿಸು, ಸಂಗ್ರಹಿಸು ಅಥವಾ ಇತರ ಯಾವುದೇ ರೀತಿಯಲ್ಲಿ ಲಭ್ಯವಾಗುವಂತೆ ಬಳಸುವುದು
  • ವೈರಸ್ ಗಳನ್ನು ಟ್ರೋಜನ್ ಗಳು, ವರ್ಮ್ ಗಳು, ಲಾಜಿಕ್ ಬಾಂಬ್ ಗಳು ಅಥವಾ ತಾಂತ್ರಿಕವಾಗಿ ಹಾನಿಕರವಾಗಿರುವಂತಹ ಇತರ ಯಾವುದೇ ದುರುದ್ದೇಶಪೂರಿತ ಕಡತಗಳು.
  • ಯಾವುದೇ ಅನಪೇಕ್ಷಿತ ಅಥವಾ ಅನಧಿಕೃತ ಜಾಹೀರಾತು, ವಿನಂತಿಗಳು, ಪ್ರಚಾರ ಸಾಮಗ್ರಿಗಳು, “ಜಂಕ್ ಮೇಲ್”, “ಸ್ಪ್ಯಾಮ್”, “ಚೈನ್ ಲೆಟರ್ ಗಳು”, “ಪಿರಾಮಿಡ್ ಸ್ಕೀಮ್ಸ್ “, ಅಥವಾ ಇತರ ಯಾವುದೇ ನಿಷೇಧಿತ ವಿನಂತಿಯ ವಿಧಾನಗಳು
  • ಯಾವುದೇ ಮೂರನೇ ವ್ಯಕ್ತಿಯ ಯಾವುದೇ ಖಾಸಗಿ ಮಾಹಿತಿ, ವಿಳಾಸ, ಫೋನ್ ಸಂಖ್ಯೆಗಳು, ಇಮೇಲ್ ವಿಳಾಸಗಳು, ವೈಯಕ್ತಿಕ ಗುರುತಿನ ದಾಖಲೆಗಳಲ್ಲಿನ ಸಂಖ್ಯೆ ಮತ್ತು ವೈಶಿಷ್ಟ್ಯಗಳು (ಉದಾ: ರಾಷ್ಟ್ರೀಯ ವಿಮಾ ಸಂಖ್ಯೆಗಳು, ಪಾಸ್ ಪೋರ್ಟ್ ಸಂಖ್ಯೆಗಳು) ಅಥವಾ ಕ್ರೆಡಿಟ್ ಕಾರ್ಡ್ ಸಂಖ್ಯೆಗಳು;
  • ಯಾವುದೇ ವ್ಯಕ್ತಿಯ ಯಾವುದೇ ಹಕ್ಕು ಸ್ವಾಮ್ಯ, ಟ್ರೇಡ್ ಮಾರ್ಕ್, ಅಥವಾ ಇತರ ಬೌದ್ಧಿಕ ಆಸ್ತಿ ಅಥವಾ ಖಾಸಗಿ ಹಕ್ಕುಗಳನ್ನು ಉಲ್ಲಂಘಿಸುವ ಅಥವಾ ಉಲ್ಲಂಘಿಸಬಹುದಾದ ಯಾವುದೇ ಸಾಮಗ್ರಿ.
  • ಯಾವುದೇ ವ್ಯಕ್ತಿಯ ಮಾನಹಾನಿ, ಅಶ್ಲೀಲ, ಆಕ್ರಮಣಕಾರಿ, ಅಪರಾಧ, ದ್ವೇಷಪೂರಿತ, ಅಶ್ಲೀಲ ಅಥವಾ ಪ್ರಚೋದನಾಕರಿ ಸಾಮಗ್ರಿ
  • ಅಪರಾಧ ಕೃತ್ಯ, ಅಪಾಯಕಾರಿ ಚಟುವಟಿಕೆಗಳು ಅಥವಾ ಸ್ವಯಂ- ಹಾನಿಗಾಗಿ ಪ್ರತಿನಿಧಿಸುವ, ಪ್ರೋತ್ಸಾಹಿಸುವ ಅಥವಾ ಸಲಹೆಗಳನ್ನು ಒದಗಿಸುವ ಯಾವುದೇ ಸಾಮಗ್ರಿಗಳು
  • ಜನರನ್ನು ಉದ್ದೇಶಪೂರ್ವಕವಾಗಿ ವಿರೋಧಿಸಲು ಅಥವಾ ಪ್ರೇರಪಿಸಲು ವಿನ್ಯಾಸಿಸಲಾದ ಯಾವುದೇ ವಸ್ತು, ವಿಶೇಷವಾಗಿ ಟ್ರೋಲಿಂಗ್ ಮತ್ತು ಬೆದರಿಸಲು ಅಥವಾ ಕಿರುಕುಳ, ಹಾನಿ, ನೋವು, ತೊಂದರೆ, ಭಯ, ಒತ್ತಡ, ಮುಜುಗರ ಅಥವಾ ಅಸಮಾಧಾನವನ್ನು ಉಂಟುಮಾಡುವ ಉದ್ದೇಶವನ್ನು ಹೊಂದಿದೆ.
  • ದೈಹಿಕ ಹಿಂಸೆಯ ಬೆದರಿಕೆಗಳು ಸೇರಿದಂತೆ, ಯಾವುದೇ ರೀತಿಯ ಬೆದರಿಕೆಯನ್ನು ಒಳಗೊಂಡಿರುವ ಯಾವುದೇ ವಸ್ತು;
  • ಯಾರೊಬ್ಬರ ಜನಾಂಗ, ಧರ್ಮ, ವಯಸ್ಸು, ಲಿಂಗ, ವಿಶೇಷಚೇತನತೆ ಅಥವಾ ಲೈಂಗಿಕತೆಯ ಆಧಾರದ ಮೇಲೆ ತಾರತಮ್ಯ ಸೇರಿದಂತೆ, ಯಾವುದೇ ಜನಾಂಗೀಯ ಅಥವಾ ತಾರತಮ್ಯವನ್ನು ಹೊಂದಿರುವ ಯಾವುದೇ ಸಾಮಗ್ರಿ;
  • ಯಾವುದೇ ಉತ್ತರಗಳು, ಪ್ರತಿಕ್ರಿಯೆಗಳು, ಕಾಮೆಂಟ್ ಗಳು, ಅಭಿಪ್ರಾಯಗಳು, ವಿಶ್ಲೇಷಣೆ ಅಥವಾ ಶಿಫಾರಸ್ಸುಗಳು ನೀವು ಸೂಕ್ತವಾಗಿ ಪರವಾನಗಿ ಹೊಂದಿಲ್ಲದೆ ಅಥವಾ ಒದಗಿಸಲು ಅರ್ಹತೆ ಹೊಂದಿಲ್ಲದಿದ್ದಲ್ಲಿ; ಅಥವಾ

8.6 ಜೋಶ್ ನಿಂದ ವಿಷಯ ತೆಗೆದುಹಾಕುವಿಕೆ / ಯೂಸರ್ ಪ್ರೊಪೈಲ್ ಮೇಲೆ ನಿಷೇಧ ಹೇರಿಕೆ:

ಮೇಲಿನದಕ್ಕೆ ಪೂರಕವಾಗಿ, ನಿಮ್ಮ ಪ್ರವೇಶ ಮತ್ತು ಸೇವೆಗಳ ಬಳಕೆಯು ಎಲ್ಲಾ ಸಮಯಗಳಲ್ಲಿ ನಮ್ಮ ಸಮುದಾಯ ಮಾರ್ಗಸೂಚಿಗಳಿಗೆ ಹೊಂದಿಕೊಂಡಿರಬೇಕು.

ಯಾವುದೇ ಕಾರಣ ಅಥವಾ ಕಾರಣವಿಲ್ಲದೇ ನಮ್ಮ ಸ್ವಂತ ವಿವೇಚನೆಯಲ್ಲಿ ಯಾವುದೇ ಸಮಯದಲ್ಲಿ ನೊಟೀಸ್ ನೀಡದೆ ವಿಷಯಗಳ ಪ್ರವೇಶಗಳನ್ನು ತೆಗೆದುಹಾಕುವ ಅಥವಾ ನಿಷ್ಕ್ರಿಯಗೊಳಿಸುವ ಹಕ್ಕು ಕಾಯ್ದಿರಿಸಿಕೊಂಡಿದ್ದೇವೆ. ವಿಷಯವು ಆಕ್ಷೇಪಾರ್ಹವಾಗಿರಬಹುದು, ಈ ನಿಯಮಗಳ ಉಲ್ಲಂಘನೆ, ಅಥವಾ ಸೇವೆಗಳಿಗೆ ಅಥವಾ ನಮ್ಮ ಬಳಕೆದಾರರಿಗೆ ಹಾನಿಕಾರಕವಾಗಿರುವಂತಿದ್ದರೆ, ನಾವು ಕಂಟೆಂಟ್ ಪ್ರವೇಶಕ್ಕೆ ನಿರಾಕರಣೆ ಅಥವಾ ತೆಗೆದುಹಾಕುವ ಹಕ್ಕು ಹೊಂದಿದ್ದೇವೆ. ಕಸ್ಟಮೈಸ್ ಮಾಡಿದ ಹುಡುಕಾಟದ ಫಲಿತಾಂಶಗಳು, ಸೂಕ್ತ ಜಾಹೀರಾತುಗಳು ಮತ್ತು ಸ್ಪಾಮ್ ಮತ್ತು ಮಾಲ್ ವೇರ್ ಪತ್ತೆ ಯಂತಹ ವೈಯಕ್ತಿಕ ಸಂಬಂಧಿತ ಉತ್ಪನ್ನ ವೈಶಿಷ್ಟ್ಯಗಳನ್ನು ಒದಗಿಸಲು ನಮ್ಮ ಸ್ವಯಂಚಾಲಿತ ವ್ಯವಸ್ಥೆಗಳು ನಿಮ್ಮ ವಿಷಯವನ್ನು ವಿಶ್ಲೇಷಿಸುತ್ತವೆ. ವಿಷಯಗಳನ್ನು ಕಳುಹಿಸಿದಾಗ, ಸ್ವೀಕರಿಸಿದಾಗ ಮತ್ತು ಅದು ಸಂಗ್ರಹಗೊಂಡಾಗ ಈ ವಿಶ್ಲೇಷಣೆ ಉಂಟಾಗುತ್ತದೆ.

ನಮ್ಮ ವೇದಿಕೆಯಲ್ಲಿ ನೀವು ಬಳಸುವಿಕೆಯು, ಸಮುದಾಯ ಮಾರ್ಗಸೂಚಿಯ ನಿಯಮಗಳಿಂದ ನಿಯಂತ್ರಿಸಲ್ಪಡುತ್ತದೆ. ನಮ್ಮ ಯಾವುದೇ ಬಳಕೆದಾರರು ನಿಮ್ಮ ವಿಷಯಗಳು ಸಮುದಾಯ ಮಾರ್ಗಸೂಚಿಗಳ ನಿಯಮಗಳನ್ನು ಉಲ್ಲಂಘಿಸುತ್ತವೆ ಎಂದು ವರದಿ ಮಾಡಿದಲ್ಲಿ, ನಾವು ನಮ್ಮ ವೇದಿಕೆಯಿಂದ ಅಂತಹ ವಿಷಯಗಳನ್ನು ತೆಗೆದುಹಾಕಬಹುದು. ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸಿದಂತಹ ಅನೇಕ ವರದಿಗಳು ಬಂದ ಸಂದರ್ಭದಲ್ಲಿ ನಾವು ನಿಮ್ಮ ಖಾತೆಯನ್ನು ರದ್ದುಪಡಿಸಬಹುದು ಮತ್ತು ನಮ್ಮಲ್ಲಿ ನೋಂದಾಯಿಸದಂತೆ ಬ್ಲಾಕ್ ಮಾಡಬಹುದು. ನೀವೊಂದು ವೇಳೆ, ಅಂತಹ ರದ್ದತಿಯನ್ನು ಬಯಸಿದರೆ ನೀವು ನಮಗೆ ಈ ಕೆಳಗಿನ ವಿಳಾಸಕ್ಕೆ ಬರೆಯಬಹುದು. grievance.officer@myjosh.in 

8.7 ನಿಮ್ಮ ಸಾಧನಗಳಲ್ಲಿ ಸ್ಥಾಪಿಸಿದ ನಂತರವೂ ವೇದಿಕೆ ನಿಮಗೆ ಮಾರಾಟ ಮಾಡದೆ ಪರವಾನಗಿ ನೀಡಿದೆ. ವರ್ಸೇಯು ಈ ಪರವಾನಗಿ ಒಪ್ಪಂದ ಅಥವಾ ಅದರ ಭಾಗವನ್ನು ಯಾವುದೇ ನಿಬಂಧನೆಗಳಿಲ್ಲದೇ ವಹಿಸಬಹುದು. ಈ ಪರವಾನಗಿಯಡಿಯಲ್ಲಿ ನಿಮ್ಮ ಹಕ್ಕುಗಳನ್ನು ಮೂರನೇ ವ್ಯಕ್ತಿಗೆ ವಹಿಸಲು ಅಥವಾ ಉಪ ಪರವಾನಗಿ ಮಾಡಲು ನಿಮಗೆ ಅನುಮತಿಯಿರುವುದಿಲ್ಲ.

9. ವಿಷಯ: ನಮ್ಮ ವಿಷಯ ಮತ್ತು ಬಳಕೆದಾರ ರಚಿಸಿದ ವಿಷಯ

9.1 ಸೇವೆಗಳ ಬಳಕೆದಾರರಿಗೆ ಯಾವುದೇ ಟೆಕ್ಸ್ಟ್ , ಫೋಟೋಗ್ರಾಫ್ ಗಳು, ಯೂಸರ್ ವೀಡಿಯೋಗಳು, ಸೌಂಡ್ ರೆಕಾರ್ಡಿಂಗ್ ಗಳು ಮತ್ತು ಸಂಗೀತದ ಕೆಲಸಗಳು ಒಳಗೊಂಡಂತೆ ಸೇವೆಗಳ ಮೂಲಕ ಅಪ್ ಲೋಡ್ ಮಾಡಲು, ಪೋಸ್ಟ್ ಮಾಡಲು ಅಥವಾ ರವಾನಿಸಲು (ಉದಾ: ಸ್ಟ್ರೀಮ್ ಮೂಲಕ) ಅಥವಾ ಲಭ್ಯವಾಗುವ ವಿಷಯಕ್ಕೆ ಅನುಮತಿ ಲಭಿಸಬಹುದು. ನಿಮ್ಮ ವೈಯಕ್ತಿಕ ಸಂಗೀತ ಲೈಬ್ರರಿ ಮತ್ತು ಅಂಬಿಯೆಂಟ್ ಧ್ವನಿ (ಒಟ್ಟಾಗಿ “ಯೂಸರ್ ಕಂಟೆಂಟ್”) ಸ್ಥಳಿಯವಾಗಿ ಸಂಗ್ರಹಿಸಲಾದ ಧ್ವನಿ ರೆಕಾರ್ಡಿಂಗ್ ಗಳನ್ನು ಒಳಗೊಂಡಿರುವ ವೀಡಿಯೋಗಳನ್ನು ಒಳಗೊಂಡಂತೆ ಬಳಸಲು ಅನುಮತಿ ಸಿಗಬಹುದು. ಸೇವೆಗಳ ಬಳಕೆದಾರರು ಒಂದಕ್ಕಿಂತ ಹೆಚ್ಚು ಬಳಕೆದಾರರಿಂದ ರಚಿಸಲಾದ ಬಳಕೆದಾರರ ವಿಷಯವನ್ನು ಸಂಯೋಜಿಸುವ ಮತ್ತು ವಿಭಜಿಸುವ ಇತರ ಬಳಕೆದಾರರೊಂದಿಗೆ ಸಹಯೋಗದ ಬಳಕೆದಾರ ವಿಷಯವನ್ನು ಒಳಗೊಂಡಂತೆ ಹೆಚ್ಚುವರಿ ಬಳಕೆದಾರ ವಿಷಯವನ್ನು ಉತ್ಪಾದಿಸಲು ಇನ್ನೊಬ್ಬ ಬಳಕೆದಾರರಿಂದ ರಚಿಸಲಾದ ಬಳಕೆದಾರರ ವಿಷಯದ ಎಲ್ಲಾ ಅಥವಾ ಯಾವುದೇ ಭಾಗವನ್ನು ಹೊರತೆಗೆಯಬಹುದು. ಸೇವೆಗಳ ಬಳಕೆದಾರರು ಸಂಗೀತ, ಗ್ರಾಫಿಕ್ಸ್, ಸ್ಟಿಕ್ಕರ್ ಗಳು ಮತ್ತು ಸೇವೆಯಿಂದ ಒದಗಿಸಲಾದ ಇತರ ಅಂಶಗಳನ್ನು ಈ ಬಳಕೆದಾರರ ವಿಷಯದ ಮೇಲೆ ಓವರ್ ಲೇ ಮಾಡಬಹುದಾಗಿದೆ ಮತ್ತು ಈ ಬಳಕೆದಾರರ ವಿಷಯವನ್ನು ಸೇವೆಗಳ ಮೂಲಕ ರವಾನಿಸಬಹುದು. ಸೇವೆಗಳಲ್ಲಿ ಇತರ ಬಳಕೆದಾರರು ವ್ಯಕ್ತಪಡಿಸಿದ ವೀಕ್ಷಣೆಗಳು ನಮ್ಮ ವೀಕ್ಷಣೆಗಳು ಅಥವಾ ಮೌಲ್ಯಗಳನ್ನು ಪ್ರತಿನಿಧಿಸುವುದಿಲ್ಲ.

9.2 ಸೇವೆಗಳ ಮೂಲಕ ಅಥವಾ ಸಂಪರ್ಕದಲ್ಲಿ ನೀವು ಪೋಸ್ಟ್ ಮಾಡುವ, ಅಪ್ ಲೋಡ್ ಮಾಡುವ, ರವಾನಿಸುವ, ಹಂಚಿಕೊಳ್ಳುವ, ಅಥವಾ ಲಭ್ಯವಾಗುವಂತೆ ಮಾಡುವ ಬಳಕೆದಾರರ ವಿಷಯಕ್ಕೆ ನೀವು ಮಾಲೀಕರು ಮತ್ತು ಜವಾಬ್ದಾರರು ಎಂದು ನೀವು ಅರ್ಥ ಮಾಡಿಕೊಂಡಿದ್ದೀರಿ. ನೀವು ನಮಗೆ ಅಥವಾ ಬೇರೆಯವರಿಗೆ ಹಾನಿಯುಂಟುಮಾಡುವ, ಸೇವೆಗಳಲ್ಲಿ ಹಸ್ತಕ್ಷೇಪ ಮಾಡುವ ಅಥವಾ ಯಾವುದೇ ಅನ್ವಯಿತ ಕಾನೂನುಗಳನ್ನು ಉಲ್ಲಂಘಿಸುವ ರೀತಿಯಲ್ಲಿ ಸೇವೆಗಳನ್ನು ಬಳಸಲು ಯಾವುದೆ ಕ್ರಮವನ್ನು ತೆಗೆದುಕೊಳ್ಳಲು ಸೇವೆಗಳನ್ನು ಬಳಸುವುದಿಲ್ಲ ಎಂದು ಒಪ್ಪಿಕೊಂಡಿರುತ್ತೀರಿ. ನೀವು ನಮಗೆ ಸಲ್ಲಿಸುವ ಬಳಕೆದಾರರ ವಿಷಯವು ಯಾವುದೇ ಹಕ್ಕುಪತ್ರ, ಟ್ರೇಡ್ ಮಾರ್ಕ್, ವ್ಯಾಪಾರ ಗುಟ್ಟು, ಹಕ್ಕು ಸ್ವಾಮ್ಯ, ಅಥವಾ ಯಾವುದೇ ಮೂರನೇ ವ್ಯಕ್ತಿ ಅಥವಾ ವ್ಯಕ್ತಿಯ ಬೌದ್ಧಿಕ ಅಥವಾ ಸ್ವಾಮ್ಯದ ಅಥವಾ ಖಾಸಗಿ ಹಕ್ಕನ್ನು ಉಲ್ಲಂಘಿಸುವುದಿಲ್ಲ ಮತ್ತು ಯಾವುದೇ ಅಶ್ಲೀಲ ಅಥವಾ ಆಕ್ಷೇಪಾರ್ಹ ವಸ್ತುಗಳನ್ನು ಹೊಂದಿರುವುದಿಲ್ಲ ಎಂದು ನೀವು ಖಾತರಿಪಡಿಸುತ್ತೀರಿ. ಸೇವೆಗಳ ಬಳಕೆ ಮತ್ತು ಪ್ರವೇಶಗಳ ಷರತ್ತಿನಂತೆ, ಯಾವುದೇ ಬೌದ್ಧಿಕ ಆಸ್ತಿ ಹಕ್ಕುಗಳನ್ನು ಉಲ್ಲಂಘಿಸಲು ಸೇವೆಗಳನ್ನು ಬಳಸದಿರಲು ನೀವು ಒಪ್ಪುತ್ತೀರಿ. ಯಾವುದೇ ಹಕ್ಕು ಸ್ವಾಮ್ಯಗಳು ಅಥವಾ ಇತರ ಬೌದ್ಧಿಕ ಆಸ್ತಿ ಹಕ್ಕುಗಳನ್ನು ಉಲ್ಲಂಘಿಸುವ ಅಥವಾ ಉಲ್ಲಂಘಿಸುವ ಯಾವುದೇ ಬಳಕೆದಾರರ ಖಾತೆಗಳಿಗೆ ಪ್ರವೇಶವನ್ನು ನಿರ್ಬಂಧಿಸಲು ಮತ್ತು/ಅಥವಾ ಅಂತ್ಯಗೊಳಿಸಲು ನಾವು ಯಾವುದೇ ಸಮಯದಲ್ಲಿ ಮತ್ತು ನಮ್ಮ ಸ್ವಂತ ವಿವೇಚನೆಯಿಂದ ಸೂಚನೆಯೊಂದಿಗೆ ಅಥವಾ ಇಲ್ಲದೆಯೇ ಹಕ್ಕನ್ನು ಕಾಯ್ದಿರಿಸಿದ್ದೇವೆ. ಯಾವುದೇ ಮೂರನೇ ವ್ಯಕ್ತಿಯ ಬೌದ್ಧಿಕ ಅಸ್ತಿಯ ಬಳಕೆಗಾಗಿ, ನೀವು ಬೌದ್ಧಿಕ ಆಸ್ತಿಯ ಮಾಲೀಕರ ಅನುಮತಿಯನ್ನು ನೇರವಾಗಿ ಪಡೆಯಬೇಕಾಗುತ್ತದೆ.

9.3 ಯಾವುದೇ ಯೂಸರ್ ಕಂಟೆಂಟ್ ನ್ನು ಗೌಪ್ಯತೆಯಲ್ಲದ ಮತ್ತು ಸ್ವಾಮ್ಯತೆಯಲ್ಲದ ಕಂಟೆಂಟ್ ಎಂದು ಪರಿಗಣಿಸಲಾಗುತ್ತದೆ. ಯಾವುದೇ ಯೂಸರ್ ಕಂಟೆಂಟ್ ನ್ನು ಗೌಪ್ಯವಾದ ಅಥವಾ ಸ್ವಾಮ್ಯವಾದುದು ಎಂದು ಪರಿಗಣಿಸಿದಲ್ಲಿ ನೀವು ನಮಗೆ ಪೋಸ್ಟ್ ಅಥವಾ ಸೇವೆಗಳ ಮೂಲಕ ಅಥವಾ ರವಾನಿಸಬಾರದು. ಸೇವೆಗಳ ಮೂಲಕ ನೀವು ಯೂಸರ್ ಕಂಟೆಂಟ್ ನ್ನು ಸಲ್ಲಿಸಿದಾಗ, ಆ ಯೂಸರ್ ಕಂಟೆಂಟ್ ನ ಮಾಲೀಕರು ನೀವೇ ಎಂದು ಒಪ್ಪಿಕೊಳ್ಳುತ್ತೀರಿ, ಅಥವಾ ನೀವು ಎಲ್ಲಾ ಅಗತ್ಯ ಅನುಮತಿಗಳು, ಅನಮತಿ ಅಥವಾ ಅಧಿಕೃತತೆಯನ್ನು ಯೂಸರ್ ಕಂಟೆಂಟ್ ನ ಮಾಲೀಕರಿಂದ ಪಡೆದುಕೊಂಡು ಸೇವೆಗಳಿಗೆ ಸಲ್ಲಿಸುತ್ತಿದ್ದೀರಿ ಮತ್ತು ಸೇವೆಯಿಂದ ಇನ್ನೊಂದು ಮೂರನೇ ತಂಡಕ್ಕೆ ರವಾನಿಸುತ್ತೀರಿ ಮತ್ತು / ಅಥವಾ ಯಾವುದೇ ಮೂರನೇ ತಂಡದ ಕಂಟೆಂಟ್ ನ್ನು ಅಳವಡಿಸಿಕೊಳ್ಳುತ್ತೀರಿ ಎಂಬುದನ್ನು ಪ್ರತಿನಿಧಿಸುತ್ತೀರಿ ಮತ್ತು ಒಪ್ಪಿಕೊಳ್ಳುತ್ತೀರಿ.

9.4 ನೀವೊಂದು ವೇಳೆ, ಸೌಂಡ್ ರೆಕಾರ್ಡಿಂಗ್ ನಲ್ಲಿ ಮತ್ತು ಅದರ ಹಕ್ಕುಗಳನ್ನು ಮಾತ್ರ ಹೊಂದಿದ್ದೀರಿ, ಆದರೆ ಅಂತಹ ಸೌಂಡ್ ರೆಕಾರ್ಡಿಂಗ್ ಗಳಲ್ಲಿ ಸಾಕಾರಗೊಂಡಿರುವ ಸಂಗೀತ ಕೃತಿಗಳಿಗೆ ಅಲ್ಲದಿದ್ದಲ್ಲಿ, ನೀವು ಅಂತಹ ಸೌಂಡ್ ರೆಕಾರ್ಡಿಂಗ್ ಗಳಿಗೆ ಎಲ್ಲಾ ಅನುಮತಿ, ಪಡೆಯಬೇಕು, ಅನುಮತಿಯನ್ನು ವಿಷಯದ ಭಾಗದ ಮೇಲೆ ಮಾಲೀಕರಿಂದ ಪಡೆಯದಿದ್ದಲ್ಲಿ ನೀವು ಅದನ್ನು ಸೇವೆಗಳಲ್ಲಿ ಸಲ್ಲಿಸುವಂತಿಲ್ಲ.

ಸೇವೆ ಹಾಗೂ ಸೇವೆಯ ಮೂಲಕ ಲಭ್ಯವಾಗುವಂತೆ ಮಾಡಲಾದ ಸೌಂಡ್ ರೆಕಾರ್ಡಿಂಗ್ ಗಳು ಮತ್ತು ಸಂಗೀತದ ಕೆಲಸಗಳಿಗೆ ಸಂಬಂಧಿಸಿದಂತೆ ಯಾವುದೇ ಹಕ್ಕುಗಳ ಪರವಾನಗಿ ಪಡೆದಿಲ್ಲ.

9.5 ಯಾವುದೇ ಬಳಕೆದಾರ ಸೃಜಿಸಿದ ವಿಷಯದ ಸಂಪೂರ್ಣತೆ, ಸತ್ಯತೆ, ನಿಖರತೆ ಅಥವಾ ವಿಶ್ವಾಸಾರ್ಹತೆಯನ್ನು ನಾವು ಅನುಮೋದಿಸುವುದಿಲ್ಲ, ಬೆಂಬಲಿಸುವುದಿಲ್ಲ, ಪ್ರತಿನಿಧಿಸುವುದಿಲ್ಲ ಅಥವಾ ಖಾತರಿಪಡಿಸುವುದಿಲ್ಲ ಅಥವಾ ಅದರಲ್ಲಿ ವ್ಯಕ್ತಪಡಿಸಿದ ಯಾವುದೇ ಅಭಿಪ್ರಾಯಗಳನ್ನು ಅನುಮೋದಿಸುವುದಿಲ್ಲ. ಸೇವೆಗಳನ್ನು ಬಳಸುವ ಮೂಲಕ, ನೀವು ಆಕ್ಷೇಪಾರ್ಹ, ಹಾನಿಕಾರಕ, ನಿಖರವಲ್ಲದ ಅಥವಾ ಸೂಕ್ತವಲ್ಲದ ಅಥವಾ ಕೆಲವು ಸಂದರ್ಭಗಳಲ್ಲಿ, ತಪ್ಪಾಗಿ ಪಟ್ಟಿ ಮಾಡಲಾದ ಅಥವಾ ವಂಚಿಸುವ ಪೋಸ್ಟಿಂಗ್ ಗಳಿಗೆ ಒಡ್ಡಿಕೊಳ್ಳಬಹುದೆಂದು ನೀವು ತಿಳಿದಿದ್ದೀರಿ. ಎಲ್ಲಾ ವಿಷಯವು ಆ ವಿಷಯವನ್ನು ಹುಟ್ಟುಹಾಕಿದ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ.

9.6 ನೀವು ಅಪರಾಧ ಚಟುವಟಿಕೆ ಪ್ರತಿನಿಧಿಸುವ, ನಾಗರಿಕ ಹೊಣೆಗಾರಿಕೆಗೆ ಕಾರಣವಾಗುವ ಅಥವಾ ಯಾವುದೇ ಕಾನೂನು ಬಾಹಿರ ಅಥವಾ ಉದ್ದೇಶಗಳಿಗಾಗಿ ವೇದಿಕೆಯನ್ನು ಬಳಸಬಾರದು ಮತ್ತು ಅಂತಹ ನಡವಳಿಕೆಯನ್ನು ಮಾಡಬಾರದು ಅಥವಾ ಅಂತಹ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬಾರದು ಅಥವಾ ಪ್ರೋತ್ಸಾಹಿಸಬಾರದು ಪ್ರೇರೇಪಿಸಬಾರದು, ಮನವಿಮಾಡಬಾರದು ಅಥವಾ ಪ್ರಚಾರ ಮಾಡಬಾರದು.

9.7 ನೀವು ಮುಂದುವರೆದು ಯಾವುದೇ ಬಳಕೆದಾರರ ವಿಷಯದ ಸಂಪನ್ಮೂಲವಾಗಿ ನಿಮ್ಮನ್ನು ಗುರುತಿಸಲು ನಿಮ್ಮ ಯೂಸರ್ ನೇಮ್, ಚಿತ್ರಣ, ಧ್ವನಿ ಮತ್ತು ಗುರುತಿಸುವಿಕೆಯನ್ನು ಬಳಸಲು ನಮಗೆ ಮತ್ತು ರಾಯಲ್ಟಿ ಮುಕ್ತ ಪರವಾನಗಿಗೆ ಅನುಮೋದನೆ ನೀಡುತ್ತೀರಿ.

9.8 ನಿಯಮಗಳು ಮತ್ತು ನಿಬಂಧನೆಗಳನ್ನು ಸ್ವೀಕರಿಸುವ ಮೂಲಕ ನೀವು ನಮಗೆ ವಿಷಯವನ್ನು ಅಥವಾ ಇತರರಿಂದ ಒದಗಿಸಲಾದ ವಿಷಯವನ್ನು ವೀಕ್ಷಿಸುತ್ತೀರಿ ಎಂದು ನೀವು ಒಪ್ಪಿಕೊಳ್ಳುತ್ತೀರಿ. ಹಾಗೂ ಈ ವಿಷಯದ ನಿಖರತೆ, ಸಂಪೂರ್ಣತೆ ಸೇರಿದಂತೆ ಅದರಿಂದಾಗುವ ಅಪಾಯಕಾರಿ ಅಂಶಗಳನ್ನೊಳಗೊಂಡಂತೆ ನೀವು ನಿಮ್ಮ ಸ್ವವಿವೇಚನೆಯಲ್ಲಿ ಇದನ್ನು ಮಾಡುತ್ತೀರಿ. ನಮ್ಮ ನಿಯಮಗಳನ್ನು ಉಲ್ಲಂಘಿಸುವ ವಿಷಯದ ಮೇಲೆ ಕ್ರಮ ಜರುಗಿಸುವ ಅಥವಾ ಅದನ್ನು ನಿಷೇಧಿಸುವ ಎಲ್ಲಾ ಹಕ್ಕುಗಳನ್ನು ವರ್ಸೇ ಹೊಂದಿದೆ.

9.9 ಯಾವುದೇ ಕಾರಣ ಅಥವಾ ಕಾರಣವಿಲ್ಲದೇ ನಮ್ಮ ಸ್ವಂತ ವಿವೇಚನೆಯಲ್ಲಿ ಯಾವುದೇ ಸಮಯದಲ್ಲಿ ನೊಟೀಸ್ ನೀಡದೆ ವಿಷಯಗಳ ಪ್ರವೇಶಗಳನ್ನು ತೆಗೆದುಹಾಕುವ ಅಥವಾ ನಿಷ್ಕ್ರಿಯಗೊಳಿಸುವ ಹಕ್ಕು ಕಾಯ್ದಿರಿಸಿಕೊಂಡಿದ್ದೇವೆ. ವಿಷಯವು ಆಕ್ಷೇಪಾರ್ಹವಾಗಿರಬಹುದು, ಈ ನಿಯಮಗಳ ಉಲ್ಲಂಘನೆ, ಅಥವಾ ಸೇವೆಗಳಿಗೆ ಅಥವಾ ನಮ್ಮ ಬಳಕೆದಾರರಿಗೆ ಹಾನಿಕಾರಕವಾಗಿರುವಂತಿದ್ದರೆ ನಾವು ಕಂಟೆಂಟ್ ಪ್ರವೇಶಕ್ಕೆ ನಿರಾಕರಣೆ ಅಥವಾ ತೆಗೆದುಹಾಕುವ ಹಕ್ಕು ಹೊಂದಿದ್ದೇವೆ. ಕಸ್ಟಮೈಸ್ ಮಾಡಿದ ಹುಡುಕಾಟದ ಫಲಿತಾಂಶಗಳು, ಸೂಕ್ತ ಜಾಹೀರಾತುಗಳು ಮತ್ತು ಸ್ಪಾಮ್ ಮತ್ತು ಮಾಲ್ ವೇರ್ ಪತ್ತೆ ಯಂತಹ ವೈಯಕ್ತಿಕ ಸಂಬಂಧಿತ ಉತ್ಪನ್ನ ವೈಶಿಷ್ಟ್ಯಗಳನ್ನು ಒದಗಿಸಲು ನಮ್ಮ ಸ್ವಯಂಚಾಲಿತ ವ್ಯವಸ್ಥೆಗಳು ನಿಮ್ಮ ವಿಷಯವನ್ನು ವಿಶ್ಲೇಷಿಸುತ್ತವೆ. ವಿಷಯಗಳನ್ನು ಕಳುಹಿಸಿದಾಗ, ಸ್ವೀಕರಿಸಿದಾಗ ಮತ್ತು ಅದು ಸಂಗ್ರಹಗೊಂಡಾಗ ಈ ವಿಶ್ಲೇಷಣೆ ಉಂಟಾಗುತ್ತದೆ.

9.10 ಜೋಶ್ ನೇರ ಲಕ್ಷಣ

  1. ವೇದಿಕೆಯು ಬಳಕೆದಾರರಿಗೆ “ರೀಯಲ್ ಟೈಮ್” ಆಧಾರದಲ್ಲಿ (“ಜೋಶ್ ಲೈವ್ ಕಂಟೆಂಟ್” ಅಥವಾ “ಲೈವ್ ಕಂಟೆಂಟ್) ವೇದಿಕೆಯ ಮೂಲಕ ಆಡಿಯೋ ಮತ್ತು/ಅಥವಾ ಆಡಿಯೋ –ದೃಶ್ಯ ವಿಷಯವನ್ನು ಲೈವ್ ಸ್ಟ್ರೀಮ್ ಮಾಡಲು ಸಶಕ್ತಗೊಳಿಸಬಹುದು. ಕೆಲವೊಂದು ಪ್ರಕರಣಗಳಲ್ಲಿ, ಲೈವ್ ಸ್ಟ್ರೀಮ್ ನಿಜವಾಗಿ ನಡೆಯುತ್ತಿರುವ “ರೀಯಲ್ ಟೈಮ್” ಅವಧಿಯಲ್ಲಿ ಮಾತ್ರ ಲೈವ್ ವಿಷಯವನ್ನು ವೇದಿಕೆ ಮೂಲಕ ಲಭ್ಯವಾಗಿಸಬಹುದು ಅಥವಾ ವೇದಿಕೆಯಲ್ಲಿ ಲಭ್ಯವಿರಬಹುದು ಅಥವಾ ಈ ಲೈವ್ ಸೆಶನ್ ನಂತರ ಇತರ ಬಳಕೆದಾರರಿಗೆ ಸೀಮಿತ ಅವಧಿಯವರೆಗೆ ಲಭ್ಯವಿರಬಹುದು. ಇತರ ಕೆಲವು ಸಂದರ್ಭಗಳಲ್ಲಿ ಲೈವ್ ಸ್ಟ್ರೀಮ್ ನಡೆಯುತ್ತಿರುವ “ರೀಯಲ್ ಟೈಮ್” ಅವಧಿಯಲ್ಲಿ ಲೈವ್ ಕಂಟೆಂಟ್ ನ್ನು ವೇದಿಕೆಯ ಮೂಲಕ ಲಭ್ಯವಾಗುವಂತೆ ಮಾಡಬಹುದು ಹಾಗೆಯೇ ಆರಂಭಿಕ “ರೀಯಲ್ ಟೈಮ್”ನ ಲೈವ್ ಸ್ಟ್ರೀಮ್ ನ್ನು ಅನುಸರಿಸಬಹುದು (ಸಂಗ್ರಹಿಸಿದ ಮತ್ತು ಅಂತಹ ಲೈವ್ ವಿಷಯದ ರೆಕಾರ್ಡ್ ಮಾಡಿದ ಆವೃತ್ತಿ) ಲೈವ್ ವಿಷಯವನ್ನು ಸೃಜಿಸಿದ ಬಳಕೆದಾರರು ಅನ್ವಯವಾಗುವ ನಿಯಮಗಳ ಪ್ರಕಾರ ಅದನ್ನು ವೇದಿಕೆಯಿಂದ ತೆಗೆಯುವವರೆಗೆ ವೇದಿಕೆಯಲ್ಲಿರುತ್ತದೆ. ವೇದಿಕೆಯಲ್ಲಿನ ವಿಷಯವನ್ನು “ಲೈವ್ ಸ್ಟ್ರೀಮ್/ಅಪ್ ಲೋಡ್ ಮಾಡುವ ಬಳಕೆದಾರರು ಈ ನಿಯಮಗಳಿಗೆ ಅನುಸಾರವಾಗಿ ಅಂತಹ ವಿಷಯವನ್ನು ಒದಗಿಸಲು ಮತ್ತು ಅಂತಹ ವಿಷಯದ ಕಾರ್ಯಕ್ಷಮತೆ ಮತ್ತು/ಅಥವಾ ಗುಣಮಟ್ಟಕ್ಕೆ ಸಂಬಂಧಿಸಿದಂತೆ ಇತರ ಬಳಕೆದಾರರೊಂದಿಗೆ ಯಾವುದೇ ವಿವಾದಗಳನ್ನು ಪರಿಹರಿಸಲು ಸಂಪೂರ್ಣ ಜವಾಬ್ದಾರರಾಗಿರುತ್ತಾರೆ. ಸಂದೇಹವನ್ನು ತಪ್ಪಿಸಲು, ಲೈವ್ ಕಂಟೆಂಟ್ ನ್ನು “ಬಳಕೆದಾರರ ವಿಷಯ” ಮತ್ತು “ಯುಜಿಸಿ” ಎಂದು ಪರಿಗಣಿಸಲಾಗುತ್ತದೆ. ಮತ್ತು ಅಂತಹ ನಿಯಮಗಳನ್ನು ಇಲ್ಲಿ ವ್ಯಾಖ್ಯಾನಿಸಲಾಗಿದೆ ಮತ್ತು ವೇದಿಕೆಯಲ್ಲಿ ಬಳಕೆದಾರರಿಗೆ ಲೈವ್ ವಿಷಯನ್ನು ಸ್ಟ್ರೀಮ್ ಮಾಡುವ, ಅಪ್ ಲೋಡ್ ಮಾಡುವ ಮತ್ತು ಲಭ್ಯವಾಗುವಂತೆ ಮಾಡುವ ಪ್ರತಿಯೊಬ್ಬ ಬಳಕೆದಾರರು ಅಂತಹ ವಿಷಯವು ಒಳಪಟ್ಟಿರುತ್ತದೆ ಎಂದು ಒಪ್ಪಿಕೊಳ್ಳುತ್ತಾರೆ. ಬಳಕೆದಾರರ ವಿಷಯ ಪರವಾನಗಿ ಮತ್ತು ಬಳಕೆದಾರರ ವಿಷಯಕ್ಕೆ ಅನ್ವಯವಾಗುವ ಎಲ್ಲಾ ಇತರೆ ನಿಯಮಗಳು ಮತ್ತು ಷರತ್ತುಗಳು (ಮಿತಿಯಿಲ್ಲದೇ, ಸಮುದಾಯ ಮಾರ್ಗಸೂಚಿಗಳು ಮತ್ತು ಎಲ್ಲಾ ಪ್ರಾತಿನಿಧ್ಯಗಳು ಹಾಗು ಖಾತರಿಯುತ ಕರಾರುಗಳು ಒಳಗೊಂಡಂತೆ.) ಅನ್ವಯವಾಗುತ್ತವೆ. ಅಂತಿಮವಾಗಿ, ಲೈವ್ ಕಂಟೆಂಟ್ ಗಳು ಹೆಚ್ಚುವರಿ ಫೀಚರ್ಸ್ ಗಳು ಮತ್ತು ಕಾರ್ಯಗಳನ್ನು ಹೊಂದಿರಬಹುದೆಂದು ನೀವು ಒಪ್ಪುತ್ತೀರಿ ಮತ್ತು ಅಂಗೀಕರಿಸುತ್ತೀರಿ. (ಉದಾ: ಹಂಚಿಕೆ, ಕಮೆಂಟಿಂಗ್, ಸಂವಾದಾತ್ಮಕ ಫೀಚರ್ಸ್, ಇತ್ಯಾದಿ) ಕಂಪನಿಯ ಲೈವ್ ವಿಷಯಕ್ಕಾಗಿ ಇತರ ಪ್ರಕಾರಗಳಿಗೆ ಲಭ್ಯವಿರುವ ಕೆಲವು ಫೀಚರ್ ಗಳು ಮತ್ತು ಕಾರ್ಯಗಳನ್ನು ನಿರ್ಬಂಧಿಸಬಹುದು. ವೇದಿಕೆಯಲ್ಲಿ ಬಳಕೆದಾರರ ವಿಷಯವನ್ನು ಅಪ್ ಲೋಡ್ ಮಾಡಲಾಗಿದೆ.
  2. ನೀವು ಲೈವ್ ಕಂಟೆಂಟ್ ಗೆ ಸಂಬಂಧಿಸಿದ ನಿಯಮಗಳು ಮತ್ತು ನಿಬಂಧನೆಗಳು, ಹಾಗೂ ಎಲ್ಲಾ ಅನ್ವಯಿತ ಕಾನೂನುಗಳನ್ನು ಅನುಸರಿಸುವುದಾಗಿ ಒಪ್ಪಿಕೊಂಡಿರುತ್ತೀರಿ. ಲೈವ್ ಕಂಟೆಂಟ್ ಮತ್ತು ಆರ್ಕೈವ್ಡ್ ಕಂಟೆಂಟ್ ಯಾವುದಾದರೂ ಇದ್ದಲ್ಲಿ, ಈ ನಿಯಮಗಳ ನಿಮ್ಮ ಸ್ವೀಕಾರಕ್ಕೆ ಅನುಸಾರವಾಗಿ ಬಳಕೆದಾರರ ರಚಿಸಿದ ವಿಷಯಕ್ಕೆ ಅನ್ವಯವಾಗುವಂತೆ ರೂಪಿಸುತ್ತದೆ. ಅಲ್ಲದೇ, ನೀವು ಎಲ್ಲಾ ಅನುಮೋದನೆಗಳು, ಪರವಾನಗಿಗಳು, ಲೈಸೆನ್ಸಿಂಗ್, ನೋಂದಣಿ ಅಥವಾ ಅಧಿಸೂಚನೆ ಅಗತ್ಯತೆಗಳನ್ನು ಮಿತಿಯಿಲ್ಲದೇ ಒಳಗೊಂಡಂತೆ ಲೈವ್ ಸ್ಟ್ರೀಮಿಂಗ್ ವಲಯದಲ್ಲಿ ನೀವು ಎಲ್ಲಾ ನಿಯಂತ್ರಕ ಅವಶ್ಯಕತೆಗಳನ್ನು ಪೂರೈಸಿದ್ದೀರಿ ಎಂದು ನೀವು ಸಮರ್ಥಿಸುತ್ತೀರಿ ಮತ್ತು ಪ್ರತಿನಿಧಿಸುತ್ತೀರಿ ಹಾಗೂ ಅಂತಹ ಪರವಾನಗಿಗಳನ್ನು (ಅನ್ವಯಿತ ಯಾವುದೇ ಪ್ರಚಾರ ಪರವಾನಗಿಗಳನ್ನು ಒಳಗೊಂಡಂತೆ) ನೋಂದಣಿಗಳು, ಲೈವ್ ಕಂಟೆಂಟ್ ನ ಅವಧಿಗಾಗಿನ ಒಪ್ಪಿಗೆಗಳು ಅಧಿಸೂಚನೆಗಳು ಅಥವಾ ಅನುಮೋದನೆಗಳನ್ನು ನೀವು ಒಪ್ಪಿರುತ್ತೀರಿ.
  3. ಈ ನಿಯಮಗಳು ನಿಮ್ಮ ಬಳಕೆಯನ್ನು ನಿಯಂತ್ರಿಸುತ್ತವೆ: (i) ಜೋಶ್ ಕ್ಯಾಮೆರಾ ಫೀಚರ್ ಅಥವಾ ಆಪ್, ಮತ್ತು ಈ ಒಪ್ಪಂದಕ್ಕೆ ಒಳಪಟ್ಟಿರುವಂತೆ ಇದರ ಜತೆಯ ಫೈಲ್ ನಲ್ಲಿ ಗುರುತಿಸಲಾದ ಯಾವುದೇ ಸಾಫ್ಟ್ ವೇರ್ ಮತ್ತು ಪರಿಕರಗಳು (ಒಟ್ಟಾಗಿ, “ಜೋಶ್ ಕ್ಯಾಮೆರಾ ಸಾಫ್ಟ್ ವೇರ್”) ಮತ್ತು 2. ಜೋಶ್ ಕ್ಯಾಮೆರಾ ಸಾಫ್ಟವೇರ್ ಗೆ ಸಂಬಂಧಿಸಿದ ಕೆಲವು ಡಾಕ್ಯುಮೆಂಟೇಷನ್ ಸೇರಿದಂತೆ ವೀಡಿಯೋ ಟ್ಯುಟೋರಿಯಲ್ ಗಳು ಮತ್ತು ಇತರ ಮಾಹಿತಿಯು ಬಳಕೆದಾರರಿಗೆ ವೇದಿಕೆ, ಆಪ್ ಗಳು ಅಥವಾ ಇತರ ಯಾವುದೇ ವಿಧಾನಗಳಿಂದ (ಒಟ್ಟಾಗಿ “ದಾಖಲೆ”) ನಿಯಮ ಅಥವಾ ಇಲ್ಲದಿದ್ದರೆ ಬರವಣಿಗೆಯಲ್ಲಿ ವರ್ಸೇ ಮೂಲಕ ನಿಗದಿಪಡಿಸಲಾಗಿದೆ. ವರ್ಸೇಯಲ್ಲಿ ಡೌನ್ ಲೋಡ್ ಮೂಲಕ ಅಥವಾ ವರ್ಸೇ ನ ಸ್ವಂತ ವಿವೇಚನೆಯಿಂದ ಜೋಶ್ ಕ್ಯಾಮೆರಾ ಸಾಫ್ಟವೇರ್ ಮತ್ತು ಡಾಕ್ಯುಮೆಂಟೇಷನ್ (ಒಟ್ಟಾರೆಯಾಗಿ, “ಜೋಶ್ ಕ್ಯಾಮೆರಾ”) ಲಭ್ಯವಾಗುವಂತೆ ಮಾಡಬಹುದು. ಈ ನಿಯಮಗಳು ನೀವು ಡೌನ್ ಲೋಡ್ ಮಾಡುವ, ಅಳವಡಿಸುವ, ಪ್ರವೇಶಿಸುವ ಅಥವಾ ಜೋಶ್ ಕ್ಯಾಮೆರಾವನ್ನು ಬಳಸಿ (“ಜಾರಿಗೊಳ್ಳುವ ದಿನಾಂಕ”):

10. ಬೌದ್ಧಿಕ ಆಸ್ತಿ ಹಕ್ಕುಗಳು ಮತ್ತು ಪರವಾನಗಿ

10.1 ನಿಮ್ಮ ವೇದಿಕೆಯ ಬಳಕೆ ಮತ್ತು ಎಲ್ಲಾ ಸಮಯಗಳಲ್ಲಿ ಹಕ್ಕು ಸ್ವಾಮ್ಯ, ಟ್ರೇಡ್ ಮಾರ್ಕ್, ಪೇಟೆಂಟ್ ಮತ್ತು ವ್ಯಾಪಾರ ರಹಸ್ಯ ಮತ್ತು ಬೌದ್ಧಿಕ ಆಸ್ತಿಯ ಬಳಕೆಗೆ ಸಂಬಂಧಿಸಿದ ಕಾನೂನುಗಳಿಂದ ನಿಯಂತ್ರಿಸಲ್ಪಡುತ್ತದೆ ಮತ್ತು ಅದರ ವ್ಯಾಪ್ತಿಗೊಳಪಡುತ್ತದೆ. ನೀವು ಹಕ್ಕು ಸ್ವಾಮ್ಯ, ಟ್ರೇಡ್ ಮಾರ್ಕ್, ಪೇಟೆಂಟ್, ಮತ್ತು ವ್ಯಾಪಾರ ಗೋಪ್ಯತೆ, ಮಾಲಕತ್ವ ಮತ್ತು ಬೌದ್ಧಿಕ ಆಸ್ತಿ ಬಳಕೆಗೆ ಸಂಬಂಧಿಸಿದ ಕಾನೂನುಗಳಿಗೆ ಬದ್ದರಾಗಿರುತ್ತೀರಿ. ಮತ್ತು ನೀವು ಯಾವುದೇ ಕಾನೂನುಗಳ ಉಲ್ಲಂಘನೆ ಹಾಗೂ ನಿಮ್ಮ ಸಾಧನದ ಮೂಲಕ ವೇದಿಕೆಯ ಬಳಕೆಯಿಂದ ಆಗುವ ಯಾವುದೇ ಬೌದ್ಧಿಕ ಆಸ್ತಿ ಹಕ್ಕುಗಳ ಉಲ್ಲಂಘನೆಗಳಿಗೆ ನೀವು ಏಕಮಾತ್ರ ಜವಾಬ್ದಾರರಾಗಿರುತ್ತೀರಿ. ಸೇವೆಗಳಿಗೆ ನಿಮ್ಮ ಪ್ರವೇಶ ಹಾಗೂ ಬಳಕೆಯ ಷರತ್ತಿನಂತೆ ಯಾವುದೇ ಬೌದ್ಧಿಕ ಆಸ್ತಿ ಹಕ್ಕುಗಳನ್ನು ಉಲ್ಲಂಘಿಸಲು ಸೇವೆಗಳನ್ನು ಬಳಸದಿರುವಂತೆ ನೀವು ಒಪ್ಪಿಕೊಂಡಿದ್ದೀರಿ. ಯಾವುದೇ ಹಕ್ಕು ಸ್ವಾಮ್ಯಗಳು ಅಥವಾ ಇತರ ಬೌದ್ಧಿಕ ಆಸ್ತಿ ಹಕ್ಕುಗಳನ್ನು ಉಲ್ಲಂಘಿಸುವ ಅಥವಾ ಉಲ್ಲಂಘನೆಯ ಆರೋಪ ಇದ್ದಲ್ಲಿ ಅಂತಹ ಯಾವುದೇ ಬಳಕೆದಾರರ ಖಾತೆಗಳಿಗೆ ನಾವು ಯಾವುದೇ ಸಮಯದಲ್ಲಿ ಮತ್ತು ನಮ್ಮ ಸ್ವವಿವೇಚನೆಯಿಂದ ಸೂಚನೆಯೊಂದಿಗೆ ಅಥವಾ ಸೂಚನೆ ನೀಡದೆ ಪ್ರವೇಶವನ್ನು ನಿರ್ಬಂಧಿಸಲು ಮತ್ತು/ಅಥವಾ ರದ್ದುಗೊಳಿಸುವ ಹಕ್ಕನ್ನು ಕಾಯ್ದಿರಿಸಿದ್ದೇವೆ. ಯಾವುದೇ ಮೂರನೇ ವ್ಯಕ್ತಿಯ ಬೌದ್ಧಿಕ ಆಸ್ತಿಯ ಬಳಕೆಗಾಗಿ, ನೀವು ಬೌದ್ಧಿಕ ಆಸ್ತಿಯ ಮಾಲೀಕರಿಂದ ಅನುಮತಿಯನ್ನು ನೇರವಾಗಿ ಪಡೆಯಬೇಕಾಗುತ್ತದೆ.

10.2 ನಮ್ಮ ಐಪಿ: ವೇದಿಕೆಯ ಎಲ್ಲಾ ಟ್ರೇಡ್ ಮಾರ್ಕ್ ಗಳು, ಬ್ರ್ಯಾಂಡ್ ಗಳು ಮತ್ತು ಸೇವಾ ಗುರುತುಗಳು ವರ್ಸೇಯ ಆಸ್ತಿ ಅಥವಾ ಅದರ ಪರವಾನಗಿಯಡಿಯಲ್ಲಿವೆ. ವೇದಿಕೆಯ ಎಲ್ಲಾ ಕಾಪಿರೈಟ್ ಹಾಗೂ ಡಾಟಬೇಸ್ ಗಳ ಮಾಲೀಕತ್ವ ವರ್ಸೇಯದ್ದಾಗಿದೆ. ವರ್ಸೇ ಯ ವರದಿಗಳು, ಪಠ್ಯ ಗ್ರಾಫಿಕ್ಸ್, ಲೋಗೋಸ್, ಐಕಾನ್ಸ್ ಮತ್ತು ಚಿತ್ರಣಗಳು ಒಳಗೊಂಡಂತೆ ಈ ವೆಬ್ ಸೈಟ್ ನಲ್ಲಿ ಒಳಗೊಂಡಿರುವ ವಿಷಯಗಳು ಸೀಮಿತವಲ್ಲದ ಆದರೆ ವಿಶೇಷವಾಗಿ ವರ್ಸೇಯ ಆಸ್ತಿಗಳಾಗಿವೆ ಮತ್ತು ಅಂತಹ ಆಸ್ತಿಯನ್ನು ಬಳಸಲು ವರ್ಸೇಗೆ ಹಕ್ಕು ಮತ್ತು ಪರವಾನಗಿಯನ್ನು ಮಾಲೀಕರು ನೀಡಿದ್ದು, ಅದು ಭಾರತೀಯ ಕಾಪಿರೈಟ್ ಕಾನೂನುಗಳಿಂದ ರಕ್ಷಿಸಲ್ಪಟ್ಟಿದೆ. ಎಲ್ಲಾ ಟ್ರೇಡ್ ಮಾರ್ಕ್ ಗಳು, ಸೇವಾ ಗುರುತುಗಳು ಮತ್ತು ವ್ಯಾಪಾರದ ಹೆಸರುಗಳು ವರ್ಸೇಯ ವ್ಯಾಪ್ತಿಯಲ್ಲಿರುತ್ತವೆ ಅಥವಾ ಅಂತಹ ಗುರುತುಗಳನ್ನು ಬಳಸಲು ವರ್ಸೇಗೆ ಹಕ್ಕು ಮತ್ತು ಪರವಾನಗಿಯನ್ನು ನೀಡಿರುವ ಇತರ ಸಂಬಂಧಿತ ಮಾಲೀಕರಿಗೆ ಸ್ವಾಮ್ಯವನ್ನು ಹೊಂದಿವೆ. ವೇದಿಕೆ ಮತ್ತು ವೇದಿಕೆಗೆ ಸಂಬಂಧಿಸಿದಂತೆ ಬಳಸಲಾದ  ತಂತ್ರಜ್ಞಾನ ಅಥವಾ ಸಾಫ್ಟ್ ವೇರ್, ವರ್ಸೇ ಅಥವಾ ಅದರ ವ್ಯಾಪಾರ ಸಹವರ್ತಿಗಳು, ಅಂಗಸಂಸ್ಥೆಗಳು ಅಥವಾ ಯಾವುದೇ ಮೂರನೇ ವ್ಯಕ್ತಿಯ ಹಕ್ಕುಗಳನ್ನು ಒಳಗೊಂಡಿರಬಹುದು. ನಿಮ್ಮ ಸಾಧನಗಳಲ್ಲಿ ಸೃಜಿಸಿದ ನಂತರವೂ ಪ್ಲಾಟ್ ಫಾರ್ಮ್ ನಿಮಗೆ ಮಾರದಂತೆ ಪರವಾನಗಿ ಪಡೆದಿದೆ. ವರ್ಸೇ ಈ ಪರವಾನಗಿ ಒಪ್ಪಂದವನ್ನು ಅಥವಾ ಅದರ ಯಾವುದೇ ಭಾಗವನ್ನು ನಿರ್ಬಂಧಗಳಿಲ್ಲದೇ ನಿಯೋಜಿಸಬಹುದು. ಈ ಪರವಾನಗಿ ಅಡಿಯಲ್ಲಿ ನಿಮ್ಮ ಹಕ್ಕುಗಳನ್ನು ಯಾವುದೇ ಮೂರನೇ ವ್ಯಕ್ತಿಗೆ ನಿಯೋಜಿಸಲು, ವರ್ಗಾಯಿಸಲು ಅಥವಾ ಉಪ-ಪರವಾನಗಿ ಮಾಡಲು ನಿಮಗೆ ಅನುಮತಿ ಇರುವುದಿಲ್ಲ.

10.3 ವರ್ಸೇಯ ಮಾಲೀಕತ್ವದಲ್ಲಿ ನಮೂದಿಸಿಲ್ಲದ ಯಾವುದೇ ನಿರ್ದಿಷ್ಟ ಬೌದ್ಧಿಕ ಆಸ್ತಿಯು ಇತರ ನಿರ್ದಿಷ್ಟ ಮಾಲೀಕರ ಒಡೆತನದಲ್ಲಿರುತ್ತದೆ. ಮತ್ತು ಅಂತಹ ಸಂದರ್ಭದಲ್ಲಿ ಯಾವುದೇ ಉಲ್ಲಂಘನೆ, ಅಥವಾ ತಳ್ಳಿಹಾಕಿದಲ್ಲಿ ನಿಮ್ಮ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವ ಹಕ್ಕು ಮಾಲೀಕರು ಹೊಂದಿರುತ್ತಾರೆ. ಬೌದ್ಧಿಕ ಆಸ್ತಿಯ ಮಾಲೀಕರು/ವಿಶೇಷ ಪರವಾನಗಿದಾರರಿಂದ ಮುಂಚಿತವಾಗಿ ಲಿಖಿತ ಒಪ್ಪಿಗೆಯನ್ನು ಪಡೆಯದೆ ಹಕ್ಕುಸ್ವಾಮ್ಯದ ಕೃತಿಗಳು, ಟ್ರೇಡ್ ಮಾರ್ಕ್ ಗಳು, ಅಥವಾ ಇತರ ಸ್ವಾಮ್ಯದ ಮಾಹಿತಿಯನ್ನು ಡೌನ್ ಲೋಡ್ ಮಾಡುವಂತಿಲ್ಲ ಮತ್ತು ನೀವು ಇತರರನ್ನು ಡೌನ್ ಲೋಡ್ ಮಾಡುವಂತೆ ಪ್ರೋತ್ಸಾಹಿಸುವಂತಿಲ್ಲ. ಒಂದು ವೇಳೆ ಉಲ್ಲಂಘನೆಯ ಸಂದರ್ಭದಲ್ಲಿ ವರ್ಸೇಯು ತನ್ನ ಸ್ವವಿವೇಚನೆಯಲ್ಲಿ ಅಥವಾ ಕಾನೂನಿನ ಪ್ರಕಾರ ಪರಿಹರಿಸಲು ಯಾವುದೇ ಕ್ರಮ ತೆಗೆದುಕೊಳ್ಳಬಹುದಾಗಿದೆ.

10.4 ನೀವು ನಿಮ್ಮ ವಿಷಯದ ಮಾಲೀಕತ್ವವನ್ನು ಮುಂದುವರೆಸುತ್ತೀರಿ. ಹಾಗೂ ನೀವು ಅಪ್ ಲೋಡ್ ಮಾಡಬಹುದಾದ, ಪೋಸ್ಟ್ ಮಾಡಬಹುದಾದ ಅಥವಾ ರವಾನಿಸಬಹುದಾದ (ಸ್ಟ್ರೀಮ್ ಮೂಲಕ) ಅಥವಾ ಯಾವುದೇ ಪಠ್ಯ, ಛಾಯಾಚಿತ್ರಗಳು, ವೀಡಿಯೋಗಳು, ಧ್ವನಿ ರೆಕಾರ್ಡಿಂಗ್ ಗಳು ಸೇರಿದಂತೆ ಸೇವೆಗಳ ಮೂಲಕ ವಿಷಯವನ್ನು ಲಭ್ಯವಾಗುವಂತೆ ಮಾಡುವ ವಿಷಯದ ಪರವಾನಗಿಯನ್ನು ನಮಗೆ ಕಳುಹಿಸಿ ನೀವು ಅಥವಾ ನಿಮ್ಮ ಬಳಕೆದಾರ ವಿಷಯದ ಮಾಲೀಕರು ನಮಗೆ ಕಳುಹಿಸಿರುವ ಬಳಕೆದಾರರ ವಿಷಯದ ಹಕ್ಕನ್ನು ಇನ್ನೂ ಹೊಂದಿರುತ್ತಾರೆ. ಆದರೆ, ಸೇವೆಗಳ ಮೂಲಕ ಬಳಕೆದಾರರ ವಿಷಯವನ್ನು ಸಲ್ಲಿಸುವ ಮೂಲಕ ನೀವು ನಮಗೆ ಷರತ್ತುರಹಿತ ಹಿಂಪಡೆಯಲಾಗದ, ವಿಶೇಷವಲ್ಲದ, ರಾಯಲ್ಟಿ ಫ್ರೀ, ಸಂಪೂರ್ಣ ವರ್ಗಾವಣೆ ಮಾಡಬಹುದಾದ, ಶಾಶ್ವತವಾದ ವಿಶ್ವಾದ್ಯಂತ ಪರವಾನಗಿಯನ್ನು ನೀಡುತ್ತೀರಿ . ನಿಮ್ಮ ಬಳಕೆದಾರ ವಿಷಯವನ್ನು ನೋಡಲು, ಪ್ರವೇಶಿಸಲು, ಬಳಸಲು ಡೌನ್ ಲೋಡ್ ಮಾಡಲು, ಅಳವಡಿಸಿಕೊಳ್ಳಲು, ಪ್ರಕಟಿಸಲು ಮತ್ತು/ಅಥವಾ ರವಾನಿಸಲು ಸೇವೆಗಳ ಇತರ ಬಳಕೆದಾರರಿಗೆ ಮತ್ತು ಇತರ ಮೂರನೇ ವ್ಯಕ್ತಿಗಳಿಗೆ ಬಳಸಲು, ಅಳವಡಿಸಿಕೊಳ್ಳಲು ಪ್ರಕಟಿಸಲು ಮತ್ತು /ಅಥವಾ ಪ್ರಸಾರ ಮಾಡಲು ಮತ್ತು ಅಥವಾ ವಿತರಿಸಲು ಮತ್ತು ಅಧಿಕೃತಗೊಳಿಸಲು ಯಾವುದೇ ರೂಪದಲ್ಲಿ ಮತ್ತು ಯಾವುದೇ ವೇದಿಕೆಯಲ್ಲಿ ಬಳಸಲು ಪರವಾನಗಿ ನೀಡುತ್ತೀರಿ.

10.5 ನೀವು ವರ್ಸೇಗೆ ವಿಶ್ವಾದ್ಯಂತ ರಾಯಲ್ಟಿ ಫ್ರೀ (ರಾಜಧನ ಮುಕ್ತ), ಶಾಶ್ವತ, ವಿಶೇಷವಲ್ಲದ , ಬದಲಾಯಿಸಲಾಗದ, ವರ್ಗಾಯಿಸಲಾಗದ, ವಹಿಸಬಹುದಾದ, ಉಪಪರವಾನಗಿ ನೀಡಬಹುದಾದ ಹಕ್ಕು ಮತ್ತು ಪರವಾನಗಿ ಪ್ರವೇಶಿಸಲು, ವಿಷಯದ ವೈಯಕ್ತಿಕ ಬಳಕೆ ಮತ್ತು ಅನಿಯಮಿತ ಪರವಾನಗಿಯ ಪ್ರತಿ ಮಾಡಲು, ಪುನರುತ್ಪಾದಿಸಲು, ಅಳವಡಿಸಿಕೊಳ್ಳುವುದು, ವ್ಯುತ್ಪನ್ನ ಕೆಲಸಗಳನ್ನು ಮಾಡುವುದು, ವಾಣಿಜ್ಯಕವಾಗಿ ಬಳಸಿಕೊಳ್ಳುವುದು, ಸಾರ್ವಜನಿಕರಿಗೆ ಸಂವಹನ, ಪ್ರಸಾರ ಮತ್ತು ನಿಮ್ಮ ವಿಷಯ ಮತ್ತು ನೀವು ಪ್ಲಾಟ್ ಫಾರ್ಮ್ ನಲ್ಲಿ ವಿಷಯವನ್ನು ಲಭ್ಯವಾಗುವಂತೆ ಮಾಡುವುದು, ವೇದಿಕೆಯಲ್ಲಿನ ವಿಷಯ ಅಥವಾ ಇತರ ವೇದಿಕೆಗಳ ಆಪ್ ಗಳು, ಸಾಮಾಜಿಕ ಮಾಧ್ಯಮ ಪುಟಗಳು ಅಥವಾ ಅದರ ನಿಯಂತ್ರಣದಲ್ಲಿರುವ ಯಾವುದೇ ಇತರ ಸಾಧನ ಅಥವಾ ಪ್ರದರ್ಶನ/ಸಂವಹನ ವಿಧಾನಗಳಲ್ಲಿ ವರ್ಸೇ ಈ ಹಕ್ಕುಗಳನ್ನು ಚಲಾಯಿಸಬಹುದು ಎಂಬುದನ್ನು ನೀವು ಅರ್ಥಮಾಡಿಕೊಂಡಿದ್ದೀರಿ ಮತ್ತು ಒಪ್ಪುತ್ತೀರಿ. ನಿಮ್ಮ ವಿಷಯವನ್ನು ನಾವು ಯಾವುದೇ ಮೂರನೇ ವ್ಯಕ್ತಿಯ ಪ್ಲಾಟ್ ಫಾರ್ಮ್ ನಲ್ಲಿ ಸ್ಪಷ್ಟವಾಗಿ ಅನುಮತಿಸದ ಯಾವುದೇ ರೀತಿಯಲ್ಲಿ ಬಳಸಬಹುದು ಎಂಬುದನ್ನು ನೀವು ಮುಂದುವರೆದು ಒಪ್ಪುತ್ತೀರಿ ಹಾಗೂ ಅದನ್ನು ಸ್ವೀಕರಿಸುತ್ತೀರಿ. ನಿಮ್ಮ ವಿಷಯ ಮತ್ತು ಇತರ ವಸ್ತುಗಳನ್ನು ವಿವಿಧ ಮೂರನೇ ವ್ಯಕ್ತಿಯ ವೇದಿಕೆಯಲ್ಲಿ ಹಂಚಿಕೊಳ್ಳಲು ಮತ್ತು ಪ್ರಚಾರ ಮಾಡಲು ನಮ್ಮ ನಿಮ್ಮಿಂದ ಯಾವುದೇ ಸ್ಪಷ್ಟ ಅನುಮತಿ ಅಥವಾ ಒಪ್ಪಿಗೆ ಅಗತ್ಯವಿಲ್ಲ. ಪಾರ್ಟಿ ವೇದಿಕೆಗಳು ಸೇರಿದಂತೆ ಆದರೆ ಸಾಮಾಜಿಕ ಮಾಧ್ಯಮ ವಾಹಿನಿಗಳು ಹಾಗೂ ಇತರ ಮೂರನೇ ವ್ಯಕ್ತಿ ಸೈಟ್ ಗಳು ಮತ್ತು ಸೇವೆಗಳಿಗೆ ಸೀಮಿತವಾಗಿಲ್ಲ. ಉದಾಹರಣೆಗೆ, ಇನ್ ಸ್ಟಾಗ್ರಾಂ, ಫೇಸ್ ಬುಕ್, ಯೂಟ್ಯೂಬ್, ಟ್ವಿಟ್ಟರ್ ಮಾಧ್ಯಮ ವಾಹಿನಿಗಳಂತಹ ಯಾವುದೇ ಮೂರನೇ ವ್ಯಕ್ತಿಯ ವೇದಿಕೆ ಇತ್ಯಾದಿಗಳಲ್ಲಿ ಸೇರಿದಂತೆ ಹಂಚಿಕೊಳ್ಳಲು ನಿಮ್ಮ ಒಪ್ಪಿಗೆ ಬೇಕಾಗುತ್ತದೆ. ಹಾಗೆಯೇ ಮೂರನೇ ವ್ಯಕ್ತಿಯೊಂದಿಗೆ ಮೇಲಿನ ವಿಷಯಗಳಿಗೆ ಸಂಬಂಧಿಸಿದಂತೆ ಸಂಪರ್ಕಿಸಿರುವುದಕ್ಕೆ ನಾವು ಜವಾಬ್ದಾರರಲ್ಲ. ಈ ಒಪ್ಪಂದ ಮತ್ತು ಈ ವೇದಿಕೆಯ ನೀತಿಗಳು ಮತ್ತು ಅನ್ವಯವಾಗುವ ಎಲ್ಲಾ ಕಾನೂನುಗಳು ಮತ್ತು ನಿಬಂಧನೆಗಳಿಗೆ ಅನುಗುಣವಾಗಿ ವರ್ಸೇ ಗೆ ಈ ಹಕ್ಕುಗಳನ್ನು ನೀಡಲು ನೀವು ಅಧಿಕಾರ ಹೊಂದಿದ್ದೀರಿ ಎಂಬುದಾಗಿ ನೀವು ಪ್ರತಿನಿಧಿಸುತ್ತೀರಿ. ನೀವು ಪೋಸ್ಟ್ ಮಾಡುವ ಕಂಟೆಂಟ್ ನಲ್ಲಿರುವ ಎಲ್ಲಾ ಬೌದ್ಧಿಕ ಆಸ್ತಿ ಹಕ್ಕುಗಳನ್ನು ನಿಮ್ಮೊಂದಿಗೆ ಪೋಸ್ಟ್ ಮಾಡಲು, ಪ್ರದರ್ಶಿಸಲು, ಪುನರುತ್ಪಾದಿಸಲು, ನಕಲು ಮಾಡಲು, ಪ್ರಸಾರ ಮಾಡಲು ವೇದಿಕೆಯಲ್ಲಿ ಸಾರ್ವಜನಿಕರಿಗೆ ಸಂವಹನ ಮಾಡಲು ಮಾನ್ಯವಾದ ಪರವಾನಗಿಯನ್ನು ನೀವು ಹೊಂದಿದ್ದೀರಿ ಎಂದು ನೀವು ಅಂಗೀಕರಿಸುತ್ತೀರಿ, ದೃಢೀಕರಿಸುತ್ತೀರಿ ಮತ್ತು ಒಪ್ಪಿಕೊಳ್ಳುತ್ತೀರಿ.

10.6 ವಿಷಯ ವಿತರಣೆ: ವರ್ಸೇಯು ವಾಣಿಜ್ಯ ಮತ್ತು ವಾಣಿಜ್ಯೇತರ ಉದ್ದೇಶಗಳಿಗಾಗಿ ನಿಮ್ಮ ವಿಷಯ ಮತ್ತು ವೇದಿಕೆಯಲ್ಲಿ ಮತ್ತು ವೇದಿಕೆಯಿಂದಾಚೆಗೆ (ಮೂರನೇ ವ್ಯಕ್ತಿಯ ವೇದಿಕೆಗಳು/ಮಾಧ್ಯಮದ ಮೂಲಕ) ಲಭ್ಯವಾಗುವಂತೆ ಮಾಡಿರುವ ನಿಮ್ಮ ವಿಷಯವನ್ನು ನಕಲು ಮಾಡಲು, ಸಾರ್ವಜನಿಕರಿಗೆ ಸಂವಹನ, ಪ್ರಸಾರ ಮಾಡಲು ಮತ್ತು ವಿಶೇಷವಾದ, ವಿಶ್ವಾದ್ಯಂತದ ರಾಯಧನ ಮುಕ್ತ, ಶಾಶ್ವತ, ಅನಿಯಮಿತ ಮತ್ತು ಅನಿಯಂತ್ರಿತ ಪರವಾನಗಿ ಹೊಂದಿದೆ ಎಂದು ನೀವು ಒಪ್ಪುತ್ತೀರಿ ಮತ್ತು ಅರ್ಥಮಾಡಿಕೊಂಡಿರುತ್ತೀರಿ. ವರ್ಸೇಗೆ ನೀಡಲಾದ ಪರವಾನಗಿ ಹಕ್ಕುಗಳು ವೇದಿಕೆಯಲ್ಲಿ ನೀವು ಸೃಜಿಸಿದ ವಿಷಯದಲ್ಲಿ ಉಳಿದಿರುವ ಬೌದ್ಧಿಕ ಆಸ್ತಿ ಹಕ್ಕುಗಳಿಗೆ (ಹಕ್ಕು ಸ್ವಾಮ್ಯ, ಟ್ರೇಡ್ ಮಾರ್ಕ್, ವಿನ್ಯಾಸಗಳು ಮತ್ತು ಪೇಟೆಂಟ್ ಸೇರಿದಂತೆ ಆದರೆ ಸೀಮಿತವಾಗಿರದ) ವಿಸ್ತರಿಸಲಾಗಿದೆ ಎಂದು ನೀವು ತಿಳಿದಿದ್ದೀರಿ ಮತ್ತು ಒಪ್ಪಿಕೊಳ್ಳುತ್ತೀರಿ.

10.7. ನಿಮ್ಮ ವಿಷಯವು ನಿಮ್ಮದಾಗಿಯೇ ಉಳಿಯುತ್ತದೆ, ಅಂದರೆ, ನಿಮ್ಮ ವಿಷಯದಲ್ಲಿ ನೀವು ಹೊಂದಿರುವ ಯಾವುದೇ ಬೌದ್ಧಿಕ ಆಸ್ತಿ ಹಕ್ಕು ಹೊಂದಿರುತ್ತೀರಿ.

10.8 ವರ್ಸೇಯು ತನ್ನ ಸ್ವವಿವೇಚನೆಯಲ್ಲಿ ಅಗತ್ಯವೆನಿಸಿದಲ್ಲಿ ಯೂಸರ್ ಕಂಟೆಂಟ್ ನ್ನು ತನ್ನ ವ್ಯಾಪಾರ ಸಹವರ್ತಿಗಳು, ಅಂಗಸಂಸ್ಥೆಗಳು, ಮೂರನೇ ವ್ಯಕ್ತಿಗಳು ಮತ್ತು ಇತರ ಯಾವುದೇ ಘಟಕ (ಗಳಿಗೆ) ವಿತರಿಸುವ ಹಕ್ಕನ್ನು ಹೊಂದಿದೆ ಎಂದು ನೀವು ಒಪ್ಪುತ್ತೀರಿ.

10.9 ವೇದಿಕೆಯಲ್ಲಿ ವಿಷಯನ್ನು ಪೋಸ್ಟ್ ಮಾಡುವ ಮೂಲಕ, ನೀವು ಅದರಲ್ಲಿರುವ ಎಲ್ಲಾ ವಿಷಯಗಳು ಮತ್ತು ಆಧಾರವಾಗಿರುವ ಕೃತಿಗಳ ಮಾಲೀಕರಾಗಿದ್ದೀರಿ ಅಥವಾ ವೇದಿಕೆ ಮೂಲಕ ವಿಷಯವನ್ನು ಲಭ್ಯವಾಗುವಂತೆ ಮಾಡಲು ಮಾಲೀಕರಿಂದ ಅಧಿಕಾರ ಹೊಂದಿದ್ದೀರಿ ಎಂದು ನೀವು ಖಚಿತಪಡಿಸುತ್ತೀರಿ.

11. ಗೌಪ್ಯತೆ

11.1 ನೀವು ಯಾವುದೇ ರೀತಿಯಲ್ಲಿ ವೇದಿಕೆಯನ್ನು ಬಳಸಿಕೊಂಡು ಡೌನ್ ಲೋಡ್ ಮಾಡುವ, ಅಳವಡಿಸುವ, ಪ್ರವೇಶಿಸುವ ಅಥವ ವೇದಿಕೆಯನ್ನು ಬಳಸಿಕೊಂಡು ವೇದಿಕೆಯ ಅಥವಾ ವರ್ಸೇಯ ಯಾವುದೇ ಗೌಪ್ಯ ಮಾಹಿತಿಯನ್ನು ಮೂರನೇ ವ್ಯಕ್ತಿಗೆ ಯಾವುದೇ ಇತರ ರೀತಿಯಲ್ಲೂ ಬಹಿರಂಗಪಡಿಸುವಂತಿಲ್ಲ ಎಂದು ನೀವು ಈ ಮೂಲಕ ಒಪ್ಪುತ್ತೀರಿ. ಒಂದು ವೇಳೆ, ನೀವು ಅಂತಹ ಗೌಪ್ಯ ಮಾಹಿತಿಯನ್ನು ನೀವು ಬಹಿರಂಗಪಡಿಸಿದಲ್ಲಿ ಅದು ಈ ಒಪ್ಪಂದದ ಉಲ್ಲಂಘನೆಯಾಗಿದ್ದು, ಆಗ ವರ್ಸೇ ತನ್ನ ಸ್ವವಿವೇಚನೆಯಲ್ಲಿ ನಿಮಗೆ ಯಾವುದೇ ಸೂಚನೆ ನೀಡದೇ ನಿಮ್ಮ ಖಾತೆ(ಗಳನ್ನು) ತೆಗೆದುಹಾಕುವ ಮೂಲಕ ಈ ಒಪ್ಪಂದವನ್ನು ರದ್ದುಗೊಳಿಸಬಹುದು, ಅಥವಾ ಸೂಕ್ತ ಮತ್ತು ನ್ಯಾಯಸಮ್ಮತ ಎಂದು ಪರಿಗಣಿಸಲಾಗುವ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಬಹುದು.

11.2 ಕೆಲವೊಮ್ಮೆ ಗೌಪ್ಯ ಮಾಹಿತಿಯನ್ನು ಯಾವುದೇ ಮೂರನೇ ವ್ಯಕ್ತಿಗೆ ರವಾನೆಯಾಗಿದೆ ಎಂಬುದು ನಿಮಗೆ ತಿಳಿದಿದ್ದರೆ, ನೀವು ತಕ್ಷಣವೇ ಅದರ ಬಗ್ಗೆ ವರ್ಸೇಗೆ ತಿಳಿಸಬೇಕು.

12. ಬಳಕೆದಾರರ ಬಾಧ್ಯತೆಗಳು / ನಿಯಮಗಳು / ನಿಬಂಧನೆಗಳು

ವೇದಿಕೆ, ವೇದಿಕಯ ವಿಷಯ ಮತ್ತು ಬೇರೊಬ್ಬ ಬಳಕೆದಾರನಿಗೆ ಸೇರಿದ ಬಳಕೆದಾರ ವಿಷಯವನ್ನು ನೀವು ಬಳಸಲು, ಮಾರ್ಪಡಿಸಲು, ಮರುಉತ್ಪಾದಿಸಲು, ನಕಲು ಮಾಡಲು, ಪ್ರಕಟಿಸಲು, ವಿತರಿಸಲು, ಡೌನಲೋಡ್ ಮಾಡಲು, ಮಾರಾಟ ಮಾಡಲು, ಮರುಮಾರಾಟ ಮಾಡಲು, ಬದಲಾಯಿಸಲು, ಮರುವಿನ್ಯಾಸಿಸಲು, ಮರುಪ್ರಸಾರ ಮಾಡಲು ಅಥವಾ ಬಳಸಿಕೊಳ್ಳುವಂತಿಲ್ಲ. ಮುಂಚಿತವಾಗಿ ವರ್ಸೇಯ ಲಿಖಿತ ಒಪ್ಪಿಗೆಯಿಲ್ಲದೇ ಪ್ರತಿ ಸನ್ನಿವೇಶದಲ್ಲಿಯೂ ನಿರ್ದಿಷ್ಟ ಉದ್ದೇಶದ ಹೊರತಾಗಿ ವೇದಿಕೆಯ ಬಳಕೆದಾರರಿಗೆ ಲಭ್ಯವಿರುವ ಪರಿಕರಗಳು, ಉತ್ಪನ್ನಗಳು, ಸೇವೆಗಳು, ಕಾರ್ಯಚಟುವಟಿಕೆಗಳು ಮತ್ತು /ಅಥವಾ ಫೀಚರ್ ಗಳನ್ನು ಬಳಕೆದಾರ ಮತ್ತು ಆಥವಾ ಅನ್ವಯಿತ ಮೂರನೇ ತಂಡದ ಮಾಲೀಕರೂ ಬಳಸುವಂತಿಲ್ಲ.

12.1. ಬಳಕೆಯ ಷರತ್ತಿನಂತೆ, ಈ ಒಪ್ಪಂದದಲ್ಲಿ ನಿಷೇಧಿಸಲಾದ ಯಾವುದೇ ಉದ್ದೇಶಕ್ಕಾಗಿ ವೇದಿಕೆಯನ್ನು ಬಳಸುವುದಿಲ್ಲ ಎಂದು ನೀವು ಭರವಸೆ ನೀಡುತ್ತೀರಿ. ವೇದಿಕೆಗೆ ಸಂಬಂಧಿಸಿದಂತೆ ನಿಮ್ಮ ಎಲ್ಲಾ ಚಟುವಟಿಕೆಗಳಿಗೆ ನೀವು ಜವಾಬ್ದಾರರಾಗಿರುತ್ತೀರಿ.

12.2. ವೇದಿಕೆಯನ್ನು ವಿಷಯದ ಪ್ರವೇಶ ಮತ್ತು ನಿಮ್ಮಿಂದ ರಚಿಸಲಾದ ವಿಷಯವನ್ನು ಅಥವಾ ನೀವು ವೇದಿಕೆಯಲ್ಲಿ ಪೋಸ್ಟ್ ಮಾಡಲು ಅಧಿಕಾರ ನೀಡಿರುವ ವಿಷಯಗಳನ್ನು ಬಳಸಲು ನಿಮಗೆ ಮಾತ್ರ ಅನುಮತಿಯಿರುತ್ತದೆ ಎಂಬುದಾಗಿ ನೀವು ಒಪ್ಪಿಕೊಂಡಿರುತ್ತೀರಿ ಮತ್ತು ಖಾತ್ರಿಪಡಿಸುತ್ತೀರಿ.

12.3. ವೇದಿಕೆಯ ಬಳಕೆ, ಪ್ರವೇಶ ಮತ್ತು ಅದರಲ್ಲಿನ ಸೌಲಭ್ಯಗಳನ್ನು ವರ್ಸೇಯ ನಿಯಮಗಳು ಮತ್ತು ಸೇವೆಗಳು, ಗೌಪ್ಯತಾ ನೀತಿ ಹಾಗೂ ಸಮುದಾಯ ಮಾರ್ಗಸೂಚಿಗಳಿಂದ ನಿಯಂತ್ರಿಸಲ್ಪಡುತ್ತದೆ ಮತ್ತು ನೀವು ದಾಖಲೆಗಳಲ್ಲಿ ತಿಳಿಸಿದ ರೀತಿಯ ಪ್ರಕಾರ, ನೀವು ಕಾರ್ಯ ನಿರ್ವಹಿಸುತ್ತೀರಿ ಎಂದು ನೀವು ಈ ಮೂಲಕ ಒಪ್ಪಿಕೊಳ್ಳುತ್ತೀರಿ ಮತ್ತು ಅಂಗೀಕರಿಸುತ್ತೀರಿ.

12.4. ಪೂರಕವಾಗಿ, ನೀವೊಂದು ವೇಳೆ, ಯಾವುದೇ ವ್ಯವಹಾರ, ಯಾವುದೇ ಜಾಹೀರಾತು, ಮಾರುಕಟ್ಟೆ, ಖಾಸಗಿ, ಅಥವಾ ಇತರ ಸ್ವಯಂ ನಿಯಂತ್ರಕ ಕೋಡ್(ಗಳು) ನಿಮ್ಮ ಉದ್ಯಮಕ್ಕೆ ಅನ್ವಯಿಸಿದಲ್ಲಿ ನೀವು ಎಲ್ಲಾ ಅನ್ವಯಿತ ಕಾನೂನುಗಳು ಮತ್ತು ನಿಬಂಧನೆಗಳನ್ನು ಅನುಸರಿಸಬೇಕಾಗುತ್ತದೆ.

12.5. ನೀವು ಯಾವುದೇ ವಿಷಯದ ಆತಿಥ್ಯ ವಹಿಸುವುದು, ಪ್ರದರ್ಶಿಸಿಸುವುದು, ಅಪ್ ಲೋಡ್ ಮಾಡುವುದು, ಮಾರ್ಪಡಿಸುವುದು, ಪ್ರಕಟಿಸುವುದು, ರವಾನಿಸುವುದು, ಸಂಗ್ರಹಿಸುವುದು, ಅಪ್ ಡೇಟ್ ಮಾಡುವುದು ಅಥವಾ ಹಂಚಿಕೊಳ್ಳಬಹುದು.

i. ಅದು ಇನ್ನೊಬ್ಬ ವ್ಯಕ್ತಿಗೆ ಸೇರಿದಾಗ ಮತ್ತು ಬಳಕೆದಾರ ಯಾವುದೇ ಹಕ್ಕು ಹೊಂದಿಲ್ಲದಿದ್ದಾಗ;

ii. ಮಾನಹಾನಿಕರ, ಅಶ್ಲೀಲ, ಪೋರ್ನೋಗ್ರಾಫಿಕ್, ಪೋಡೋಫೀಲಿಕ್, ಇನ್ನೊಬ್ಬರ ಖಾಸಗಿ ವಿಷಯ, ದೈಹಿಕ ಗೋಪ್ಯತೆ ಸೇರಿದಂತೆ, ಲಿಂಗ, ಜನಾಂಗ ಅಥವಾ ಸಮುದಾಯದ ಆಕ್ಷೇಪಾರ್ಹ, ಹಣ ವಸೂಲಿಗೆ ಸಂಬಂಧಿಸಿ ಪ್ರೋತ್ಸಾಹ ನೀಡುವುದು ಅಥವ ಜಾರಿಯಲ್ಲಿರುವ ಕಾನೂನಿಗೆ ವಿರುದ್ಧವಾಗಿ ಯಾವುದೇ ಕೆಲಸ ಮಾಡುವುದಕ್ಕೆ ಹಕ್ಕು ಇರುವುದಿಲ್ಲ.

iii. ಮಕ್ಕಳಿಗೆ ಹಾನಿಕರ

iv. ಯಾವುದೇ ಪೇಟೆಂಟ್, ಟ್ರೇಡ್ ಮಾರ್ಕ್, ಹಕ್ಕುಸ್ವಾಮ್ಯ ಅಥವಾ ಇತರ ಸ್ವಾಮ್ಯದ ಹಕ್ಕನ್ನು ಉಲ್ಲಂಘಿಸುತ್ತದೆ.

v. ಜಾರಿಯಲ್ಲಿರುವ ಯಾವುದೇ ಕಾನೂನನ್ನು ಉಲ್ಲಂಘಿಸುತ್ತದೆ;

vi. ಸಂದೇಶದ ಮೂಲದ ಬಗ್ಗೆ ವಿಳಾಸದಾರರನ್ನು ಮೋಸಗೊಳಿಸುವುದು ಅಥವಾ ದಾರಿತಪ್ಪಿಸುವುದು ಅಥವಾ ಉದ್ದೇಶಪೂರ್ವಕವಾಗಿ ಸುಳ್ಳು ಅಥವಾ ತಪ್ಪುದಾರಿಗೆಳೆಯುವ ಸ್ವಭಾವ ಆದರೆ ಸೂಕ್ತವಾಗಿ ಸತ್ಯವೆಂದು ಗ್ರಹಿಸಬಹುದಾದ ರೀತಿಯಲ್ಲಿ ಯಾವುದೇ ಮಾಹಿತಿಯನ್ನು ಉದ್ದೇಶಪೂರ್ವಕವಾಗಿ ತಿಳಿಸುವುದು.

vii. ಇನ್ನೊಬ್ಬ ವ್ಯಕ್ತಿಯನ್ನು ಅನುಕರಿಸುವುದು;

ix. ಸಾಫ್ಟ್ ವೇರ್ ವೈರಸ್ ಅಥವಾ ಯಾವುದೇ ಇತರ ಕಂಪ್ಯೂಟರ್ ಸಂಕೇತ, ಫೈಲ್, ಅಥವಾ ಪ್ರೋಗ್ರಾಂ ಅನ್ನು ಅಡ್ಡಿಪಡಿಸಲು ನಾಶಪಡಿಸಲು, ಅಥವಾ ಯಾವುದೇ ಕಂಪ್ಯೂಟರ್ ಸಂಪನ್ಮೂಲದ ಕಾರ್ಯವನ್ನು ಮಿತಿಗೊಳಿಸಲು ವಿನ್ಯಾಸಗೊಳಿಸಲಾಗಿದೆ;

X. ಒಬ್ಬ ವ್ಯಕ್ತಿ, ಘಟಕ ಅಥವಾ ಏಜೆನ್ಸಿಯನ್ನು ಹಣಕಾಸು ಲಾಭಕ್ಕಾಗಿ ಹಾದಿತಪ್ಪಿಸುವ ಅಥವಾ ಕಿರುಕುಳ ನೀಡುವ ಉದ್ದೇಶದಿಂದ ಅಥವಾ ಯಾವುದೇ ವ್ಯಕ್ತಿಗೆ ಯಾವುದೇ ಗಾಯವನ್ನುಂಟುಮಾಡುವ ಉದ್ದೇಶದಿಂದ ಯಾವುದೇ ರೂಪದಲ್ಲಿ ಬರೆಯಲಾಗಿದೆ ಅಥವಾ ಪ್ರಕಟಿಸಲಾಗಿದೆ.

Xi. ಯಾವುದೇ ರೀತಿಯಲ್ಲಿ ವರ್ಸೇ ಯ ಹಿತಾಸಕ್ತಿಗಳ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಯಿದೆ.

Xii. ಯಾವುದೇ ರೀತಿಯಲ್ಲಿ ವೇದಿಕೆಯನ್ನು ಹಾನಿಗೊಳಿಸುವುದು ಅಥವಾ ಕುಗ್ಗಿಸುವುದು ಅಥವಾ ವೇದಿಕೆಯ ಕಾರ್ಯಕ್ಷಮತೆ, ಲಭ್ಯತೆ ಅಥವಾ ಪ್ರವೇಶದ ದುರ್ಬಲತೆಯನ್ನು ಉಂಟುಮಾಡುತ್ತದೆ.

Xiii. ವ್ಯಾಪಾರದ ಜಾಹೀರಾತು, ಪ್ರಚಾರಗಳು ಅಥವಾ ವಿನಂತಿಗಳನ್ನು ಚಿತ್ರಿಸುತ್ತದೆ ಅಥವಾ ಬಳಕೆದಾರರನ್ನು ವಿನಂತಿಸುತ್ತದೆ ಅಥವಾ ಯಾವುದೇ ಇತರ ರೀತಿಯ ಮನವಿಯನ್ನು ಚಿತ್ರಿಸುತ್ತದೆ.

Xiv. ಯಾವುದೇ ಇತರ ಬಳಕೆದಾರರಿಂದ ಪಾಸ್ ವರ್ಡ್, ಖಾತೆ, ಸೂಕ್ಷ್ಮ ಮಾಹಿತಿಗಳನ್ನು ಪಡೆಯಲು ವಿನ್ಯಾಸಗೊಳಿಸಿದ ಅಥವಾ ಉದ್ದೇಶಿಸಿರುವ ಯಾವುದೇ ಸಂವಹನ ಅಥವಾ ಮನವಿಯನ್ನು ಪೋಸ್ಟ್ ಮಾಡುವುದು ಅಥವಾ ರವಾನಿಸುವುದು.

xv. ವೇದಿಕೆಯೊಂದಿಗೆ ಅಥವಾ ಅದರ ಸರ್ವರ್ ಗಳು ಅಥವಾ ಇತರ ಯಾವುದೇ ಸಂಪರ್ಕಜಾಲಗಳನ್ನು ಹ್ಯಾಕ್ ಅಥವಾ ಹಸ್ತಕ್ಷೇಪ ಮಾಡುವುದು.

xvi. ಪೋಸ್ಟ್ ಗಳು ಅಥವಾ ಸ್ಪ್ಯಾಮ್ ರವಾನಿಸುವುದು, ಸೀಮಿತವಲ್ಲದ ಆದರೆ ಮನವಿ ಮಾಡದ ಅಥವಾ ಅನಧಿಕೃತ ಜಾಹೀರಾತು ಪ್ರಚಾರ ಸಾಮಗ್ರಿಗಳು ಅಥವಾ ಮಾಹಿತಿ ಪ್ರಕಟಣೆಗಳು ಸೇರಿದಂತೆ ಮತ್ತು; ಹಾಗೂ

xvii. ಸುದ್ದಿಗಳ ಪ್ರಕಟ / ಪ್ರಸ್ತುತ ಚಾಲ್ತಿಯಲ್ಲಿರುವ ವಿಷಯಗಳ ಕಂಟೆಂಟ್

12.6 ಈ ಕೆಳಗಿನ ನಿಷೇಧಿತ ಚಟುವಟಿಕೆಗಳಲ್ಲಿ ನೀವು ತೊಡಗಿರಬಾರದು -         

1. ನೀವು ಯಾವುದೇ ಸಮಯದಲ್ಲಿ ವೇದಿಕೆ ಮೂಲಕ ಪ್ರವೇಶಿಸಿದ ವಿಷಯನ್ನು ಅಕ್ರಮವಾಗಿ ಡೌನ್ ಲೋಡ್ ಮಾಡಬಾರದು/ಸೇವ್ ಮಾಡಬಾರದು ಅಥವಾ ವಿಷಯ ಅಥವಾ ವೇದಿಕೆಯ ಯಾವುದೇ ಭಾಗಕ್ಕೆ ಅನಧಿಕೃತ ಪ್ರವೇಶ ಅಥವಾ ನಕಲು ಮಾಡುವುದನ್ನು ತಡೆಯಲು ವರ್ಸೇ ಬಳಸುವ ಯಾವುದೇ ತಾಂತ್ರಿಕ ಕ್ರಮಗಳನ್ನು ತಪ್ಪಿಸಬಾರದು.

ii. ನೀವು ವೇದಿಕೆಯ ಯಾವುದೇ ಭಾಗವನ್ನು ಬದಲಾಯಿಸುವುದು ಅಥವಾ ಮಾರ್ಪಡಿಸುವಂತಿಲ್ಲ ಮತ್ತು /ಅಥವಾ ವೇದಿಕೆಯನ್ನು ಯಾವುದೇ ಅನಧಿಕೃತ ಚಟುವಟಿಕೆಗಳಿಗೆ ಬಳಸುವಂತಿಲ್ಲ.

iii. ವೇದಿಕೆಯ ಭಾಗವಾದ ಯಾವುದೇ ವೆಬ್ ಪುಟ ದ ಯಾವುದೇ ಭಾಗವನ್ನು ಚೌಕಟ್ಟುಗೊಳಿಸುವುದು ಅಥವಾ ಪುನರ್ ರೂಪಿಸುವಂತಿಲ್ಲ.

iv. ನೀವು ಇತರ ಬಳಕೆದಾರರ ಬಗ್ಗೆ ಯಾವುದೇ ಮಿತಿಯಿಲ್ಲದೇ ಸ್ಪೈಡರಿಂಗ್ ಅಥವಾ ಯಾವುದೇ ರೀತಿಯ ಸ್ಕ್ರ್ಯಾಪಿಂಗ್ ಮೂಲಕ ಸೂಕ್ಷ್ಮ ವೈಯಕ್ತಿಕ ದತ್ತಾಂಶ, ವೈಯಕ್ತಿಕ ಮಾಹಿತಿ ಅಥವಾ ಇತರ ಯಾವುದೇ ರೀತಿಯ ಮಾಹಿತಿಯನ್ನು ಸಂಗ್ರಹಿಸುವುದು, ಸಂಗ್ರಹಿಸಲು ಪ್ರಯತ್ನಿಸುವುದು ಅಥವಾ ಹಾರ್ವೆಸ್ಟ್ ಮಾಡುವಂತಿಲ್ಲ.

v. ನೀವು ಬೇರೊಬ್ಬ ವ್ಯಕ್ತಿಯಂತೆ ಉದ್ದೇಶಪೂರ್ವಕವಾಗಿ ಸೋಗು ಹಾಕುವಂತಿಲ್ಲ, ನೈಜ ಅಥವಾ ಕಾಲ್ಪನಿಕವಾಗಿ ಅಥವಾ ವ್ಯಕ್ತಿ ಅಥವಾ ಸಂಸ್ಥೆಯೊಂದಿಗೆ ತಪ್ಪಾಗಿ ನಿಮ್ಮ ಸಂಬಂಧವನ್ನು ಪ್ರತಿನಿಧಿಸುವಂತಿಲ್ಲ, ಉದಾಹರಣೆಗೆ ಇನ್ನೊಬ್ಬ ವ್ಯಕ್ತಿ ಅಥವಾ ಕಂಪನಿಯ ಹೆಸರಿನಲ್ಲಿ ಖಾತೆಯನ್ನು ನೋಂದಾಯಿಸುವುದು ಅಥವಾ ಇನ್ನೊಬ್ಬವ್ಯಕ್ತಿಯ ಹೆಸರು ಬಳಸಿಕೊಂಡು ಸಂದೇಶಗಳನ್ನು ಕಳುಹಿಸುವುದು ಅಥವಾ ಕಮೆಂಟ್ ಗಳನ್ನು ಮಾಡುವುದು ಅಥವಾ ಇತರ ಬಳಕೆದಾರರ ಹೆಸರು ಬಳಕೆದಾರರಂತೆ ವರ್ತಿಸುವುದು ಅಥವಾ ನಿಮ್ಮ ಗುರುತನ್ನು ನಕಲಿ ಮಾಡುವುದು.

vi. ನೀವು ನಿಮ್ಮ ಹೆಸರು ಮತ್ತು ಪಾಸ್ ವರ್ಡ್, ಅಥವಾ ವೇದಿಕೆಯಲ್ಲಿನ ಯಾವುದೇ ಕಂಟೆಂಟ್ ನ್ನು ಬಳಸಲು ನೀವು ಮೂರನೇಯ ವ್ಯಕ್ತಿಗೆ ವೇದಿಕೆ ಮತ್ತು / ಅಥವಾ ವರ್ಸೇಯ ಖಾತೆಯನ್ನು ಬಾಡಿಗೆಗೆ, ಮಾರಾಟ ಅಥವಾ ವರ್ಗಾವಣೆ ಅಥವ ಭೋಗ್ಯಕ್ಕೆ ಅಥವಾ ಮಾರಾಟ ಅಥವಾ ವರ್ಗಾಯಿಸುವ ಆಫರ್ ನೀಡುವಂತಿಲ್ಲ.

vii. ನೀವು ವೇದಿಕೆ ಅಥವಾ ಅದರ ಯಾವುದೇ ವಿಷಯವನ್ನು ಮರುಮಾರಾಟ ಮಾಡುವಂತಿಲ್ಲ ಅಥವಾ ವಾಣಿಜ್ಯಕವಾಗಿ ಬಳಸುವಂತಿಲ್ಲ ಅಥವಾ ನಿಮ್ಮ ಅಥವಾ ಯಾವುದೇ ಮೂರನೇ ವ್ಯಕ್ತಿಯ ಪ್ರಯೋಜನಕ್ಕಾಗಿ ಖಾತೆಯ ಮಾಹಿತಿಯನ್ನು ಡೌನ್ ಲೋಡ್ ಮಾಡಬಾರದು ಅಥವಾ ನಕಲಿಸಬಾರದು. ವೇದಿಕೆಯನ್ನು ವೈಯಕ್ತಿಕ ಬಳಕೆಗಾಗಿ ಮಾತ್ರ ಬಳಸುವಂತಿರಬೇಕು ಮತ್ತು ಮರುಉತ್ಪಾದನೆ, ನಕಲಿ ಮಾಡುವಿಕೆ, ಪ್ರತಿ ಮಾಡುವಿಕೆ, ಮಾರಾಟ, ಮರುಮಾರಾಟ, ಭೇಟಿ ನೀಡುವಿಕೆ ಅಥವಾ ಬೇರೆ ರೀತಿಯಲ್ಲಿ ಯಾವುದೇ ವಾಣಿಜ್ಯಕ ಉದ್ದೇಶಕ್ಕಾಗಿ ವೇದಿಕೆಯನ್ನು ಶೋಷಣೆ ಮಾಡಬಾರದು.

viii. ನೀವು ನಿಮ್ಮ ಖಾತೆಯನ್ನು ಮೂರನೇ ವ್ಯಕ್ತಿಗೆ ಬಳಸಲು ಅಧಿಕಾರ ನೀಡಬಾರದು

ix. ನೀವು ಅಪರಾಧವನ್ನು ರೂಪಿಸುವ, ನಾಗರಿಕ ಹೊಣೆಗಾರಿಕೆಗೆ ಕಾರಣವಾಗುವ ಅಥವಾ ಯಾವುದೇ ಕಾನೂನು ಅಥವಾ ನಿಯಂತ್ರಣವನ್ನು ಉಲ್ಲಂಘಿಸುವ ಯಾವುದೇ ನಡವಳಿಕೆಯನ್ನು ನೀವು ಮಾಡುವಂತಿಲ್ಲ, ಅಥವಾ ತೊಡಗಿಸಿಕೊಳ್ಳುವಂತಿಲ್ಲ ಅಥವಾ ಪ್ರೋತ್ಸಾಹಿಸುವಂತಿಲ್ಲ, ಪ್ರೇರೇಪಿಸುವಂತಿಲ್ಲ ಅಥವಾ ಉತ್ತೇಜಿಸುವಂತಿಲ್ಲ, ಅಥವಾ ಯಾವುದೇ ಅಕ್ರಮ ಅಥವಾ ಅನಧಿಕೃತ ಉದ್ದೇಶಕ್ಕಾಗಿ ವೇದಿಕೆಯನ್ನು ಬಳಸಿ; ನಿಮ್ಮ ನಡವಳಿಕೆಗೆ ಅನ್ವಯವಾಗುವ ಎಲ್ಲಾ ಸ್ಥಳೀಯ ಕಾನೂನುಗಳು ಮತ್ತು ಹೈಪರ್ ಲಿಂಕ್ ಗಳು ಸೇರಿದಂತೆ ವಿಷಯ ಮತ್ತು ಮಾಹಿತಿಯನ್ನು ನೀವು ಪ್ಲಾಟ್ ಫಾರ್ಮ್ ಬಳಸಿ ಅಪ್ ಲೊಡ್ ಮಾಡುವ ಸಂಗ್ರಹಿಸುವ ಹಂಚಿಕೊಳ್ಳುವ ಅಥವಾ ರವಾನಿಸಲು ನೀವು ಒಪ್ಪಿಕೊಂಡಿರುವಿರಿ.

x. ವೇದಿಕೆಯಲ್ಲಿ ಪ್ರದರ್ಶಿತಗೊಳ್ಳುವ ಅಥವಾ ವೇದಿಕೆಯಲ್ಲಿ ಪ್ರದರ್ಶಿತಗೊಳ್ಳುವ ಯಾವುದೇ ವಿಷಯಗಳನ್ನು ನೀವು ತೆಗೆದುಹಾಕುವುದು, ಬದಲಿಸಲು ಪ್ರಯತ್ನಿಸುವುದು ಅಥವಾ ಟ್ರೇಡ್ ಮಾರ್ಕ್ ಕಾಪಿರೈಟ್ ಅಥವಾ ಇತರ ಹಕ್ಕು ಸ್ವಾಮ್ಯ ಅಥವಾ ಕಾನೂನು ನೋಟೀಸ್ ಗಳನ್ನು ತೆಗೆದುಹಾಕುವಂತಹ ಕೆಲಸ ಮಾಡುವಂತಿಲ್ಲ. ವರ್ಸೇ ಮತ್ತು ನಮ್ಮ ಅಂಗಸಂಸ್ಥೆಗಳು ಅಥವಾ ಇತರ ಬಳಕೆದಾರರ ಯಾವುದೇ ಟ್ರೇಡ್ ಮಾರ್ಕ್, ಲೋಗೋ ಅಥವಾ ಇತರ ಸ್ವಾಮ್ಯದ ಮಾಹಿತಿಯನ್ನು (ಚಿತ್ರಣ, ವಿಷಯ, ಸಂಗೀತ, ಟೆಕ್ಸ್ಟ್, ಪೇಜ್ ಲೇಔಟ್ ಅಥವಾ ಫಾರ್ಮ್ ಸೇರಿದಂತೆ) ಲಗತ್ತಿಸಲು ನೀವು ಚೌಕಟ್ಟಿನ ತಂತ್ರಗಳನ್ನು ಫ್ರೇಮ್ ಮಾಡಬಾರದು ಅಥವಾ ಬಳಸಬಾರದು. ವರ್ಸೇ ಹೆಸರು ಅಥವಾ ಟ್ರೇಡ್ ಮಾರ್ಕ್ ಗಳನ್ನು ವರ್ಸೇಯ ಲಿಖಿತ ಒಪ್ಪಿಗೆ ವ್ಯಕ್ತವಾಗದ ಹೊರತು ನೀವು ಯಾವುದೇ ಮೆಟಾ ಟ್ಯಾಗ್ ಗಳನ್ನು ಅಥವಾ ಯಾವುದೇ ಇತರ “ಹಿಡನ್ ಟೆಕ್ಸ್ಟ್ ” ವನ್ನು ಬಳಸುವಂತಿಲ್ಲ. ಹಾಗೆಯೇ ವರ್ಸೇ ಯ ಒಪ್ಪಿಗೆಯಿಲ್ಲದೇ ಲೋಗೋ ಅಥವಾ ಇತರ ಸ್ವಾಮ್ಯದ ಗ್ರಾಫಿಕ್ ಅಥವಾ ಟ್ರೇಡ್ ಮಾರ್ಕ್ ನ್ನು ಲಿಂಕ್ ನ ಭಾಗವಾಗಿ ಬಳಸುವಂತಿಲ್ಲ. ಯಾವುದೇ ಅನಧಿಕೃತ ಬಳಕೆಯು ವರ್ಸೇ ನೀಡಿದ ಅನುಮತಿ ಅಥವಾ ಪರವಾನಗಿಯನ್ನು ರದ್ದುಗೊಳಿಸುತ್ತದೆ.

xi. ವೇದಿಕೆಯಲ್ಲಿ ಒದಗಿಸಲಾದ ಫೀಚರ್ ಗಳ ಹೊರತಾಗಿ ವಿಷಯಗಳನ್ನು ಒಟ್ಟುಗೂಡಿಸಲು, ಮರುಉದ್ದೇಶಿಸಲು, ಹೊಂದಿಕೊಳ್ಳಲು, ನಕಲು ಮಾಡಲು, ಮರುಪ್ರಕಟಿಸಲು, ಲಭ್ಯವಾಗುವಂತೆ ಅಥವಾ ಸಾರ್ವಜನಿಕರಿಗೆ ಸಂವಹನ ಮಾಡಲು, ಪ್ರದರ್ಶಿಸಲು, ನಿರ್ವಹಿಸಲು, ವರ್ಗಾಯಿಸಲು, ಹಂಚಲು ವಿತರಿಸಲು ಅಥವಾ ಬಳಸಲು ಅಥವಾ ಬಳಸಿಕೊಳ್ಳಲು ನೀವು ಸ್ಕ್ರಾಪಿಂಗ್ ಅಥವಾ ಅಂತಹ ತಂತ್ರಗಳನ್ನು ಬಳಸಬಾರದು.

xii. ನೀವು ವೇದಿಕೆಯ ಆಬ್ಜೆಕ್ಟ್ ಕೋಡ್ ನ್ನು ನಕಲಿಸಲು ಅಥವಾ ಅಳವಡಿಸಿಕೊಳ್ಳಲು ಮೂರನೇ ವ್ಯಕ್ತಿಗೆ ಅನುಮತಿ ನೀಡಬಾರದು ಅಥವಾ ರಿವರ್ಸ್ ಇಂಜಿನಿಯರ್, ಪುನರ್ ಜೋಡಣೆ, ಡಿಕಂಪೈಲ್ ಮಾಡಲು, ಮಾರ್ಪಡಿಸಲು ಅಥವಾ ವೇದಿಕೆಯ ಯಾವುದೇ ಭಾಗದ ಯಾವುದೇ ಮೂಲ ಅಥವಾ ಆಬ್ಜೆಕ್ಟ್ ಕೋಡ್ ನ್ನು ಅನ್ವೇಷಿಸಲು ಕೂಡ ಅನುಮತಿ ನೀಡುವಂತಿಲ್ಲ. ಯಾವುದೇ ನಕಲು ಅಥವಾ ತಾಂತ್ರಿಕ ವಿಧಾನವನ್ನು ನಕಲು ಮಾಡುವುದು ಅಥವಾ ವಿಷಯ ಅಥವಾ ವೇದಿಕೆಗೆ ಸಂಬಂಧಿಸಿದ ಹಕ್ಕುಗಳ ನಿರ್ವಹಣೆ ಮಾಹಿತಿಯನ್ನು ಪ್ರವೇಶಿಸಿ ನಕಲು ಮಾಡಲು ಅನುಮತಿ ನೀಡುವಂತಿಲ್ಲ.

xiii. ನೀವು ಯಾವುದೇ ವೈರಸ್ ಗಳು, ವರ್ಮ್ ಗಳು, ನ್ಯೂನತೆಗಳು, ಟ್ರೋಜನ್ ಹಾರ್ಸ್, ಕ್ಯಾನ್ಸಲ್ ಬಾಟ್ ಗಳು, ಸ್ಪೈವೇರ್, ಕಲುಷಿತ ಅಥವಾ ವಿನಾಶಕಾರಿ ಸ್ವಭಾವದ ಇತರ ವಸ್ತುಗಳು, ಅಡ್ವೇರ್, ಪ್ಯಾಕೆಟ್ ಅಥವಾ ಐಪಿ ಸ್ಪೂಫಿಂಗ್ , ನಕಲಿ ರೂಟಿಂಗ್ ಅಥವಾ ಎಲೆಕ್ಟ್ರಾನಿಕ್ ಮೇಲ್ ವಿಳಾಸ ಮಾಹಿತಿ ಅಥವಾ ಅಂತಹದೇ ವಿಧಾನಗಳು ಅಥವಾ  ತಂತ್ರಜ್ಞಾನ , ಅಪಾಯಕಾರಿ ಸಂಕೇತ,ಫ್ಲಡ್ ಪಿಂಗ್ಸ್, ಮಾಲ್ ವೇರ್, ಬೋಟ್, ಟೈಮ್ ಬಾಂಬ್, ವರ್ಮ್ ಅಥವಾ ಇನ್ನೊಂದು ಹಾನಿಕಾರಕ ಅಥವಾ ದುರುದ್ದೇಶಪೂರಿತ ಘಟಕಗಳು, ಇದು ವೇದಿಕೆಯ ಭಾಗವಾಗಿರುವ ಅಥವಾ ಜೋಡಣೆಗೊಂಡಿರುವ ವೇದಿಕೆ ಅಥವಾ ನೆಟ್ ವರ್ಕ್ ಗಳ ಮೇಲೆ ಹೊರೆಯೆನಿಸುವಂತಹ, ದುರ್ಬಲಗೊಳಿಸಬಹುದಾದ ಅಥವಾ ಅಡ್ಡಿಪಡಿಸಬಹುದಾದಂತಹ ಯಾವುದೇ ಬಳಕೆಯನ್ನು ನಿರ್ಬಂಧಿಸಬಹುದು ಹಾಗೆಯೇ ಇತರ ಬಳಕೆದಾರರು ವೇದಿಕೆಯ ಬಳಕೆಯಿಂದ ಸಂತೋಷ ಅನುಭವಿಸುವುದನ್ನು ತಡೆಹಿಡಿಯುವಂತಹ ಕಾರ್ಯಗಳನ್ನು ನಿರ್ಬಂಧಿಸಬಹುದು.

xiv. ನೀವು ಬೇರೊಬ್ಬ ಬಳಕೆದಾರ ಅಥವಾ ಯಾವುದೇ ವರ್ಸೇಯ ನೌಕರರು ಮತ್ತು/ಅಥವಾ ಅಂಗಸಂಸ್ಥೆಗಳನ್ನು ಹಿಂಬಾಲಿಸಬಾರದು, ಶೋಷಿಸಬಾರದು, ಬೆದರಿಸಬಾರದು, ನಿಂದಿಸುವುದು ಅಥವಾ ಕಿರುಕುಳ ನೀಡಬಾರದು.

xv. ನೀವು ವರ್ಸೇಯಿಂದ ಜಾರಿಗೊಂಡ ಯಾವುದೇ ಡಾಟಾ ಭದ್ರತೆ ಕ್ರಮಗಳನ್ನು ಉಲ್ಲಂಘಿಸಬಾರದು, ತಪ್ಪಿಸಬಾರದು ಅಥವಾ ತಪ್ಪಿಸಿಕೊಳ್ಳಲು ಪ್ರಯತ್ನಿಸಬಾರದು; ನಿಮ್ಮ ಬಳಕೆಗೆ ಉದ್ದೇಶಿಸದ ಡಾಟಾ ಅಥವಾ ಸಾಮಗ್ರಿಗಳನ್ನು ಪ್ರವೇಶಿಸಲು ಪ್ರಯತ್ನ; ಲಾಗ್ ಇನ್ ಮಾಡುವುದು, ಅಥವಾ ನೀವು ಪ್ರವೇಶಿಸಲು ಅಧಿಕಾರ ಇಲ್ಲದ ಖಾತೆಗೆ ಲಾಗ್ ಇನ್ ಆಗಲು ಪ್ರಯತ್ನಿಸಬಾರದು; ವರ್ಸೇನ ಸರ್ವರ್, ಸಿಸ್ಟಂ ಅಥವಾ ನೆಟ್ ವರ್ಕ್ ದೌರ್ಬಲ್ಯದ ಸ್ಕ್ಯಾನ್ ಮಾಡಲು ಅಥವಾ ಪರೀಕ್ಷಿಸಲು ಪ್ರಯತ್ನಿಸಬಾರದು ಅಥವಾ ವರ್ಸೇನ ಡಾಟಾ ಸುರಕ್ಷತೆ ಅಥವಾ ದೃಢೀಕರಣ ಕಾರ್ಯವಿಧಾನಗಳನ್ನು ಉಲ್ಲಂಘಿಸಲು ಪ್ರಯತ್ನಿಸಬಾರದು.

xvi. ನೀವು ಯಾವುದೇ ರೋಬೋಟ್, ಸ್ಪೈಡರ್, ಆಫ್ ಲೈನ್ ರೀಡರ್ಸ್, ಸೈಟ್ ಹುಡುಕಾಟ ಮತ್ತು/ಅಥವಾ ಮರುಪಡೆಯುವಿಕೆ ಆಪ್ಲಿಕೇಷನ್ ಅಥವಾ ಸಾರ್ವಜನಿಕ ಹುಡುಕಾಟ ಎಂಜಿನ್ ಗಳನ್ನುಹೊರತುಪಡಿಸಿ ವೇದಿಕೆಯ ಯಾವುದೇ ಭಾಗವನ್ನು ಹಿಂಪಡೆಯಲು ಅಥವಾ ಸೂಚಿಸಲು ಇತರ ಸಾಧನವನ್ನು ಬಳಸಬಾರದು; ವೇದಿಕೆ ಮತ್ತು/ಅಥವಾ ಮಾಹಿತಿಯನ್ನು ಪ್ರವೇಶಿಸಲು, ವಿಶ್ಲೇಷಿಸಲು ಅಥವಾ ನಕಲಿಸಲು ಯಾವುದೇ ರೋಬೋಟ್, ಸ್ಪೈಡರ್, ಸ್ಕ್ರ್ಯಾಪರ್ ಅಥವಾ ಇತರ ಸ್ವಯಂಚಾಲಿತ ವಿಧಾನಗಳನ್ನು ಬಳಸಿ ಇವುಗಳನ್ನು ಮಾಡಬಾರದು (ನಮ್ಮ ಮಾಹಿತಿ ಅಥವಾ ಇತರ ಬಳಕೆದಾರರ ಮಾಹಿತಿ.

12.7 ನೀವು ಸಮುದಾಯ ಮಾರ್ಗಸೂಚಿಗಳು ಮತ್ತು ಗೌಪ್ಯತಾ ನೀತಿಯನ್ನು ಕಡ್ಡಾಯವಾಗಿ ಅನುಸರಿಸಬೇಕಾಗುತ್ತದೆ.

13. ಪ್ರಾತಿನಿಧಿತ್ವ ಮತ್ತು ವಾರಂಟಿಗಳು

13.1 ಈ ನಿಯಮಗಳಲ್ಲಿ ನಿಖರವಾಗಿ ಹೇಳಿರುವ ಅಥವಾ ಕಾನೂನಿನ ಮೂಲಕ ಅಗತ್ಯವಿರುವಂತೆ, ಸೇವೆಯನ್ನು “ಇರುವಂತೆ” ನೀಡಲಾಗಿದೆ. ಮತ್ತು ವರ್ಸೇಯ ಯಾವುದೇ ನಿರ್ದಿಷ್ಟ ಬದ್ಧತೆಗಳು ಅಥವಾ ವಾರಂಟಿಗಳನ್ನು ನೀಡುವುದಿಲ್ಲ. ಉದಾಹರಣೆಗೆ ನಾವು ಇದರ ಬಗ್ಗೆ ಯಾವುದೇ ವಾರಂಟಿಗಳನ್ನು ಮಾಡುವುದಿಲ್ಲ. (ಎ) ಸೇವೆಯ ಮೂಲಕ ಒದಗಿಸಲಾದ ವಿಷಯ; (ಬಿ) ಸೇವೆಯ ನಿರ್ದಿಷ್ಟ ವೈಶಿಷ್ಟ್ಯಗಳು, ಅಥವಾ ಅದರ ನಿಖರತೆ, ವಿಶ್ವಾಸಾರ್ಹತೆ, ಲಭ್ಯತೆ, ಅಥವಾ ನಿಮ್ಮ ಅಗತ್ಯಗಳನ್ನು ಪೂರೈಸುವ ಸಾಮರ್ಥ್ಯ; ಅಥವಾ (ಸಿ) ನೀವು ಸಲ್ಲಿಸುವ ಯಾವುದೇ ವಿಷಯವು ಸೇವೆಯಲ್ಲಿ ಪ್ರವೇಶಿಸಬಹುದು.

13.2 ನಿಮ್ಮಿಂದ ವೇದಿಕೆಯ ಮೂಲಕ ನೀವು ಪ್ರವೇಶಿಸಬಹುದಾದ ವಿಷಯವು ಮೂರನೇ ವ್ಯಕ್ತಿಗಳಿಗೆ ಸೇರಿದ ವಸ್ತುಗಳನ್ನು ಒಳಗೊಂಡಿದೆ. ಅಂತಹ ವಿಷಯಕ್ಕೆ ವರ್ಸೇಯು ಯಾವುದೇ ಜವಾಬ್ದಾರಿಯಾಗಿರುವುದಿಲ್ಲ ಎಂಬುದಾಗಿ ನೀವು ಅಂಗೀಕರಿಸಿದ್ದೀರಿ. ವೇದಿಕೆ ಬಳಸುವಾಗ ನೀವು ಆಕ್ಷೇಪಾರ್ಹ, ಅಸಭ್ಯ ಅಥವಾ ಇತರ ಆಕ್ಷೇಪಾರ್ಹ ವಿಷಯವನ್ನು ಎದುರಿಸಬಹುದು ಮತ್ತು ಅಂತಹ ಆಕ್ರಮಣಕಾರಿ ಮತ್ತು ಅಶ್ಲೀಲ ವಸ್ತುಗಳಿಗೆ ನೀವು ಅನೈಚ್ಛಿಕವಾಗಿ ಒಗ್ಗಿಕೊಳ್ಳಬಹುದು ಎಂಬುದಾಗಿ ನೀವು ತಿಳಿದುಕೊಂಡಿದ್ದೀರಿ. ವೇದಿಕೆಯನ್ನು ನೀವು ಬಳಸುವುದರಿಂದ ಇತರರು ನಿಮ್ಮ ಬಗ್ಗೆ ವೈಯಕ್ತಿಕ ಮಾಹಿತಿಯನ್ನು ಪಡೆದುಕೊಳ್ಳಲು ಸಾಧ್ಯವಿದೆ ಮತ್ತು ಸ್ವೀಕರಿಸುವವರು ನಿಮಗೆ ಕಿರುಕುಳ ನೀಡಲು ಅಥವಾ ತೊಂದರೆ ಕೊಡಲು ಅಂತಹ ಮಾಹಿತಿಯನ್ನು ಬಳಸಬಹುದು. ವರ್ಸೇ ಅಂತಹ ಅಧಿಕೃತವಲ್ಲದ ಬಳಕೆಯನ್ನು ಅನುಮೋದಿಸುವುದಿಲ್ಲ. ಆದರೆ, ವೇದಿಕೆ ಯನ್ನು ಬಳಸುವ ಮೂಲಕ ನೀವು ಬೇರೆಯವರಿಂದ ಪಡೆದ ಯಾವುದೇ ವೈಯಕ್ತಿಕ ಮಾಹಿತಿಯನ್ನು ಕಾನೂನು ಬಾಹಿರ ಬಳಕೆಗೆ ಬಳಸಿದಲ್ಲಿ ಅದಕ್ಕೆ ವರ್ಸೇ ಹೊಣೆಗಾರನಾಗುವುದಿಲ್ಲ ಎಂದು ನೀವು ಅಂಗೀಕರಿಸಿದ್ದೀರಿ ಮತ್ತು ಒಪ್ಪಿಕೊಂಡಿದ್ದೀರಿ.

13.3 ವರ್ಸೇ ಯು ಯಾವುದೇ ಪ್ರಾತಿನಿಧಿತ್ವ ನೀಡುವುದಿಲ್ಲ ಅಥವಾ ವೇದಿಕೆಯು ನಷ್ಟದಿಂದ ಮುಕ್ತವಾಗಿದೆ, ಹಾನಿ, ಯಾವುದೇ ಅನಧಿಕೃತ ಪ್ರವೇಶ ಅಥವಾ ವರ್ಸೇಯ ಸುರಕ್ಷಿತ ಸರ್ವರ್ ಗಳ ಬಳಕೆ ಮತ್ತು / ಅಥವಾ ಯಾವುದೇ ವೈಯಕ್ತಿಕ ಮಾಹಿತಿ ಮತ್ತು/ ಅಥವಾ ಅದರಲ್ಲಿ ಸಂಗ್ರಹವಾಗಿರುವ ಹಣಕಾಸು ಮಾಹಿತಿ, ಭ್ರಷ್ಟಾಚಾರ, ದಾಳಿ ವೇದಿಕೆ ಅಥವಾ ಅದರಿಂದ ಬಿತ್ತರದ ಯಾವುದೇ ಅಡ್ಡಿ ಅತವಾ ಸ್ಥಗಿತತೆ , ಯಾವುದೇ ದೋಷಗಳು, ವೈರಸ್ ಗಳು, ಟ್ರೋಜನ್ ಹಾರ್ಸ್ ಗಳು, ಅಥವಾ ಅಂತಹವುಗಳು ಯಾವುದೇ ಮೂರನೇ ವ್ಯಕ್ತಿಯಿಂದ ವೇದಿಕೆಗೆ ಅಥವಾ ವೇದಿಕೆಯ ಮೂಲಕ ಹರಡಬಹುದಾದಂತಹ ಮತ್ತು/ಅಥವಾ ಯಾವುದೇ ವಿಷಯದಲ್ಲಿ ಅಥವಾ ಯಾವುದೇ ದೋಷಗಳು ಅಥವಾ ಲೋಪಗಳು ವೇದಿಕೆ ಮೂಲಕ ಪ್ರವೇಶಿಸಬಹುದಾದ ವಿಷಯಗಳ ಬಳಕೆಯ ಪರಿಣಾಮವಾಗಿ ಉಂಟಾಗುವ ಯಾವುದೇ ನಷ್ಟ ಅಥವಾ ಹಾನಿಗೆ  ವರ್ಸೇ ಪ್ರಾತಿನಿಧಿತ್ವ ಅಥವಾ ಯಾವುದೇ ಖಾತ್ರಿ ನೀಡುವುದಿಲ್ಲ.  

13.4 ಬಳಕೆದಾರರು ಅಥವಾ ಮೂರನೇ ವ್ಯಕ್ತಿಯು ಒದಗಿಸಿದ ಲಿಂಕ್ ನಿಂದ ವೇದಿಕೆಯು ಪಡೆಯುವ ಕಂಟೆಂಟ್ ಗಳು ವೈರಸ್ ಅಥವಾ ಅಂತಹುದೇ ಮಾಲಿನ್ಯ ಅಥವಾ ಹಾನಿಕಾರಕ ಫೀಚರ್ ಗಳಿಂದ ಮುಕ್ತವಾಗಿರುತ್ತವೆ ಎಂದು ವರ್ಸೇಯು ಯಾವುದೇ ಖಾತರಿಯನ್ನು, ಪ್ರಾತಿನಿಧ್ಯವನ್ನು ಮಾಡುವುದಿಲ್ಲ. ವೇದಿಕೆಯ ಗುಣಮಟ್ಟ ಮತ್ತು ಕಾರ್ಯಕ್ಷಮತೆ ಮತ್ತು ವಿಷಯದ ನಿಖರತೆ ಹಾಗೂ ಪರಿಪೂರ್ಣತೆಗೆ ಸಂಬಂಧಿಸಿದ ಎಲ್ಲಾ ಅಪಾಯಗಳನ್ನೂ ನೀವು ಗ್ರಹಿಸುತ್ತೀರಿ ಮತ್ತು ಒಪ್ಪುತ್ತೀರಿ.

13.5 ವರ್ಸೇಯು ವೇದಿಕೆ ಅಥವಾ ಯಾವುದೇ ಹೈಪರ್ ಲಿಂಕ್ ಮಾಡಲಾದ ಸೇವೆಗಳು ಅಥವಾ ಯಾವುದೇ ಬ್ಯಾನರ್ ಇಲ್ಲವೇ ಇತರ ಜಾಹೀರಾತಿನಲ್ಲಿ ವಿಶಿಷ್ಟಗೊಳಿಸಿದ ಮೂಲಕ ಮೂರನೇ ವ್ಯಕ್ತಿಯಿಂದ ಜಾಹೀರಾತು ಮಾಡಲಾದ ಅಥವಾ ಒದಗಿಸುವ ಯಾವುದೇ ಉತ್ಪನ್ನ ಅಥವಾ ಸೇವೆಗೆ ಖಾತರಿ ನೀಡುವುದಿಲ್ಲ, ಅನುಮೋದನೆ ಕೊಡುವುದಿಲ್ಲ, ಖಾತರಿ ಅಥವಾ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ಹಾಗೂ ಒಂದು ಪಕ್ಷವಾಗಿ ವರ್ಸೇ ನಿಲ್ಲುವುದಿಲ್ಲ. ನಿಮ್ಮ ಹಾಗೂ ಮೂರನೇ ವ್ಯಕ್ತಿಗಳ ಉತ್ಪನ್ನ ಅಥವಾ ಸೇವೆಗಳ ಪೂರೈಕೆದಾರರ ನಡುವಿನ ಯಾವುದೇ ವ್ಯವಹಾರವನ್ನು ಮೇಲ್ವಿಚಾರಣೆ ಮಾಡಲು ಅಥವಾ ಯಾವುದೇ ರೀತಿಯಲ್ಲಿ ನೀವು ಹೊಣೆಗಾರಿಕೆಯಿಂದಿರಿ. ಯಾವುದೇ ಮಾಧ್ಯಮದ ಮೂಲಕ ಅಥವಾ ಯಾವುದೇ ಪರಿಸರದಲ್ಲಿ ಉತ್ಪನ್ನ ಅಥವಾ ಸೇವೆಯನ್ನು ಖರೀದಿಸಿದಂತೆ, ನೀವು ಉತ್ತಮವಾದ ನಿರ್ಣಯವನ್ನು ಬಳಸಬೇಕು ಮತ್ತು ವೇದಿಕೆಯ ಪ್ರವೇಶ ಮತ್ತು ಬಳಕೆಯಿಂದ ಸಂಭವಿಸುವ ಯಾವುದೇ ಸ್ವಭಾವದ ಎಚ್ಚರಿಕೆ, ಹಸ್ತಕ್ಷೇಪ, ವೈಯಕ್ತಿಕ ಹಾನಿ ಅಥವಾ ಆಸ್ತಿ ಹಾನಿ, ಹ್ಯಾಕಿಂಗ್, ಅಥವಾ ನಿಮ್ಮಿಂದ ಇತರ ಭದ್ರತಾ ನುಸುಳುವಿಕೆ ಮತ್ತು ಅದಕ್ಕೆ ಸಂಬಂಧಿಸಿದ ಯಾವುದೇ ಹೊಣೆಗಾರಿಕೆಯನ್ನು ವರ್ಸೇ ನಿರಾಕರಿಸುತ್ತದೆ.

13.6 ವೇದಿಕೆಯ ಬಳಕೆ ಅಥವಾ ಫಲಿತಾಂಶಗಳು ನಿಖರವಾದ ಸಮಯೋಚಿತ, ವಿಶ್ವಾಸಾರ್ಹ, ತಡೆರಹಿತ ಅಥವಾ ದೋಷಗಳಿಲ್ಲದ ಯಾವುದೇ ಗ್ಯಾರಂಟಿಗಳು, ಪ್ರಾತಿನಿಧ್ಯಗಳು ಅಥವಾ ವಾರಂಟಿಗಳನ್ನು ವರ್ಸೇ ಮಾಡುವುದಿಲ್ಲ. ಪೂರ್ವ ಸೂಚನೆ ಇಲ್ಲದೆ, ವರ್ಸೇ ಯಾವುದೇ ಭಾಗ ಅಥವಾ ಎಲ್ಲಾ ವೇದಿಕೆಗಳು ಅಥವಾ ನಿಮ್ಮ ವೇದಿಕೆಯ ಬಳಕೆಯನ್ನು ಮಾರ್ಪಡಿಸಬಹುದು, ಅಮಾನತುಗೊಳಿಸಬಹುದು ಅಥವಾ ಸ್ಥಗಿತಗೊಳಿಸಬಹುದು. ಅಂತಹ ಸಂದರ್ಭದಲ್ಲಿ ವರ್ಸೇ ನಿಮಗೆ ಅಥವಾ ಯಾವುದೇ ಮೂರನೇ ವ್ಯಕ್ತಿಗೆ ಹೊಣೆಗಾರನಾಗುವುದಿಲ್ಲ.

14. ಜಾಹೀರಾತುಗಳು ಮತ್ತು ಮೂರನೇ ಪಾರ್ಟಿಯ ವಿಷಯ

14.1. ವೇದಿಕೆಯು ವರ್ಸೇಯ ಮಾಲೀಕತ್ವ ಅಥವಾ ನಿಯಂತ್ರಣದಲ್ಲಿಲ್ಲದ ಮೂರನೇ ವ್ಯಕ್ತಿಯ ವಿಷಯ ಮತ್ತು/ಅಥವಾ ವೆಬ್ ಸೈಟ್ ಗಳಿಗೆ ಪ್ರವೇಶ ಒದಗಿಸಬಹುದು.

14.2. ನೀವು ಈ ವೇದಿಕೆಯ ಬಳಕೆಯ ಮೂಲಕ ಜಾಹೀರಾತು ಸ್ವೀಕರಿಸಲು ಒಪ್ಪಿಕೊಂಡಿದ್ದೀರಿ ಮತ್ತು ಖಾತ್ರಿಪಡಿಸಿದ್ದೀರಿ.

14.3. ವೇದಿಕೆಯು ಮೂರನೇ ವ್ಯಕ್ತಿಗೆ ಆಟ, ರಸಪ್ರಶ್ನೆ ಮತ್ತು ಕೌಶಲ್ಯದ ಅಗತ್ಯತೆಯಿರುವ ಇತರ ಚಟುವಟಿಕೆಗಳಿಗೆ ಪ್ರವೇಶವನ್ನು ಒದಗಿಸಬಹುದು, ಇದಕ್ಕಾಗಿ ಸಂಬಂಧಿಸಿದ ಮೂರನೇ ವ್ಯಕ್ತಿಯಿಂದ ಬಹುಮಾನಗಳನ್ನು ನೀಡಬಹುದು. ವರ್ಸೇ ಈ ಮೂರನೇ ವ್ಯಕ್ತಿಯ ಆಟಗಳು ಅಥವಾ ಇತರ ಚಟುವಟಿಕೆಗಳನ್ನು ಹೊಂದಿರುವುದಿಲ್ಲ ಅಥವಾ ನಿಯಂತ್ರಿಸುವುದಿಲ್ಲ ಮತ್ತು ಫಲಿತಾಂಶ ಘೋಷಿಸಲು ಅಥವಾ ಬಹುಮಾನಗಳನ್ನು ನೀಡಲು ಯಾವುದೇ ಹೊಣೆಗಾರಿಕೆಯನ್ನು ನಿಯಂತ್ರಿಸುವುದಿಲ್ಲ ಇಲ್ಲವೇ ಕ್ರಮ ಕೈಗೊಳ್ಳುವುದಿಲ್ಲ.

14.4. ವರ್ಸೇಯು ಮೂರನೇ ವ್ಯಕ್ತಿಯ ಟೆಕ್ಸ್ಟ್ ಗಳು, ಗ್ರಾಫಿಕ್ಸ್, ಬಳಕೆದಾರ ಇಂಟರ್ ಫೇಸ್ ಗಳು, ದೃಶ್ಯ ಇಂಟರ್ ಫೇಸ್ ಗಳು, ಫೋಟೋಗ್ರಾಫ್ಸ್, ಟ್ರೇಡ್ ಮಾರ್ಕ್ ಗಳು, ಲೋಗೋಗಳು, ಧ್ವನಿಗಳು, ಸಂಗೀತ ಮತ್ತು ಕಲಾಕೃತಿಗಳು ಅಥವಾ ಅಪ್ಲಿಕೇಷನ್ ಗಳು, ಸೇವೆಗಳು, ಜಾಹೀರಾತುಗಳು, ಮತ್ತು / ಅಥವಾ ಲಿಂಕ್ ಗಳನ್ನು ಒಳಗೊಂಡಂತೆ ಆದರೆ ಸೀಮಿತವಾಗಿರದ ಯಾವುದೇ ಮೂರನೇ ವ್ಯಕ್ತಿಯ ವೇದಿಕೆಯಲ್ಲಿನ ವಿಷಯಗಳಿಗೆ ವರ್ಸೇ ಹೊಣೆಗಾರನಾಗುವುದಿಲ್ಲ.

14.5. ವೇದಿಕೆಯಲ್ಲಿ ನೀವೊಂದು ವೇಳೆ ಮೂರನೇ ವ್ಯಕ್ತಿಯ ವಿಷಯ ಅಥವಾ ಅವರ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ನೀವು ಯಾವುದೇ ದೂರುಗಳು ಅಥವಾ ಕಾಳಜಿಗಳನ್ನು ಹೊಂದಿದ್ದರೆ, ದೂರುಗಳನ್ನು ಸಲ್ಲಿಸಲು (ಲಿಂಕ್ ಸೇರಿಸಿ) ಮೆಕ್ಯಾನಿಸಂ ನಲ್ಲಿ ಉಲ್ಲೇಖಿಸಲಾದ ಕುಂದುಕೊರತೆ ಪರಿಹಾರ ಕಾರ್ಯವಿಧಾನದ ಮೂಲಕ ನಿಮ್ಮ ದೂರುಗಳನ್ನು ವರದಿ ಮಾಡಲು ನೀವು ಒಪ್ಪಿರುತ್ತೀರಿ ಮತ್ತು ವರ್ಸೇಯು ಅದರ ಕುಂದುಕೊರತೆ ಪರಿಹಾರ ಕಾರ್ಯವಿಧಾನ ಮತ್ತು ಅದಕ್ಕೆ ಅನ್ವಯಗೊಳ್ಳುವ ಕಾನೂನಿಗೆ ಅನುಸಾರವಾಗಿ ನಿಮ್ಮ ದೂರನ್ನು ಪರಿಹರಿಸಲು ಪ್ರಯತ್ನಿಸುತ್ತದೆ.

14.6. ನೀವು ಯಾವುದೇ ವಾಣಿಜ್ಯ ಉದ್ಯಮಕ್ಕಾಗಿ ಇತರ ಯಾವುದೇ ಕಂಪ್ಯೂಟರ್, ಸರ್ವರ್, ವೆಬ್ ಸೈಟ್ ಅಥವಾ ಇತರ ಮಾಧ್ಯಮಕ್ಕೆ ಯಾವುದೇ ರೀತಿಯಲ್ಲಿ (“ಪ್ರತಿಬಿಂಬಿಸುವುದು” ಸೇರಿದಂತೆ) ಪುನರುತ್ಪಾದನೆ, ಮರುಪ್ರಕಟಣೆ, ಅಪ್ ಲೋಡ್, ಪೋಸ್ಟ್, ಸಾರ್ವಜನಿಕವಾಗಿ ಪ್ರದರ್ಶಿಸುವುದು, ಎನ್ ಕೋಡ್ ಮಾಡುವುದು, ಅನುವಾದಿಸುವುದು, ರವಾನಿಸುವುದು, ಡೌನ್ ಲೋಡ್ ಮಾಡುವುದು ಅಥವಾ ವಿತರಿಸುವ ಹಾಗೂ ಪ್ರಕಟಿಸುವ ಕೆಲಸ ಮಾಡಬಾರದು. ವರ್ಸೇಯು ಇಂತಹ ಯಾವುದೇ ಉಲ್ಲಂಘನೆಯ ಸಂದರ್ಭದಲ್ಲಿ ಅಗತ್ಯ ಕ್ರಮ ತೆಗೆದುಕೊಳ್ಳಲು ಮತ್ತು ಹಾನಿಯ ಮೊತ್ತವನ್ನು ಪಡೆಯಲು ಎಲ್ಲಾ ಹಕ್ಕುಗಳನ್ನು ಹೊಂದಿರುತ್ತದೆ. ಇಂತಹ ಕ್ರಮಗಳಲ್ಲಿ ನಿಮ್ಮ ಖಾತೆಯನ್ನು ಅಳಿಸುವ ಮೂಲಕ ವೇದಿಕೆ ಯನ್ನು ಬಳಸಲು ನಿಮ್ಮ ಪ್ರವೇಶವನ್ನು ಕೊನೆಗೊಳಿಸುವ ಹಕ್ಕನ್ನು ಒಳಗೊಂಡಿರುತ್ತದೆ.

14.7. ನೀವು ಸ್ಪಷ್ಟ ಅನುಮತಿಯ ಮೇರೆಗೆ ವೇದಿಕೆಯ ಬಗ್ಗೆ ಸಾಮಾನ್ಯ ಮಾಹಿತಿ ಬಳಸಬಹುದು. 1) ಯಾವುದೇ ಸ್ವಾಮ್ಯದ ದಾಖಲೆಗಳ ಎಲ್ಲಾ ಪ್ರತಿಗಳಿಂದ ಸೂಚನಾ ಭಾಷೆಗಳನ್ನು ತೆಗೆಯಬಾರದು. 2) ಅಂತಹ ವಿಷಯನ್ನು ನಿಮ್ಮ ವೈಯಕ್ತಿಕ, ವಾಣಿಜ್ಯೇತರ ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಬಳಸಿಕೊಳ್ಳದಿದ್ದರೆ, ಸ್ಪಷ್ಟವಾಗಿ ಅನುಮತಿಸಲಾದ ಪ್ಲಾಟ್ ಫಾರ್ಮ್ ಕುರಿತು ಸಾಮಾನ್ಯ ಮಾಹಿತಿಯನ್ನು ನೀವು ಬಳಸಬಹುದಾಗಿದೆ. ಒಪ್ಪಂದದ ಮೂಲಕ ಮತ್ತು ಅಂತಹ ವಿಷಯವನ್ನು ಯಾವುದೇ ನೆಟ್ ವರ್ಕ್ ಮಾಡಿದ ಕಂಪ್ಯೂಟರ್ ನಲ್ಲಿ ನಕಲು ಮಾಡಬೇಡಿ ಅಥವಾ ಪೋಸ್ಟ್ ಮಾಡಬೇಡಿ ಅಥವಾ ಯಾವುದೇ ಮಾಧ್ಯಮದಲ್ಲಿ ಪ್ರಸಾರ ಮಾಡಬೇಡಿ. ಹಾಗೂ 3) ಅಂತಹ ಯಾವುದೇ ವಿಷಯಗಳಿಗೆ ಮಾರ್ಪಾಡು ಮಾಡಬೇಡಿ ಮತ್ತು 4) ಅಂತಹ ದಾಖಲೆಗಳಿಗೆ ಯಾವುದೇ ಹೆಚ್ಚುವರಿ ಪ್ರಾತಿನಿಧ್ಯಗಳು ಅಥವಾ ವಾರಂಟಿಗಳನ್ನು ಮಾಡಬೇಡಿ.

15. ವೇದಿಕೆಯ ಬಳಕೆ

15.1 ನೀವು ಜೋಶ್ ಮತ್ತು ವೇದಿಕೆಯು ಕೇವಲ ಸಹಾಯ ಒದಗಿಸುವ ಮಾಧ್ಯಮವಾಗಿದೆ ಮತ್ತು ವೇದಿಕೆಯಲ್ಲಿ ಯಾವುದೇ ವಹಿವಾಟುಗಳನ್ನು ಯಾವುದೇ ರೀತಿಯಲ್ಲಿ ನಿಯಂತ್ರಿಸಲು ಅಥವಾ ಪಕ್ಷವಾಗಿರಲು ಸಾಧ್ಯವಿಲ್ಲ ಎಂಬುದನ್ನು ನೀವು ಒಪ್ಪುತ್ತೀರಿ ಅಥವಾ ಅಂಗೀಕರಿಸುತ್ತೀರಿ. ಅದರಂತೆ, ಪ್ಲಾಟ್ ಫಾರ್ಮ್ ನಲ್ಲಿನ ಉತ್ಪನ್ನಗಳ ಮಾರಾಟದ ಒಪ್ಪಂದವು ಕಟ್ಟುನಿಟ್ಟಾಗಿ ನೇರವಾಗಿ ನಿಮ್ಮ ಮತ್ತು ಪ್ಲಾಟ್ ಫಾರ್ಮ್ ನಲ್ಲಿರುವ ಮಾರಾಟಗಾರರು / ವ್ಯಾಪಾರಿಗಳ ನಡುವೆ ಮಾತ್ರ ಇರುತ್ತದೆ.

ನೀವು ಯಾವುದೇ ಅಕ್ರಮ ಅಥವಾ ಅನಧಿಕೃತ ಉದ್ದೇಶಗಳಿಗಾಗಿ ವೇದಿಕೆಯಲ್ಲಿ ಲಭ್ಯವಿರುವ ಯಾವುದೇ ಉತ್ಪನ್ನಗಳನ್ನು ಬಳಸುವಂತಿಲ್ಲ.

ಈ ವೇದಿಕೆಯ ಯಾವುದೇ ಮೋಸದ ಬಳಕೆ ಅಥವಾ ವೇದಿಕೆಯಿಂದ ಉತ್ಪನ್ನಗಳನ್ನು ಖರೀದಿಸಲು ಅನ್ವಯಿಸುವ ಪಾವತಿ ವಿಧಾನವನ್ನು ಬಳಸಿದರೆ, ಅದು ನಿಮ್ಮ ಕ್ರಿಯೆ /ನಿಷ್ಕ್ರಿಯತೆಯ ಪರಿಣಾಮವಾಗಿ ಜೋಶ್ ಗೆ ಯಾವುದೇ ಹಣಕಾಸಿನ ನಷ್ಟವನ್ನು ಉಂಟುಮಾಡುತ್ತದೆ. ಮೇಲಿನವುಗಳಿಗೆ ಯಾವುದೇ ಪೂರ್ವಾಗ್ರಹವಿಲ್ಲದೇ, ಈ ವೇದಿಕೆ ಮತ್ತು/ಅಥವಾ ಪ್ಲಾಟ್ ಫಾರ್ಮ್ನ ಮೋಸದ ಬಳಕೆಗಾಗಿ ಅಥವಾ ಈ ನಿಯಮಗಳ ಉಲ್ಲಂಘನೆಯಲ್ಲಿ ಯಾವುದೇ ಇತರ ಕಾನೂನುಬಾಹಿರ ಕ್ರಿಯೆ ಅಥವಾ ಲೋಪಕ್ಕಾಗಿ ನಿಮ್ಮ ವಿರುದ್ದ ಕಾನೂನು ಕ್ರಮಗಳನ್ನು ಪ್ರಾರಂಭಿಸುವ ಹಕ್ಕನ್ನು ಜೋಶ್ ಕಾಯ್ದಿರಿಸಿಕೊಂಡಿದೆ.

ವೇದಿಕೆಯಲ್ಲಿ ಪ್ರಾತಿನಿಧಿಸುವ ಚಿತ್ರಗಳು ಮತ್ತು ಚಿತ್ರಣಗಳು ಜಾಹೀರಾತು ಉದ್ದೇಶಕ್ಕಾಗಿ ರಚಿತಗೊಂಡಿರಬಹುದಾಗಿದೆ.

ವಿಷಯಗಳ ಪರಿಶೀಲನೆ, ಉತ್ಪನ್ನದ ವಿವರಣೆ ಹಾಗೂ ಇತರ ಸಂಬಂಧಿತ ಮಾಹಿತಿಗಳ ಪರಿಶೀಲನೆ ನಿಮ್ಮ ಜವಾಬ್ದಾರಿಯಾಗಿರುತ್ತದೆ; ಮತ್ತು

ನಿಮ್ಮ ಒಪ್ಪಂದವು ವೇದಿಕೆಯಲ್ಲಿ ಮಾರಾಟಗಾರರು/ ವ್ಯಾಪಾರಿಗಳೊಂದಿಗಿನದ್ದಾಗಿದೆ. ಮತ್ತು ನೀವು ಆರ್ಡರ್ ಮಾಡಿದ ಉತ್ಪನ್ನ(ಗಳನ್ನು) ನಿಮ್ಮ ಆಂತರಿಕ/ ವೈಯಕ್ತಿಕ ಉದ್ದೇಶಕ್ಕಾಗಿ ಖರೀದಿಸಲಾಗಿದೆಯೇ ಹೊರತು ಮರುಮಾರಾಟ ಅಥವಾ ವ್ಯಾಪಾರ ಉದ್ಧೇಶಗಳಿಗಾಗಿ ಅಲ್ಲ ಎಂದು ನೀವು ಖಚಿತಪಡಿಸುತ್ತೀರಿ. ವೆಬ್ ಸೈಟ್ ನಲ್ಲಿ ನೀವು ಆದೇಶಿಸಿದ ಉತ್ಪನ್ನಗಳ ಮೇಲಿನ ಉದ್ದೇಶವನ್ನು ತಿಳಿಸುವ ನಿಮ್ಮ ಪರವಾಗಿ ಯಾವುದೇ ಸರ್ಕಾರಿ ಪ್ರಾಧಿಕಾರಕ್ಕೆ ಘೋಷಣೆಯನ್ನು ಘೋಷಿಸಲು ಮತ್ತು ಒದಗಿಸಲು ನೀವು ಜೋಶ್ ಗೆ ಅಧಿಕಾರ ನೀಡುತ್ತೀರಿ.

15.2 ನಿಷೇಧಿತ ಬಳಕೆಗಳು: ಜೋಶ್ ವೇದಿಕೆಯಲ್ಲಿ ಯಾವುದೇ ನಿಷೇಧಿತ ವಸ್ತುಗಳನ್ನು ಮಾರಾಟ ಮಾಡಲು ನಾವು ವ್ಯಾಪಾರಿಗಳನ್ನು ನಿರ್ಬಂಧಿಸುವ ವ್ಯವಸ್ಥೆಯನ್ನು ಜೋಶ್ ನಿರ್ಮಿಸಿದೆ. ಆದ್ದಾಗ್ಯೂ ವ್ಯಾಪಾರಿಯಿಂದ ಪಟ್ಟಿ ಮಾಡಲ್ಪಟ್ಟಿರುವ ಅನಿಶ್ಚಿತ ಸಂದರ್ಭದಲ್ಲಿ ವೇದಿಕೆಯಲ್ಲಿ ನೀವು ಈ ಕೆಳಗಿನ ಉತ್ಪನ್ನಗಳನ್ನು ಖರೀದಿಸುವುದಿಲ್ಲ ಎಂದು ಖರೀದಿದಾರರಾಗಿ ಖಚಿತಪಡಿಸಿಕೊಳ್ಳುವುದು ಕೂಡ ನಿಮ್ಮ ಜವಾಬ್ದಾರಿಯಾಗಿದೆ ಎಂದು ನೀವು ತಿಳಿದುಕೊಂಡಿದ್ದೀರಿ ಮತ್ತು ಅಂಗೀಕರಿಸಿದ್ದೀರಿ.

ವಯಸ್ಕರು ಬಳಸುವ ಉತ್ಪನ್ನಗಳು ಮತ್ತು ಅಶ್ಲೀಲ ವಸ್ತುಗಳು (ಮಕ್ಕಳ ಅಶ್ಲೀಲತೆ ಸೇರಿದಂತೆ) ಯಾವುದೇ ರೂಪದಲ್ಲಿ (ಮುದ್ರಣ, ಆಡಿಯೋ/ ವೀಡಿಯೋ, ಮಲ್ಟಿಮೀಡಿಯಾ ಸಂದೇಶಗಳು, ಚಿತ್ರಗಳು, ಛಾಯಾಚಿತ್ರಗಳು, ಇತ್ಯಾದಿ)

  1. ಮದ್ಯ;
  2. ಪ್ರಾಣಿಗಳು ಮತ್ತು ವನ್ಯ ಜೀವಿ ಉತ್ಪನ್ನಗಳು – ಜೀವಂತ ಪ್ರಾಣಿಗಳು, ಮೌಂಟೆಡ್ ಸ್ಪೆಸಿಮನ್ ಗಳು, ಮತ್ತು ದಂತಗಳು;
  3. ಐಪಿ ಉಲ್ಲಂಘಿಸುವ ಕಲಾಕೃತಿಗಳು, ನಕಲಿ ಸರಕುಗಳು ಮತ್ತು ಸೇವೆಗಳು (ಕೆಳಗೆ ವಿವರಿಸಿದಂತೆ);
  4. ಕಚ್ಛಾ ತೈಲ
  5. ಕಾನೂನಾತ್ಮಕವಾಗಿ ನಿಷೇಧಿಸಲ್ಪಟ್ಟಿರುವ ಎಲೆಕ್ಟ್ರಾನಿಕ್ ನಿಗಾ ಉಪಕರಣಗಳು;
  6. ನಿಷೇಧಿತ ದೇಶಗಳಿಂದ ನಿರ್ಬಂಧಿತ ಸರಕುಗಳು;
  7. ಅಪಾಯದಂಚಿನಲ್ಲಿರುವ ಪ್ರಭೇದದ ಪ್ರಾಣಿಗಳು ಮತ್ತು ಗಿಡಗಳು, ಜೀವಂತ ಅಥವಾ ನಿರ್ಜೀವ ಸ್ಥಿತಿಯ
  8. ಕಾನೂನಿನಿಂದ ಮರುಮಾರಾಟಕ್ಕೆ ಹೊರತಾಗಿರುವ ಈವೆಂಟ್ ಟಿಕೆಟ್ ಗಳು
  9. ಬಂದೂಕುಗಳು, ಶಸ್ತ್ರಾಸ್ತ್ರಗಳು, ಮತ್ತು ಚೂರಿಗಳು - ಪೆಪ್ಪರ್ ಸ್ಪ್ರೇ, ರೆಪ್ಲಿಕಾಗಳು ಮತ್ತು ಸ್ಟನ್ ಗನ್ ಗಳು;
  10. ಯಾವುದೇ ಫೈನಾನ್ಷಿಯಲ್ ಸೇವೆಗಳು;
  11. ಅಗತ್ಯ ಪರವಾನಗಿ ಹೊಂದಿಲ್ಲದಿರುವ ಆಹಾರ ಮತ್ತು ಆರೋಗ್ಯ ಕಾಳಜಿ ವಸ್ತುಗಳು
  12. ಗ್ರೇ ಮಾರ್ಕೆಟ್ ಉತ್ಪನ್ನಗಳು
  13. ಸರ್ಕಾರಿ ಸಂಬಂಧಿತ ವಸ್ತುಗಳು / ಸಲಕರಣೆಗಳು (ಪೊಲೀಸರು ಬಳಸುವ ಕಂಪನಾಂಕಗಳೊಂದಿಗೆ ವೈರ್ ಲೆಸ್ ಉಪಕರಣಗಳು, ಸರ್ಕಾರಿ ಅಧಿಕಾರಿಗಳ ಸಮವಸ್ತ್ರಗಳು ಸೇರಿದಂತೆ ಆದರೆ ಪೊಲೀಸರು/ ಭಾರತೀಯ ಸೇನೆಯ ಬಳಕೆಗೆ ಸೀಮಿತವಾಗಿಲ್ಲ, ಇತ್ಯಾದಿ)
  14. ಪಾಸ್ ಪೋರ್ಟ್ ಇತ್ಯಾದಿ ಸರ್ಕಾರಿ ಜಾರಿಗೊಳಿಸುವ ದಾಖಲೆಗಳು;
  15. ಅಪಾಯಕಾರಿ, ನಿರ್ಬಂಧಿತ, ಅಥವಾ ನಿಯಂತ್ರಕ ಸಾಮಗ್ರಿಗಳು – ಉದಾಹರಣೆಗೆ ಬ್ಯಾಟರಿಗಳು, ಸಿಡಿಮದ್ದುಗಳು, ಮತ್ತು ರೆಫ್ರಿಜರೆಂಟ್ಸ್;
  16. ಮಾನವ ಅವಶೇಷಗಳು ಮತ್ತು ದೇಹದ ಭಾಗಗಳು;
  17. ಯಾವುದೇ ರೂಪದ ಐಪಿ (ಸಂಗೀತ, ಚಲನಚಿತ್ರಗಳು, ಪುಸ್ತಕಗಳು, ವಿನ್ಯಾಸಗಳು, ಸೇರಿದಂತೆ ಆದರೆ ಸೀಮಿತವಲ್ಲದ)
  18. ಇನ್ ವಾಯ್ಸ್ ಗಳು ಮತ್ತು ರಶೀತಿಗಳು (ಬ್ಯಾಂಕ್ ಮತ್ತು ಪೂರ್ವ ತುಂಬಿದ ರಶೀತಿಗಳು ಸೇರಿದಂತೆ)
  19. ದ್ರವೀಕರಿಸಿದ ಪೆಟ್ರೋಲಿಯಂ ಗ್ಯಾಸ್ ಸಿಲಿಂಡರ್;
  20. ಲಾಟರಿ ಟಿಕೆಟ್ಸ್
  21. ಮೈಲಿಂಗ್ ಪಟ್ಟಿ ಮತ್ತು ವೈಯಕ್ತಿಕ ಮಾಹಿತಿ;
  22. ಭಾರತದ ಬಾಹ್ಯ ಗಡಿಗಳನ್ನು ತಪ್ಪಾಗಿ ತೋರಿಸಲಾದ ಐಮ್ಯಾಪ್ ಗಳು ಮತ್ತು ಸಾಹಿತ್ಯ.

15.3 ನೋಂದಾಯಿತ ವೈದ್ಯಕೀಯ ವೈದ್ಯರ ಪ್ರಿಸ್ಕ್ರಿಪ್ಷನ್ ಅಗತ್ಯವಿರುವ ಔಷಧಿಗಳು, ಮತ್ತು ಡ್ರಗ್ಸ್ ಪ್ಯಾರಾಫರ್ನಾಲಿಯಾ;

  1. 1985 ರ ನಾರ್ಕೊಟಿಕ್ ಡ್ರಗ್ಸ್ ಮತ್ತು ಸೈಕೋಟ್ರಾಪಿಕ್ ಸಬ್ ಸ್ಟಾನ್ಸ್ ಕಾಯ್ದೆಯಡಿಯಲಲ್ಲಿ ವ್ಯಾಖ್ಯಾನಿಸಲಾದ ನಾರ್ಕೊಟಿಕ್ ಡ್ರಗ್ಸ್ ಮತ್ತು ಸೈಕೋಟ್ರಾಪಿಕ್ ಸಬ್ ಸ್ಟಾನ್ಸ್ ಗಳು.
  2. ಧರ್ಮ, ಜನಾಂಗ, ಜಾತಿ, ಲಿಂಗ ಅಥವಾ ಹುಟ್ಟಿದ ಸ್ಥಳ, ಸಮುದಾಯ, ಜನಾಂಗೀಯತೆ ಅಥವಾ ಸಂಸ್ಕೃತಿಯ ಆಧಾರದ ಮೇಲೆ ಜನರ ಭಾವನೆಗಳಿಗೆ ಧಕ್ಕೆ ತರುವಂತಹ ಆಕ್ರಮಣಕಾರಿ ವಸ್ತು.
  3. ವಿಕಿರಣ ಸೂಸುವ ವಸ್ತುಗಳು
  4. ಸರೀಸೃಪಗಳ ಚರ್ಮ
  5. 1994 ರ ಪ್ರೀ ಕನ್ಷೆಪ್ಷನ್ (ಗರ್ಭಾವಸ್ಥೆ ಪೂರ್ವ) ಮತ್ತು ಪ್ರೀ ನಾಟಲ್ (ಪ್ರಸವ ಪೂರ್ವ) ಡಯಾಗ್ನಸ್ಟಿಕ್ ತಂತ್ರಜ್ಞಾನ ಕಾಯ್ದೆಯಡಿಯ ಲಿಂಗ ನಿರ್ಧಾರಕ ಕಿಟ್
  6. ಷೇರುಗಳು ಮತ್ತು ಭದ್ರತೆಗಳು
  7. ರಿಯಲ್ ಎಸ್ಟೇಟ್
  8. ವಿಕಿರಣ ಸೂಸುವ ವಸ್ತುಗಳು
  9. ಕಬಳಿಸಿದ ಆಸ್ತಿ
  10. ತಂಬಾಕು
  11. ಅನ್ವಯಿತ ಕಾನೂನಿಗನುಗುಣವಾಗಿ ಇತರ ಯಾವುದೇ ನಿಷೇಧಿತ ಅಥವಾ ಮಂಜೂರಾದ ವಸ್ತುಗಳು ಅಥವಾ ಸೇವೆಗಳು; ಮತ್ತು
  12. ಜೋಶ್ ನಿಂದ ಅಸೂಕ್ತ ಎಂದು ಪರಿಗಣಿಸಲ್ಪಟ್ಟ ಯಾವುದೇ ವಸ್ತುಗಳು

16. ಉತ್ಪನ್ನಗಳು

16.1 ವೇದಿಕೆಯು ಮಾರುಕಟ್ಟೆಯಾಗಿ ಕಾರ್ಯ ನಿರ್ವಹಿಸುತ್ತದೆ ಮತ್ತು ವೇದಿಕೆಯ ಬಳಕೆದಾರರಿಗೆ (“ಉತ್ಪನ್ನಗಳು”) ವಿವಿಧ ಉತ್ಪನ್ನಗಳನ್ನು (ಉತ್ಪನ್ನಗಳು ಮತ್ತು ಸೇವೆಗಳಿಗೆ ಪೂರಕವಾದ ಸೇವೆಗಳು ಸೇರಿದಂತೆ) ವೋಚರ್ ಗಳು ಮತ್ತು ಸೇವೆಗಳನ್ನು ಜಾಹೀರಾತು ಮಾಡಲು ಪ್ರದರ್ಶನ ಲಭ್ಯತೆಗಾಗಿ ಒಂದು ಆನ್ ಲೈನ್ ವೇದಿಕೆಯನ್ನು ಒದಗಿಸುತ್ತದೆ. ವೇದಿಕೆ ಕೇವಲ ಬಳಕೆದಾರರು ಮತ್ತು ವಿವಿಧ ಮಾರಾಟಗಾರರ ತೊಡಗಿಸಿಕೊಳ್ಳುವಿಕೆಯನ್ನು ಸುಗಮಗೊಳಿಸುತ್ತದೆ ಹಾಗೂ ಪ್ರಾಸಂಗಿಕ ಮತ್ತು ಅದಕ್ಕೆ ಪೂರಕವಾಗಿರುವ ಇತರ ಸೇವೆಗಳನ್ನು ಒದಗಿಸುತ್ತದೆ. ಹೆಚ್ಚುವರಿಯಾಗಿ, ಯಾವುದೇ ಸೂಚನೆಯಿಲ್ಲದೆ ಬಳಕೆದಾರರಿಗೆ ಯಾವುದೇ ಸಮಯದಲ್ಲಿ ನೀಡಲಾಗುವ ಸೇವೆಗಳನ್ನು ಮುಕ್ತಾಯಗೊಳಿಸುವ ಹಕ್ಕನ್ನು ವೇದಿಕೆ ತನ್ನಲ್ಲಿ ಕಾಯ್ದಿರಿಸಿಕೊಂಡಿದೆ.

16.2 ವೇದಿಕೆಯಲ್ಲಿ ಪ್ರದರ್ಶಿಸಲಾದ ಎಲ್ಲಾ ಉತ್ಪನ್ನಗಳು “ಇರುವಂತೆ” ಮತ್ತು “ಲಭ್ಯವಿರುವಂತೆ” ಇರುತ್ತವೆ. ಉತ್ಪನ್ನಗಳ ಚಿತ್ರಗಳು ಕೇವಲ ಉಲ್ಲೇಖಕ್ಕಾಗಿ ಮತ್ತು ನಿಜವಾದ ಉತ್ಪನ್ನವು ಪ್ರದರ್ಶಿಸಲಾದ ಚಿತ್ರಕ್ಕಿಂತ ಭಿನ್ನವಾಗಿರಬಹುದು. ಹಾಗಾಗಿ ಈ ಭಿನ್ನತೆಯಿಂದ ಉಂಟಾಗುವ ಯಾವುದೇ ಹೊಣೆಗಾರಿಕೆಗಳನ್ನು ವೇದಿಕೆ ನಿರಾಕರಿಸುತ್ತದೆ. ವೇದಿಕೆಯಿಂದ ನೀವು ಖರೀದಿಸಿದ ಅಥವಾ ಪಡೆದ ಯಾವುದೇ ಉತ್ಪನ್ನಗಳು, ಮಾಹಿತಿ ಅಥವಾ ಇತರ ವಸ್ತುಗಳ ಗುಣಮಟ್ಟಗಳನ್ನು ಪೂರೈಸುತ್ತದೆ ಅಥವಾ ಸೇವೆಗಳಲ್ಲಿನ ಯಾವುದೇ ದೋಷಗಳನ್ನು ಸರಿಪಡಿಸಲಾಗುವುದು ಎಂದು ಜೋಶ್ ಯಾವುದೇ ಭರವಸೆ ನೀಡುವುದಿಲ್ಲ. ಇದಕ್ಕೆ ವ್ಯಾಪಾರಿಗಳು ಏಕಮಾತ್ರ ಜವಾಬ್ದಾರರಾಗಿರುತ್ತಾರೆ.

16.3. ವೇದಿಕೆಯು ಬಳಕೆದಾರರ ಆದೇಶದಂತೆ ಅಂತಿಮ ಉತ್ಪನ್ನದ ಮುಕ್ತಾಯ ಮತ್ತು ನೋಟದ ನಿಖರತೆಯ ಯಾವುದೇ ಖಾತರಿಯನ್ನು ನಿರಾಕರಿಸುತ್ತದೆ. ವೇದಿಕೆ ಮೂಲಕ ನೀವು ಖರೀದಿಸಿದ ಉತ್ಪನ್ನಗಳು, ಸೇವೆಗಳು, ಮಾಹಿತಿ ಅಥವಾ ಇತರ ವಸ್ತುಗಳ ಗುಣಮಟ್ಟವನ್ನು ಜೋಶ್ ಅನುಮೋದಿಸುವುದಿಲ್ಲ ಅಥವಾ ಬೆಂಬಲಿಸುವುದಿಲ್ಲ ಮತ್ತು ಆಯಾ ಮಾರಾಟಗಾರರ ಏಕಮಾತ್ರ ಜವಾಬ್ದಾರಿಯಾಗಿದೆ. ಆಯಾ ಬ್ರಾಂಡ್ ಗಳ ಗಾತ್ರದ ಚಾರ್ಟ್ ಗಳಲ್ಲಿನ ಉತ್ಪನ್ನದ ವ್ಯತ್ಯಾಸದ ಲಭ್ಯತೆಯಿಂದಾಗಿ ಉಂಟಾಗುವ ಮಿತಿಗಳ ಕಾರಣದಿಂದಾಗಿ ಮರ್ಚಂಡೈಸ್ ಬ್ರಾಂಡ್, ಗಾತ್ರ, ಬಣ್ಣ ಇತ್ಯಾದಿಗಳಂತಹ ನಿಮ್ಮ ಆರ್ಡರ್ ನ ಕೆಲವು ಅಂಶಗಳಿಗೆ ಕೆಲವೊಮ್ಮೆ ಬದಲಾವಣೆಗಳು ಅಗತ್ಯವಾಗಬಹುದು.

16.4. ಜೋಶ್ ಯಾವುದೇ ವ್ಯಕ್ತಿ, ಭೌಗೋಳಿಕ ಪ್ರದೇಶ ಅಥವಾ ನ್ಯಾಯವ್ಯಾಪ್ತಿಗೆ ವೇದಿಕೆ ಮತ್ತು /ಅಥವಾ ವೇ ಸೀಮಿತಗೊಳಿಸುವ ಹಕ್ಕನ್ನು ಜೋಶ್ ಕಾಯ್ದಿರಿಸಿದೆ. ಪ್ರಕರಣಗಳನ್ನು ನೋಡಿಕೊಂಡು ಅದರ ಆಧಾರದ ಮೇಲೆ ಜೋಶ್ ಹಕ್ಕನ್ನು ಚಲಾಯಿಸಬಹುದು. ಉತ್ಪನ್ನಗಳ ಎಲ್ಲಾ ವಿವರಣೆಗಳು ಅಥವಾ ಉತ್ಪನ್ನದ ಬೆಲೆಗಳು ಜೋಶ್ ನ ಸ್ವವಿವೇಚನೆಯಲ್ಲಿ ಯಾವುದೇ ಸೂಚನೆ ಇಲ್ಲದೇ ಬದಲಾವಣೆಗೆ ಒಳಪಟ್ಟಿರುತ್ತದೆ. ಯಾವುದೇ ಸಮಯದಲ್ಲಿ ಯಾವುದೇ ಉತ್ಪನ್ನವನ್ನು ರದ್ದುಗೊಳಿಸುವ ಹಕ್ಕು ನಮಗಿದೆ. ಈ ವೇದಿಕೆಯಲ್ಲಿ ಮಾಡಿದ ಯಾವುದೇ ಉತ್ಪನ್ನಕ್ಕೆ ಯಾವುದೇ ಕೊಡುಗೆಯನ್ನು ನಿಷೇಧಿಸಿದರೆ ಅದು ಅನೂರ್ಜಿತವಾಗಿರುತ್ತದೆ.

16.5. ಎಲ್ಲಾ ಬೆಲೆಗಳು ಸರಕು ಮತ್ತು ಸೇವಾ ತೆರಿಗೆ (“ಜಿಎಸ್ ಟಿ”), ಸುಂಕಗಳು ಮತ್ತು ಕರಗಳನ್ನು ಒಳಗೊಂಡಿರುತ್ತದೆ. ಬೇರೆ ನಮೂದಿಸದ ಹೊರತು. ನಮ್ಮಿಂದ ಉತ್ಪನ್ನಗಳ ಖರೀದಿಗೆ ಸಂಬಂಧಿಸಿದ ಎಲ್ಲಾ ಶುಲ್ಕಗಳು /ವೆಚ್ಚಗಳು/ಶುಲ್ಕಗಳ ಪಾವತಿಗೆ ನೀವು ಜವಾಬ್ದಾರರಾಗಿರುತ್ತೀರಿ ಹಾಗೂ ಜಿಎಸ್ ಟಿ , ಸುಂಕಗಳು ಕರಗಳು ಇತ್ಯಾದಿಗೆ ಸೀಮಿತವಾಗದೆ ಯಾವುದಾದರೂ ತೆರಿಗೆ ಮತ್ತು ಎಲ್ಲಾ ಅನ್ವಯವಾಗುವ ತೆರಿಗೆಗಳನ್ನು ಭರಿಸಲು ನೀವು ಒಪ್ಪುತ್ತೀರಿ.

16.6. ಜೋಶ್ ಯಾವುದೇ ಸಮಯದಲ್ಲಿ ಸೂಚನೆ ನೀಡದೆ ಸೇವೆಗಳು, ವೇದಿಕೆ ಮತ್ತು/ಅಥವಾ ಅದರ ಯಾವುದೇ ಭಾಗ ಅಥವಾ ವಿಷಯವನ್ನು ಮಾರ್ಪಡಿಸುವ ಅಥವಾ ನಿಲ್ಲಿಸುವ ಹಕ್ಕನ್ನು ಕಾಯ್ದಿರಿಸಿಕೊಂಡಿದೆ. ವೇದಿಕೆಯ ಯಾವುದೇ ಮಾರ್ಪಾಡು, ಬೆಲೆ ಬದಲಾವಣೆ, ಅಮಾನತು ಅಥವಾ ಸ್ಥಗಿತಗೊಳಿಸುವಿಕೆಗಾಗಿ ಜೋಶ್ ನಿಮಗೆ ಅಥವಾ ಯಾವುದೇ ಮೂರನೇ ವ್ಯಕ್ತಿಗೆ ಜವಾಬ್ದಾರನಾಗಿರುವುದಿಲ್ಲ.

17. ಪಾವತಿ, ಹಿಂದಿರಿಗುಸುವಿಕೆ ಮತ್ತು ವಿನಿಮಯ, ಡೆಲಿವರಿ

17.1 ನಮ್ಮ ವೇದಿಕೆಯಲ್ಲಿ ಉತ್ಪನ್ನಗಳನ್ನು ಬೆಲೆಗಳನ್ನು ವಿವರಿಸಲಾಗಿದೆ ಮತ್ತು ಉಲ್ಲೇಖದ ಮೂಲಕ ಈ ನಿಯಮಗಳಲ್ಲಿ ಅಳವಡಿಸಲಾಗಿದೆ. ಎಲ್ಲಾ ಬೆಲೆಗಳು ಭಾರತೀಯ ರೂಪಾಯಿ ಮೌಲ್ಯದಲ್ಲಿವೆ. ಬೆಲೆಗಳು, ಉತ್ಪನ್ನಗಳು ಮತ್ತು ಸೇವೆಗಳನ್ನು ಆಯಾ ಮಾರಾಟಗಾರರಿಂದ ನೀಡಲಾಗುತ್ತದೆ ಮತ್ತು ಬ್ರಾಂಡ್ ಮಾರ್ಗಸೂಚಿಗಳು ಅಥವಾ ಪ್ರತಿ ಮಾರಾಟಗಾರರಿಗೆ ಅನ್ವಯಿಸುವ ಇತರ ನಿಯಮಗಳು ಮತ್ತು ಷರತ್ತುಗಳಿಗುಣವಾಗಿ ಬದಲಾಗಬಹುದು. ಬಳಕೆದಾರರು ವಹಿವಾಟನ್ನು ಪ್ರಾರಂಭಿಸುವ ಮೂಲಕ, ಅನ್ವಯವಾಗುವ ಕಾನೂನುಗಳಿಂದ ಅನುಮತಿಸಬಹುದಾದ ಮತ್ತು ವೇದಿಕೆಯಿಂದ ಅಂಗೀಕರಿಸಬಹುದಾದಂತಹ ಪಾವತಿ ಸೌಲಭ್ಯಗಳನ್ನು ಬಳಸಿಕೊಂಡು ಉತ್ಪನ್ನಗಳನ್ನು ಖರೀದಿಸಲು ಮಾರಾಟಗಾರರೊಂದಿಗೆ ಕಾನೂನುಬದ್ಧವಾಗಿ ಬಂಧಿಸುವ ಮತ್ತು ಜಾರಿಗೊಳಿಸಬಹುದಾದ ಒಪ್ಪಂದಕ್ಕೆ ಬಳಕೆದಾರರು ಪ್ರವೇಶಿಸುತ್ತಿದ್ದಾರೆ.

17.2 ಎಲ್ಲಾ ಪಾವತಿ ಮತ್ತು ವಿತರಣೆ ಸಂಬಂಧಿತ ಷರತ್ತುಗಳು ಉತ್ಪನ್ನಗಳ ಮಾರಾಟಗಾರ ಮತ್ತು ಬಳಕೆದಾರರ ನಡುವೆ ಸೂಚಿಸಲಾದ ಒಪ್ಪಂದದ ಸಂಬಂಧಕ್ಕೆ ಅನುಗುಣವಾಗಿರುತ್ತದೆ ಮತ್ತು ವೇದಿಕೆ ಒದಗಿಸಿದ ಪಾವತಿ ಸೌಲಭ್ಯವನ್ನು ಉತ್ಪನ್ನದ ಬಳಕೆದಾರ ಮತ್ತು ಮಾರಾಟಗಾರನು ಸುಗಮವಾಗಿಸಲು ಬಳಸುವರು. ಬಳಕೆದಾರರು ಮಾಡಿದ ಖರೀದಿಯನ್ನು ಪೂರ್ಣಗೊಳಿಸುವುದು.

17.3 ಉತ್ಪನ್ನಗಳ ಹಿಂದಿರುಗಿಸುವಿಕೆ ಮತ್ತು ವಿನಿಮಯವು ನಿಮ್ಮ ಮಾರಾಟಗಾರರ ನಡುವೆ ಇರುತ್ತದೆ. ಮಾರಾಟಗಾರರಿಂದ ದೋಷಯುಕ್ತ ಮತ್ತು ತಪ್ಪಾಗಿ ವಿತರಿಸಲಾದ ಉತ್ಪನ್ನಗಳಿಗೆ ಮಾರಾಟಗಾರರ ಹಿಂದಿರುಗಿಸುವಿಕೆ ಮತ್ತು ವಿನಿಮಯ ನೀತಿಯು ಅನ್ವಯಿಸುತ್ತದೆ. ಯಾವುದೇ ದೋಷಯುಕ್ತ ಮತ್ತು ತಪ್ಪಾಗಿ ವಿತರಿಸಲಾದ ಉತ್ಪನ್ನಕ್ಕಾಗಿ ಜೋಶ್ ನಿಮಗೆ ಅಥವಾ ಇತರ ಯಾವುದೇ ಮೂರನೇ ವ್ಯಕ್ತಿಗಳಿಗೆ ಹೊಣೆಗಾರರಾಗಿರುವುದಿಲ್ಲ.

17.4 ವೇದಿಕೆಯಿಂದ ಖರೀದಿಸಲಾದ ಎಲ್ಲಾ ಉತ್ಪನ್ನಗಳನ್ನು ಮಾರಾಟಗಾರರಿಂದ ಲಾಜಿಸ್ಟಿಕ್ಸ್ ಪಾಲುದಾರರ ಮೂಲಕ ಅಥವಾ ಮಾರಾಟಗಾರರ ಮೂಲಕ ಪ್ರಮಾಣಿತ ಕೊರಿಯರ್ ಸೇವೆಗಳ ಮೂಲಕ ಬಳಕೆದಾರರಿಗೆ ತಲುಪಿಸಲಾಗುತ್ತದೆ. ಅನ್ವಯಿತ ಎಲ್ಲಾ ವಿತರಣೆಗಳನ್ನು ಉತ್ತಮ – ಪ್ರಯತ್ನದ ಆಧಾರದ ಮೇಲೆ ಮಾಡಲಾಗುತ್ತದೆ ಮತ್ತು ಮಾರಾಟಗಾರನು ಸೂಚಿಸಿದ ದಿನಾಂಕಗಳಲ್ಲಿ ಉತ್ಪನ್ನಗಳನ್ನು ತಲುಪಿಸಲು ಪ್ರಯತ್ನಿಸಿದರೆ ಆಗ, ಒಂದು ವೇಳೆ ವಿಳಂಬವಾದಲ್ಲಿ ಯಾವುದೇ ಹೊಣೆಗಾರಿಕೆ ಅಥವಾ ಕ್ಲೈಮ್ ಗಳನ್ನು ವೇದಿಕೆ ನಿರಾಕರಿಸುತ್ತದೆ.

17.5 ವೇದಿಕೆ/ಜೋಶ್ ಉತ್ಪನ್ನಗಳ ವಿತರಣೆಯಲ್ಲಿ ಉಂಟಾಗುವ ಯಾವುದೇ ವಿಳಂಬಕ್ಕೆ ಜವಾಬ್ದಾರರಾಗಿರುವುದಿಲ್ಲ. ಲಾಜಿಸ್ಟಿಕ್ಸ್ ಪಾಲುದಾರರು ತಪ್ಪಾಗಿ ನಿರ್ವಹಿಸುವುದರಿಂದ ಸಾಗಾಟವಾಗುತ್ತಿರುವ ಉತ್ಪನ್ನಕ್ಕೆ ಯಾವುದೇ ಹಾನಿ ಉಂಟಾಗಿದ್ದರೆ ಅದಕ್ಕೆ ವೇದಿಕೆ ಜವಾಬ್ದಾರನಾಗಿರುವುದಿಲ್ಲ.

18. ಗೌಪ್ಯತೆ

ವರ್ಸೇಯು ನೀವು ವೇದಿಕೆಯನ್ನು ಪ್ರವೇಶಿಸುವಾಗ ಬಳಸುವಾಗ ಮತ್ತು / ಅಥವಾ ಸೌಲಭ್ಯ ಪಡೆದುಕೊಳ್ಳುವಾಗ ನಿಮ್ಮ ಕೆಲವು ವೈಯಕ್ತಿಕ ಮಾಹಿತಿ ಮತ್ತು ಡಾಟಾವನ್ನು ಸಂಗ್ರಹಿಸಬಹುದು. ಹಾಗೆ ಸಂಗ್ರಹಿಸಿದ ಮಾಹಿತಿಯು ಕೇವಲ ವೇದಿಕೆಯ ಕ್ರಿಯಾತ್ಮಕತೆಗೆ ಕಾರಣವಾಗಿದೆ. ವರ್ಸೇಯಿಂದ ಸಂಗ್ರಹಿಸಲಾದ ಬಳಕೆದಾರರ ಎಲ್ಲಾ ಮಾಹಿತಿಯನ್ನು ವರ್ಸೇಯ ವ್ಯಾಪಾರ ಸಹವರ್ತಿಗಳು (ಪಾಲುದಾರರು, ಜಾಹೀರಾತುದಾರರು, ಗುತ್ತಿಗೆದಾರರು, ಇತ್ಯಾದಿಗಳನ್ನು ಒಳಗೊಂಡಂತೆ ಸೀಮಿತವಾಗಿರದ) ಮತ್ತು ಅಂಗಸಂಸ್ಥೆಗಳೊಂದಿಗೆ ಹಂಚಿಕೊಳ್ಳಬಹುದು ಮತ್ತು ವಿತರಿಸಬಹುದೆಂದು ನೀವು ತಿಳಿದುಕೊಂಡಿದ್ದೀರಿ ಮತ್ತು ಒಪ್ಪಿದ್ದೀರಿ. ಕೆಳಗಿನ ಲಿಂಕ್ ಗೆ ಭೇಟಿ ನೀಡುವ ಮೂಲಕ ನೀವು ವರ್ಸೇಯ ಗೌಪ್ಯತಾ ನೀತಿಯನ್ನು ಓದಬಹುದು: ಗೌಪ್ಯತಾ ನೀತಿ (ಗೌಪ್ಯತಾ ನೀತಿ ಪುಟಕ್ಕೆ ಲಿಂಕ್)

ನಾವು ನಿಮ್ಮ ಗೌಪ್ಯತೆಯ ರಕ್ಷಣೆಯನ್ನು ಗಂಭೀರವಾಗಿ ಪರಿಗಣಿಸುತ್ತೇವೆ, ಆದ್ದರಿಂದ ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ಮತ್ತು ಅದರಡಿಯಲ್ಲಿನ ನಿಯಮಗಳ ಅಡಿಯಲ್ಲಿ ಕಡ್ಡಾಯಗೊಳಿಸಿದ ಮಾಹಿತಿ ರಕ್ಷಣೆ ಮತ್ತು ಸುರಕ್ಷತಾ ಕ್ರಮಗಳ ಉನ್ನತ ಗುಣಮಟ್ಟದೊದಿಗೆ ನಿಮ್ಮ ಖಾತೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ನಾವು ಒಪ್ಪಿಕೊಳ್ಳುತ್ತೇವೆ. ನಮ್ಮ ಪ್ರಸ್ತುತ ಗೌಪ್ಯತೆ ನೀತಿ ಇಲ್ಲಿ ಲಭ್ಯವಿದೆ.

19. ನಷ್ಟ ಪರಿಹಾರ

ನೀವು ಈ ಮೂಲಕ ವರ್ಸೇ ಮತ್ತು ಅದರ ಅಂಗಸಂಸ್ಥೆಗಳು ಮತ್ತು ಅವರ ಅಧಿಕಾರಿಗಳು ನಿರ್ದೇಶಕರು ಮತ್ತು ಉದ್ಯೋಗಗಳಿಗೆ ಹಾನಿಯಾಗದಂತೆ ಮತ್ತು ಹಾನಿಗಳು, ಹೊಣೆಗಾರಿಕೆಗಳು, ವೆಚ್ಚಗಳು ಮತ್ತು ಖರ್ಚುಗಳು, ಅಟಾರ್ನಿ ಶುಲ್ಕಗಳು ಮತ್ತು ಖರ್ಚುಗಳು, ಹಾಗೂ ಘಟನೆಯಿಂದ ಉಂಟಾಗುವ ಅಥವಾ ಪ್ಲಾಟ್ ಫಾರ್ಮ್ ನ ನಿಮ್ಮ ಬಳಕೆಯಿಂದ ನೇರವಾಗಿ ಅಥವಾ ಪರೋಕ್ಷವಾಗಿ ಫಲಿತಾಂಶ. ಅದರ ಸಮಂಜಸವಾದ ಪ್ರಯತ್ನಗಳ ಹೊರತಾಗಿಯೂ ಪ್ಲಾಟ್ ಫಾರ್ಮ್ ಮೂಲಕ ನೀವು ಪ್ರವೇಶಸಿದ ವಿಷಯಕ್ಕೆ ವರ್ಸೇ ಯಾವುದೇ ಜವಾಬ್ದಾರಿ ಅಥವಾ ನಿಯಂತ್ರಣವನ್ನು ತೆಗೆದುಕೊಳ್ಳುವುದಿಲ್ಲ.

20. ಹೊಣೆಗಾರಿಕೆ ಇಲ್ಲ

ಅನ್ವಯಿತ ಕಾನೂನಿನ ಪ್ರಕಾರ, ಯಾವುದೇ ಸಂದರ್ಭದಲ್ಲಿ ವರ್ಸೇ ಅಥವಾ ಅದರ ಅಂಗಸಂಸ್ಥೆಗಳು ಯಾವುದೇ ನೇರ, ಪರೋಕ್ಷ ಪ್ರಾಸಂಗಿಕ, ದಂಡನಾತ್ಮಕ, ವಿಶೇಷ ಅಥವಾ ಪರಿಣಾಮಕಾರಿ ಹಾನಿಗಳಿಗೆ, ಲಾಭದ ನಷ್ಟ ಅಥವಾ ಗೌಪ್ಯ ಅಥವಾ ಇತರ ಮಾಹಿತಿಗಾಗಿ ವ್ಯವಹಾರ ಅಡಚಣೆಗಾಗಿ, ವೈಯಕ್ತಿಕ ಗಾಯಕ್ಕಾಗಿ ಗೌಪ್ಯತೆಯ ನಷ್ಟಕ್ಕಾಗಿ ಜವಾಬ್ದಾರರಾಗಿರುವುದಿಲ್ಲ. ಒಳ್ಳೆಯ ನಂಬಿಕೆ ಅಥವಾ ಸಮಂಜಸವಾದ ಕಾಳಜಿಯನ್ನು ಒಳಗೊಂಡಂತೆ ಯಾವುದೇ ಕರ್ತವ್ಯವನ್ನು ಪೂರೈಸಲು ವಿಫಲವಾದಾಗ, ನಿರ್ಲಕ್ಷ್ಯಕ್ಕಾಗಿ ಮತ್ತು ಇತರ ಯಾವುದೇ ಹಣಕಾಸಿನ ಅಥವಾ ಇತರ ನಷ್ಟಗಳಿಗೆ ಸಂಬಂಧಿಸಿದಂತೆ ವೇದಿಕೆಯ ಬಳಕೆಯಿಂದ ಉಂಟಾಗುವ ನಷ್ಟಗಳು ಸೇರಿದಂತೆ ಇತರ ಯಾವುದೇ ವೈಫಲ್ಯಗಳಿಗೆ ವರ್ಸೇ ಅಥವಾ ಅದರ ಅಂಗಸಂಸ್ಥೆಗಳು ಜವಾಬ್ದಾರರಾಗಿರುವುದಿಲ್ಲ.

ವರ್ಸೇ ಅಥವಾ ಅದರ ಅಂಗಸಂಸ್ಥೆಗಳು ಬಳಕೆದಾರರಿಂದ ಒದಗಿಸಲಾದ ಯಾವುದೇ ಡಾಟಾಗೆ ನೇರ ಅಥವಾ ಪರೋಕ್ಷ ಹಾನಿಗೆ ಜವಾಬ್ದಾರರಾಗಿರುವುದಿಲ್ಲ ಅಥವಾ ಯಾವುದೇ ರೀತಿಯ ಮೂರನೆ ಪಕ್ಷದ ಹಕ್ಕುಗಳ ಉಲ್ಲಂಘನೆಗಾಗಿ ಯಾವುದೇ ರೀತಿಯ ಬಳಕೆದಾರ ಹಕ್ಕುಗಳ ಬಳಕೆಗೆ ಯಾವುದೇ ಬಳಕೆದಾರರಿಂದ ಒದಗಿಸಲಾದ ಯಾವುದೇ ಡಾಟಾಗೂ ವರ್ಸೇ ಮತ್ತು ಅದರ ಅಂಗಸಂಸ್ಥೆಗಳು ಜವಾಬ್ದಾರರಾಗಿರುವುದಿಲ್ಲ.

ವೇದಿಕೆಗೆ ಯಾವುದೇ ಸಂದರ್ಭದಲ್ಲಿ ಸಂಬಂಧಿಸಿದ ಎಲ್ಲಾ ಕ್ಲೈಮ್ ಗಳಿಗೆ ವರ್ಸೇಯ ಒಟ್ಟು ಹೊಣೆಗಾರಿಕೆಯು ರೂಪಾಯಿ 5000 (ಐದು ಸಾವಿರ ರೂಪಾಯಿಗಳು ಮಾತ್ರ) ವನ್ನು ಮೀರಬಾರದು. ಹೊಣೆಗಾರಿಕೆಯ ಈ ಮಿತಿಯು ನೀವು ಮತ್ತು ವರ್ಸೇ ನಡುವಿನ ಸಂಬಂಧದ ಭಾಗವಾಗಿದೆ ಮತ್ತು ಈ ಹೊಣೆಗಾರಿಕೆಯ ಎಲ್ಲಾ ಕ್ಲೈಮ್ ಗಳಿಗೆ ಅನ್ವಯಿಸುತ್ತದೆ. (ಉದಾ: ವಾರಂಟಿ, ಟಾರ್ಟ್, ನಿರ್ಲಕ್ಷ್ಯ, ಒಪ್ಪಂದ, ಕಾನೂನು) ಮತ್ತು ವರ್ಸೇ ಹಾಗೂ ಅದರ ಅಂಗ ಸಂಸ್ಥೆಗಳಿಗೆ ಇದರ ಸಂಭವನೀಯತೆಯ ಬಗ್ಗೆ ಸೂಚಿಸಲ್ಪಟ್ಟರೂ ಅಂತಹ ಹಾನಿ, ಅದಕ್ಕಾಗಿನ ಪರಿಹಾರ, ಅಥವಾ ಉದ್ದೇಶ ವಿಫಲಗೊಂಡಿದ್ದರೂ ಪರಿಹಾರ ಮೊತ್ತ ಇದನ್ನು ಮೀರುವಂತಿಲ್ಲ.

21. ಬೇರ್ಪಡಿಸುವಿಕೆ

ಈ ಒಪ್ಪಂದದಲ್ಲಿನ ಯಾವುದೇ ನಿಬಂಧನೆಯು ಅನೂರ್ಜಿತವಾಗಿದ್ದಲ್ಲಿ ಅಥವಾ ಜಾರಿಗೊಂಡಿಲ್ಲದಿದ್ದಲ್ಲಿ, ನಿಬಂಧನೆಯು ಈ ಒಪ್ಪಂದದಿಂದ ಪ್ರತ್ಯೇಕಗೊಳಿಸಲಾಗಿದೆ ಎಂದು ಪರಿಗಣಿಸಲಾಗುವುದು ಮತ್ತು ಈ ಒಪ್ಪಂದದ ಉಳಿದ ನಿಬಂಧನೆಗಳು ಸಾಧ್ಯವಾದಷ್ಟು ಮಟ್ಟಿಗೆ ಇಲ್ಲಿಯವರೆಗೆ ಪ್ರತ್ಯೇಕತೆಯಿಂದ ಪ್ರಭಾವಿತಗೊಂಡಿರುವುದಿಲ್ಲ.

22. ಮನ್ನಾ

ಈ ಒಪ್ಪಂದದ ಯಾವುದೇ ನಿಬಂಧನೆಗಳನ್ನು ಯಾವುದೇ ಸಮಯದಲ್ಲಿ ಕಾರ್ಯಗತಗೊಳಿಸಲು ವರ್ಸೇಯು ವಿಫಲಗೊಂಡಲ್ಲಿ ಅದರ ಹಕ್ಕು, ಅಧಿಕಾರ, ಸವಲತ್ತು ಅಥವಾ ಪರಿಹಾರದ ಮನ್ನಾ ಅಥವಾ ಒಪ್ಪಂದಕ್ಕೆ ನಿಮ್ಮ ಕಡೆಯಿಂದ ಯಾವುದೇ ಹಿಂದಿನ ಅಥವಾ ಪೂರ್ವದ ಉಲ್ಲಂಘನೆಯ ಮನ್ನಾ ಎಂದು ಪರಿಗಣಿಸಲಾಗುವುದಿಲ್ಲ. ಯಾವುದೇ ಹಕ್ಕು ಅಧಿಕಾರದ ಪ್ರಯೋಜನ ಅಥವಾ ಪರಿಹಾರದ ಪೂರ್ಣ ಅಥವಾ ಭಾಗಶಃ ಕಾರ್ಯಗಳು ಅಂತಹ ಹಕ್ಕು, ಅಧಿಕಾರದ ಪ್ರಯೋಜನವನ್ನು ಒಪ್ಪಂದದ ಪ್ರಕಾರ ತಡೆಹಿಡಿಯುತ್ತದೆ. ಕಾನೂನು ಅಥವಾ ಈಕ್ವಿಟಿಯಲ್ಲಿ ವರ್ಸೇಗೆ ಲಭ್ಯವಿರುವ ಹಕ್ಕುಗಳು ಮತ್ತು ಪರಿಹಾರಗಳನ್ನು ಸಂಚಿತವಾಗಿದ್ದರೂ ಅದನ್ನು ಪರಸ್ಪರ ಪ್ರತ್ಯೇಕಿಸಲಾಗುವುದಿಲ್ಲ.

23. ಅನಿರೀಕ್ಷಿತ ಸನ್ನಿವೇಶ ಮತ್ತು ಮೂರನೇ ತಂಡದ ಕೆಲಸ

ವರ್ಸೇ ಮತ್ತು ಅದರ ಅಂಗಸಂಸ್ಥೆಗಳಿಂದ ಈ ಸೇವಾ ನಿಯಮಗಳು ಅಥವಾ ಇತರ ನೀತಿಗಳ ಯಾವುದೇ ಭಾಗದ ಕಾರ್ಯಕ್ಷಮತೆಯನ್ನು ಫೋರ್ಸ್ ಮೆಜೂರ್ ಈವೆಂಟ್ಸ್ (ಆಕ್ಟ್ ಆಫ್ ಗಾಡ್, ಸಾರ್ವಜನಿಕ ವೈರಿ, ಸಾಂಕ್ರಾಮಿಕ, ಸಾಂಕ್ರಾಮಿಕ ದಂಗೆ, ಸ್ಟ್ರೈಕ್ ಗಳು, ಗಲಭೆ ಸೇರಿದಂತೆ ಸೀಮಿತವಲ್ಲದ ಉಗ್ರ ದಾಳಿ, ಬೆಂಕಿ, ಪ್ರವಾಹ, ಯುದ್ಧ , ಚಂಡಮಾರುತ ಮತ್ತು ಇತರ ಸರ್ಕಾರದ ಯಾವುದೇ ನಿಯಂತ್ರಣ ಅಥವಾ ಸರ್ಕಾರದ ಶಾಸನರೂಪದ ಅಥವಾ ನ್ಯಾಯಂಗ ಪ್ರಾಧಿಕಾರ ಅಥವಾ ಯಾವುದೇ ಸರ್ಕಾರದ ಆದೇಶ) ಅಥವಾ ವರ್ಸೇಯ ಸಮಂಜಸವಾದ ನಿಯಂತ್ರಣ ಮೀರಿದ ಯಾವುದೇ ಕಾರಣ ಅಥವಾ ಯಾವುದೇ ಮೂರನೇ ವ್ಯಕ್ತಿಯ ನಿಯಂತ್ರಣದಾಚೆಗಿನ ಕ್ರಿಯೆ, ಹ್ಯಾಕಿಂಗ್ , ಡಾಟಾ ಕಳವು, ಬಳಕೆದಾರರ ಖಾತೆಗೆ ಅನಧಿಕೃತ ಪ್ರವೇಶ , ಇನ್ನೊಬ್ಬರಂತೆ ಸೋಗುಹಾಕುವುದು , ವಂಚನೆ, ಸುಳ್ಳು ಪ್ರಾತಿನಿಧಿತ್ವ ಇತ್ಯಾದಿಗಳಿಗೆ ಸೀಮಿತವಾಗಿಲ್ಲದಂತಹ ಸಂದರ್ಭಗಳು.

24. ಈ ಒಪ್ಪಂದದ ಮಾರ್ಪಾಡು

ನೀವು ಕಾಲಕಾಲಕ್ಕೆ ಈ ಒಪ್ಪಂದ ಮತ್ತು/ಅಥವಾ ಗೌಪ್ಯತಾ ನೀತಿಯ ಯಾವುದೇ ಅಂಶವನ್ನು ನವೀಕರಿಸುವ, ಮಾರ್ಪಡಿಸುವ ಅಥವಾ ಅಮಾನತುಗೊಳಿಸುವ ಹಕ್ಕನ್ನು ವರ್ಸೇ ತನ್ನಲ್ಲೇ ಕಾಯ್ದಿರಿಸಿದೆ ಎಂದು ಒಪ್ಪುತ್ತೀರಿ ಮತ್ತು ದೃಢೀಕರಿಸುತ್ತೀರಿ. ಅಂತಹ ಪರಿಷ್ಕೃತ ಒಪ್ಪಂದ ಮತ್ತು / ಅಥವಾ ಗೌಪ್ಯತಾ ನೀತಿಯು ಅಂತಹ ನವೀಕರಣ ಅಥವಾ ಮಾರ್ಪಾಡು ಅಥವಾ ಅಮಾನತಿನ ದಿನಾಂಕದಿಂದ ಜಾರಿಯಲ್ಲಿರುತ್ತವೆ. ನೀವೊಂದು ವೇಳೆ, ಒಪ್ಪಂದದ ಯಾವುದೇ ಬದಲಾವಣೆಯನ್ನು ಒಪ್ಪದಿದ್ದರೆ, ವೇದಿಕೆಯನ್ನು ಅನ್ ಇನ್ ಸ್ಟಾಲ್ ಮಾಡುವುದರೊಂದಿಗೆ ವೇದಿಕೆಯ ಪ್ರವೇಶ ಮತ್ತು ಬಳಕೆ ತಡೆಯಬಹುದು. ಒಪ್ಪಂದ ಮತ್ತು/ ಅಥವಾ ನೀತಿಗಳಲ್ಲಿನ (ಗೌಪ್ಯತಾ ನೀತಿ, ಸಮುದಾಯ ಮಾರ್ಗಸೂಚಿ ಸೇರಿದಂತೆ) ಬದಲಾವಣೆಗಳನ್ನು ಅನುಸರಿಸಿ ನಿಮ್ಮ ಮುಂದುವರೆದ ಪ್ರವೇಶ ಅಥವಾ ವೇದಿಕೆಯ ಬಳಕೆ ಅಥವಾ ಲಾಭವು ನಿಮ್ಮ ಅಂಗೀಕಾರ ಮತ್ತು ಬದಲಾವಣೆಯ ಅಂಗೀಕಾರವನ್ನು ಸೂಚಿಸುವುದರೊಂದಿಗೆ ಪರಿಷ್ಕೃತ ಒಪ್ಪಂದ ಮತ್ತು/ ಅಥವಾ ಬದ್ದವಾದ ನೀತಿಗಳನ್ನು ನೀವು ಅದನ್ನು ಒಪ್ಪಿದ್ದೀರಿ ಮತ್ತು ದೃಡೀಕರಿಸಿದ್ದೀರಿ ಎಂಬುದನ್ನು ತಿಳಿಸುತ್ತದೆ.

25. ಆಡಳಿತ ಕಾನೂನು

25.1 ಈ ಒಪ್ಪಂದವು ಭಾರತದಲ್ಲಿ ಸದ್ಯಕ್ಕೆ ಜಾರಿಯಲ್ಲಿರುವ ಕಾನೂನುಗಳಿಂದ ನಿಯಂತ್ರಿಸಲ್ಪಡುತ್ತದೆ ಮತ್ತು ಬೆಂಗಳೂರಿನ ನ್ಯಾಯಾಲಯಗಳು ಮಾತ್ರ ಈ ಒಪ್ಪಂದಕ್ಕೆ ಸಂಬಂಧಿಸಿದ ವಿಷಯಗಳ ಮೇಲೆ ವಿಶೇಷ ಅಧಿಕಾರವನ್ನು ಹೊಂದಿರುತ್ತದೆ.

25.2 ಈ ಒಪ್ಪಂದದಡಿಯಲ್ಲಿ ಅಥವಾ ಅದಕ್ಕೆ ಸಂಬಂಧಿಸಿದಂತೆ ಉದ್ಭವಿಸುವ ಎಲ್ಲಾ ವಿವಾದಗಳನ್ನು ಏಕಮಾತ್ರ ಮಧ್ಯಸ್ಥಗಾರನ ಮುಂದೆ ಮಧ್ಯಸ್ಥಿಕೆಗೆ ಉಲ್ಲೇಖಿಸಬಹುದು. ಒಂದು ವೇಳೆ ತಂಡಗಳು 1996 ರ (“ಆಕ್ಟ್”) ಭಾರತೀಯ ಮಧ್ಯಸ್ಥಿಕೆ ಮತ್ತು ಸಮನ್ವಯ ಕಾಯ್ದೆ ಅಡಿಯಲ್ಲಿ ನಿಗದಿಗೊಳಿಸಿದ ಸಮಯದೊಳಗೆ ಏಕೈಕ ಮಧ್ಯಸ್ಥಗಾರರ ನೇಮಕವನ್ನು ಒಪ್ಪಿಕೊಳ್ಳಲು ವಿಫಲವಾದರೆ, ತಂಡಗಳು ಏಕೈಕ ಮಧ್ಯಸ್ಥಗಾರರ ನೇಮಕಾತಿಗಾಗಿ ಕಾಯ್ದೆಯಡಿಯಲ್ಲಿ ಸಮರ್ಥ ನ್ಯಾಯಾಲಯ ಸಂಪರ್ಕಿಸಬೇಕು. ಮಧ್ಯಸ್ಥಿಕೆ ಪ್ರಕ್ರಿಯೆಗಳನ್ನು ಕಾಯಿದೆ ಮತ್ತು ಅದರ ಅಡಿಯಲ್ಲಿ ರಚಿಸಲಾದ ನಿಯಮಕ್ಕೆ ಅನುಸಾರವಾಗಿ ಕೈಗೊಳ್ಳಲಾಗುತ್ತದೆ ಮತ್ತು ಮಧ್ಯಸ್ಥಿಕೆಯ ಸ್ಥಳ / ಸ್ಥಾನ ಬೆಂಗಳೂರು ಆಗಿರಬೇಕು ಮತ್ತು ಮಧ್ಯಸ್ಥಿಕೆ ಪ್ರಕ್ರಿಯೆ ಇಂಗ್ಲೀಷ್ ನಲ್ಲಿ ನಡೆಸಬೇಕು.

26. ಸೂಚನೆ

ವೇದಿಕೆಯ ಮೂಲಕ ಪ್ರವೇಶಿಸುವ ವಿಷಯ ಅಥವಾ ಜಾಹೀರಾತುಗಳಿಗೆ ವರ್ಸೇಯು ಜವಾಬ್ದಾರನಾಗಿರುವುದಿಲ್ಲ ಎಂದು ನಿರ್ದಿಷ್ಟವಾಗಿ ಸೂಚನೆ ನೀಡಲಾಗಿದೆ. ವರ್ಸೇ ತನ್ನ ಸ್ವವಿವೇಚನೆಯಲ್ಲಿ ಮೂರನೇ ವ್ಯಕ್ತಿಯ ಹಕ್ಕುಗಳನ್ನು ಉಲ್ಲಂಘಿಸಲು ಹಕ್ಕು ಪಡೆದಿರುವ ವಿಷಯಕ್ಕೆ ಪ್ರವೇಶವನ್ನು ತೆಗೆಯಲು ಮತ್ತು ಅಥವಾ ನಿಷ್ಕ್ರಿಯಗೊಳಿಸಲು ಮತ್ತು/ಅಥವಾ ವರ್ಸೇಯ ಬೌದ್ಧಿಕ ಆಸ್ತಿ ಅಥವಾ ಇತರ ಹಕ್ಕುಗಳನ್ನು ಉಲ್ಲಂಘಿಸಬಹುದಾದ ಪ್ಲಾಟ್ ಫಾರ್ಮ್ ನ ಬಳಕೆದಾರರ ಖಾತೆಗಳನ್ನು ಮತ್ತು / ಅಥವಾ ಮೂರನೇ ವ್ಯಕ್ತಿಯ ಹಕ್ಕು ಮತ್ತು ಖಾತೆ ಕೊನೆಗೊಳಿಸಲು ಹಕ್ಕನ್ನು ವರ್ಸೇ ಕಾಯ್ದಿರಿಸಿಕೊಂಡಿದೆ.

27. ದೂರು ನಿವಾರಣಾ ಕಾರ್ಯಯಂತ್ರಗಳು

ಕುಂದುಕೊರತೆಗಳನ್ನು ಪರಿಹರಿಸಲು ವರ್ಸೇ ಈ ಕೆಳಗಿನ ಕಾರ್ಯವಿಧಾನಗಳನ್ನು ಅಳವಡಿಸಿದೆ.

ಸೇವೆಯ ನಿಯಮಗಳು, ಗೌಪ್ಯತಾ ನೀತಿ ಮತ್ತು ಸಮುದಾಯ ಮಾರ್ಗಸೂಚಿಗಳ ಉಲ್ಲಂಘನೆಯ ಬಗ್ಗೆ ಕುಂದುಕೊರತೆಗಳು ಅಥವಾ ಕಾಳಜಿಗಳನ್ನು “ನಿವಾಸಿ ಕುಂದುಕೊರತೆ ಪರಿಹಾರ ಅಧಿಕಾರಿ” ಗೆ ತಿಳಿಸಬೇಕು. ನಿವಾಸಿ ಕುಂದುಕೊರತೆ ಅಧಿಕಾರಿಯನ್ನು ಇಮೇಲ್ ಮೂಲಕ grievance.officer@myjosh.in ಅಥವಾ ಕೆಳಗೆ 26 ರಲ್ಲಿ ತಿಳಿಸಲಾದಂತೆ ಮೇಲ್ ಮೂಲಕವೂ ಸಂಪರ್ಕಿಸಬಹುದು. ವರ್ಸೇಗೆ ದೂರು ಪರಿಹರಿಸಲು ಅಗತ್ಯವಿರುವ ಮಾಹಿತಿಯು ದೂರಿನಲ್ಲಿ ಒಳಗೊಂಡಿರಬೇಕು.

ವರ್ಸೇಯು ಡಾಟಾ ಸುರಕ್ಷತೆ, ಗೌಪ್ಯತೆ ಮತ್ತು ಇತರ ವೇದಿಕೆಬಳಕೆಯ ಕಾಳಜಿಗೆ ಸಂಬಂಧಿಸಿದಂತೆ ನಿಮ್ಮ ಕುಂದುಕೊರತೆ ದೂರನ್ನು ಪರಿಹರಿಸಲು ಕುಂದುಕೊರತೆ ಅಧಿಕಾರಿಯನ್ನು ಹೊಂದಿರುತ್ತದೆ.

ನೀವು ಸಂಪರ್ಕಿಸಬೇಕಾದವರು

ವ್ಯಾಪ್ತಿ

ಹೆಸರು/ ಶೀರ್ಷಿಕೆ

ಇ ಮೇಲ್ – ಐಡಿ

ಕುಂದುಕೊರತೆ ಪರಿಹಾರಕ್ಕಾಗಿ

ಕುಂದು ಕೊರತೆ ನಿವಾರಣಾ ಅಧಿಕಾರಿ ಶ್ರೀ. ನಾಗರಾಜ್

grievance.officer@myjosh.in

ಕಾನೂನು ಜಾರಿ ಸಮನ್ವಯತೆಗಾಗಿ

ನೋಡಲ್ ಅಧಿಕಾರಿ ಶ್ರೀ ಸುನಿಲ್ ಕುಮಾರ್ ಡಿ

nodal.officer@myjosh.in

ನಿಯಂತ್ರಣಾ ಅನುಸರಣೆಗಾಗಿ

ಅನುಸರಣಾ ಅಧಿಕಾರಿ

compliance.officer@myjosh.in

ವೇದಿಕೆಯಲ್ಲಿ ಪ್ರಕಟಿಸಲಾದ ವಿಷಯ ಅಥವಾ ಜಾಹೀರಾತಿನಿಂದ ನೊಂದಂತಹ ಯಾರೇ ವ್ಯಕ್ತಿ/ ಸಂಸ್ಥೆ ಯು ಅಂತಹ ವಿಷಯ ಅಥವಾ ಜಾಹೀರಾತಿನ ವಿರುದ್ಧ ದೂರು ಸಲ್ಲಿಸಬಹುದು. ಬಾಧಿತ ವ್ಯಕ್ತಿ/ ಸಂಸ್ಥೆಯ ಕಾನೂನುಪ್ರಕಾರದ ಉತ್ತರಾಧಿಕಾರಿ, ಏಜೆಂಟ್ ಅಥವಾ ವಕೀಲರು ಅಂತಹ ವಿಷಯದ ವಿರುದ್ಧ ದೂರು ಸಲ್ಲಿಸಬಹುದು. ಅಥವಾ ಒಂದು ವೇಳೆ ದೂರು ಅಪರಾಧದ ವ್ಯಾಪ್ತಿಯಡಿಯಲ್ಲಿ ಒಳಗೊಳ್ಳದಿದ್ದರೆ ವಿಷಯ ಅಥವಾ ಜಾಹೀರಾತಿನಲ್ಲಿ ಆಸಕ್ತಿ ಹೊಂದಿರದ ಅಥವಾ ಯಾವುದೇ ಸಂಬಂಧವಿಲ್ಲದ ವ್ಯಕ್ತಿ /ಸಂಸ್ಥೆಯು ವಿಷಯ ಅಥವಾ ಜಾಹೀರಾತಿನ ವಿರುದ್ಧ ಮಾನ್ಯ ದೂರನ್ನು ಸಲ್ಲಿಸಲು ಸಾಧ್ಯವಿಲ್ಲ. ನೀವು ಬಾಧಿತ ಪಕ್ಷದ ಏಜೆಂಟ್ ಅಥವಾ ವಕೀಲರಾಗಿದ್ದರೆ, ಬಾಧಿತ ಪಕ್ಷದ ಪರವಾಗಿ ದೂರು ಸಲ್ಲಿಸುವ ನಿಮ್ಮ ಹಕ್ಕನ್ನು ಸ್ಥಾಪಿಸುವ ಡಾಕ್ಯುಮೆಂಟರಿ ಪುರಾವೆಯನ್ನು ನೀವು ಸಲ್ಲಿಸಬೇಕಾಗುತ್ತದೆ.

28. ದೂರು ಮತ್ತು ಹಿಂತೆಗೆದುಕೊಳ್ಳುವಿಕೆ

28.1 ನೀವೊಂದು ವೇಳೆ ವಿಷಯದ ವಿರುದ್ಧ ದೂರು ದಾಖಲಿಸುತ್ತಿದ್ದರೆ, ನೀವು ಈ ಕೆಳಗಿನ ಮಾಹಿತಿಗಳನ್ನು ಒದಗಿಸಬೇಕಾಗುತ್ತದೆ:

  • ದೂರು ನೀಡಲು ನಿಮ್ಮ ಆಸಕ್ತಿ
  • ದೂರಿನ ಸ್ವರೂಪ
  • ದೂರು ಸಲ್ಲಿಸಲಾದ ವಿಷಯ/ಜಾಹೀರಾತಿನ ವಿವರಗಳು (ಶೀರ್ಷಿಕೆ /ಪ್ರಕಟಣೆಯ ದಿನಾಂಕ / ವಿಷಯಕ್ಕೆ ಲಿಂಕ್)
  •  ವಿಷಯ/ ಜಾಹೀರಾತಿನೊಂದಿಗೆ ಬಾಧಿತ ತಂಡದ ಸಂಬಂಧ
  • ಕುಂದುಕೊರತೆ ಹೇಗೆ ಸಂಭವಿಸಿತು ಎಂಬ ಬಗ್ಗೆ ನಿಖರ ಕಾರಣಗಳು
  • ನೀವು ನಿರೀಕ್ಷಿಸುವ ಪರಿಹಾರಗಳು
  • ದೂರಿನ ವಿವರಗಳು (ಕುಂದುಕೊರತೆಯ ಸವಿವರ)
  • ದೂರು ದಾಖಲಿಸುವ ವ್ಯಕ್ತಿಯ ವಿವರಗಳು (ನೀವು)
  • ಬಾಧಿತ ತಂಡದ ವಿವರಗಳು
  • ಸಂವಹನ ವಿವರಗಳು
  • ಸಾಕ್ಷ್ಯ ಪುರಾವೆ, ಅನ್ವಯಗೊಂಡಲ್ಲಿ

ವರ್ಸೇಗೆ ಸಲ್ಲಿಸುವ ಎಲ್ಲಾ ಸೂಚನೆಗಳು ಲಿಖಿತ ರೂಪದಲ್ಲಿ ಇರಬೇಕಾಗುತ್ತವೆ ಮತ್ತು ವೈಯಕ್ತಿಕವಾಗಿ ಸಲ್ಲಿಸಿದರೆ ಅಥವಾ ನೋಂದಾಯಿತ ಮೇಲ್ ಮೂಲಕ ಕಳುಹಿಸಿದರೆ, ವಿನಂತಿಸಿದ ರಸೀತಿಯನ್ನು ಅಥವಾ ಕೆಳಗಿನ ವಿಳಾಸಕ್ಕೆ ಪ್ರತಿ ಮಾಡಿಸಿ ಅಥವಾ ಈ ಕೆಳಗಿನ ಇ ಮೇಲ್ ಐಡಿಗೆ ಮೇಲ್ ಮಾಡಿದರೆ ಸರಿಯಾಗಿ ನೀಡಲಾಗುತ್ತದೆ. grievance.officer@myjosh.in

ವರ್ಸೇ ಇನ್ನೋವೇಷನ್ ಪ್ರೈವೇಟ್ ಲಿಮಿಟೆಡ್

11ನೇ ಮಹಡಿ, ವಿಂಗ್ ‘ಇ’, ಹೆಲಿಯೋಸ್ ಬಿಸಿನೆಸ್ ಪಾರ್ಕ್

ಔಟರ್ ರಿಂಗ್ ರಸ್ತೆ, ಕಾಡುಬೀಸನಹಳ್ಳಿ,

ಬೆಂಗಳೂರು – 560 103, ಕರ್ನಾಟಕ, ಭಾರತ

grievance.officer@myjosh.in

26.2 ಹಿಂಪಡೆದುಕೊಳ್ಳುವಿಕೆ ಪ್ರಕ್ರಿಯೆ

ಈ ವೇದಿಕೆಯನ್ನು ವರ್ಸೇ ಇನ್ನೋವೇಷನ್ ಪ್ರೈವೇಟ್ ಲಿಮಿಟೆಡ್ (“ವರ್ಸೇ”) ನಿರ್ವಹಿಸುತ್ತದೆ ಮತ್ತು ವೇದಿಕೆಯ ಇಚ್ಛೆಗೆ ಸಂಬಂಧಿಸಿದ ಎಲ್ಲಾ ಹಕ್ಕುಗಳು ವರ್ಸೇಯೊಂದಿಗೆ ಇದೆ. ಈ ಮಾರ್ಗಸೂಚಿಗಳು ಬಳಕೆದಾರರು ರಚಿಸಿದ ವಿಷಯ ಅಥವಾ ವೇದಿಕೆಯಲ್ಲಿ ಪ್ರದರ್ಶಿಸಲಾದ ಅಥವಾ ಪ್ರಸಾರವಾದ ಯಾವುದೇ ಇತರ ವಿಷಯದ ವಿರುದ್ಧ ಯಾವುದೇ ದೂರು ಅಥವಾ ದೂರುಗಳ ವರದಿ, ತನಿಖೆ ಮತ್ತು ಪರಿಹಾರಗಳೊಂದಿಗೆ ವ್ಯವಹರಿಸುತ್ತದೆ. ಈ ಮಾರ್ಗಸೂಚಿಗಳು ದೂರನ್ನು ದಾಖಲಿಸುವ ಕುರಿತು ಸೂಚನೆಗಳನ್ನು ಸಹ ನೀಡುತ್ತವೆ. ವೇದಿಕೆಯಲ್ಲಿ ಪ್ರದರ್ಶಿಸಲಾದ ಯಾವುದೇ ವಿಷಯ ಅಥವಾ ಜಾಹೀರಾತಿನ ವಿರುದ್ಧ ದೂರು (“ನೀವು”) ಹೇಗೆ ಸಲ್ಲಿಸುವುದು ಎಂಬ ಬಗ್ಗೆ ಸಹಾಯ ಮಾಡುತ್ತದೆ. ವರ್ಸೇ ಮೂಲಕ ದಾಖಲಾದ ದೂರನ್ನು ಅದು ಹೇಗೆ ನಿರ್ವಹಿಸುತ್ತದೆ ಮತ್ತು ವಿಷಯಕ್ಕೆ ಸಂಬಂಧಿಸಿದ ಕಾನೂನು ಅಗತ್ಯತೆಗಳು ಮತ್ತು ವೇದಿಕೆಯಲ್ಲಿ ಜಾಹೀರಾತು ಪ್ರದರ್ಶಿಸಲಾಗುತ್ತದೆ. ಈ ಮಾರ್ಗಸೂಚಿಗಳ ಉದ್ದೇಶಕ್ಕಾಗಿ, ವರ್ಸೇಗೆ ಸಂಬಂಧಿಸಿದ ಯಾವುದೇ ಉಲ್ಲೇಖವು ಅದರ ಅಂಗಸಂಸ್ಥೆಗಳು, ಪೋಷಕ ಘಟಕಗಳು ಮತ್ತು ಸಹೋದರಿಯ ಕಾಳಜಿಗಳನ್ನು ಒಳಗೊಂಡಿರುತ್ತದೆ.

ನೀವು ಎಲ್ಲಾ ಅಗತ್ಯ ಮಾಹಿತಿಗಳೊಂದಿಗೆ “ತೆಗೆದುಹಾಕಲು ವಿನಂತಿ” ಎಂಬ ವಿಷಯದೊಂದಿಗೆ grievance.officer@myjosh.in ಈ ಇ ಮೇಲ್ ಗೆ ಕಳುಹಿಸಬಹುದು. ನೀವು ದೂರು /ನೋಟೀಸ್ ಗಳನ್ನು ಎಲ್ಲಾ ಅಗತ್ಯ ಮಾಹಿತಿಳೊಂದಿಗೆ ಈ ಕೆಳಗಿನ ವಿಳಾಸಕ್ಕೆ ಕಳುಹಿಸಬಹುದಾಗಿದೆ.

ಶ್ರೀ ನಾಗರಾಜ್

ಕುಂದುಕೊರತೆ (ನಿವಾರಣಾ) ಅಧಿಕಾರಿ

ವರ್ಸೇ ಇನ್ನೋವೇಷನ್ ಪ್ರೈವೇಟ್ ಲಿಮಿಟೆಡ್

11ನೇ ಮಹಡಿ, ವಿಂಗ್ ‘ಇ’ ಹೆಲಿಯೋಸ್ ಬಿಸಿನೆಸ್ ಪಾರ್ಕ್

ಔಟರ್ ರಿಂಗ್ ರಸ್ತೆ, ಕಾಡುಬೀಸನಹಳ್ಳಿ

ಬೆಂಗಳೂರು – 560 103, ಕರ್ನಾಟಕ, ಭಾರತ

ಕುಂದುಕೊರತೆಗಳ ಕಾರ್ಯವಿಧಾನ:

ಬಳಕೆದಾರರು ಎದುರಿಸುತ್ತಿರುವ ಯಾವುದೇ ದೂರು ಅಥವಾ ಸಮಸ್ಯೆಗಾಗಿ ಕೆಳಗಿನ ವಿಳಾಸಕ್ಕೆ ಇಮೇಲ್ ಮೂಲಕ ದೂರು ಸಲ್ಲಿಸಬಹುದು. 1) ನಮ್ಮ ವೇದಿಕೆಗೆ ಸಂಬಂಧಿತ ಖಾತೆದಾರರ ಬಳಕೆದಾರರ ಹೆಸರು 2) ನಿರ್ದಿಷ್ಟ ವಿಷಯ/ವೀಡಿಯೋ ಸಂಖ್ಯೆ ಅಥವಾ ಕಾಳಜಿಗೆ ಸಂಬಂಧಿಸಿದ url ಅಥವಾ ಲಿಂಕ್. 3) ತೆಗೆದುಹಾಕುವಿಕೆಗೆ ಕಾರಣವಾದ ಮನವಿಯ ಕಾರಣಗಳು.

2000 ರ ಮಾಹಿತಿ ತಂತ್ರಜ್ಞಾನ ಕಾಯಿದೆ ಮತ್ತು 2021ರ ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ನಿಯಮಗಳಿಗೆ ಅನುಸಾರವಾಗಿ ಕುಂದುಕೊರತೆ ಕಾರ್ಯವಿಧಾನದ ಸಂಪರ್ಕ ವಿವರಗಳು ಈ ಕೆಳಗಿನಂತಿವೆ:

ಶ್ರೀ ನಾಗರಾಜ್

ಇಮೇಲ್: grievance.officer@myjosh.in

ನಿಮ್ಮಿಂದ ಮಾಡಲಾದ ಯಾವುದೇ ದೂರು ನಮೂನೆ, ಇಮೇಲ್ ಅಥವಾ ಅಂಚೆ ಮೂಲಕ ದೂರುಗಳನ್ನು ಈ ಮಾರ್ಗಸೂಚಿಗಳಿಗೆ ಅನುಗುಣವಾಗಿ ತನಿಖೆ ಮಾಡಲಾಗುತ್ತದೆ ಮತ್ತು ಎಲ್ಲಾ ಪರಿಹರಿಸಲಾಗುತ್ತದೆ. ವರ್ಸೇ ವಿರುದ್ಧ ಅಥವಾ ವೇದಿಕೆಯಲ್ಲಿ ಪ್ರದರ್ಶಿಸಲಾದ /ಪ್ರಸಾರವಾಗುವ ಯಾವುದೇ ವಿಷಯದ ವಿರುದ್ಧ ಯಾವುದೇ ಕಾನೂನು ಸೂಚನೆ ಅಥವಾ ಯಾವುದೇ ಕಾನೂನು ಕ್ರಮವು ಈ ಮಾರ್ಗಸೂಚಿಗಳ ಯಾವುದೇ ನಿಯಮಗಳಿಗೆ ಒಳಪಟ್ಟಿರುವುದಿಲ್ಲ.

ಈ ಮಾರ್ಗಸೂಚಿಗಳ ಉದ್ದೇಶ ಈಡೇರಿಕೆಗಾಗಿ, ವಿಷಯವು ಯಾವುದೇ ಮತ್ತು ಎಲ್ಲಾ ಸುದ್ದಿಗಳು, ವೀಡಿಯೋಗಳು, ಚಿತ್ರಗಳು, ಬಳಕೆದಾರರು ರಚಿಸಿದ ವಿಷಯ, ಪ್ರಾಯೋಜಿತ ವಿಷಯ ಅಥವಾ ಪ್ಲಾಟ್ ಫಾರ್ಮ್ ಅಥವಾ ಅದರ ಯಾವುದೇ ಭಾಗದಲ್ಲಿ ಸಾರ್ವಜನಿಕರಿಗೆ ಪ್ರದರ್ಶಿಸಲಾದ ಪ್ರಸಾರ ಮಾಡುವ ಅಥವಾ ಸಂವಹನ ಮಾಡುವ ಯಾವುದೇ ಇತರ ವಿಷಯನ್ನು ಕೂಡ ಸೂಚಸುತ್ತದೆ.

ಈ ಮಾರ್ಗಸೂಚಿಗಳ ಉದ್ದೇಶ ಈಡೇರಿಕೆಗಾಗಿ. “ಜಾಹೀರಾತು” ಎಂದರೆ ಯಾವುದೇ ಅನುಮೋದನೆ, ಜಾಹೀರಾತು ಅಥವಾ ಪ್ರಚಾರದ ವಸ್ತುಗಳನ್ನು ವೇದಿಕೆ ಅಥವಾ ಅದರ ಯಾವುದೇ ಭಾಗದಲ್ಲಿ ಪ್ರದರ್ಶಿಸಲಾಗುತ್ತದೆ ಅಥವಾ ಪ್ರಸಾರ ಮಾಡಲಾಗುತ್ತದೆ.

ವರ್ಸೇಯು ತನ್ನ ಸ್ವವಿವೇಚನೆಯಿಂದ ಯಾವುದೇ ಸಮಯದಲ್ಲಿ ಈ ಮಾರ್ಗಸೂಚಿಗಳನ್ನು ತಿದ್ದುಪಡಿ ಮಾಡುವ ಹಕ್ಕನ್ನು ಕಾಯ್ದಿರಿಸಿದ ಮತ್ತು ವರ್ಸೇಗೆ ಯಾವುದೇ ವಿಷಯ ಅಥವಾ ಜಾಹೀರಾತಿನ ವಿರುದ್ಧ ಯಾವುದೇ ದೂರನ್ನು ಸಲ್ಲಿಸುವ /ಕಳುಹಿಸುವ ಮೊದಲು ಈ ಮಾರ್ಗಸೂಚಿಗಳನ್ನು ಪ್ರತಿ ಬಾರಿ ಬಹಳ ಎಚ್ಚರಿಕೆಯಿಂದ ಓದಲು ವಿನಂತಿಸಲಾಗಿದೆ.

ದೂರು ಯಾರು ದಾಖಲಿಸಬಹುದು?

ವೇದಿಕೆಯಲ್ಲಿ ಪ್ರಕಟಿಸಲಾದ ವಿಷಯ ಅಥವಾ ಜಾಹೀರಾತಿನಿಂದ ಬಾಧಿತರಾಗಿರುವ ಯಾವುದೇ ವ್ಯಕ್ತಿ / ಸಂಸ್ಥೆಯು ಅಂತಹ ವಿಷಯ ಅಥವಾ ಜಾಹೀರಾತಿನ ವಿರುದ್ಧ ದೂರು ಸಲ್ಲಿಸಬಹುದು. ಬಾಧಿತ ವ್ಯಕ್ತಿ / ಸಂಸ್ಥೆಯ ಕಾನೂನು ಉತ್ತರಾಧಿಕಾರಿ, ಏಜೆಂಟ್ ಅಥವಾ ವಕೀಲರು ಅಂತಹ ವಿಷಯದ ವಿರುದ್ಧ ದೂರು ಸಲ್ಲಿಸಬಹುದು ಅಥವಾ ದೂರು ಅಪರಾಧದ ವ್ಯಾಪ್ತಿಯಡಿಯಲ್ಲಿ ಬರದಿದ್ದರೆ, ವಿಷಯ ಅಥವಾ ಜಾಹೀರಾತಿನಲ್ಲಿ ಆಸಕ್ತಿ ಹೊಂದಿರದ ಅಥವಾ ಯಾವುದೇ ಸಂಬಂಧವಿಲ್ಲದ ವ್ಯಕ್ತಿ / ಸಂಸ್ಥೆಯ ವಿಷಯ ಅಥವಾ ಜಾಹೀರಾತಿನ ವಿರುದ್ಧ ಸೂಕ್ತ ದೂರನ್ನು ಸಲ್ಲಿಸಲು ಸಾಧ್ಯವಿಲ್ಲ.

ನೀವೊಂದು ವೇಳೆ ತಂಡದ ಏಜೆಂಟ್ ಅಥವಾ ವಕೀಲರಾಗಿದ್ದರೆ, ಬಾಧಿತ ಪಕ್ಷದ ಪರವಾಗಿ ದೂರು ಸಲ್ಲಿಸುವ ನಿಮ್ಮ ಹಕ್ಕನ್ನು ಸ್ಥಾಪಿಸುವ ಡಾಕ್ಯುಮೆಂಟರಿ ಪುರಾವೆಯನ್ನು ನೀವು ಸಲ್ಲಿಸಬೇಕಾಗುತ್ತದೆ.

ದೂರಿನಲ್ಲಿ ಅಗತ್ಯ ಒದಗಿಸಬೇಕಾದ ಮಾಹಿತಿಗಳೇನು?

ನೀವೊಂದು ವೇಳೆ ವಿಷಯದ ವಿರುದ್ಧ ದೂರು ಸಲ್ಲಿಸುತ್ತಿದ್ದರೆ, ನೀವು ಈ ಕೆಳಗಿನ ಮಾಹಿತಿಯನ್ನು ಒದಗಿಸುವ ಅಗತ್ಯವಿರುತ್ತದೆ.

  • ದೂರು ಸಲ್ಲಿಸಲು ನಿಮಗಿರುವ ಆಸಕ್ತಿ
  • ದೂರಿನ ಸ್ವರೂಪ
  • ದೂರು ಸಲ್ಲಿಸಿರುವ ವಿಷಯ / ಜಾಹೀರಾತು ವಿನ ವಿವರಗಳು (ವಿಷಯಕ್ಕಾಗಿನ ಶೀರ್ಷಿಕೆ ಲಿಂಕ್)
  •  ದೂರು/ ಜಾಹೀರಾತಿನೊಂದಿಗೆ ಬಾಧಿತವಾದ ತಂಡದ ಸಂಬಂಧ
  • ಕುಂದು ಕೊರತೆ ಹೇಗೆ ಸಂಭವಿಸುತ್ತದೆ ಎಂಬ ಬಗ್ಗೆ ನಿಖರವಾದ ಅಂಶಗಳು
  • ನೀವು ನಿರೀಕ್ಷಿಸುವ ಪರಿಹಾರಗಳು
  • ದೂರಿನ ವಿವರಗಳು (ಕುಂದುಕೊರತೆಯ ಸವಿವರ)
  • ದೂರು ದಾಖಲಿಸುವ ವ್ಯಕ್ತಿಯ ವಿವರಗಳು (ನೀವು)
  • ಬಾಧಿತ ತಂಡದ ವಿವರಗಳು
  • ಸಂವಹನ ವಿವರಗಳು
  • ಸಾಕ್ಷ್ಯ ಪುರಾವೆ, ಅನ್ವಯಗೊಂಡಲ್ಲಿ (ಕೆಳಗೆ ಚರ್ಚಿಸಲಾಗಿದೆ)

ನೀವು ದೂರು ನಮೂನೆ ಅಥವಾ ಇಮೇಲ್ ಮೂಲಕ ದೂರು ಸಲ್ಲಿಸಿದರೂ, ಮೇಲೆ ತಿಳಿಸಿದ ಎಲ್ಲಾ ಮಾಹಿತಿಯು ದೂರಿನಲ್ಲಿದೆ ಎಂದು ನೀವು ಖಚಿತಪಡಿಸಿಕೊಳ್ಳಬೇಕು. ದೂರಿನಲ್ಲಿ ಅಗತ್ಯವಿರುವ ಯಾವುದೇ ಮಾಹಿತಿಯು ಕಾಣೆಯಾಗಿದ್ದರೆ, ದೂರನ್ನು ಅಪೂರ್ಣವೆಂದು ಪರಿಗಣಿಸಲಾಗುತ್ತದೆ ಮತ್ತು ವರ್ಸೇ ಯು ದೂರಿನ ಆಧಾರದ ಮೇಲೆ ಯಾವುದೇ ಕ್ರಮವನ್ನು ಪರಿಗಣಿಸುವುದಿಲ್ಲ ಅಥವಾ ತೆಗೆದುಕೊಳ್ಳುವುದಿಲ್ಲ.

‘ದೂರಿನ ಸ್ವರೂಪ’ ಎಂದರೇನು ಮತ್ತು ಅದು ಯಾಕೆ ಪ್ರಸ್ತುತವಾಗಿದೆ?

ದೂರಿನ ವಿಷಯವನ್ನು ನಿಯಂತ್ರಿಸುವ ಕಾನೂನು ನಿಬಂಧನೆಗಳ ಆಧಾರದ ಮೇಲೆ ದೂರನ್ನು ವರ್ಗೀಕರಿಲಸು ವರ್ಸೇ ಗೆ ‘ದೂರಿನ ಸ್ವರೂಪ’ ಕುರಿತ ಮಾಹಿತಿಯು ಸಹಕರಿಸುತ್ತದೆ. ವೇದಿಕೆಯಲ್ಲಿ ಪ್ರಕಟವಾದ ಯಾವುದೇ ವಿಷಯ ಅಥವಾ ಜಾಹೀರಾತಿನ ವಿರುದ್ಧ ನಿಮ್ಮ ಕುಂದುಕೊರತೆಯ ಆಧಾರದ ಮೇಲೆ ದೂರಿನ ಸ್ವರೂಪವನ್ನು ನಿರ್ದಿಷ್ಟಪಡಿಸಬಹುದಾದ ವಿವಿಧ ಆಯ್ಕೆಗಳನ್ನು ವರ್ಸೇ ಒದಗಿಸಿದೆ. ನಮೂನೆಯಲ್ಲಿ ಒದಗಿಸಲಾದ ಪ್ರತಿಯೊಂದು ವರ್ಗದ ಸಂಕ್ಷಿಪ್ತ ವಿವರಣೆಯು ಈ ಕೆಳಗಿನಂತಿದೆ:

ಹಕ್ಕು ಸ್ವಾಮ್ಯ ಉಲ್ಲಂಘನೆ: ಯಾವುದೇ ವಿಷಯ/ಜಾಹೀರಾತು ಹಕ್ಕುಸ್ವಾಮ್ಯ, ಪ್ರದರ್ಶಕರ ಹಕ್ಕುಗಳು ಅಥವಾ ಬಾಧಿತ ಪಕ್ಷದ ಪ್ರಚಾರ ಹಕ್ಕುಗಳನ್ನು ಉಲ್ಲಂಘಿಸುತ್ತದೆ. ಇದು ತನ್ನ ಅನುಮತಿಯಿಲ್ಲದೇ ನೊಂದ ವ್ಯಕ್ತಿಯಿಂದ ರಚಿಸಲ್ಪಟ್ಟ /ಮಾಲೀಕತ್ವದ ವಿಷಯದ ಪ್ರದರ್ಶನವನ್ನು ಒಳಗೊಂಡಿರುತ್ತದೆ. 

ಟ್ರೇಡ್ ಮಾರ್ಕ್ ಉಲ್ಲಂಘನೆ: ಯಾವುದೇ ವಿಷಯ / ಜಾಹೀರಾತು ಬಾಧಿತ ತಂಡದ ಟ್ರೇಡ್ ಮಾರ್ಕ್ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಅಥವಾ ಟ್ರೇಡ್ ಮಾರ್ಕ್ ಕಾನೂನುಗಳ ಅಡಿಯಲ್ಲಿ ಸಂರಕ್ಷಿತವಾಗಿರುವ ಯಾವುದೇ ಪದ, ಲೋಗೋ ಅಥವಾ ಯಾವುದೇ ಪ್ರಾತಿನಿಧ್ಯವನ್ನು ಅಕ್ರಮವಾಗಿ ಬಳಸುತ್ತದೆ /ಪ್ರದರ್ಶಿಸುತ್ತದೆ. 

ಖಾಸಗಿತನಕ್ಕೆ ತೊಂದರೆ: ಯಾವುದೇ ವಿಷಯ / ಜಾಹೀರಾತು ಯಾವುದೇ ಮಾಹಿತಿ, ಚಿತ್ರ, ಪಠ್ಯ ಅಥವಾ ಖಾಸಗಿ ಅಥವಾ ಮೂರನೇ ವ್ಯಕ್ತಿಯ ಗೌಪ್ಯತೆ ಹಕ್ಕುಗಳನ್ನು ಉಲ್ಲಂಘಿಸುವ ಯಾವುದೇ ಇತರ ವಿಷಯವನ್ನು ಒಳಗೊಂಡಿರುತ್ತದೆ. 

ಮಾನನಷ್ಟ: ಯಾವುದೇ ವಿಷಯ / ಜಾಹೀರಾತು ಸುಳ್ಳು ಮಾಹಿತಿಯನ್ನು ಹೊಂದಿದ್ದರೆ ಮತ್ತು 1) ಬಾಧಿತ ತಂಡದ ಪ್ರತಿಷ್ಠೆ ಅಥವಾ ಸಾರ್ವಜನಿಕ ಚಿತ್ರಣಕ್ಕೆ ಹಾನಿ ಮಾಡುತ್ತದೆ ಅಥವಾ 2) ಇಲ್ಲದಿದ್ದರೆ ಬಾಧಿತ ವ್ಯಕ್ತಿಯನ್ನು ಸಾಮಾನ್ಯವಾಗಿ ಜನರು ಹೇಗೆ ಗ್ರಹಿಸುತ್ತಾರೆ ಎಂಬುದರ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. 

ಸುಳ್ಳು/ ಹಾದಿ ತಪ್ಪಿಸುವ ಮಾಹಿತಿ: ಯಾವುದೇ ವಿಷಯ/ ಜಾಹೀರಾತು ಸುಳ್ಳು ಅಥವಾ ಅಪೂರ್ಣ ಮತ್ತು ಜನರನ್ನು ತಪ್ಪುದಾರಿಗೆ ಎಳೆಯುತ್ತಿದ್ದು, ಅಥವಾ ಅದು ಸಂಸ್ಥೆ , ಘಟನೆ ವಿಷಯದ ಬಗ್ಗೆ ತಪ್ಪು ಮಾಹಿತಿ ಒದಗಿಸುವುದು ಅಥವಾ ಅದರಲ್ಲಿ ದೋಷವಿದೆ ಎಂದು ಜನರು ನಂಬಿದಾಗ ಅದು ಜನರ ದೃಷ್ಟಿಕೋನ ಬದಲಾಯಿಸುತ್ತದೆ. 

ಅಶ್ಲೀಲ / ಹಗರಣವನ್ನೊಳಗೊಂಡ ವಿಷಯ: ಯಾವುದೇ ವಿಷಯ/ ಜಾಹೀರಾತು ಯಾವುದೇ ಚಿತ್ರ, ಪಠ್ಯ, ವೀಡಿಯೋ, ಆಡಿಯೋ ಅಥವಾ ಯಾವುದೇ ಇತರ ಪ್ರಾತಿನಿಧ್ಯವನ್ನು ಒಳಗೊಂಡಿರುತ್ತದೆ, ಇದು ವಿಕರ್ಷಣ, ವಿಧೇಯತೆಗೆ ಆಕ್ಷೇಪಾರ್ಹ, ಅಸಭ್ಯ, ಅಶ್ಲೀಲ, ಅಥವಾ ಅನೈತಿಕ ಮತ್ತು ವೀಕ್ಷಕರ ಮನಸ್ಸನ್ನು ಕೆಡಿಸುವ ಅಥವಾ ಭ್ರಷ್ಟಗೊಳಿಸುವ ಸಂಭವನೀಯತೆ ಇದೆ. 

ವಿಷಯವು ಧಾರ್ಮಿಕ ಭಾವನೆಗೆ ಧಕ್ಕೆ ಅಥವಾ ಹಿಂಸೆಯನ್ನು ಪ್ರಚೋದಿಸುತ್ತದೆ: ಯಾವುದೇ ವಿಷಯದ ಜಾಹೀರಾತು ಯಾವುದೇ ಚಿತ್ರಣ, ಟೆಕ್ಸ್ಸ್ , ಅಥವಾ ಯಾವುದೇ ಇತರ ವಿಷಯವು ಧಾರ್ಮಿಕ ನಂಬಿಕೆಗಳಿಗೆ ನೋವುಂಟು ಮಾಡುವ ಅಥವಾ ಬಾಧಿತ ತಂಡದ ಭಾವನೆಗಳನ್ನು ನೋಯಿಸುತ್ತದೆ ಅಥವಾ ನೇರವಾಗಿ ಜನರಲ್ಲಿ ಹಿಂಸಾತ್ಮಕ ನಡವಳಿಕೆಯನ್ನು ಪ್ರಚೋದಿಸುತ್ತದೆ ಅಥವಾ ಪ್ರೇರೇಪಿಸುತ್ತದೆ. ದ್ವೇಷದ ಮಾತುಗಳನ್ನು ಒಳಗೊಂಡ ವಿಷಯ /ಜಾಹೀರಾತು ಸರ್ಕಾರ ಅಥವಾ ಯಾವುದೇ ಧರ್ಮ ಅಥವಾ ಧಾರ್ಮಿಕ ಸಂಘಟನೆಯ ವಿರುದ್ಧ ದಂಗೆಯನ್ನು ಪ್ರಚೋದಿಸುವ ವಿಷಯವನ್ನು ಸಹ ಈ ವರ್ಗದಡಿಯಲ್ಲಿ ವರದಿ ಮಾಡಬಹುದಾಗಿದೆ. 

ಈ ಎಲ್ಲಾ ವರ್ಗಗಳ ಹೊರತಾಗಿ, ಒದಗಿಸಲಾದ ದೂರಿನ ನಮೂನೆಯಲ್ಲಿ “ಇಲ್ಲವೇ ಕಾನೂನುಬಾಹಿರ” ಶೀರ್ಷಿಕೆಯ ಸ್ವತಂತ್ರ ವರ್ಗವಿದೆ. ದೂರಿನಲ್ಲಿ ತಿಳಿಸಲಾದ ಸಮಸ್ಯೆಯು ಮೇಲಿನ ಯಾವುದೇ ವರ್ಗಗಳಡಿಯಲ್ಲಿ ಹೊಂದಿಕೆಯಾಗದಿದ್ದರೆ, ನೀವು ಅದನ್ನು ದೂರಿನ ಸ್ವರೂಪವಾಗಿ ಆಯ್ಕೆ ಮಾಡಬಹುದು ಮತ್ತು ಸಂಕ್ಷಿಪ್ತವಾಗಿ ಎತ್ತಿರುವ ಸಮಸ್ಯೆಯನ್ನು ಪ್ರತ್ಯೇಕವಾಗಿ

ನೀವು ಯಾವುದಾದರೂ ಒಂದೇ ಒಂದು ವರ್ಗವನ್ನು ಆರಿಸಬಹುದು. ಕುಂದುಕೊರತೆ ಮೇಲೆ ತಿಳಿಸಿದ ವರ್ಗಗಳಲ್ಲಿ ಒಂದಕ್ಕಿಂತ ಹೆಚ್ಚು ಅಡಿಯಲ್ಲಿ ಬಂದರೆ, ನೀವು ದೂರುಗಳ ಪ್ರತಿಯೊಂದು ವರ್ಗಕ್ಕೂ ಪ್ರತ್ಯೇಕ ದೂರನ್ನು ಎತ್ತಬಹುದು ಮತ್ತು ದೂರುಗಳನ್ನು ಸಾಬೀತುಪಡಿಸಲು ಅಗತ್ಯವಿರುವ ಎಲ್ಲಾ ಅಗತ್ಯ ದಾಖಲೆಗಳೊಂದಿಗೆ ವಾಸ್ತವ ಮತ್ತು ದೂರಿನ ನಿರ್ದಿಷ್ಟ ವಿವರವನ್ನು ಒದಗಿಸಬಹುದು. ಒಂದೇ ವಿಷಯ /ಜಾಹೀರಾತಿನ ವಿರುದ್ಧ ನೀವು ಒಂದಕ್ಕಿಂತ ಹೆಚ್ಚು ದೂರುಗಳನ್ನು ಎತ್ತಿದರೆ, ಕುಂದುಕೊರತೆಯ ಪರಿಣಾಮಕಾರಿ ನಿರ್ವಹಣೆಯನ್ನು ಸಕ್ರಿಯಗೊಳಿಸಲು, ಅದೇ ವಿಷಯಕ್ಕೆ ಸಂಬಂಧಿಸಿದ ನಂತರದ ಎಲ್ಲಾ ದೂರುಗಳಲ್ಲಿ ನಿಮ್ಮ ಹಿಂದಿನ ದೂರಿನ ದೂರು ಐಡಿಯನ್ನು ನಮೂದಿಸಬೇಕಾಗುತ್ತದೆ.

ದೂರಿನೊಂದಿಗೆ ಯಾವ ಸಾಕ್ಷ್ಯ ಪುರಾವೆಗಳು ಬೇಕಾಗುತ್ತವೆ?

ದೂರಿನ ಸ್ವರೂಪ ಮತ್ತು ಕುಂದುಕೊರತೆ ಅವಲಂಬಿಸಿ ಡಾಕ್ಯುಮೆಂಟರಿ ಪುರಾವೆಗಳು ಬದಲಾಗಬಹುದು. ದೂರಿನ ವಿಭಿನ್ನ ಸ್ವರೂಪಕ್ಕೆ ಸಂಬಂಧಿಸಿದ ಡಾಕ್ಯುಮೆಂಟರಿ ಪುರಾವೆಗಳು ಈ ಕೆಳಗಿನಂತಿವೆ.

ಹಕ್ಕು ಸ್ವಾಮ್ಯ ಉಲ್ಲಂಘನೆ: ಬಾಧಿತ ತಂಡಗಳ ಹಕ್ಕುಗಳ ಪುರಾವೆ ಮತ್ತು ಉಲ್ಲಂಘನೆಯ ಪುರಾವೆ ಟ್ರೇಡ್ ಮಾರ್ಕ್ ಉಲ್ಲಂಘನೆ.

ಟ್ರೇಡ್ ಮಾರ್ಕ್ ಉಲ್ಲಂಘನೆ: ಟ್ರೇಡ್ ಮಾರ್ಕ್ ನೋಂದಣಿ ಪ್ರಮಾಣಪತ್ರ, ಉಲ್ಲಂಘನೆಯ ಪುರಾವೆ ಯ ಉಲ್ಲಂಘನೆ 

ಗೌಪ್ಯತೆಯ ಉಲ್ಲಂಘನೆ: ವಿಷಯ ಅಥವಾ ಜಾಹೀರಾತುವಿನ ಪುರಾವೆಯು ಖಾಸಗಿಯಾಗಿದ್ದಲ್ಲಿ ಅಥವಾ ಗೌಪ್ಯತೆಯ ಹಕ್ಕನ್ನು ಉಲ್ಲಂಘನೆ ಮಾಡಿದ್ದಲ್ಲಿ.

ನೀವು ಬಾಧಿತ ತಂಡದ ಏಜೆಂಟ್ ಅಥವಾ ವಕೀಲರಾಗಿದ್ದರೆ, ದೂರಿನ ಜತೆಗೆ ಬಾಧಿತ ತಂಡದ ಪರವಾಗಿ ದೂರು ಸಲ್ಲಿಸುವ ನಿಮ್ಮ ಹಕ್ಕನ್ನು ಸ್ಥಾಪಿಸುವ ಮೂಲಕ ನೀವು ವಕೀಲರ ಅಧಿಕಾರ ಅಥವಾ ಅಧಿಕಾರ ಪತ್ರವನ್ನು ಲಗತ್ತಿಸಬೇಕಾಗುತ್ತದೆ.

ದೂರಿನಲ್ಲಿ ಒದಗಿಸಲಾದ ಮಾಹಿತಿಯು ಅಸಂಪೂರ್ಣ ಅಥವಾ ತಪ್ಪಾಗಿದ್ದರೆ ಏನಾಗುತ್ತದೆ?

ಕಾನೂನು ಪಾಲಿಸುವ ಘಟಕವಾಗಿರುವುದರಿಂದ ವೇದಿಕೆಯಲ್ಲಿ ಪ್ರಕಟಿಸಲಾದ ಯಾವುದೇ ವಿಷಯ ಅಥವಾ ಜಾಹೀರಾತಿನ ವಿರುದ್ದ ಸಲ್ಲಿಸಲಾದ ಪ್ರತಿ ದೂರನ್ನು ವರ್ಸೇಯು ಪರಿಗಣಿಸುತ್ತದೆ ಮತ್ತು ಪರಿಶೀಲಿಸುತ್ತದೆ. ಅಗತ್ಯವಿದ್ದಲ್ಲಿ, ವರ್ಸೇ ಆಂತರಿಕ ತನಿಖೆಯನ್ನು ಕೂಡ ನಡೆಸುತ್ತದೆ. ಯಾವುದೇ ಕುಂದುಕೊರತೆಯೊಂದಿಗೆ ವ್ಯವಹರಿಸುವಾಗ ಅದರ ಪ್ರಾಥಮಿಕ ಮಾಹಿತಿಯ ಮೂಲವು ದೂರಿನಲ್ಲಿ ತಿಳಿಸಲಾದ ಮಾಹಿತಿಯಾಗಿರುತ್ತದೆ. ದೂರಿನಲ್ಲಿ ಒದಗಿಸಲಾದ ಮಾಹಿತಿಯ ಆಧಾರದ ಮೇಲೆ, ವರ್ಸೇ ದೂರಿನ ಸ್ವರೂಪ, ಪ್ರಶ್ನೆಯಲ್ಲಿನ ವಿಷಯ/ಜಾಹೀರಾತು ಉಲ್ಲಂಘಿಸಿದ ಹಕ್ಕು/ಕಾನೂನುಗಳು, ವಿಷಯದಲ್ಲಿ ತೊಡಗಿಕೊಂಡ ತಂಡಗಳು ಮತ್ತು ದೂರಿನಲ್ಲಿ ಎತ್ತಿದ ಸಮಸ್ಯೆ ಪರಿಹರಿಸಲು ಅಗತ್ಯವಿರುವ ಇತರೆ ಪೂರಕ ಮಾಹಿತಿಯನ್ನು ನಿರ್ಧರಿಸುತ್ತದೆ.

ಕುಂದುಕೊರತೆಗಳನ್ನು ಪರಿಹರಿಸುವಾಗ ವರ್ಸೇ ಹೇಗೆ ಸಹಾಯ ಮಾಡುತ್ತದೆ?

2000ರ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿಯ ತಂತ್ರಜ್ಞಾನ ಪೂರೈಕೆದಾರ ಮತ್ತು ಮಧ್ಯವರ್ತಿಯಾಗಿ, ವರ್ಸೇ ವೇದಿಕೆಯಿಂದ ವಿಷಯ ಅಥವಾ ಜಾಹೀರಾತನ್ನು ತೆಗೆದುಹಾಕಲು ಬದ್ಧವಾಗಿದೆ. ಒಂದು ವೇಳೆ, 1) ಅದು ದೂರು ಸ್ವೀಕರಿಸಿದರೆ, ಅಗತ್ಯ ಇರುವ ಎಲ್ಲಾ ದಾಖಲೆಗಳೊಂದಿಗೆ, ಮೊದಲಿಗೆ ಅದನ್ನು ಸ್ಪಷ್ಟವಾಗಿ ಸ್ಥಾಪಿಸುತ್ತದೆ. ವೇದಿಕೆಯಲ್ಲಿನ ವಿಷಯ ಅಥವಾ ಜಾಹೀರಾತು ಯಾವುದೇ ಮೂರನೇ ವ್ಯಕ್ತಿಯ ಹಕ್ಕುಗಳನ್ನು ಉಲ್ಲಂಘಿಸುತ್ತಿದೆ ಅಥವಾ 2) ಕಾನೂನಿನ ಅಡಿಯಲ್ಲಿ ಸೂಕ್ತ ಪ್ರಾಧಿಕಾರದಿಂದ ತೆಗೆದುಹಾಕುವಿಕೆಯನ್ನು ನಿರ್ದೇಶಿಸುವ ಆದೇಶವನ್ನು ಪಡೆಯುತ್ತದೆ.

ಕಾನೂನಿಗೆ ಅನುಸಾರವಾಗಿ, ವರ್ಸೇ ನೇರವಾಗಿ ನಿಮಗೆ ಸಂವಹಿಸಲು ಮತ್ತು ನಿಮ್ಮ ಕುಂದುಕೊರತೆ ದೂರುಗಳ ಪರಿಹಾರಕ್ಕೆ ಸಹಾಯ ಮಾಡುವ ವಿಷಯದ ವಿವರಗಳನ್ನು ಸಹ ನಿಮಗೆ ಒದಗಿಸಬಹುದು.

ವರ್ಸೇಯ ಯಾವುದೇ ವಿಷಯ ಅಥವಾ ಜಾಹೀರಾತಿನ ವಿರುದ್ಧದ ದೂರುಗಳನ್ನು ತನಿಖೆ ಮಾಡುವ ಮತ್ತು ಪರಿಹರಿಸುವ ಪ್ರಕ್ರಿಯೆಯು 2000ರ ಮಾಹಿತಿ ತಂತ್ರಜ್ಞಾನ ಕಾಯ್ದೆ, 2011ರ ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು) ನಿಯಮಗಳಡಿ ಭಾರತದಲ್ಲಿ ಅಸ್ಥಿತ್ವದಲ್ಲಿರುವ ಎಲ್ಲಾ ಇತರ ಕಾನೂನುಗಳಿಗೆ ಅನುಸಾರವಾಗಿದೆ. ಯಾವುದೇ ಕಾನೂನಿನಡಿಯಲ್ಲಿ ಯಾವುದೂ ಕೂಡ ವರ್ಸೇಯ ಮೇಲೆ ದೂರಿನಲ್ಲಿ ನೀಡಿರುವ ವಿಷಯದ ಹೊರತಾಗಿ ತನಿಖೆ ನಡೆದಲು ಯಾವುದೇ ಬಾಧ್ಯತೆಯನ್ನು ಹೇರುವುದಿಲ್ಲ ಮತ್ತು ವರ್ಸೇ ನಡೆಸಿದ ಯಾವುದೇ ತನಿಖೆ ಅಥವಾ ಕ್ರಮವು ತನ್ನ ಸ್ವಂತ ವಿವೇಚನೆಗೆ ಒಳಪಟ್ಟಿರುತ್ತದೆ ಹಾಗೂ ವರ್ಸೇ ನಿಮಗೆ ಅಥವಾ ಇತರ ತಂಡ ಸೇರಿ ಯಾರಿಗೂ ಕೂಡ ಅದನ್ನು ತಿಳಿಸುವ ಅಗತ್ಯವಿರುವುದಿಲ್ಲ.

ವರ್ಸೇಯು ತನ್ನ ವೇದಿಕೆಯಲ್ಲಿ ವಿಷಯದ ಪ್ರಕಟಣೆಗೆ ಜವಾಬ್ದಾರಿಯಾಗಿದೆಯೇ?

ಇಲ್ಲ, ವರ್ಸೇಯು ಕೇವಲ ಮಧ್ಯವರ್ತಿಯಾಗಿದೆ, ಇದು ನಿಮ್ಮನ್ನು ಒಳಗೊಂಡಂತೆ ಅಂತಿಮ ಬಳಕೆದಾರರಿಗೆ ಅವರ ವಿಷಯ ಪ್ರಕಟಿಸಲು ವಿವಿಧ ಮೂರನೇ ವ್ಯಕ್ತಿಯ ವಿಷಯ ಪೂರೈಕೆದಾರರಿಗೆ ವೇದಿಕೆಯನ್ನು ಒದಗಿಸುತ್ತದೆ. ವೇದಿಕೆಯಲ್ಲಿ ಯಾವುದೇ ವಿಷಯ ಅಥವಾ ಜಾಹೀರಾತನ್ನು ರಚಿಸುವಲ್ಲಿ ಅಥವಾ ಪ್ರಕಟಿಸುವಲ್ಲಿ ವರ್ಸೇ ಸಂಪೂರ್ಣವಾಗಿ ತೊಡಗಿಸಿಕೊಂಡಿಲ್ಲ.

2000ರ ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್ 79ರ ಪ್ರಕಾರ, ವೇದಿಕೆಯಲ್ಲಿ ಪ್ರಕಟಿಸಲಾದ ಯಾವುದೇ ವಿಷಯ ಅಥವಾ ಅದರ ಯಾವುದೇ ಭಾಗಕ್ಕೆ ವರ್ಸೇ ಯು ಯಾವುದೇ ರೀತಿಯಲ್ಲಿ ಜವಾಬ್ದಾರನಾಗಿರುವುದಿಲ್ಲ. ವೇದಿಕೆಯಲ್ಲಿ ಪ್ರಕಟವಾದ ಯಾವುದೇ ವಿಷಯವನ್ನು ತೆಗೆದುಹಾಕುವ ಹಕ್ಕು ವರ್ಸೇಗೆ ಸೀಮಿತವಾಗಿರುತ್ತದೆ. 1) ಇದು ದೂರನ್ನು ಅಗತ್ಯವಿರುವ ಎಲ್ಲಾ ಪುರಾವೆಗಳು, ಪ್ರಾಥಮಿಕ ನೋಟ ಮತ್ತು ವಿಷಯವು ಮೂರನೇ ವ್ಯಕ್ತಿಯ ಹಕ್ಕುಗಳನ್ನು ಉಲ್ಲಂಘಿಸುತ್ತಿದೆ ಎಂದು ಸ್ಪಷ್ಟವಾಗಿ ಸಾಬೀತುಪಡಿಸಬೇಕಾಗುತ್ತದೆ ಅಥವಾ 2) ಇದು ಕಾನೂನಿನ ಅಡಿಯಲ್ಲಿ ಸೂಕ್ತ ಪ್ರಾಧಿಕಾರದಿಂದ ತೆಗೆದುಹಾಕುವಿಕೆಯ ಆದೇಶವನ್ನು ಪಡೆಯುತ್ತದೆ.

ವೇದಿಕೆಯಲ್ಲಿ ಯಾವುದೇ ವಿಷಯವನ್ನು ರಚಿಸುವಲ್ಲಿ ಅಥವಾ ಪ್ರಕಟಿಸುವಲ್ಲಿ ವರ್ಸೇ ತೊಡಗಿಸಿಕೊಂಡಿಲ್ಲವಾದ್ದರಿಂದ, ಯಾವುದೇ ಕಂಟೆಂಟ್ ಅಥವಾ ಅದರ ಭಾಗವು ಅವರ ಹಕ್ಕುಗಳನ್ನು ಉಲ್ಲಂಘಿಸಿದ್ದಕ್ಕಾಗಿ ಯಾವುದೇ ಹಾನಿ ಅಥವಾ ವೆಚ್ಚವನ್ನು ಪಾವತಿಸಲು ಬಾಧ್ಯತೆ ಹೊಂದಿಲ್ಲ. ವರ್ಸೆಯು ಮಧ್ಯವರ್ತಿಯಾಗಿ ಯಾವುದೇ ಮೂರನೇ ವ್ಯಕ್ತಿಯ ವಿಷಯ ಅಥವಾ ಅದರ ಭಾಗವಾಗಿ ಉಲ್ಲಂಘಿಸುವ ಯಾವುದೇ ಹಕ್ಕುಗಳ ಉಲ್ಲಂಘನೆಗಾಗಿ ಯಾವುದೇ ನಾಗರಿಕ ದಾವೆಗೆ ಒಳಪಟ್ಟಿರುವುದಿಲ್ಲ.

ವೇದಿಕೆಯಲ್ಲಿನ ವಿಷಯ ಮತ್ತು ಜಾಹೀರಾತುಗಳ ಕಾನೂನು ಬದ್ಧತೆಯನ್ನು ವರ್ಸೇ ಹೇಗೆ ಖಾತರಿಪಡಿಸುತ್ತದೆ?

ಮೇಲೆ ವಿವರಿಸಲಾದಂತೆ, ವರ್ಸೇಯು ಕೇವಲ ಮಧ್ಯವರ್ತಿಯಾಗಿದ್ದು, ಅದು ವಿವಿಧ ಮೂರನೇ ವ್ಯಕ್ತಿಗಳಿಗೆ ತಮ್ಮ ವಿಷಯವನ್ನು ಪ್ರದರ್ಶಿಸಲು ವೇದಿಕೆಯನ್ನು ಒದಗಿಸುತ್ತದೆ. ವೇದಿಕೆಯಲ್ಲಿ ಪ್ರದರ್ಶಿಸಲಾದ ವಿಷಯವನ್ನು ಅಪ್ ಲೋಡ್ ಮಾಡುವ ಈ ಮೂರನೇ ವ್ಯಕ್ತಿಯ ವಿಷಯ ಪೂರೈಕೆದಾರರೊಂದಿಗೆ ವರ್ಸೇ ಒಪ್ಪಂದಗಳನ್ನು ಹೊಂದಿದೆ. ವರ್ಸೇ ಜೊತೆಗಿನ ತಮ್ಮ ಒಪ್ಪಂದಗಳಲ್ಲಿ, ಈ ವಿಷಯ ಪೂರೈಕೆದಾರರು ತಮ್ಮ ವಿಷಯ ಅಥವಾ ವೇದಿಕೆಯಲ್ಲಿ ಅಪ್ ಲೋಡ್ ಮಾಡಿದ ಯಾವುದೇ ಭಾಗವು ಯಾವುದೇ ಕಾನೂನು ಅಥವಾ ಯಾವುದೇ ಮೂರನೇ ವ್ಯಕ್ತಿಯ ಹಕ್ಕುಗಳನ್ನು ಉಲ್ಲಂಘಿಸುವುದಿಲ್ಲ ಎಂದು ಪ್ರತಿನಿಧಿಸಿದ್ದಾರೆ. ವಿಶೇಷವಾಗಿ, ವಿಷಯ ಪೂರೈಕೆದಾರರು ಈ ಕೆಳಗಿನವುಗಳನ್ನು ಪ್ರತಿನಿಧಿಸುತ್ತಾರೆ.

  • ಅವರು ವೇದಿಕೆಯಲ್ಲಿ ವಿಷಯವನ್ನು ಅಪ್ ಲೋಡ್ ಮಾಡಲು ಅಧಿಕಾರ ಹೊಂದಿದ್ದಾರೆ.
  • ವಿಷಯವು ಹಕ್ಕುಸ್ವಾಮ್ಯ, ಟ್ರೇಡ್ ಮಾರ್ಕ್, ಹಕ್ಕುಗಳು, ಗೌಪ್ಯತೆ ಹಕ್ಕುಗಳು, ಪ್ರಚಾರ ಹಕ್ಕುಗಳು ಅಥವಾ ಇತರ ಕಾನೂನು ಹಕ್ಕುಗಳನ್ನು ಒಳಗೊಂಡಂತೆ ಯಾವುದೇ ಮೂರನೇ ವ್ಯಕ್ತಿಯ ಹಕ್ಕುಗಳನ್ನು ಉಲ್ಲಂಘಿಸುವುದಿಲ್ಲ.
  • ವಿಷಯವು ಮಾನಹಾನಿಕರ, ಅಶ್ಲೀಲ, ಮಾನನಷ್ಟ, ಅಸಭ್ಯ, ಅನೈತಿಕ ಅಥವಾ ಕಾನೂನು ಬಾಹಿರವಲ್ಲದಿದ್ದಾಗ,
  • ವಿಷಯವು ಯಾವುದೇ ರೀತಿಯಲ್ಲಿ, ಹಿಂಸಾಚಾರ, ಸರ್ಕಾರದ ವಿರುದ್ಧ ದಂಗೆ ಅಥವಾ ದ್ವೇಷವನ್ನು ಉತ್ತೇಜಿಸುವುದಿಲ್ಲ ಅಥವಾ ಪ್ರಚೋದಿಸುವುದಿಲ್ಲ; ಅಥವಾ ಯಾವುದೇ ಧಾರ್ಮಿಕ ಭಾವನೆಗಳನ್ನು ನೋಯಿಸುವುದು ಅಥವಾ ಯಾವುದೇ ನಿಷೇಧಿತ ವಸ್ತು, ಉತ್ಪನ್ನ ಅಥವಾ ಸೇವೆಗಳ ಬಳಕೆ ಅಥವಾ ವಿತರಣೆಯನ್ನು ಅನುಮೋದಿಸುವುದು.

ವರ್ಸೇ ತನ್ನ ವೇದಿಕೆಯ ಬಳಕೆಯನ್ನು ನಿಯಂತ್ರಿಸಲು ತನ್ನದೇ ಆದ ನೀತಿಗಳು ಮತ್ತು ಒಪ್ಪಂದಗಳನ್ನು ಹೊಂದಿದೆ. ಈ ಒಪ್ಪಂದಗಳು ಮತ್ತು ನೀತಿಗಳು ಬಳಕೆದಾರರಿಗೆ ಬದ್ದವಾಗಿರುತ್ತದೆ. ಮತ್ತು ವೇದಿಕೆಯ ಬಳಕೆಯು ಯಾವುದೇ ಕಾನೂನನ್ನು ಉಲ್ಲಂಘಿಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ರೂಪಿಸಲಾಗಿದೆ. ವೇದಿಕೆಯನ್ನು ಬಳಸುವ ಮೂಲಕ, ಯಾವುದೇ ಕಾನೂನು ಅಥವಾ ವರ್ಸೇಯ ಬಳಕೆಯ ನಿಯಮಗಳನ್ನು ಉಲ್ಲಂಘಿಸುವ ಯಾವುದೇ ವಿಷಯವನ್ನು (ಟೆಕ್ಸ್ಟ್, ಚಿತ್ರಗಳು, ವೀಡಿಯೋಗಳು, ಕಾಮೆಂಟ್ ಗಳು, ಇತ್ಯಾದಿ ಸೇರಿದಂತೆ) ಬಳಕೆದಾರರು ಅಪ್ ಲೋಡ್ ಮಾಡದಿರಲು ಒಪ್ಪಿಕೊಂಡಿದ್ದಾರೆ.

ವರ್ಸೇಯು ಮಧ್ಯವರ್ತಿಯಾಗಿರುವುದರಿಂದ, ಅದರ ವೇದಿಕೆಯಲ್ಲಿರುವ ವಿಷಯವನ್ನು ಮೇಲ್ವಿಚಾರಣೆ ಮಾಡುವ ಅಗತ್ಯವಿಲ್ಲ. ವರ್ಸೇಯು ಸೂಕ್ತ ಪ್ರಾಧಿಕಾರದಿಂದ ಆದೇಶವನ್ನು ಸ್ವೀಕರಿಸಿದಾಗ ಅಥವಾ ಪ್ರಾಥಮಿಕ ಪ್ರಕರಣವನ್ನು ಸ್ಥಾಪಿಸುವ ಸಂಪೂರ್ಣ ದೂರನ್ನು ಸ್ವೀಕರಿಸಿದಾಗ ಮಾತ್ರ ಯಾವುದೇ ವಿಷಯದ ವಿರುದ್ಧ ಕ್ರಮ ತೆಗೆದುಕೊಳ್ಳಲು ಅಗತ್ಯವಿದೆ. ಆದ್ದಾಗ್ಯೂ, ಯಾವುದೇ ವಿಷಯವನ್ನು ತನ್ನ ಸ್ವಂತ ವಿವೇಚನೆಯಿಂದ ನಿರ್ಧರಿಸಿದರೆ, ಅಂತಹ ವಿಷಯವು ಯಾವುದೇ ಕಾನೂನು ಅಥವಾ ಅದರ ಪ್ಲಾಟ್ ಫಾರ್ಮ್ ನ ನಿಯಮಗಳನ್ನು ಉಲ್ಲಂಘಿಸುತ್ತದೆ ಎಂದು ನಿರ್ಧರಿಸಿದರೆ ಅದನ್ನು ತೆಗೆದುಕೊಳ್ಳುವ ಹಕ್ಕನ್ನು ವರ್ಸೇ ಹೊಂದಿದೆ.

ಯಾವುದೇ ವಿಷಯದ ವಿರುದ್ಧ ಸಲ್ಲಿಸಿದ ದೂರನ್ನು ವರ್ಸೇ ಹೇಗೆ ಪರಿಹರಿಸುತ್ತದೆ?

ವರ್ಸೇಯು ವೇದಿಕೆಯಲ್ಲಿನ ಯಾವುದೇ ವಿಷಯದ ವಿರುದ್ಧ ಸಲ್ಲಿಸಲಾದ ಎಲ್ಲಾ ದೂರುಗಳೊಂದಿಗೆ ವ್ಯವಹರಿಸುವ ಸಮರ್ಥ ಕಾನೂನನ್ನು ವರ್ಸೇ ಹೊಂದಿದೆ. ಈ ತಂಡಗಳು ತಮ್ಮ ಆಂತರಿಕ ಸಂಶೋಧನೆ ಮತ್ತು ನೀವು ಒದಗಿಸಿದ ವಿಷಯ ಮತ್ತು ಪುರಾವೆಗಳ ಆಧಾರದ ಮೇಲೆ ವಾಸ್ತವಿಕ ಮತ್ತು ಕಾನೂನು ಆಧಾರದ ಮೇಲೆ ವಿಷಯವನ್ನು ತನಿಖೆ ಮಾಡುತ್ತವೆ. ದೂರಿನ ವಿಷಯ, ಒದಗಿಸಿದ ಪುರಾವೆಗಳು, ಆಂತರಿಕ ಸಂಶೋಧನೆ, ಕಾನೂನು ನಿಬಂಧನೆಗಳು ಮತ್ತು ಪ್ರತಿಕ್ರಿಯೆಯನ್ನು ಆಧರಿಸಿ, ಈ ತಂಡಗಳು ದೂರು ಮತ್ತು ಕುಂದುಕೊರತೆಗಳನ್ನು ಮೌಲ್ಯಮಾಪನದ ಮಾಡುತ್ತದೆ ಮತ್ತು ನಿಮಗೆ ಅಥವಾ ಬಾಧಿತ ಪಕ್ಷಕ್ಕೆ ಯಾವ ಪರಿಹಾರಗಳನ್ನು ಒದಗಿಸಬಹುದು ಎಂಬುದನ್ನು ನಿರ್ಧರಿಸುತ್ತದೆ.

ದೂರು ನಿವಾರಿಸುವಾಗ ತೆಗೆದುಕೊಂಡ ಕ್ರಮಗಳ ವಿವರಗಳನ್ನು ವರ್ಸೇ ಒದಗಿಸುತ್ತದೆಯೇ?

ಒಂದು ವೇಳೆ ದೂರು ಸಂಕೀರ್ಣವಾಗಿದ್ದಲ್ಲಿ, ಪರಿಶೀಲನೆ ಪ್ರಕ್ರಿಯೆಯ ಮೂಲಕ ಹೋಗುತ್ತದೆ, ಅದು ಕಟ್ಟುನಿಟ್ಟಾಗಿ ಗೌಪ್ಯವಾಗಿರುತ್ತದೆ. ಕಾನೂನು ಅಥವಾ ಸೂಕ್ತವಾದ ನ್ಯಾಯಾಂಗ / ಅರೆ –ನ್ಯಾಯಾಂಗ ಪ್ರಾಧಿಕಾರದ ಮೂಲಕ ಅಗತ್ಯವಿಲ್ಲದಿದ್ದರೆ, ನಿರ್ದಿಷ್ಟ ದೂರನ್ನು ಪರಿಹರಿಸುವಾಗ ವರ್ಸೇ ಕೈಗೊಂಡ ಕ್ರಮಗಳನ್ನು ಅದು ಬಹಿರಂಗಪಡಿಸುವುದಿಲ್ಲ.

ವರ್ಸೇ ಸಲ್ಲಿಸಲಾದ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಲು ಬದ್ಧವಾಗಿರುತ್ತದೆಯೇ?

ವರ್ಸೇ ದೂರಿನಲ್ಲಿ ಒದಗಿಸಲಾದ ಮಾಹಿತಿ, ದೂರಿನ ಸ್ವರೂಪ ಒದಗಿಸಿದ ಸಾಕ್ಷ್ಯಚಿತ್ರ, ಪುರಾವೆಗಳು, ದೂರಿನ ಸ್ವರೂಪ, ಒದಗಿಸಿದ ಸಾಕ್ಷ್ಯ ಚಿತ್ರ ಪುರಾವೆಗಳು, ದೂರಿನ ಕಾನೂನು ಮಾನ್ಯತೆ ಮತ್ತು ದೂರಿನ ಕಾನೂನುಬದ್ಧತೆ ಮತ್ತು ಕುಂದುಕೊರತೆ ಸೇರಿದಂತೆ ವಿವಿಧ ಸಂಗತಿಗಳನ್ನು ಆಧರಿಸಿ ವೇದಿಕೆಯಲ್ಲಿನ ಯಾವುದೇ / ಎಲ್ಲಾ ವಿಷಯಗಳ ವಿರುದ್ಧ ಸಲ್ಲಿಸಲಾದ ಎಲ್ಲಾ ದೂರುಗಳನ್ನು ಪರಿಗಣಿಸುತ್ತದೆ. ಈ ಅಂಶಗಳ ಆಧಾರದ ಮೇಲೆ, ವರ್ಸೇ ನಿಮಗೆ ಪ್ರತಿಕ್ರಿಯೆಯನ್ನು ಕಳುಹಿಸಬಹುದು ಅಥವಾ ಕಳುಹಿಸದೇ ಇರಬಹುದು ಅಥವಾ ದೂರಿನ ಆಧಾರದ ಮೇಲೆ ಯಾವುದೇ ಕ್ರಮವನ್ನು ತೆಗೆದುಕೊಳ್ಳಬಹುದು. ವೇದಿಕೆಗಳಲ್ಲಿನ ವಿಷಯದ ವಿರುದ್ಧ ಸಲ್ಲಿಸಲಾದ ಪ್ರತಿ ದೂರಿನ ಆಧಾರದ ಮೇಲೆ ಪ್ರತಿಕ್ರಿಯಿಸಲು ಅಥವಾ ಕ್ರಮ ತೆಗೆದುಕೊಳ್ಳಲು ವರ್ಸೇಯು ಯಾವುದೇ ಬಾಧ್ಯತೆಯನ್ನು ಹೊಂದಿಲ್ಲ.

ನೀವು ತಪ್ಪು ಅಥವಾ ಕ್ಷುಲ್ಲಕ ದೂರು ಸಲ್ಲಿಸಿದರೆ ಏನಾಗುತ್ತದೆ?

ನೀವೊಂದು ವೇಳೆ, ದೂರಿನಲ್ಲಿ ತಪ್ಪು ಮಾಹಿತಿ ಒದಗಿಸಿದ್ದಲ್ಲಿ, ವರ್ಸೇಗೆ ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಸಂಗ್ರಹಿಸಲು ಅಥವಾ ನಿಮ್ಮ ದೂರನ್ನು ತಿಳಿಸಲು ಸಾಧ್ಯವಾಗುವುದಿಲ್ಲ. ದೂರಿನಲ್ಲಿ ಸುಳ್ಳು ಅಥವಾ ತಪ್ಪುದಾರಿಗೆಳೆಯುವ ಮಾಹಿತಿಯನ್ನು ಒದಗಿಸುವ ಮೂಲಕ ವರ್ಸೇಯನ್ನು ದಾರಿತಪ್ಪಿಸಲು ನೀವು ಪ್ರಯತ್ನಿಸಿದರೆ, ವರ್ಸೇ ತನ್ನ ಕಾನೂನು ಹಕ್ಕುಗಳು ಮತ್ತು ವೇದಿಕೆಯ ಸಮಗ್ರತೆ ಕಾಪಾಡುವ ಸಲುವಾಗಿ ನಿಮ್ಮ ವಿರುದ್ಧ ಕಠಿಣ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಬಹುದಾಗಿದೆ. ದೂರುಗಳನ್ನು ಪರಿಶೀಲಿಸಲು ವರ್ಸೇ ಗಣನೀಯ ಸಂಪನ್ಮೂಲಗಳನ್ನು ವ್ಯಯಿಸುವುದರಿಂದ, ನೀವು ಸುಳ್ಳು ಮತ್ತು ಕ್ಲುಲ್ಲಕ ದೂರುಗಳನ್ನು ಸಲ್ಲಿಸಿದರೆ ಹಾನಿಗಳಿಗೆ (ವೆಚ್ಚಗಳು ಮತ್ತು ವಕೀಲರ ಶುಲ್ಕಗಳು ಸೇರಿದಂತೆ) ನೀವು ಹೊಣೆಗಾರರಾಗಬಹುದೆಂಬುದನ್ನು ದಯವಿಟ್ಟು ಗಮನಿಸಿ.

ಈ ಮಾರ್ಗದರ್ಶಿ ಸೂತ್ರಗಳು ನಿಮ್ಮನ್ನು ಒಳಗೊಳ್ಳುತ್ತದೆಯೇ?

ವೇದಿಕೆಯಲ್ಲಿರುವ ಯಾವುದೇ ವಿಷಯದ ವಿರುದ್ಧ ವರ್ಸೇಯೊಂದಿಗೆ ದೂರು ಸಲ್ಲಿಸಲು ನಿಮಗೆ ಸಹಾಯ ಮಾಡಲು ಈ ಮಾರ್ಗಸೂಚಿಗಳನ್ನು ರಚಿಸಲಾಗಿದೆ. ಈ ಮಾರ್ಗಸೂಚಿಗಳು ದಾಖಲಾದ ದೂರಿಗೆ ಸಂಬಂಧಿಸಿದ ಅಥವಾ ಸಂಬಂಧಿಸಿದ ಕಾನೂನು ನಿಬಂಧನೆಗಳನ್ನು ವಿವರಿಸುತ್ತದೆ. ಈ ಮಾರ್ಗಸೂಚಿಗಳಲ್ಲಿ ಉಲ್ಲೇಖಿಸಲಾದ ಯಾವುದು ಕಾನೂನಿನ ವ್ಯಾಪ್ತಿಯಿಂದ ಹೊರತಾ ಗಿಲ್ಲ, ಹಾಗಾಗಿ ಈ ಮಾರ್ಗಸೂಚಿಗಳು ಬದ್ದವಾಗಿದ್ದರೂ, ಸಂಬಂಧಿತ ಕಾನೂನು ನಿಬಂಧನೆಗಳಿಗೆ ನೀವು ಬದ್ದರಾಗಿರುತ್ತೀರಿ.

ನೀವು ದೂರು ಸಲ್ಲಿಸಿರುವ ವಿಷಯದ ವಿರುದ್ಧ ವರ್ಸೇ ಯಾವ ಕ್ರಮ ತೆಗೆದುಕೊಳ್ಳಬಹುದು?

ವರ್ಸೇಯು ಮಧ್ಯವರ್ತಿಯಾಗಿ, ತನ್ನದೇ ಆದ ಇಲ್ಲವೇ ಸ್ವೀಕರಿಸಿದ ದೂರಿಗೆ ಅನುಗುಣವಾಗಿ ವಿಷಯವನ್ನು ಅಥವಾ ಅದರ ಯಾವುದೇ ಭಾಗವನ್ನು ಸಂಪಾದಿಸಲು ಅಥವಾ ಬದಲಾಯಿಸಲು ಸಾಧ್ಯವಿಲ್ಲ. ಆದ್ದಾಗ್ಯೂ ಕೆಲವು ಸಂದರ್ಭಗಳಲ್ಲಿ ವಿಷಯವನ್ನು ಸಂಪೂರ್ಣವಾಗಿ ತೆಗೆದುಹಾಕಲು ವರ್ಸೇಗೆ ಅನುಮತಿ ಇದೆ.

ವರ್ಸೇ ಈ ಕೆಳಗಿನ ಪ್ರಕರಣಗಳಲ್ಲಿ ವಿಷಯವನ್ನು ಹಿಂತೆಗೆದುಕೊಳ್ಳಬಹುದಾಗಿದೆ.

  • ವರ್ಸೇ ಯು ಸೂಕ್ತ ನ್ಯಾಯಾಂಗ ಅಥವಾ ಅರೆ – ನ್ಯಾಯಾಂಗ ಪ್ರಾಧಿಕಾರದಿಂದ ಈ ಪರಿಣಾಮದ ಆದೇಶವನ್ನು ಸ್ವೀಕರಿಸಿದೆ.
  • ಕೆಲವು ವಿಷಯವನ್ನು ತೆಗೆದುಹಾಕಲು ವರ್ಸೇಗೆ ಕೆಲವು ಅಗತ್ಯ ಕಾನೂನು ನಿಬಂಧನೆ ಇದೆ.
  • ವೇದಿಕೆಯ ಕಂಟೆಂಟ್ ನಿಂದಲೇ ಪ್ರಶ್ನೆಯನ್ನು ಕೇಳಿದಾಗ ಅದನ್ನು ವರ್ಸೇಗೆ ಕಳುಹಿಸಲಾಗುತ್ತದೆ. ಅದು ಅದರದೇ ಆದ ರೀತಿಯಲ್ಲಿ ಇಲ್ಲವೇ ದೂರಿನ ಸ್ವೀಕೃತಿಯನ್ನು ವೇದಿಕೆಗೆ ರವಾನಿಸುತ್ತದೆ.

ವರ್ಸೇ ಈ ಕೆಳಗಿನ ಪ್ರಕರಣಗಳಲ್ಲಿ ವಿಷಯವನ್ನು ಹಿಂತೆಗೆದುಕೊಳ್ಳಬಹುದಾಗಿದೆ:

  • ಇದು ಪ್ರಾಥಮಿಕ ಪ್ರಕರಣದೊಂದಿಗೆ ಸಂಪೂರ್ಣ ಮತ್ತು ಸೂಕ್ತವಾಗಿ ದೃಢೀಕರಿಸಿದ ದೂರನ್ನು ಸ್ವೀಕರಿಸುತ್ತದೆ.
  • ವರ್ಸೇ ಯು ತನ್ನ ಸ್ವವಿವೇಚನೆಯಲ್ಲಿ ವಿಷಯವು ಯಾವುದೇ ಕಾನೂನು ಅಥವಾ ಅದರ ವೇದಿಕೆಯ ನಿಯಮಗಳನ್ನು ಉಲ್ಲಂಘಿಸಿದರ ಬಗ್ಗೆ ನಿರ್ಧರಿಸುತ್ತದೆ.

29. ರದ್ದುಗೊಳಿಸುವಿಕೆ

29.1 ನಿಮ್ಮ ಖಾತೆಯನ್ನು ಅಳಿಸುವ ಮೂಲಕ ಮತ್ತು ವೇದಿಕೆಯ ಎಲ್ಲಾ ಬಳಕೆಯನ್ನು ನಿಲ್ಲಿಸುವ ಮೂಲಕ ನೀವು ಯಾವುದೇ ಸಮಯದಲ್ಲಿ ಈ ನಿಯಮಗಳನ್ನು ಕೊನೆಗೊಳಿಸಬಹುದು. ದಯವಿಟ್ಟು ಗಮನಿಸಿ, ನಿಮ್ಮ ಕಂಪ್ಯೂಟರ್ ಅಥವಾ ಮೊಬೈಲ್ ಸಾಧನದಿಂದ ವೇದಿಕೆಯನ್ನು ಅಳಿಸುವುದರಿಂದ ನಿಮ್ಮ ಖಾತೆಯನ್ನು ಅಳಿಸಲಾಗುವುದಿಲ್ಲ ಮತ್ತು ನೀವು ಈ ಹಿಂದೆ ಅಪ್ ಲೋಡ್ ಮಾಡಿಸ ಯಾವುದೇ ಬಳಕೆದಾರರ ವಿಷಯವು ವೇದಿಕೆಯಲ್ಲಿ ಉಳಿಯುತ್ತದೆ. ನಿಮ್ಮ ಖಾತೆಯನ್ನು ಅಳಿಸಲು ನೀವು ಬಯಸಿದರೆ, ದಯವಿಟ್ಟು ಸೈಟ್ ನಲ್ಲಿ ನಿಮ್ಮ ಖಾತೆಗೆ ಲಾಗಿನ್ ಮಾಡಿ ಅಥವಾ ಅಪ್ಲಿಕೇಷನ್ ನಲ್ಲಿ ಖಾತೆ ಪ್ರೊಫೈಲ್ ಐಕಾನ್ ಕ್ಲಿಕ್ ಮಾಡಿ ಮತ್ತು ಒಮ್ಮೆ ನೀವು ಖಾತೆ ಪ್ರೊಫೈಲ್ ನಲ್ಲಿ “ಖಾತೆಯನ್ನು ಅಳಿಸಿ” ಐಕಾನ್ ಆಯ್ಕೆ ಮಾಡಿ. ನಿಮ್ಮ ಖಾತೆಯನ್ನು ಅಳಿಸಿದರೆ,ಎಲ್ಲಾ ಬಳಕೆದಾರರ ವಿಷಯವನ್ನು ಸ್ವಯಂಚಾಲಿತವಾಗಿ ಅಳಿಸಲಾಗುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಹೆಚ್ಚುವರಿಯಾಗಿ ನೀವು ವೇದಿಕೆಗೆ ಅಪ್ ಲೋಡ್ ಮಾಡಿದ ಬಳಕೆದಾರರ ವಿಷಯದ ಯಾವುದೇ ನಿರ್ದಿಷ್ಟ ಐಟಂನ್ನು ಅಳಿಸಲು ನೀವು ಬಯಸಿದರೆ, ನೀವು ವೇದಿಕೆಯಲ್ಲಿ ಬಳಕೆದಾರರ ವಿಷಯವನ್ನು ಅಳಿಸುವ ಕಾರ್ಯವನ್ನು ಬಳಸಿಕೊಂಡು ಹಾಗೆ ಮಾಡಬಹುದು; ನಿಮ್ಮ ಬಳಕೆದಾರರು ಒದಗಿಸಿದ ವಿಷಯವನ್ನು ಅಳಿಸುವುದರಿಂದ ನಿಮ್ಮ ಖಾತೆಯನ್ನು ಅಳಿಸಲಾಗುವುದಿಲ್ಲ ಇಲ್ಲವೇ ಒಪ್ಪಂದದ ಈ ನಿಯಮಗಳನ್ನು ಕೊನೆಗೊಳಿಸುವುದಿಲ್ಲ. ಈ ನಿಯಮಗಳು ಮತ್ತು ಯಾವುದೇ ಪೋಸ್ಟ್ ಮಾಡಿದ ಪರಿಷ್ಕರಣೆಯು ನೀವು ವೇದಿಕೆಯನ್ನು ಬಳಸುವಾಗ ಸಂಪೂರ್ಣ ಬಲ ಮತ್ತು ಪರಿಣಾಮದಲ್ಲಿ ಉಳಿಯುತ್ತದೆ ಮತ್ತು ರದ್ದತಿಯ ನಂತರವೂ ಕೆಲವು ನಿಬಂಧನೆಗಳು ಅನ್ವಯಿಸುವುದನ್ನು ಮುಂದುವರೆಸಬಹುದಾಗಿದೆ.

29.2 ಯಾವುದೇ ಕಾರಣಕ್ಕಾಗಿ ಯಾವುದೇ ಸಮಯದಲ್ಲಿ ವೇದಿಕೆಯನ್ನು ಅನ್ ಇನ್ ಸ್ಟಾಲ್ ಮಾಡುವ ಮೂಲಕ ಅಥವಾ ಅಳಿಸುವ ಮೂಲಕ ನೀವು ಈ ಒಪ್ಪಂದ ಕೊನೆಗೊಳಿಸಬಹುದು. ನೀವು ಇನ್ನು ಮುಂದೆ ನಮ್ಮ ಸೇವೆಗಳನ್ನು ಮತ್ತೆ ಬಳಸಲು ಬಯಸದಿದ್ದರೆ ಮತ್ತು ನಿಮ್ಮ ಖಾತೆಯನ್ನು ಅಳಿಸಲು ಬಯಸಿದರೆ, ನಮ್ಮನ್ನು ಈ ಮೂಲಕ ಸಂಪರ್ಕಿಸಬಹುದು. ನಾವು ನಿಮಗೆ ಹೆಚ್ದಿನ ಸಹಾಯವನ್ನು ಒದಗಿಸುತ್ತೇವೆ ಮತ್ತು ಪ್ರಕ್ರಿಯೆಯ ಮೂಲಕ ನಿಮಗೆ ಮಾರ್ಗದರ್ಶನ ನೀಡುತ್ತೇವೆ. ಒಮ್ಮೆ ನಿಮ್ಮ ಖಾತೆಯನ್ನು ಅಳಿಸಲು ನೀವು ಆಯ್ಕೆ ಮಾಡಿದರೆ, ನಿಮ್ಮ ಖಾತೆಯನ್ನು ಪುನಃ ಸಕ್ರಿಯಗೊಳಿಸಲು ಅಥವಾ ನೀವು ಸೇರಿಸಿದ ಯಾವುದೇ ವಿಷಯ ಅಥವಾ ಮಾಹಿತಿಯನ್ನು ಹಿಂಪಡೆಯಲು ನಿಮಗೆ ಸಾಧ್ಯವಿಲ್ಲ.

29.3 ನಿಮ್ಮ ಬಳಕೆದಾರರ ಖಾತೆಯನ್ನು ನಿಷ್ಕ್ರಿಯಗೊಳಿಸಲು ಅಥವಾ ಅಂತ್ಯಗೊಳಿಸಲು ನೀವು ಅಪ್ ಲೋಡ್ ಮಾಡುವ ಅಥವಾ ಹಂಚಿಕೊಳ್ಳುವ ಯಾವುದೇ ವಿಷಯವನ್ನು ತೆಗೆದುಹಾಕುವ ಅಥವಾ ನಿಷ್ಕ್ರಿಯಗೊಳಿಸುವ ಹಕ್ಕನ್ನು ನಾವು ಕಾಯ್ದಿರಿಸಿದ್ದೇವೆ. ಈ ನಿಯಮಗಳ ಯಾವುದೇ ನಿಬಂಧನೆಗಳನ್ನು ಅನುಸರಿಸಲು ನೀವು ವಿಫಲರಾದರೆ ಅಥವಾ ನಿಮ್ಮ ಖಾತೆಯಲ್ಲಿ ಚಟುವಟಿಕೆಗಳು ನಡೆದರೆ ಸೇರಿದಂತೆ ನಮ್ಮ ಸ್ವಂತ ವಿವೇಚನೆಯಿಂದ ಸೇವೆಗಳಿಗೆ ತೊಂದರೆ ಅಥವಾ ಹಾನಿಯನ್ನು ಉಂಟುಮಾಡಬಹುದು ಇಲ್ಲವೇ ಯಾವುದೇ ಮೂರನೇ ವ್ಯಕ್ತಿಯ ಹಕ್ಕುಗಳನ್ನು ಉಲ್ಲಂಘಿಸಬಹುದು ಅಥವಾ ಮೀರಬಹುದು. ಇಲ್ಲವೇ ಯಾವುದೇ ಅನ್ವಯಿತ ಕಾನೂನುಗಳು ಅಥವಾ ನಿಬಂಧನೆಗಳನ್ನು ಉಲ್ಲಂಘಿಸಬಹುದು. ಅಂತಹ ರದ್ದು ಅಥವಾ ಅಮಾನತಿನ ನಂತರ ನೀವು ವೇದಿಕೆಯನ್ನು ಪ್ರವೇಶಿಸಲು ಅಥವಾ ಸಾಧ್ಯವಿರುವುದಿಲ್ಲ, ಮತ್ತು ನೀವು ಮರುನೋಂದಣಿ ಮಾಡಲು ಅಥವಾ ಬೇರೆ ಸದಸ್ಯರ ಹೆಸರನ್ನು ಬಳಸುವ ಮೂಲಕ ಅಥವಾ ವೇದಿಕೆಯನ್ನು ಪ್ರವೇಶಿಸಲು ಪ್ರಯತ್ನಿಸುವುದಿಲ್ಲ ಎಂದು ನೀವು ಒಪ್ಪುತ್ತೀರಿ.

29.4 ರದ್ದುಗೊಳಿಸುವಿಕೆಯ ಪರಿಣಾಮ: ರದ್ದುಗೊಳಿಸುವಿಕೆಯ ಮುಕ್ತಾಯವು ನಿಮ್ಮ ಖಾತೆ ಅಥವಾ ವೇದಿಕೆಗೆ ನಿಮ್ಮ ಪ್ರವೇಶ ಅಥವಾ ಬಳಕೆಯ ಪ್ರವೇಶವನ್ನು ತೆಗೆದು ಹಾಕುವುದು ಮತ್ತು ವೇದಿಕೆಯ ಮುಂದಿನ ಬಳಕೆಯನ್ನು ನಿರ್ಬಂಧಿಸುವುದು ಇದರಲ್ಲಿ ಸೇರಿರಬಹುದು. ಈ ಒಪ್ಪಂದ ಅಥವಾ ನಿಮ್ಮ ಖಾತೆಯ ರದ್ದು ನಿಮ್ಮ ಬಳಕೆದಾರ ಹೆಸರು, ನಿಮ್ಮ ಪಾಸ್ ವರ್ಡ್, ಮತ್ತು ನಿಮ್ಮ ಬಳಕೆದಾರ ವಿಷಯ ಸೇರಿದಂತೆ, ನಿಮ್ಮ ಖಾತೆಯೊಂದಿಗೆ ಅಥವಾ ಅದರಲ್ಲಿ (ಅಥವಾ ಅದರ ಯಾವುದೇ ಭಾಗ) ಸಂಯೋಜಿತವಾಗಿರುವ ಎಲ್ಲಾ ಅವಶ್ಯ ಮಾಹಿತಿ, ಫೈಲ್ ಗಳು, ಮತ್ತು ಬಳಕೆದಾರ ವಿಷಯವನ್ನು ಸಹ ಒಳಗೊಂಡಿದೆ. ಈ ಒಪ್ಪಂದದ ರದ್ದಿನ ನಂತರ ನಿಮ್ಮ ಎಲ್ಲಾ ಪ್ರೊಫೈಲ್ ವಿಷಯ ಮತ್ತು ಇತರ ಮಾಹಿತಿಯನ್ನು ಅಳಿಸಬಹುದು. ಆದ್ದಾಗ್ಯೂ ಆರ್ಕೈವಲ್ ಮತ್ತು ಕಾನೂನು ಉದ್ದೇಶಗಳಿಗಾಗಿ ಕೆಲವು ವಿವರಗಳನ್ನು ನಮ್ಮೊಂದಿಗೆ ನಿರ್ವಹಿಸಲಾಗುತ್ತದೆ. ನಿಮ್ಮ ರದ್ದುಗೊಳಿಸುವಿಕೆಯನ್ನು ಲೆಕ್ಕಿಸದೇ, ವಿಷಯ ಹೊಣೆಗಾರಿಕೆ ಎಲ್ಲಾ ಸಮಯದಲ್ಲೂ ಬಳಕೆದಾರರ ಜತೆ ಮುಂದುವರೆಯುತ್ತದೆ. ಒಪ್ಪಂದ ರದ್ದಾದ ನಂತರ, ಮೊಬೈಲ್ ಸಾಫ್ಟವೇರ್ ಸೇರಿದಂತೆ ವೇದಿಕೆಯನ್ನು ಬಳಸುವ ನಿಮ್ಮ ಹಕ್ಕು ಸ್ವಯಂಚಾಲಿತವಾಗಿ ಕೊನೆಗೊಳ್ಳುತ್ತದೆ. ನಿಮ್ಮ ಬಳಕೆದಾರರ ವಿಷಯವನ್ನು ಅಳಿಸುವುದು ಸೇರಿದಂತೆ ಯಾವುದೇ ಅಮಾನತು ಅಥವಾ ರದ್ದಿಗಾಗಿ ವರ್ಸೇ ನಿಮಗೆ ಯಾವುದೇ ಹೊಣೆಗಾರಿಕೆಯನ್ನು ಹೊರುವುದಿಲ್ಲ. ಸ್ಥಳೀಯ ಕಾನೂನಿನಡಿಯಲ್ಲಿ ಅಗತ್ಯವಿರುವ ಮತ್ತು/ಅಥವಾ ಅನುಮತಿಯಿರುವವರೆಗೆ ವರ್ಸೇ ವಿಷಯ /ಡಾಟಾವನ್ನು ಹಿಡಿದಿಟ್ಟುಕೊಳ್ಳುತ್ತದೆ ಮತ್ತು ಬಳಸುತ್ತದೆ. ಒಪ್ಪಂದದ ಎಲ್ಲಾ ನಿಬಂಧನೆಗಳು ಅವುಗಳ ಸ್ವಭಾವತಃ ಉಳಿದುಕೊಳ್ಳಬೇಕು, ಈ ಒಪ್ಪಂದದ ರದ್ದನ್ನು ಮಿತಿಯಿಲ್ಲದೇ ಖಾತರಿ ಹಕ್ಕು ನಿರಾಕರಣೆಗಳು ಆಡಳಿತ ಕಾನೂನು ಮತ್ತು ಹೊಣೆಗಾರಿಕೆಯ ಮಿತಿಗಳಿಲ್ಲದೇ ಉಳಿಯುತ್ತದೆ.

29.5 ವರ್ಸೇಯು ಕಾಲಕಾಲಕ್ಕೆ ಈ ನಿಯಮಗಳಲ್ಲಿ ಬದಲಾವಣೆ ತರುವ ಹಕ್ಕು ಹೊಂದಿದೆ. ಈ ರೀತಿಯ ಯಾವುದೇ ಬದಲಾವಣೆಗಳನ್ನು ನೀವು ಒಪ್ಪದಿದ್ದರೆ, ವೇದಿಕೆಯನ್ನು ಪ್ರವೇಶಿಸುವುದು, ಲಭ್ಯತೆ ಗಳಿಸುವುದು, ಬಳಸುವುದನ್ನು ಸ್ಥಗಿತಗೊಳಿಸುವುದು ನಿಮ್ಮ ಸ್ವವಿವೇಚನೆಯಾಗಿದೆ. ಅಂತಹ ಯಾವುದೇ ಬದಲಾವಣೆಗಳ ಸೂಚನೆಯ ನಂತರ ವೇದಿಕೆಯ ಮುಂದುವರಿದ ಪ್ರವೇಶ ಅಥವಾ ಬಳಕೆಯು ಅಂತಹ ಬದಲಾವಣೆ ನಿಯಮಗಳಿಗೆ ನಿಮ್ಮ ಅಂಗೀಕಾರವನ್ನು ಸೂಚಿಸುತ್ತದೆ ಮತ್ತು ಪರಿಷ್ಕೃತ ನಿಯಮಗಳಿಗೆ ನೀವು ಬದ್ದರಾಗಿರುತ್ತೀರಿ.

29.6. ಈ ಒಪ್ಪಂದದ ಎಲ್ಲಾ ನಿಬಂಧನೆಗಳು ಅವುಗಳ ಮೂಲ ಸ್ವಭಾವದ ಮುಕ್ತಾಯದಿಂದ ಉಳಿದುಕೊಳ್ಳಬೇಕು, ಯಾವುದೇ ಮಿತಿಯಿಲ್ಲದ ಮಾಲೀಕತ್ವದ ನಿಬಂಧನೆಗಳು, ವಾರಂಟಿ ಹಕ್ಕಿನ ನಿರಾಕರಣೆ, ನಷ್ಟ ಪರಿಹಾರ, ಮತ್ತು ಹೊಣೆಗಾರಿಕೆ ಮಿತಿಗಳು ಸೇರಿದಂತೆ ಮುಕ್ತಾಯದಿಂದ ಉಳಿದುಕೊಳ್ಳುತ್ತವೆ.

28. ಮಧ್ಯವರ್ತಿಯಿಂದ ಮಾಹಿತಿಯ ಮಾಸಿಕ ಪ್ರಕಟಿಸುವಿಕೆ, ವರ್ಸೇಯು, 2021ರ ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿ ಮತ್ತು ಡಿಜಿಟಲ್ ಮಾಧ್ಯಮ ಸಂಹಿತೆಗಳು ಕಾಯ್ಜೆಯಡಿಯಲ್ಲಿ ಅಗತ್ಯವಿರುವ ಮಾಸಿಕ ಮಾಹಿತಿ ಪ್ರಕಟಿಸುವಿಕೆಯನ್ನು ವರ್ಸೇ ಹಂಚಿಕೊಳ್ಳುತ್ತದೆ, ಈ ಪ್ರಕಟಿಸುವಿಕೆಯನ್ನು ವೀಕ್ಷಿಸಲು ದಯವಿಟ್ಟು ಭೇಟಿ ಕೊಡಿ.

ಕುಂದುಕೊರತೆಗಳ ಪ್ರಕಟಿಸುವಿಕೆ: ಕುಂದುಕೊರತೆಗಳ ದತ್ತಾಂಶ 

ನೀತಿ ಸಂಹಿತೆಗೆ ಅನುಸಾರವಾಗಿ, ವರ್ಸೇ ಅಸ್ಥಿತ್ವದಲ್ಲಿರುವ ನಿಯಮಗಳನ್ನು ಅನುಸರಿಸಲು ತನ್ನ ಬದ್ಧತೆ ಪ್ರದರ್ಶಿಸುತ್ತದೆ.

tower
inter circlw intercircle intercircle intercircle

Ohh Nooo!

There is no internet connection, please check your connection

TRY AGAIN

Ohh Nooo!

Landscape mode not supported, Please try Portrait.