ಜನವರಿ 2023

ಜೋಶ್ - ಗೌಪ್ಯತಾ ನೀತಿ

ದಯವಿಟ್ಟು ಈ ಗೌಪ್ಯತಾ ನೀತಿಯನ್ನು ಎಚ್ಚರಿಕೆಯಿಂದ ಓದಿರಿ. ಈ ಖಾಸಗಿ ನೀತಿಯನ್ನು ವರ್ಸೇ ಇನ್ನೋವೇಷನ್ ಪ್ರೈವೇಟ್ ಲಿಮಿಟೆಡ್ ತಕ್ಷಣದಿಂದಲೇ ಜಾರಿಗೆ ತಂದಿದ್ದು, ಕಂಪನಿಯ ವ್ಯವಹಾರ ಸ್ಥಳ 11ನೇ ಮಹಡಿ, ವಿಂಗ್ ‘ಇ” ಹೆಲಿಯೋಸ್ ಬಿಸಿನೆಸ್ ಪಾರ್ಕ್, ಔಟರ್ ರಿಂಗ್ ರಸ್ತೆ, ಕಾಡುಬೀಸನಹಳ್ಳಿ, ಬೆಂಗಳೂರು – 560103, ಕರ್ನಾಟಕ, ಭಾರತ ಇಲ್ಲಿದೆ. (“ಜೋಶ್”, “ವರ್ಸೇ”, “ನಾವು”. “ನಮ್ಮಲ್ಲಿ” ಅಥವಾ “ನಮ್ಮ”) 

1. ಸಾಮಾನ್ಯ

ಎ. ಜೋಶ್ ನಿಮ್ಮ (“ನೀವು”, “ನಿಮ್ಮ”, ಅಥವಾ “ಬಳಕೆದಾರರು”) ಖಾಸಗಿತನವನ್ನು ತುಂಬಾ ಗಂಭೀರವಾಗಿ ಪರಿಗಣಿಸುತ್ತದೆ ಮತ್ತು ನಿಮ್ಮ ಖಾಸಗಿ ದತ್ತಾಂಶ/ ಮಾಹಿತಿಯನ್ನು ರಕ್ಷಣೆ ಮಾಡಲು ಅದು ತನ್ನ ಪ್ರಯತ್ನವನ್ನು ಅತ್ಯುತ್ತಮವಾಗಿ ಮಾಡುತ್ತದೆ. ಜೋಶ್ ತನ್ನ ವೇದಿಕೆ ಮತ್ತು ಸೇವೆಗಳನ್ನು ಬಳಸಲು ಒಂದು ಸುರಕ್ಷಿತ ಮತ್ತು ನಂಬಿಕಾರ್ಹ ವಾತಾವರಣವನ್ನು ಒದಗಿಸಲು ಸದಾ ಪ್ರಯತ್ನಿಸುತ್ತದೆ. ನಿಮ್ಮ ಯಾವುದೇ ಖಾಸಗಿ ಮಾಹಿತಿಯನ್ನು ಜೋಶ್ ಸಂಗ್ರಹಿಸಿದಲ್ಲಿ ಅದನ್ನು ಈ ಗೌಪ್ಯತಾ ನೀತಿಗೆ ಅನುಗುಣವಾಗಿ ಬಳಸುತ್ತದೆ ಮತ್ತು ಈ ಕೆಳಗೆ ಷರತ್ತುಗಳು ಮತ್ತು ನಿಬಂಧನೆಗಳನ್ನು ನೀಡಲಾಗಿದೆ.

ಬಿ. ಈ ಗೌಪ್ಯತಾ ನೀತಿಯು ಜೋಶ್ನ ಮೊಬೈಲ್ ಅಥವಾ ಡೆಸ್ಕ್ ಟಾಪ್ ಅಪ್ಲಿಕೇಷನ್ ಸಾಫ್ಟ್ ವೇರ್ ತಂತ್ರಜ್ಞಾನಕ್ಕೆ  (“ವೇದಿಕೆ” ಅಥವಾ “ಜೋಶ್”) ಅನ್ವಯಗೊಳ್ಳುತ್ತದೆ ಮತ್ತು ಅದನ್ನು ಜೋಶ್ ಎಂದು ಕರೆಯಲಾಗುತ್ತದೆ ಮತ್ತು ವೇದಿಕೆಯೊಂದಿಗೆ ಜೋಶ್ ನಿಂದ ನೀಡಲಾಗುವ ಸೇವೆಗಳನ್ನು (“ಸರ್ವೀಸಸ್”) ಎಂದು ಕರೆಯಲಾಗುತ್ತದೆ.

ಸಿ. ಈ ಗೌಪ್ಯತಾ ನೀತಿಯು ಮೊಬೈಲ್ ಅಥವಾ ಡೆಸ್ಕ್ ಟಾಪ್ ಅಪ್ಲಿಕೇಷನ್ಸ್ ಮತ್ತು / ಅಥವಾ ಅದರೊಂದಿಗೆ ಸಂಪರ್ಕಿತಗೊಂಡಿರುವ ಸೇವೆಗಳ ಬಳಕೆದಾರರಿಂದ ಸಂಗ್ರಹಿಸಿದ ಮಾಹಿತಿಯನ್ನು ನಾವು ಸಂಗ್ರಹಿಸುವ, ಬಳಸುವ ಮತ್ತು ನಿರ್ವಹಿಸುವ ಮತ್ತು ಬಳಕೆದಾರರಿಂದ ಪ್ರಕಟಿಸುವ ರೀತಿಯಲ್ಲಿ ಸೆಟ್ ಮಾಡಲಾಗಿದೆ.

ಡಿ. ನೀವು ಈ ಪಾಲಿಸಿಯನ್ನು ಎಚ್ಚರಿಕೆಯಿಂದ ಓದಲು ಸೂಚಿಸಲಾಗಿದೆ ಮತ್ತು ನೀವು ಈ ಪಾಲಿಸಿಯ ನಿಯಮಗಳನ್ನು ಒಪ್ಪಿದಲ್ಲಿ ಮಾತ್ರ ನಿಮ್ಮ ಒಪ್ಪಿಗೆಯನ್ನು ನೀಡಬೇಕು. ನಿಮ್ಮ ಪ್ರೊಫೈಲ್ ನ್ನು ವೇದಿಕೆಯಲ್ಲಿ ಮತ್ತು/ಅಥವಾ ಬಳಸಿದಲ್ಲಿ ಅಥವಾ ನೋಂದಾಯಿಸಿಕೊಂಡಲ್ಲಿ ಈ ವೇದಿಕೆಯೊಂದಿಗೆ ನೀಡಲಾಗುವ ಸೇವೆಗಳನ್ನು ಬಳಸಿಕೊಳ್ಳಲು ನೀವು ಒಪ್ಪಿಗೆಯನ್ನು ನೀಡುತ್ತೀರಿ ಮತ್ತು ಈ ಪಾಲಿಸಿಯಲ್ಲಿ ತಿಳಿಸಲಾದಂತೆ ನಿಮ್ಮ ಮಾಹಿತಿಯನ್ನು ಬಳಸಲು, ಸಂಗ್ರಹಿಸಲು, ವರ್ಗಾಯಿಸಲು, ದಾಸ್ತಾನು ಮಾಡಲು, ಅಭಿವ್ಯಕ್ತಪಡಿಸಲು ನೀವು ಒಪ್ಪಿಗೆಯನ್ನು ನೀಡುತ್ತೀರಿ.

ಇ. ಈ ವೇದಿಕೆಯನ್ನು ಬಳಸಿಕೊಂಡು ಅಪ್ ಡೇಟಿಂಗ್, ಡೌನ್ ಲೋಡಿಂಗ್, ಇನ್ ಸ್ಟಾಲಿಂಗ್ ಮತ್ತು/ಅಥವಾ ಪ್ರವೇಶವನ್ನು ಮುಂದುವರೆಸಲು ನೀವು ಈ ಗೌಪ್ಯತಾ ನೀತಿಯಲ್ಲಿನ ತಿದ್ದುಪಡಿ, ಸೇರ್ಪಡೆ ಅಥವಾ ಮಾರ್ಪಾಡು ಮತ್ತು ಯಾವುದೇ ಬದಲಾವಣೆಗಳನ್ನು ಒಪ್ಪಿಕೊಳ್ಳಬೇಕಾಗುತ್ತದೆ.

ಎಫ್. ಈ ಗೌಪ್ಯತಾ ನೀತಿಯು ಯಾವುದೇ ಮೂರನೇ ವ್ಯಕ್ತಿಯ ವೆಬ್ ಸೈಟ್ ಗಳು, ಸೇವೆಗಳು, ಅಪ್ಲಿಕೇಶನ್ ಗಳು ಅಥವಾ ವ್ಯವಹಾರಗಳು (ಮೂರನೇ ತಂಡದ ಸೇವೆಗಳು). ಸೀಮಿತವಾಗಿರದ ಆದರೆ ಜೋಶ್ ಮಾಲೀಕತ್ವ ಹೊಂದಿರದ, ನಿಯಂತ್ರಿಸಿದ, ಅಥವಾ ನಿರ್ವಹಣೆ ಮಾಡದ ಮೂರನೇ ತಂಡದ ಕಾರ್ಯಗಳಿಗೆ ಅನ್ವಯಿಸುವುದಿಲ್ಲ. ಜೋಶ್ ಮೂರನೇ ತಂಡದ ಸೇವೆಗಳ ವಿಷಯ ಅಥವಾ ಗೌಪ್ಯತಾ ನೀತಿಗಳ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ಜೋಶ್ ವೇದಿಕೆಯ ಮೂಲಕ ಪ್ರವೇಶಿಸುವ ಎಲ್ಲಾ ಮೂರನೇ ತಂಡದ ಸೇವೆಗಳ ಗೌಪ್ಯತಾ ನೀತಿಯನ್ನು ನೀವು ಎಚ್ಚರಿಕೆಯಿಂದ ಪರಿಶೀಲಿಸಲು ನಿಮ್ಮನ್ನು ಪ್ರೋತ್ಸಾಹಿಸುತ್ತದೆ.

ಜಿ. ಈ ಗೌಪ್ಯತಾ ನೀತಿಯು ವೇದಿಕೆಯ ಸೇವೆಗಳ ಷರತ್ತಿಗೆ ಅನುಗುಣವಾಗಿರುತ್ತದೆ. 

ಎಚ್. ನೀಮಗೊಂದು ವೇಳೆ ಈ ಗೌಪ್ಯತಾ ನೀತಿಯ ಯಾವುದೇ ನಿಯಮಕ್ಕೆ ಸಹಮತವಿಲ್ಲದಿದ್ದರೆ, ನೀವು ವೇದಿಕೆ/ಮತ್ತು/ಅಥವಾ ಸೇವೆಗಳನ್ನು ಬಳಸದಿರಿ ಡೌನ್ ಲೋಡ್, ಇನ್ ಸ್ಟಾಲ್ ಮಾಡದಿರಿ. ಜೋಶ್ ಯಾವುದೇ ಸಮಯದಲ್ಲಿ ಈ ಪುಟವನ್ನು ಅಪ್ ಡೇಟ್ ಮಾಡುವ ಮೂಲಕ ಈ ಗೌಪ್ಯತಾ ನೀತಿಯನ್ನು ಪರಿಷ್ಕರಣೆ, ಬದಲಾವಣೆ, ಸೇರ್ಪಡೆ, ತಿದ್ದುಪಡಿ ಅಥವಾ ಮಾರ್ಪಡಿಸಬಹುದು.

2. ಜೋಶ್ ನಿಂದ ಯಾವ ಮಾಹಿತಿಯನ್ನು ಸಂಗ್ರಹಿಸಬಹುದು?

ಎ. ನಾವು ನೀವು ಖಾತೆಯನ್ನು ರಚಿಸಿ ಮತ್ತು ವೇದಿಕೆಯಲ್ಲಿ ವಿಷಯವನ್ನು ಅಪ್ ಲೋಡ್ ಮಾಡುವಾಗ ನೀವು ನೀಡುವ ಮಾಹಿತಿಯನ್ನು ಸಂಗ್ರಹಿಸುತ್ತೇವೆ ಮತ್ತು ಪ್ರಕ್ರಿಯೆಗೊಳಪಡಿಸುತ್ತೇವೆ. ಇದರಲ್ಲಿ ನೀವು ಬಳಕೆ ಮಾಡುವ ವೇದಿಕೆಯ ತಾಂತ್ರಿಕ ಮತ್ತು ವರ್ತನಾ ಮಾಹಿತಿಯು ಒಳಗೊಂಡಿರುತ್ತದೆ. ನೀವೊಂದು ವೇಳೆ ಖಾತೆಯನ್ನು ತೆರೆಯದೆ ಆಪ್ ಡೌನ್ ಲೋಡ್ ಮಾಡಿ ವೇದಿಕೆಯೊಂದಿಗೆ ಸಂವಹನ ಮಾಡುವ ಸಂದರ್ಭದಲ್ಲಿ ನಾವು ನಿಮ್ಮ ಮಾಹಿತಿಯನ್ನು ಕೂಡ ಸಂಗ್ರಹಿಸುತ್ತೇವೆ. ಜೋಶ್ ವೇದಿಕೆಯಲ್ಲಿ ನೋಂದಣಿಯಾಗುವ ಮೂಲಕ ಬಳಕೆದಾರರಿಂದ ವಿವಿಧ ಹಂತಗಳಲ್ಲಿ ಮಾಹಿತಿಗಳನ್ನು ಸಂಗ್ರಹಿಸಬಹುದು. ಬಳಕೆದಾರರಿಂದ ವಿಷಯಗಳನ್ನು ಸಲ್ಲಿಸುವ ಮೂಲಕ ಅಥವಾ ಬಳಕೆದಾರರು ಸೇವೆಗಳಿಗೆ ಪ್ರವೇಶ ನೀಡುವುದರಿಂದ /ಸೇವೆಗಳನ್ನು ಬಳಸುವುದರಿಂದ ಮಾಹಿತಿ ಸಂಗ್ರಹಿಸಬಹುದು.

ಬಿ. ಜೋಶ್ ನಿಮ್ಮ ಸಾಮರ್ಥ್ಯವನ್ನು ಗುರುತಿಸಲು ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸಬಹುದು. ವೇದಿಕೆಯಲ್ಲಿ ಡೌನ್ ಲೋಡ್, ಇನ್ ಸ್ಟಾಲೇಷನ್, ಮತ್ತು / ಅಥವಾ ಬಳಕೆ/ಪ್ರವೇಶಿಸುವಾಗ ಅಥವಾ ವೇದಿಕೆ ಮೂಲಕ ಸಲ್ಲಿಸಲಾದ ಸೇವೆಗಳು ಅಥವಾ ಲಕ್ಷಣಗಳ ಪ್ರವೇಶ/ ಬಳಕೆಗೆ ಸಂಬಂಧಿಸಿದಂತೆ ಅಥವಾ ವೇದಿಕೆಗೆ ಸಂಬಂಧಿಸಿದಂತೆ ಸಲ್ಲಿಸಿದ ಮಾಹಿತಿಯನ್ನು ಒಳಗೊಂಡಿರಬಹುದು ಆದರೆ ಅದು ಸೀಮೀತವಾಗಿರುವುದಿಲ್ಲ. ಸಂಗ್ರಹಿಸಿದ ವೈಯಕ್ತಿಕ ಮಾಹಿತಿಯಲ್ಲಿ ನಿಮ್ಮ ಹೆಸರು, ಚಿತ್ರ, ಮೇಲಿಂಗ್ ವಿಳಾಸ, ಇಮೇಲ್ ವಿಳಾಸ, ದೂರವಾಣಿ ಸಂಖ್ಯೆ ಮತ್ತು ಲಿಂಗ, ರಾಷ್ಟ್ರೀಯತೆ, ಪೋಸ್ಟ್ ಕೋಡ್, ಮತ್ತು ಹುಟ್ಟಿದ ದಿನಾಂಕ, ಸಮಯ ಅಥವಾ ಸ್ಥಳ, ಆಸಕ್ತಿಗಳು, ಆದ್ಯತೆಗಳು, ಇಷ್ಟಗಳು, ಇಷ್ಟವಿಲ್ಲದ ವಿಷಯಗಳು ಮತ್ತು ಬಳಕೆಯ ಮಾಹಿತಿ ಇತ್ಯಾದಿ ಒಳಗೊಂಡು ಸೀಮಿತವಾಗಿರದ ಇತರ ವೈಯಕ್ತಿಕ ಮಾಹಿತಿಯಂತಹ ಜನಸಂಖ್ಯಾ ಮಾಹಿತಿಯನ್ನು ಒಳಗೊಂಡಿರಬಹುದು.

ಸಿ. ನೀವೊಂದು ವೇಳೆ ನಮಗೆ ಅಂತಹ ಮಾಹಿತಿಯನ್ನು ಸಲ್ಲಿಸಿದಲ್ಲಿ ಅಥವಾ ಅಂತಹ ಮಾಹಿತಿಗೆ ವೇದಿಕೆಯ ಅಥವಾ ಸೇವೆಗಳ ಮೂಲಕ ಸಾಮಾಜಿಕ ಸಂಪರ್ಕ ಜಾಲದಲ್ಲಿ ಸಂಪರ್ಕಿಸಿ ಪ್ರವೇಶವನ್ನು ಒದಗಿಸಿದಲ್ಲಿ ಮಾತ್ರ ಜೋಶ್ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುತ್ತದೆ. (ಉದಾ: ನೀವು ವೇದಿಕೆಯೊಂದಿಗೆ ಸಂಪರ್ಕ ಹೊಂದಿದ ಸೌಲಭ್ಯಗಳು ಮತ್ತು ಸೇವೆಗಳನ್ನು ಬಳಸಿದಲ್ಲಿ ಅಥವಾ ನಿರ್ದಿಷ್ಟವಾಗಿ ವೇದಿಕೆಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ತೊಡಗಿಸಿ ಕೊಂಡಾಗ, ಆದರೆ ಇದು ಸೀಮಿತವಾಗಿಲ್ಲ, ಸದಸ್ಯರಾಗುವುದು ಅಥವಾ ಅಕೌಂಟ್ ಗಾಗಿ ಸೈನಿಂಗ್ ಮಾಡಿವುದು ಅಥವಾ ಸಾಮಾಜಿಕ ಜಾಲತಾಣದಲ್ಲಿ ಅಕೌಂಟ್ ನ್ನು ಜೋಡಣೆ ಮಾಡಿವುದು ಸೇರಿದಂತೆ ಆದರೆ ಇದು ಫೇಸ್ ಬುಕ್, ಟ್ವಿಟ್ಟರ್ ಅಥವಾ ಗೂಗಲ್ ಪ್ಲಸ್ ಗೆ ಸೀಮಿತವಾಗಿಲ್ಲ)

ಡಿ. ನೀವು ನಮ್ಮೊಂದಿಗೆ ಸಂವಹನ ಮಾಡುವಾಗ ಇ ಮೇಲ್ ಅಥವಾ ದೂರವಾಣಿ ಸಂಖ್ಯೆ ನೀಡಿದಾಗ ಅಥವಾ ವೇದಿಕೆ ಮತ್ತು / ಅಥವಾ ಸೇವೆಗಳ ಇತರ ಸಂವಹನ / ಸಂವಹನೇತರ ಲಕ್ಷಣಗಳಿಗೆ ಪ್ರವೇಶ / ಬಳಕೆ ಮಾಡುವ ಸಂದರ್ಭದಲ್ಲಿ ಜೋಶ್ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸಬಹುದು

ಇ. ನೀವು ಯಾವಾಗಲೂ ವೈಯಕ್ತಿಕ ಮಾಹಿತಿಯನ್ನು ಪೂರೈಸಲು ನಿರಾಕರಿಸಬಹುದು: ಆದ್ದಾಗ್ಯೂ ನೀವು ವೇದಿಕೆಯನ್ನು ಬಳಸುವುದನ್ನು ಮತ್ತು / ಅಥವಾ ವೇದಿಕೆ ಮತ್ತು ಸೇವೆಗಳ ಕೆಲವೊಂದು ಲಕ್ಷಣಗಳನ್ನು ನೀವು ಬಳಸುವುದನ್ನು ಅದು ನಿರ್ಬಂಧಿಸುತ್ತದೆ.

ಎಫ್. ನೀವು ವೇದಿಕೆ ಮತ್ತು/ ಅಥವಾ ಅದರ ಸೇವೆಗಳನ್ನು ಬಳಸುವಾಗ ಅಥವಾ ನೀವು ವೇದಿಕೆಯೊಂದಿಗೆ ಪ್ರವೇಶಿಸುವಾಗ ಅಥವಾ ಸಂವಹನ ಅಥವಾ ಬಳಸುವಾಗ ವೈಯಕ್ತಿಕ ಅಥವಾ ವೈಯಕ್ತಿಕವಲ್ಲದ ಮಾಹಿತಿಯಾದ ಇತರ ಮಾಹಿತಿಗಳನ್ನು ಜೋಶ್ ಸಂಗ್ರಹಿಸಿ ದಾಸ್ತಾನು ಮಾಡಿಕೊಳ್ಳಬಹುದು. ಮೊಬೈಲ್ ಅಥವಾ ಕಂಪ್ಯೂಟರ್ ಹೆಸರು, ವರ್ಷನ್, ಬಳಸಿದ ಸಾಧನದ ಮಾದರಿ, ನೀವು ಆಪರೇಟ್ ಮಾಡುವ ಸಿಸ್ಟಂ ಮತ್ತು ವರ್ಷನ್, ಮೊಬೈಲ್ ಸಾಧನದ ವಿಶಿಷ್ಟ ಗುರುತಿನ ಚೀಟಿ , ಮೂರನೇ ತಂಡದ ಆಪ್ಸ್ ಗಳು, ಅಥವಾ ಈ ವೇದಿಕೆಗೆ ನಿಮ್ಮನ್ನು ಉಲ್ಲೇಖಿಸಿದ ವೆಬ್ ಸೈಟ್ಸ್ ಅಥವಾ ಸೇವೆಗಳು, ಆದ್ಯತೆಯ ಭಾಷೆಗಳು, ಸ್ಥಳದ ಮಾಹಿತಿ, ಐಪಿ ವಿಳಾಸ, ತಾಂತ್ರಿಕ ಮಾಹಿತಿ, ಮಿತಿಯಿಲ್ಲದ ಪ್ಯಾಕೇಜ್ ಹೆಸರು ಒಳಗೊಂಡಂತೆ ಮೂರನೇ ತಂಡದ ಆಪ್ಸ್ ಬಗೆಗಿನ ಮಾಹಿತಿ(ಪ್ಲೇ ಸ್ಟೋರ್ ನಲ್ಲಿರುವ ಪ್ಯಾಕೆಜ್ ಐ ಡಿಯಲ್ಲಿರುವಂತೆಯೇ ಇರುತ್ತದೆ) ಪ್ಯಾಕೇಜ್ ವರ್ಷನ್, ಇನ್ ಸ್ಟಾಲೇಷನ್ ಮತ್ತು / ಅಥವಾ ಅನ್ ಇನ್ ಸ್ಟಾಲೇಷನ್ ಈವೆಂಟ್ ಮಾಹಿತಿ ಮತ್ತು ಬಳಕೆದಾರರ ಬಗ್ಗೆ ಇದೇ ರೀತಿಯ ಇತರ ಮಾಹಿತಿಗಳು ಒಳಗೊಂಡಿವೆ.

ಜಿ. ನಿಮ್ಮ ನಿರ್ದಿಷ್ಟ ಸ್ಪಷ್ಟ ಒಪ್ಪಿಗೆಯಾಧಾರದ ಮೇಲೆ ನಾವು ಹೆಚ್ಚುವರಿ ಮಾಹಿತಿಯಾದ ನಿಮ್ಮ ಜಿಪಿಎಸ್, ಫೋನ್ ಮೆಮೊರಿ ಇತ್ಯಾದಿ ಒಳಗೊಂಡಂತೆ ಆದರೆ ಸೀಮಿತವಾಗಿರದ ಹೆಚ್ಚುವರಿ ಮಾಹಿತಿ ಸಂಗ್ರಹಿಸಬಹುದು. ಇಂತಹ ಮಾಹಿತಿಗಳು ನಿಮ್ಮ ಪ್ರೊಫೈಲ್ ಅಥವಾ ಅದರ ವಿಷಯಗಳನ್ನು ವೇದಿಕೆಯಲ್ಲಿ ಅಪ್ ಡೇಟ್ ಮಾಡಲು ಬಳಸಬಹುದು.

ಎಚ್. ನೀವು ನಿಮ್ಮ ವೈಯಕ್ತಿಕ ಮಾಹಿತಿ ಮತ್ತು / ಅಥವಾ ಇತರ ಮಾಹಿತಿಗಳನ್ನು ಜೋಶ್ ನೊಂದಿಗೆ ಹಂಚಿಕೊಳ್ಳಲು ಅಥವಾ ಒದಗಿಸಲು ಬಯಸದಿದ್ದರೆ ನೀವು ವೇದಿಕೆಯನ್ನು ಮತ್ತು ಅದರ ಸೇವೆಗಳನ್ನು ಡೌನ್ ಲೋಡ್, ಇನ್ ಸ್ಟಾಲ್ ಮತ್ತು/ ಅಥವಾ ಬಳಸುವಂತಿಲ್ಲ. ವೈಯಕ್ತಿಕ ಮಾಹಿತಿಗಳನ್ನು ಮತ್ತು ಇತರ ಮಾಹಿತಿಗಳನ್ನು ಜೋಶ್ ಗೆ ಒದಗಿಸಿದಲ್ಲಿ, ನೀವು  ಈ ಖಾಸಗಿ ನೀತಿಯಲ್ಲಿ ಒದಗಿಸಲಾದಂತಹ ಮೇಲೆ ಹೇಳಿದ ಮಾಹಿತಿಗಳನ್ನು ಬಳಸಲು ಜೋಶ್ ಅನುಮತಿ ನೀಡುತ್ತದೆ.

3. ಜೋಶ್ ಹೇಗೆ ಸಂಗ್ರಹಿಸಿದ ಮಾಹಿತಿಯನ್ನು ಬಳಸುತ್ತದೆ.

ಎ. ಜೋಶ್ ನಿಮ್ಮ ವೈಯಕ್ತಿಕ ಮಾಹಿತಿ ಮತ್ತು ಇತರ ಮಾಹಿತಿಯನ್ನು ಸಂಗ್ರಹಿಸಿಕೊಳ್ಳಬಹುದು ಮತ್ತು ವ್ಯವಹಾರ ಹಾಗೂ/ ಅಥವಾ ವಾಣಿಜ್ಯೇತರ ಉದ್ದೇಶಗಳಿಗಾಗಿ ಬಳಸಿಕೊಳ್ಳಬಹುದು. ಜೋಶ್ ಈ ಕೆಳಗಿನ ಉದ್ದೇಶಗಳಿಗಾಗಿ ನಿಮ್ಮ ಮಾಹಿತಿಯನ್ನು ಬಳಸಬಹುದಾಗಿದೆ.

1. ನೀವು ವೇದಿಕೆಗೆ ಲಾಗಿಂಗ್ ಆಗುವಾಗ ನಿಮ್ಮನ್ನು ಗುರುತಿಸಲು ನಿಮ್ಮ ಇಮೇಲ್ ವಿಳಾಸ ಮತ್ತು ಪಾಸ್ ವರ್ಡ್ ನ್ನು ಬಳಸಲಾಗುವುದು. ವೇದಿಕೆಗೆ ನಿಮ್ಮ ಪ್ರವೇಶವನ್ನು ನಿರ್ಬಂಧಿಸಲು ಮತ್ತು ವೇದಿಕೆ ಮತ್ತು ಅದರ ಸೇವೆಗಳ ಬಳಕೆಯನ್ನು ನಿಯಂತ್ರಿಸಲು ಜೋಶ್ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಬಳಸಬಹುದು, ಹಾಗೆಯೇ ನಿಮ್ಮೊಂದಿಗೆ ಸಂವಹನ ಮಾಡಲು, ವೇದಿಕೆಯನ್ನು ಬಳಸುವ ನಿಮ್ಮ ಅನುಭವವನ್ನು ಗ್ರಾಹಕೀಯಗೊಳಿಸಬಹುದು ಮತ್ತು /ಅಥವಾ ಜೋಶ್ ಕಾಲಕಾಲಕ್ಕೆ ಯಾವುದೇ ಇಮೇಲ್, ನ್ಯೂಸ್ ಲೆಟರ್ ಅಥವಾ ಇತರ ವಿಷಯಗಳನ್ನು ಕಳುಹಿಸಬಹುದು. ಮತ್ತು ವಿಷಯ ಆಧರಿತ ಮತ್ತು ವೈಯಕ್ತಿಕವಾಗಿ ಗುರುತಿಸಲು ಯೋಗ್ಯವಾದ ಮತ್ತು ಬಳಸಲು ಯೋಗ್ಯ ಅಥವಾ ಆಸಕ್ತಿಯುತ್ತ ವಿಷಯಗಳನ್ನು ಒದಗಿಸಬಹುದು. ನಿಮ್ಮ ಇ ಮೇಲ್ ನ್ನು ಬಳಕೆದಾರ ಮಾಹಿತಿ, ಆಡಳಿತಾತ್ಮಕ ಮಾಹಿತಿ, ಖಾತೆಗೆ ಸೆಟ್ಟಿಂಗ್ಸ್ ನಲ್ಲಿ ಬದಲಾವಣೆ  ಹಾಗೂ ವೇದಿಕೆ /ಸೇವೆಗಳಿಗೆ ಯಾವುದೇ ಬದಲಾವಣೆ ಅಥವಾ ಜೋಶ್ ನ ಹೊಸ ನೀತಿಗಳ ಅಪ್ ಡೇಟ್ ಗಳನ್ನು ಕಳುಹಿಸಲು ಬಳಸಬಹುದು. ಇದರ ಹೊರತಾಗಿ, ನೀವು ನಮ್ಮ ಮೇಲಿಂಗ್ ಲಿಸ್ಟ್ ಆಯ್ಕೆಗಾಗಿ ಆಯ್ಕೆ ಮಾಡಿದರೆ, ನೀವು ಕಂಪನಿಯ ಸುದ್ದಿ, ಸಂಬಂಧಿತ ಉತ್ಪನ್ನ ಅಥವಾ ಸೇವೆಗಳ ಮಾಹಿತಿ ಇತ್ಯಾದಿಗಳೀಗೆ ಸಂಬಂಧಿಸಿದ ಮೇಲ್ ಗಳನ್ನು ನಿಯತಕಾಲಿಕವಾಗಿ ಸ್ವೀಕರಿಸುತ್ತೀರಿ. ನಿಮ್ಮ ಇಮೇಲ್ ನ್ನು ಇತರ ಯಾವುದೇ ವಿಚಾರಣೆಗಳಿಗೆ ಪ್ರತಿಕ್ರಯಿಸಲು, ಪ್ರಶ್ನಗಳಿಗೆ ಪ್ರತಿಕ್ರಯಿಸಲುಉ, ಮತ್ತು /ಅಥವಾ ನೀವು ಮಾಡಿರುವ ಇತರ ಯಾವುದೇ ಮನವಿಗಳಿಗೆ ಉತ್ತರಿಸಲು ಬಳಸಲಾಗುತ್ತದೆ. ಒಂದು ವೇಳೆ ನೀವು ಭವಿಷ್ಯದಲ್ಲಿ ಯಾವುದೇ ಇ ಮೇಲ್ ಗಳನ್ನು ಸ್ವೀಕರಿಸುವುದನ್ನು ಅನ್ ಸಬ್ ಸ್ಕ್ರೈಬ್ ಮಾಡಲು ಬಯಸಿದರೆ, ಪ್ರತಿ ಇಮೇಲ್ ನ ಕೆಳಗಡೆ ವಿವರವಾದ ಅನ್ ಸಬ್ ಸ್ಕ್ರೈಬ್ ಸೂಚನೆಯನ್ನು ಜೋಶ್ ಸೇರಿಸುತ್ತದೆ ಅಥವಾ ನೀವು ಜೋಶ್ ನ್ನು ವೇದಿಕೆಯ ಮೂಲಕ ಸಂಪರ್ಕಿಸಬಹುದು.

2.ಜೋಶ್ ಸಂಗ್ರಹಣೆ ಮಾಡಿದ ಮಾಹಿತಿಯನ್ನು ವೇದಿಕೆ ಮತ್ತು / ಅಥವಾ ಸೇವೆಗಳ ಬಳಕೆಯನ್ನು ಮತ್ತು ವೇದಿಕೆಯ ಗುಣಲಕ್ಷಣಗಳನ್ನು ಸುಧಾರಿಸುವ ಉದ್ದೇಶಕ್ಕಾಗಿ ವೇದಿಕೆಗೆ ಭೇಟಿ ನೀಡುವ ಜನರನ್ನು ವಿಶ್ಲೇಷಿಸಲು ಮತ್ತು ಬಳಸಬಹುದಾಗಿದೆ. ಜೋಶ್ ನಿಮ್ಮ ಮಾಹಿತಿಯನ್ನು ವಿಷಯಗಳ ಗ್ರಾಹಕೀಯತೆ, ಜಾಹೀರಾತುಗಳು ಮತ್ತು ಲಕ್ಷಣಗಳನ್ನು ಒದಗಿಸಲು ವೇದಿಕೆಯ ಬಳಕೆಯನ್ನು ವಿಶ್ಲೇಷಣೆ ಮಾಡಲು ಬಳಸಬಹುದು. ನೀವು ಒದಗಿಸಿದ ಮಾಹಿತಿಯು ನಿಮ್ಮ ಗ್ರಾಹಕ ಸೇವಾ ಮನವಿ ಮತ್ತು ಬೆಂಬಲದ ಅಗತ್ಯತೆಗೆ ಹೆಚ್ಚು ಪರಿಣಾಮಕಾರಿಯಾಗಿ ಪ್ರತಿಕ್ರಯಿಸಲು ಜೋಶ್ ಗೆ ನೆರವಾಗುತ್ತದೆ.

3.  ಬಳಕೆದಾರರು ಒಂದು ಗುಂಪಾಗಿ ವೇದಿಕೆ ಮತ್ತು/ಅಥವಾ ಸೇವೆಗಳನ್ನು ಹೇಗೆ ಬಳಸುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ಜೋಶ್ ಮಾಹಿತಿಯನ್ನು ಬಳಸಿಕೊಳ್ಳಬಹುದು. ಬಳಕೆದಾರರು ಒದಗಿಸಿದ ವೈಯಕ್ತಿಕ ಮಾಹಿತಿಯನ್ನು ಜೋಶ್ ನ ಒಪ್ಪಂದ ಮತ್ತು ಇತರ ಯಾವುದೇ ಅನ್ವಯಿತ ಕಾನೂನುಗಳ ಉಲ್ಲಂಘನೆ ಮಾಡುವ ಚಟುವಟಿಕೆಗಳನ್ನು ತಡೆಗಟ್ಟಲು ಅಥವಾ ಅದರ ವಿರುದ್ಧ ಕ್ರಮ ತೆಗೆದುಕೊಳ್ಳಲು ಜೋಶ್ ಬಳಸಬಹುದು.

4. ಜೋಶ್ ನಿಮ್ಮ ವೈಯಕ್ತಿಕವಲ್ಲದ ಮಾಹಿತಿಯನ್ನು ಯಾವುದೇ ಮಿತಿಯಿಲ್ಲದೆ ಮೂರನೇ ವ್ಯಕ್ತಿಯ ಆಪ್ಸ್ ಗಳ ಬಗ್ಗೆ, ಪ್ಯಾಕೇಜ್ ಬಗ್ಗೆ (ಪ್ಲೇಸ್ಟೋರ್ ನಲ್ಲಿನ ಪ್ಯಾಕೇಜ್ ಐಡಿಯಂತೆ ಇರುತ್ತದೆ.) ಪ್ಯಾಕೇಜ್ ವರ್ಷನ್, ಇನ್ ಸ್ಟಾಲೇಷನ್ ಮತ್ತು / ಅಥವಾ ಅನ್ ಇನ್ ಸ್ಟಾಲೇಷನ್ ನಿಮ್ಮ ಆಸಕ್ತಿಯನ್ನು ಆಧರಿಸಿದ ಸೇವೆಗಳು ಮತ್ತು ವಿಷಯಗಳ ವೈಯಕ್ತಿಕರಣಗೊಳೀಸಲು ಈವೆಂಟ್ ಮಾಹಿತಿಗಳನ್ನು ತಿಳಿದುಕೊಳ್ಳಲು ಬಳಸಬಹುದು. ಹಾಗೆಯೇ ನೀವು ಸ್ಥಾಪಿಸಿದ ಅಥವಾ ಬಳಸಿದ ಇತರ ಅಪ್ಲಿಕೇಷನ್ ಗಳಿಗೆ ಸಂಬಂಧಿಸಿದ ವಿಷಯವನ್ನು ಪ್ರಚಾರ ಮಾಡಲು ಅಥವಾ ನಿಮಗಾಗಿ ಗ್ರಾಹಕೀಯಗೊಳಿಸಿದ ಶೇರಿಂಗ್ ಆಯ್ಕೆಗಳನ್ನು ರಚಿಸಲು ಜೋಶ್ ನಿಮ್ಮ ವೈಯಕ್ತಿಕವಲ್ಲದ ಮಾಹಿತಿಯನ್ನು ಬಳಸಬಹುದು.

5. ವೇದಿಕೆ ಮತ್ತು ಸೇವೆಗಳ ನಿಮ್ಮ ಬಳಕೆ ಹಾಗೂ ವೇದಿಕೆ ಮತ್ತು ಸೇವೆಗಳ ಲಕ್ಷಣಗಳನ್ನು ಸುಧಾರಿಸಲು ವೇದಿಕೆ ಮತ್ತು ಸೇವೆಗಳಿಗೆ ಭೇಟಿ ನೀಡುವ ಹಾಗೂ ಬಳಸುವ ಜನರನ್ನು ವಿಶ್ಲೇಷಿಸಲು ಜೋಶ್ ನಿಮ್ಮ ಮಾಹಿತಿಯನ್ನು ಬಳಸಬಹುದು. ವೇದಿಕೆ ಮತ್ತು /ಅಥವಾ ಸೇವೆಗಳಿಗೆ ಪ್ರವೇಶಿಸುವಾಗ, ಬಳಸುವಾಗ ಅಥವಾ ಇನ್ ಸ್ಟಾಲ್ ಮಾಡುವಾಗ ನಿಮ್ಮ ಮಾಹಿತಿ ವೇದಿಕೆಯಲ್ಲಿ ಎಸ್ ಡಿಕೆ ಗಳನ್ನು (ಸಾಫ್ಟ್ ವೇರ್, ಡೆವಲಪ್ ಮೆಂಟ್ ಕಿಟ್ ಗಳು) ಒಳಗೊಂಡಿರುವ ಮೂರನೇ ವ್ಯಕ್ತಿಗಳಿಗೆ ಕೂಡ ಲಭ್ಯವಾಗುತ್ತದೆ.  ಗೂಗಲ್ ಜಾಹೀರಾತುಗಳಿಗೆ ಸೀಮಿತವಾಗಿರದಿರುವ ಅಂತಹ ಎಸ್ ಡಿ ಕೆ ಗಳೆಂದರೆ ಗೂಗಲ್ ಪ್ಲಾಟ್ ಫಾರ್ಮ್ ಇಂಡೆಕ್ಸಿಂಗ್, ಗೂಗಲ್ ಸಪೋರ್ಟ್ ಲೈಬ್ರರಿ, ಗೂಗಲ್ ಡಿಸೈನ್ ಲೈಬ್ರರಿ, ಗೂಗಲ್ ಅಥೆಂಟಿಕೇಷನ್ ಫಾರ್ ಲಾಗಿನ್, ಮೊಬ್ವಿಸ್ಟಾ (ಜಾಹೀರಾತು) ಆಪ್ ನೆಕ್ಸ್ಟ್ ನೇಟಿವ್ (ಜಾಹೀರಾತು) ಆಪ್ ನೆಕ್ಸ್ಟ್  ಇಂಟರ್ ಸ್ಟೀಷಿಯಲ್ (ಜಾಹೀರಾತು) , ಫೇಸ್ ಬುಕ್ ಆಡಿಯನ್ಸ್ ನೆಟ್ ವರ್ಕ್ (ಜಾಹೀರಾತು) ವಿಮ್ಯಾಕ್ಸ್ (ಜಾಹೀರಾತು) ಮ್ಯಾಸ್ಟಡ್ವ್ಯೂ (ಎಮ್ರೈಡ್) ಗ್ಲೈಡ್ ಫಾರ್ ಗ್ರಾಫಿಕ್ಸ್, ಬ್ರಾಂಚ್ ಐಒ ಫಾರ್ ಡೀಪ್ ಲಿಂಕ್ ಸಪೋರ್ಟ್ , ಬೈಡು (ಜಾಹೀರಾತು) ಡೀಪ್ ಲಿಂಕ್ ಸಪೋರ್ಟ್ ಗಾಗಿ ಫೈರ್ ಬೇಸ್ , ಐ ಎಂ ಎ (ಜಾಹೀರಾತು), ಆಪ್ ನೆಕ್ಸ್ಟ್ ಆಕ್ಷನ್ಸ್ (ಜಾಹೀರಾತು), ಚಿತ್ರಣ ನಿರ್ವಹಣೆಗಾಗಿ ಪಿಕಾಸೋ , ಆರ್ ಎಕ್ಸ್ ಜಾವಾ, ಕೋಡ್ ದಕ್ಷತೆಗಾಗಿ ರೆಟ್ರೋಫಿಟ್ ಅಂಡ್ ಡ್ಯಾಗರ್, ನೆಟ್ ವರ್ಕ್ ದಕ್ಷತೆಗಾಗಿ ಓಕೆಎಚ್ ಟಿಟಿಪಿ, ಒಟ್ಟೊ ಈವೆಂಟ್ ಬಸ್, ಮೆಮೊರಿ ಆಪ್ಟಿಮೈಸೇಷನ್ ಗಾಗಿ ಡಿಸ್ಕ್ಲ್ರುಕ್ಯಚ್, ನೆಟ್ ವರ್ಕ್ ಗುಣಮಟ್ಟ ವಿಶ್ಲೇಷಣೆಗಾಗಿ ಫೇಸ್ ಬುಕ್ ಕನೆಕ್ಷನ್ ಕ್ಲಾಸ್, ಲಾಗಿನ್ ಗಾಗಿ ಫೇಸ್ ಬುಕ್ ಎಸ್ ಡಿಕೆ ಮತ್ತು ದಕ್ಷತೆ ಆಪ್ಟಿಮೈಸೇಷನ್ ಗಾಗಿ ಎಸ್ ಕ್ಯೂ ಎಲ್ ಲೈಟ್ ಅಸೆಟ್ ಹೆಲ್ಪರ್. ಈ ಎಸ್ ಡಿ ಕೆಗಳು ಸಾಮಾನ್ಯ ವಿಶ್ಲೇಷಣಾತ್ಮಕ ಮತ್ತು ಇತರ ಉದ್ದೇಶಗಳಿಗಾಗಿ ನಿಮ್ಮ ಮಾಹಿತಿಯನ್ನು ಬಳಸಬಹುದು.

6. ನಿಮ್ಮ ಮಾಹಿತಿಯನ್ನು ಮಾರುಕಟ್ಟೆ ಸಂಶೋಧನೆ ಉದ್ದೇಶಗಳಿಗಾಗಿ ಕೂಡ ಜೋಶ್ ನಿಮ್ಮ ಮಾಹಿತಿಯನ್ನು ಬಳಸಬಹುದಾಗಿದೆ, ಮತ್ತು ಅದು ತನ್ನ ನಿಯಂತ್ರಣದಲ್ಲಿರುವ ಸಹವರ್ತಿ ವ್ಯವಹಾರಗಳೊಂದಿಗೆ (ಜೋಶ್ ಇನ್ನೋವೇಷನ್ ಸೇರಿದಂತೆ) ನಿಮ್ಮ ಮಾಹಿತಿಯನ್ನು ಹಂಚಿಕೊಳ್ಳಬಹುದು. ನೀವು ವಿಶೇಷವಾಗಿ ಅಂತಹ ಬಳಕೆಗಳಿಂದ ಹೊರಗುಳಿಯದ ಹೊರತು ಜೋಶ್ ನಿಮ್ಮ ಮಾಹಿತಿಯನ್ನು ಉದ್ದೇಶಿತ ಜಾಹೀರಾತು, ಉದ್ದೇಶಿತ ವಿಷಯ ವಿತರಣೆ ಹಾಗೂ ಇತರ ವ್ಯವಹಾರ ಉದ್ದೇಶಗಳಿಗಾಗಿ ಬಳಸಬಹುದು.

7. ವೇದಿಕೆಯನ್ನು ಮತ್ತು ಸೇವೆಗಳನ್ನು ನೀವು ಪ್ರವೇಶಿಸುವಾಗ / ಬಳಸುವಾಗ, ಮರುಮಾಹಿತಿ ಒದಗಿಸುವಾಗ, ಟಿಪ್ಪಣಿಗಳನ್ನು ಮಾಡುವಾಗ/ಸಲ್ಲಿಸುವಾಗ, ಇನ್ ಪುಟ್ ಸಲ್ಲಿಸುವಾಗ, ಮತ್ತು ಅಥವಾ ಸೇವೆಗಳಿಗೆ ಸಂಬಂಧಿಸಿದಂತೆ ವೇದಿಕೆಯ ಬಳಕೆದಾರ ಅನುಭವವನ್ನು ಸುಧಾರಿಸಲು ವೇದಿಕೆ ಮತ್ತು ಸೇವೆಗಳಲ್ಲಿ ಸಂವಹನ ಮಾಡುವಾಗ, ನಿಗದಿಗೊಳಿಸಲಾದ ವಿಷಯ ಒದಗಿಸುವಾಗ, ಜಾಹೀರಾತು ಮತ್ತು ಸೇವೆಗಳು, ಮತ್ತು ಇತರ ವ್ಯವಹಾರ ಮತ್ತು/ ಅಥವಾ ವಾಣಿಜ್ಯೇತರ ಉದ್ದೇಶಗಳಿಗಾಗಿ ಜೋಶ್ ನಿಮ್ಮನ್ನು ವೈಯಕ್ತಿಕವಾಗಿ ಗುರುತಿಸಬಹುದಾದ ಮತ್ತು /ಅಥವಾ ನಿಮ್ಮ ಇತರ ಮಾಹಿತಿಗಳನ್ನು ಬಳಸಬಹುದು.

4. ನಿಮ್ಮ ಸಾಮಾಜಿಕ ಖಾತೆಯನ್ನು ಜೋಶ್ ನೊಂದಿಗೆ ಜೋಡಣೆ ಮಾಡುವುದು

ಎ. ನಮ್ಮ ಸೇವೆಗಳು ನಿಮ್ಮ ನಿಮ್ಮ ನಿರ್ದೇಶನ, ನಿಮ್ಮ ಫೇಸ್ ಬುಕ್ ಲಿಂಕ್, ಇನ್ ಸ್ಟಾಗ್ರಾಂ, ವಾಟ್ಸಾಪ್, ಮತ್ತು ಯೂಟ್ಯೂಬ್ ಅಕೌಂಟ್ (ಗಳು) ನಿಮ್ಮ ಜೋಶ್ ಅಕೌಂಟ್ ನೊಂದಿಗೆ ಪ್ರವೇಶಿಸಲು ನಮ್ಮ ಸೇವೆಗಳು ನಿಮಗೆ ಪ್ರವೇಶ ಒದಗಿಸುತ್ತವೆ. ಜೋಶ್ ಮೂಲಕ ನಿಮ್ಮನ್ನು ಹೆಚ್ಚು ಸುಲಭವಾಗಿ ಇತರ ವೇದಿಕೆಗಳನ್ನು ಬಳಕೆದಾರರು ಹುಡುಕಲು ಮತ್ತು ನಿಮ್ಮ ಸಾಮಾಜಿಕ ಮಾಧ್ಯಮ ಖಾತೆ(ಗಳಿಗೆ) ಮರುನಿರ್ದೇಶಿಸಲು ಅನುಮತಿ ನೀಡುತ್ತದೆ.

ಬಿ. ನಾವು ಕೇವಲ ಇನ್ ಸ್ಟಾ ಗ್ರಾಂ ಅಥವಾ ಯೂಟ್ಯೂಬ್ ವರ್ಗಾಯಿಸಲು ಅನುಮತಿಸುವ ಸೀಮಿತ ಮಾಹಿತಿಯನ್ನು ಸ್ವೀಕರಿಸುತ್ತೇವೆ ಮತ್ತು ಸಂಗ್ರಹಿಸುತ್ತೇವೆ. (ನಿಮ್ಮ ಹೆಸರು, ಬಳಕೆದಾರ ಹೆಸರು ಅಥವಾ ವಾಹಿನಿ ಹೆಸರು ಮತ್ತು ಸಾರ್ವಜನಿಕ ಪ್ರೊಪೈಲ್ ನಂತಹ ಮಾಹಿತಿ) ಮತ್ತು ನೀವು ಜೋಶ್ ಖಾತೆಯೊಂದಿಗೆ ಮೊದಲು ನಿಮ್ಮ ಖಾತೆಯನ್ನು ಅಂತಹ ವೇದಿಕಳೊಂದಿಗೆ ಜೋಡಣೆ ಮಾಡಿದಾಗ ಎಂದು ಒಪ್ಪಿಕೊಂಡಿರುತ್ತೀರಿ. ಈ ಮಾಹಿತಿಯನ್ನು ನಮ್ಮ ವೇದಿಕೆಯಲ್ಲಿ ನಿಮ್ಮ ಜೋಡಣೆಗೊಂಡ ಸಾರ್ವಜನಿಕ ಪ್ರೊಫೈಲ್ ಪ್ರದರ್ಶಿಸಲು ಮಾತ್ರ ಸಂಗ್ರಹಿಸಲಾಗಿದೆ ಮತ್ತು ಯಾವುದೇ ಮೂರನೇ ವ್ಯಕ್ತಿಯ ಆಪ್ಸ್, ವೆಬ್ ಸೈಟ್ಸ್, ಅಥವಾ ಇತರ ಸೇವೆಗಳಿಗೆ ಇದನ್ನು ಹಂಚಿಕೊಂಡಿಲ್ಲ.

ಸಿ. ನೀವೊಂದು ವೇಳೆ ನಿಮ್ಮ ಇನ್ ಸ್ಟಾಗ್ರಾಂ ಅಥವಾ ಯೂ ಟ್ಯೂಬ್ ಅಕೌಂಟ್ ನ್ನು ನಿಮ್ಮ ಜೋಶ್ ಅಕೌಂಟ್ ನೊಂದಿಗೆ ಜೋಡಿಸಲು ಬಯಸದಿದ್ದರೆ, ದಯವಿಟ್ಟು ನಿಮ್ಮ ಪ್ರೊಫೈಲ್ ಪುಟದಲ್ಲಿ ಇನ್ ಸ್ಟಾಗ್ರಾಂ ಅಥವಾ ಯೂಟ್ಯೂಬ್ ಐಕಾನ್ ಟ್ಯಾಪ್ ಮಾಡಿ ಮತ್ತು  ಜೋಶ್ ಆಪ್ ಪ್ರವೇಶ ಅನುಮತಿಯನ್ನು ತೆಗೆದುಹಾಕಲು ಸಲಹೆಗಳನ್ನು ಫಾಲೋ ಮಾಡಿ.

5. ಜೋಶ್ ಹೇಗೆ ಬಳಕೆದಾರರ ಮಾಹಿತಿಯನ್ನು ರಕ್ಷಿಸುತ್ತದೆ.

ನಿಮ್ಮ ಮಾಹಿತಿಯನ್ನು ಈ ನೀತಿಗನುಗುಣವಾಗಿ ಸುರಕ್ಷಿತವಾಗಿ ಪರಿಗಣಿಸಲಾಗುತ್ತದೆ ಎಂದು ಖಾತ್ರಿ ಪಡಿಸಲು ನಾವು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ನಾವು ಈ ನೀತಿಗಳಿಗೆ ಯಾವುದೇ ಜವಾಬ್ದಾರಿ ಅಥವಾ ಹೊಣೆಗಾರಿಕೆಯನ್ನು ಸ್ವೀಕರಿಸುವುದಿಲ್ಲ. ಇಂಟರ್ ನೆಟ್ ಶೇಕಡ 100ರಷ್ಟು ಸುರಕ್ಷಿತ. ನಮ್ಮ ವೆಬ್ ಸೈಟ್, ಆಪ್ ಗಳು, ಅಥವಾ ಸೇವೆಗಳು ಸಂಪೂರ್ಣ ಸುರಕ್ಷಿತ ಎಂಬುದಾಗಿ ನಾವು ಭರವಸೆ ನೀಡುವುದಿಲ್ಲ. ನಿಮ್ಮ ಮಾಹಿತಿಯನ್ನು ನಮ್ಮ ಸೇವೆಗೆ ಟ್ರಾನ್ಸ್ ಮಿಷನ್ ಮಾಡುವುದು ನಿಮ್ಮ ಸ್ವಯಂ ರಿಸ್ಕ್ ಆಗಿದೆ. ಇಂಟರ್ ನೆಟ್ ಬಳಸುವಾಗ ತುಂಬಾ ಎಚ್ಚರಿಕೆಯಿಂದ ಬಳಸಿ ಎಂದು ನಾವು ನಿಮಗೆ ಸೂಚಿಸುತ್ತೇವೆ. ನಾವು ಈ ನೀತಿಯಲ್ಲಿ ವಿವರಿಸಲಾದಂತೆ ಎಲ್ಲಿಯವರೆಗೆ ಅವಶ್ಯಕ ಮತ್ತು ಸಂಬಂಧಪಟ್ಟಿರುತ್ತದೆಯೋ ಅಲ್ಲಿಯವರೆಗೆ ವೈಯಕ್ತಿಕ ಮಾಹಿತಿಯನ್ನು ಇರಿಸುತ್ತೇವೆ. ಉದಾ: ಕಾನೂನು ಅನುಸರಣೆ, ವಿವಾದ ಬಗೆಹರಿಸಲು, ಒಪ್ಪಂದದ ಜಾರಿ, ಬ್ಯಾಕ್ ಅಪ್, ಆರ್ಕೈವಲ್ ಮತ್ತು ಇತರ ಆಂತರಿಕ ಕಾರ್ಯಗಳ ಉದ್ದೇಶಗಳಿಗಾಗಿ ಬಳಸಿಕೊಳ್ಳುತ್ತೇವೆ. ಇದು ನೀವು ಅಥವಾ ಇತರರು ನಮಗೆ ಒದಗಿಸುವ ದತ್ತಾಂಶ ಮತ್ತು ನಮ್ಮ ಸೇವೆಯಿಂದ ನೀವು ಬಳಸಿ ರಚಿಸಿದ ದತ್ತಾಂಶವನ್ನು ಒಳಗೊಂಡಿರುತ್ತದೆ. ಹಾಗೆಯೇ ನಾವು ಕಾನೂನಿನ ಪ್ರಕಾರವಾಗಿ ಮಾಹಿತಿಯನ್ನು ಇಟ್ಟುಕೊಳ್ಳುತ್ತೇವೆ.

ಎ. ಮೇಲಿನ ಉದ್ದೇಶಕ್ಕಾಗಿ ಜೋಶ್ ಸೂಕ್ತ ದತ್ತಾಂಶ ಸಂಗ್ರಹಣೆ, ದಾಸ್ತಾನು, ನಿಯಂತ್ರಣ ಮತ್ತು ಕಾರ್ಯಗಳ ಪ್ರಕ್ರಿಯೆ ಮತ್ತು ಅನಧಿಕೃತ ಪ್ರವೇಶದ ವಿರುದ್ಧ ಸುರಕ್ಷತಾ ಕ್ರಮಗಳು, ಬದಲಾವಣೆ, ಪ್ರಕಟಣೆ, ಅಥವಾ ನಿಮ್ಮ ವೈಯಕ್ತಿಕ ಮಾಹಿತಿಗಳ ನಾಶ, ಯೂಸರ್ ನೇಮ್, ಪಾಸ್ ವರ್ಡ್, ಮತ್ತು ಆಪ್ ನಲ್ಲಿ ಸಂಗ್ರಹಿಸಲಾದ ದತ್ತಾಂಶಗಳ ರಕ್ಷಣೆಗೆ ಜೋಶ್ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತದೆ. ನಿರ್ದಿಷ್ಟವಾಗಿ ಜೋಶ್ ನಿಮ್ಮ ವೈಯಕ್ತಿಕ ಮಾಹಿತಿಯ ಕಾಳಜಿಗಾಗಿ ಪಾಸ್ ವರ್ಡ್ ರಕ್ಷಣೆ ಮಾಡುವ ಮೂಲಕ ನಿರಂತರ ಭದ್ರತಾ ದೋಷಗಳನ್ನು ಮೇಲ್ವಿಚಾರಣೆ ಮಾಡುವ ಮೂಲಕ ದತ್ತಾಂಶಗಳ ಉಲ್ಲಂಘನೆ ಮತ್ತು ನಷ್ಟವನ್ನು ತಡೆಯಲು ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳುತ್ತದೆ.

ಬಿ. ವೇದಿಕೆ / ಸೇವೆಗಳು ಮತ್ತು ಬಳಕೆದಾರರ ನಡುವೆ ವಿನಿಮಯವಾಗುವ ವೈಯಕ್ತಿಕ ಮಾಹಿತಿಯನ್ನು ಎಸ್ ಎಸ್ ಎಲ್ (ಸೆಕ್ಯೂರ್ ಸಾಕೆಟ್ ಲೇಯರ್) ಸುರಕ್ಷಿತ ಸಂವಹನ ವಾಹಿನಿಯನ್ನು ಬಳಸುವ ಮೂಲಕ ಜೋಶ್ ರಕ್ಷಣೆ ಮಾಡುತ್ತದೆ. ಆದ್ದಾಗ್ಯೂ, ಅನಧಿಕೃತ ಪ್ರವೇಶ ಆಥವಾ ಬಳಕೆ, ಹಾರ್ಡ್ ವೇರ್, ಅಥವಾ ಸಾಫ್ಟವೇರ್ ವೈಫಲ್ಯ, ಮತ್ತು ಯಾವುದೇ ಸಮಯದಲ್ಲಿ ಬಳಕೆದಾರ ಮಾಹಿತಿಯ ರಕ್ಷಣೆಯೊಂದಿಗೆ ರಾಜಿಯಾಗುವ ಇತರ ಅಂಶಗಳಿಗೆ ಜೋಶ್ ಯಾವುದೇ ಖಾತ್ರಿ ನೀಡುವುದಿಲ್ಲ. ಬಳಕೆದಾರ ಅವನು / ಅವಳ ಡಿವೈಸ್ ಪ್ರವೇಶವನ್ನು ಸೀಮಿತಗೊಳಸುವ ಮೂಲಕ ಅವನ / ಅವಳ ಅಕೌಂಟ್ ಮತ್ತು ವೈಯಕ್ತಿಕ ಮಾಹಿತಿ ಅನಧಿಕೃತ ಪ್ರವೇಶವನ್ನು ತಡೆಯುವುದು ಮುಖ್ಯವಾಗಿದೆ. (ಎಸ್ ಎಸ್ 2)

6. ಬಳಕೆದಾರರ ಮಾಹಿತಿಯ ಮೇಲೆ ನಿಯಂತ್ರಣ

ನಾವು ಬಳಕೆಯ ನಿಯಮಗಳಿಗನುಗುಣವಾಗಿ ನಿಮ್ಮ ವೈಯಕ್ತಿಕ ಮಾಹಿತಿಯು ನಿಯಂತ್ರಣದಲ್ಲಿರಬೇಕೆಂದು ಬಯಸುತ್ತೇವೆ.

ಎ. ಪ್ರವೇಶ, ತಿದ್ದುಪಡಿ ಮತ್ತು ಪೋರ್ಟೆಬಿಲಿಟಿ: ನೀವು ನಮ್ಮ ವೇದಿಕೆಯಲ್ಲಿ ಪ್ರವೇಶಿಸಿ ನಿಮ್ಮ ಅಕೌಂಟ್ ಮಾಹಿತಿಯನ್ನು ತಿದ್ದಬಹುದು. ನಿಮ್ಮ ಖಾಸಗಿತನವು ನಮಗೆ ಪ್ರಾಮುಖ್ಯವಾಗಿದೆ ಮತ್ತು ನಾವು ನಿಮ್ಮ ಗುರುತನ್ನು ಪರಿಶೀಲಿಸಲು ನಾವು ನಿಮಗೆ ಹೇಳುತ್ತೇವೆ. ಅನೇಕ ಕಾರಣಗಳಿಗಾಗಿ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಅಪ್ ಡೇಟ್ ಮಾಡುವ ಮನವಿಯನ್ನು ನಾವು ತಿರಸ್ಕರಿಸಬಹುದು, ಉದಾ, ಮನವಿಯು ಇತರರ ಖಾಸಗಿತನಕ್ಕೆ ಧಕ್ಕೆ ಅಥವಾ ಕಾನೂನಬಾಹಿರವಾಗಿರಬಹುದು ಎಂಬ ಕಾರಣಕ್ಕಾಗಿ.

ಬಿ. ಅನುಮತಿಯನ್ನು ರದ್ದುಗೊಳಿಸುವುದು: ಹೆಚ್ಚಿನ ಸಂದರ್ಭಗಳಲ್ಲಿ, ನಿಮ್ಮ ಮಾಹಿತಿಯನ್ನು ಬಳಸಲು ನಮಗೆ ಅವಕಾಶ ನೀಡಿದರೆ, ನೀವು ನಿಮ್ಮ ಅನಮತಿಯನ್ನು ನಮಗೆ ತಿಳಿಸುವ ಮೂಲಕ ನಾವು ನಿಗದಿಗೊಳಿಸಿದ ರದ್ದುಗೊಳಿಸುವಿಕೆಯ ಕಾರಣದ ಪ್ರಕಾರ ರದ್ದುಗೊಳಿಸಬಹುದು.

ಸಿ. ಅಳಿಸುವುದು: ನೀವು ಜೋಶ್ ನ ಜೀವಾವಧಿ ಬಳಕೆದಾರರಾಗಿ ಉಳಿಯುತ್ತೀರಿ ಎಂದು ನಾವು ಭಾವಿಸುತ್ತೇವೆ. ಒಂದು ವೇಳೆ, ನೀವು ಕೆಲ ಕಾರಣಗಳಿಗಾಗಿ ನೀವು ನಿಮ್ಮ ಖಾತೆಯನ್ನು ಅಳಿಸಲು ಇಚ್ಛಿಸಿದರೆ, ನಿಮ್ಮ ಸಾಮಾಜಿಕ ಲಾಗಿನ್ ನ್ನು ಹೇಗೆ ಆಧರಿಸಿದೆ ಎಂಬುದನ್ನು ತಿಳಿಯಲು ಇಲ್ಲಿ ನೀಡಲಾದ ಹಂತಗಳನ್ನು ಅನುಸರಿಸಿರಿ. ಇದು ನೀವು ಅಥವಾ ಇತರರು ನಮಗೆ ಒದಗಿಸಿದ ದತ್ತಾಂಶಗಳನ್ನು ಮತ್ತು ನಮ್ಮ ಸೇವೆಗಳನ್ನು ಬಳಸಿಕೊಂಡು ನೀವು ಸೃಜಿಸಿದ ದತ್ತಾಂಶಗಳನ್ನು ಒಳಗೊಂಡಿದೆ. ಹಾಗೆಯೇ ನಾವು ಕಾನೂನು ಪ್ರಕಾರ ಬೇಕಾದಲ್ಲಿ ಒದಗಿಸಲು ನಾವು ಮಾಹಿತಿಯನ್ನು ಇಟ್ಟುಕೊಳ್ಳುತ್ತೇವೆ. ಸೀಮಿತ ಅವಧಿ ಅಥವಾ ಕಾನೂನಿನ ಪ್ರಕಾರ ಕೆಲವೊಂದು ಮಾಹಿತಿಯನ್ನು ಬ್ಯಾಕಪ್ ನಲ್ಲಿ ಉಳಿಸಿಕೊಳ್ಳುತ್ತೇವೆ.

  • ಎಫ್ ಬಿ ಗೆ ಜೋಡಣೆಯಾಗಲು, ಬಳಕೆದಾರರು ನಿಷ್ಕ್ರಿಯಗೊಳ್ಳಲು ಅಥವಾ ಲಾಗಿನ್ ಔಟ್ ಮಾಡಲು ಎಫ್ ಬಿ ಜೋಡಣಾ ರುಜುವಾತುಗಳಿಂದ ನಮ್ಮೊಂದಿಗೆ ಕನೆಕ್ಟ್ ಆಗಲು ನಿಮ್ಮ ಎಲ್ಲಾ ಪ್ರೊಫೈಲ್ ವಿಷಯಗಳು ಮತ್ತು ಇತರ ಮಾಹಿತಿಗಳನ್ನು ಅಳಿಸಿಹಾಕಬಹುದು. ಅಳಿಸುವ ಮನವಿಯ ಮೇಲೆ ಜೋಶ್ ತನ್ನ ಬಳಕೆದಾರರ ಖಾತೆಗಳಿಂದ ಬಳಕೆದಾರರನ್ನು ಜೋಶ್ ನಲ್ಲಿ ಲಾಗ್ ಔಟ್ ಮಾಡಲಾಗುತ್ತದೆ ಮತ್ತು ಎಲ್ಲಾ ಬಳಕೆದಾರರ ದತ್ತಾಂಶಗಳನ್ನು ಮರು ಹೊಂದಿಸಲಾಗುತ್ತದೆ. ನಾವು ನಿಮ್ಮ ಯೂಸರ್ ನೇಮ್, ನಿಮ್ಮ ಪಾಸ್ ವರ್ಡ್ ಮತ್ತು ಎಲ್ಲಾ ಸಂಬಂಧಿತ ಮಾಹಿತಿ, ಖಾತೆಯೊಳಗಡೆ (ಅಥವಾ ಯಾವುದೇ ಅದರ ಭಾಗ) ಅಥವಾ ಖಾತೆಗೆ ಸಂಯೋಜನೆಗೊಂಡ ಕಡತಗಳನ್ನು ನಾವು ಪ್ರತ್ಯೇಕಿಸುತ್ತೇವೆ. ಆದ್ದಾಗ್ಯೂ, ಕೆಲವೊಂದು ವಿವರಗಳನ್ನು ಆರ್ಕೈವಲ್ ಗಾಗಿ ಮತ್ತು ಕಾನೂನು ಉದ್ದೇಶಗಳಿಗಾಗಿ ನಮ್ಮಲ್ಲಿಯೇ ಉಳಿಸಲಾಗುತ್ತದೆ. ಜೋಶ್ ನಿಮ್ಮ ಬಳಕೆದಾರ ವಿಷಯವನ್ನು ಅಳಿಸುವುದು ಸೇರಿದಂತೆ ಯಾವುದೇ ಯಾವುದೇ ಅಮಾನತು ಅಥವಾ ವಜಾಗೊಳಿಸಲು ಯಾವುದೇ ಹೊಣೆಗಾರಿಕೆಯನ್ನು ಹೊಂದಿರುವುದಿಲ್ಲ.  ಸ್ಥಳೀಯ ಕಾನೂನಿನಡಿಯಲ್ಲಿ ಅಗತ್ಯವಿರುವ ಮತ್ತು/ ಅಥವಾ ಅನುಮತಿಸುವವರೆಗೆ ವಿಷಯ / ದತ್ತಾಂಶಗಳನ್ನು ಜೋಶ್ ತನ್ನಲ್ಲಿ ಉಳಿಸಿಕೊಳ್ಳುತ್ತದೆ ಮತ್ತು ಬಳಸುತ್ತದೆ.  ಈ ಒಪ್ಪಂದದ ಎಲ್ಲಾ ನಿಬಂಧನೆಗಳು ಯಥಾಸ್ಥಿತಿಯ ರೂಪದಲ್ಲಿಯೇ ಉಳಿಯಬೇಕು, ಯಾವುದೇ ಮಿತಿ, ವಾರಂಟಿ ಹಕ್ಕು ನಿರಾಕರಣೆ, ಒಳಗೊಂಡಂತೆ ಆಡಳಿತ ಕಾನೂನು ಮತ್ತು ಹೊಣೆಗಾರಿಕೆಯ ಮಿತಿಗಳಿಲ್ಲದೇ ಉಳಿಯುತ್ತದೆ.

7. ಬಳಕೆದಾರರ ಮಾಹಿತಿಯನ್ನು ಹಂಚಿಕೊಳ್ಳುವುದು

ನಾವು ನಮ್ಮ ಸೇವೆಗಳನ್ನು ಒದಗಿಸಲು, ನಿರ್ವಹಣೆ ಮಾಡಲು ಮತ್ತು ಸೇವೆಗಳನ್ನು ಸುಧಾರಿಸಲು ನಮಗೆ ಸಹಾಯ ಮಾಡುವ ನಮ್ಮ ಕಾರ್ಪೋರೇಟ್ ಗುಂಪು ಮತ್ತು ಆಯ್ದ ಮೂರನೇ ಗುಂಪಿನ ಪಾಲುದಾರರು ಅಥವಾ ವ್ಯವಹಾರ ಸಹವರ್ತಿಗಳ ಜತೆ ನಾವು ಕೆಲಸ ಮಾಡುತ್ತೇವೆ. ನಾವು ನಿಮ್ಮ ಮಾಹಿತಿಯನ್ನುಕ್ಲೌಡ್ ಸರ್ವೀಸ್ ಪ್ರೊವೈಡರ್ ಗಳು, ಸಿಡಿಎನ್ ಗಳು, ಐಎಸ್ ಪಿಗಳು, ತಂತ್ರಜ್ಞಾನ ಪಾಲುದಾರರು, ವಿಷಯ ಮಾರ್ಪಾಡು ಸೇವೆಗಳು, ಮಾಪನ ಪ್ರೊವೈಡರ್ ಗಳು, ಜಾಹೀರಾತುದಾರರು, ಮತ್ತು ಅನಾಲಿಟಿಕ್ಸ್ ಪ್ರೊವೈಡರ್ ಗಳೊಂದಿಗೆ ಕೂಡ ಹಂಚಿಕೊಳ್ಳುತ್ತೇವೆ. ಹಾಗೆಯೇ ಕಾನೂನಿಗೆ ಅಗತ್ಯವಿದ್ದಾಗ ಯಾವಾಗ ಎಲ್ಲೀ ಬೇಕಾಗುತ್ತದೆಯೋ ಆಗ ಕಾನೂನು ಜಾರಿ ಸಂಸ್ಥೆಗಳು ಅಥವಾ ನಿಯಂತ್ರಕರು ಮತ್ತು ನ್ಯಾಯಾಲಯದ ಆದೇಶದಡಿಯಲ್ಲಿ ಕಾನೂನಾತ್ಮಕವಾಗಿ ಬಂಧಿಸುವ ಮೂರನೇ ವ್ಯಕ್ತಿಗಳ ಜತೆಯೂ ಹಂಚಿಕೊಳ್ಳುತ್ತೇವೆ. ಜೋಶ್ ವ್ಯವಹಾರ ಪಾಲುದಾರರ, ಒಪ್ಪಂದದ ನಿಗದಿ, ವಿಲೀನತೆ, ಸ್ವಾಧೀನತೆ, ಅಥವಾ ಜೋಶ್ ನ ಆಸ್ತಿಯ ಸಂಪೂರ್ಣ ಭಾಗ ಅಥವಾ ಒಂದು ಭಾಗವನ್ನು ಇನ್ನೊಂದು ತಂಡಕ್ಕೆ ಮಾರಾಟ ಮಾಡುವ ಪರಿಣಾಮವಾಗಿ ಇನ್ನೊಂದು ಪಾರ್ಟಿಗೆ ಬಳಕೆದಾರರ ವೈಯಕ್ತಿಕ ಮಾಹಿತಿಗಳನ್ನು ವರ್ಗಾಯಿಸುವ ಹಕ್ಕನ್ನು ತನ್ನಲ್ಲೇ ಕಾಯ್ದಿರಿಸಿಕೊಂಡಿದೆ, ಮತ್ತು ಇಂತಹ ಸನ್ನಿವೇಶದಲ್ಲಿ ನಿಮಗೆ ತಿಳಿಸದೇ ಈ ಗೌಪ್ಯತಾ ನೀತಿಯ ನಿಯಮಗಳ ಅನ್ವಯವು ಮುಂದುವರೆಯುತ್ತದೆ.

ಎ. ಜೋಶ್ ತಾನು ಸಂಗ್ರಹಿಸಿದ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಈ ನೀತಿಯಲ್ಲಿ ತಿಳಿಸಲಾಗದ ಹೊರತು ಮೂರನೇ ಪಾರ್ಟಿಗೆ ಮಾರಾಟ, ವ್ಯಾಪಾರ ಅಥವಾ ಬಾಡಿಗೆಗೆ ನೀಡುವುದಿಲ್ಲ. ಜೋಶ್ ನ ವ್ಯಾಪಾರ ಪಾಲುದಾರರು, ಗುತ್ತಿಗೆದಾರರು, ಸಹಸಂಸ್ಥೆಗಳು (ಜೋಶ್ ಇನ್ನೋವೇಶನ್ ಒಳಗೊಂಡಂತೆ) ಮತ್ತು ಜಾಹೀರಾತುದಾರರೊಂದಿಗೆ ಸಂದರ್ಶಕರು ಮತ್ತು ಬಳಕದಾರರಿಗೆ ಸಂಬಂಧಿಸಿದಂತೆ ಯಾವುದೇ ವೈಯಕ್ತಿಕ ಮಾಹಿತಿಗೆ ಜೋಡಣೆಯಾಗದ ಸಾಮಾನ್ಯ ಒಟ್ಟು ಜನಸಂಖ್ಯಾ ಮಾಹಿತಿಯನ್ನು ಜೋಶ್ ಹಂಚಿಕೊಳ್ಳಬಹುದಾಗಿದೆ.

ಬಿ.  ಕಾನೂನು ಅಥವಾ ದಾವೆಯ ಮೂಲಕ ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಬಯಸಿದಲ್ಲಿ ಜೋಶ್ ಅದನ್ನು ಪ್ರಕಟಿಸಬಹುದಾಗಿದೆ. ಹಾಗೆಯೇ ರಾಷ್ಟ್ರೀಯ ಭದ್ರತೆ, ಕಾನೂನು ಜಾರಿ ಅಥವಾ ಸಾರ್ವಜನಿಕ ಪ್ರಾಮುಖ್ಯತೆಯ ಇತರ ಸಮಸ್ಯೆಗಳಿಗೆ ಮಾಹಿತಿ ಬಹಿರಂಗಪಡಿಸುವುದು ಅವಶ್ಯವೆಂದು ಜೋಶ್ ನಿರ್ಧರಿಸಿದಲ್ಲಿ, ಬಳಕೆದಾರರ ಮಾಹಿತಿಯನ್ನು ಅದು ಬಹಿರಂಗಪಡಿಸಬಹುದಾಗಿದೆ.

ಸಿ. ನಮ್ಮ ಹಕ್ಕುಗಳು ಮತ್ತು ಆಸ್ತಿ ಅಥವಾ ನಮ್ಮ ಅಧಿಕಾರಿಗಳು, ನಿರ್ದೇಶಕರು, ಭಾಗೀದಾರರು, ನೌಕರರು ಅಥವಾ ಮಧ್ಯವರ್ತಿಗಳನ್ನು ರಕ್ಷಿಸಲು ವೇದಿಕೆಯ ಅನ್ವಯಿತ ನಿಯಮಗಳನ್ನು ಜಾರಿಗೊಳಿಸುವುದು ಅಗತ್ಯವೆನಿಸಿದಲ್ಲಿ ಜೋಶ್ ಮಾಹಿತಿಯನ್ನು ಪ್ರಕಟಿಸಬಹುದಾಗಿದೆ.

ಡಿ. ಜೋಶ್ ವ್ಯವಹಾರ ಪಾಲುದಾರರ, ಒಪ್ಪಂದದ ನಿಗದಿ, ವಿಲೀನತೆ, ಸ್ವಾಧೀನತೆ, ಅಥವಾ ಜೋಶ್ ನ ಆಸ್ತಿಯ ಸಂಪೂರ್ಣ ಭಾಗ ಅಥವಾ ಒಂದು ಭಾಗವನ್ನು ಇನ್ನೊಂದು ತಂಡಕ್ಕೆ ಮಾರಾಟ ಮಾಡುವ ಪರಿಣಾಮವಾಗಿ ಇನ್ನೊಂದು ಪಾರ್ಟಿಗೆ ಬಳಕೆದಾರರ ವೈಯಕ್ತಿಕ ಮಾಹಿತಿಗಳನ್ನು ವರ್ಗಾಯಿಸುವ ಹಕ್ಕನ್ನು ತನ್ನಲ್ಲೇ ಕಾಯ್ದಿರಿಸಿಕೊಂಡಿದೆ, ಮತ್ತು ಇಂತಹ ಸನ್ನಿವೇಶದಲ್ಲಿ ನಿಮಗೆ ತಿಳಿಸದೇ ಈ ಖಾಸಗಿ ನೀತಿಯ ನಿಯಮಗಳ ಅನ್ವಯವು ಮುಂದುವರೆಯುತ್ತದೆ.

7. ಕುಕೀಸ್

ನಾವು ಕುಕೀಗಳನ್ನು ಬಳಸಬಹುದಾಗಿದೆ, ಉದಾಹರಣೆಗೆ, ನಿಮ್ಮ ಆದ್ಯತೆ ಮತ್ತು ಅಕೌಂಟ್ ಪ್ರೊಫೈಲ್ ಮಾಹಿತಿಯನ್ನು ಟ್ರ್ಯಾಕ್ ಮಾಡಲು, ಅಥವಾ ನಿಮ್ಮ ಬಳಕೆದಾರ ಅನುಭವ ಹಾಗೂ ವೇದಿಕೆಯ ದಕ್ಷತೆ ಮತ್ತು ಪರಿಣಾಮಕಾರಿತ್ವವನ್ನು ಉತ್ತಮಗೊಳಿಸುತ್ತದೆ ಎಂದು ನಾವು ಭಾವಿಸುವ ಕೆಲವು ರೀಟಾರ್ಗೆಟಿಂಗ್ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಮತ್ತು ಅದರಲ್ಲಿ ಒದಗಿಸಲಾದ ಕೆಲ ಸೇವೆಗಳು ಮತ್ತು ಕಾರ್ಯಗಳನ್ನು ಬಳಸಬಹುದಾಗಿದೆ. ವೈಯಕ್ತಿಕ ಮಾಹಿತಿ ಒಳಗೊಳ್ಳದ ಸಾಮಾನ್ಯ ಬಳಕೆಯನ್ನು ಸಂಗ್ರಹಿಸಲು ಮತ್ತು ಅಂಕಿಅಂಶಗಳ ಪ್ರಮಾಣ ಮಾಹಿತಿ ಸಂಗ್ರಹಿಸಲು ಕುಕೀ ಗಳನ್ನು ಬಳಸಲಾಗುತ್ತದೆ.  ವೇದಿಕೆಯ ಬಳಕೆದಾರರ ಒಟ್ಟು ಅಂಕಿ ಅಂಶಗಳನ್ನು ಸಂಕಲನಮಾಡಲು ವೈಯಕ್ತಿಕವಾಗಿ ಗುರುತಿಸಲಾಗದ ಮಾಹಿತಿ ಸಂಗ್ರಹಿಸಲು ನಿಮ್ಮ ಕಂಪ್ಯೂಟರ್ ನಲ್ಲಿ ಕುಕೀ ಅಳವಡಿಸಲು ನಾವು ಇನ್ನೊಂದು ಕಂಪನಿ ಅಥವಾ ಮೂರನೇ ವ್ಯಕ್ತಿಯ ಸೇವೆಯನ್ನು ಬಳಸಿಕೊಳ್ಳಬಹುದಾಗಿದೆ.

ಕುಕೀಗಳು ಸಣ್ಣ ಮಾಹಿತಿ ತುಣುಕುಗಳಾಗಿದ್ದು, ಇವು ನಿಮ್ಮ ಇಂಟರ್ ನೆಟ್ ಬ್ರೌಸರ್ ನಲ್ಲಿ ಟೆಕ್ಸ್ಟ್ ಫೈಲ್ ಗಳಾಗಿ ಸಂಗ್ರಹಗೊಂಡು ಅದು ನಿಮ್ಮ ಕಂಪ್ಯೂಟರ್ ನ ಹಾರ್ಡ್ ಡ್ರೈವ್ ನಲ್ಲಿ ಸಂಗ್ರಹಗೊಳ್ಳುತ್ತವೆ. ಹೆಚ್ಚಿನ ಇಂಟರ್ ನೆಟ್ ಬ್ರೌಸರ್ ಗಳನ್ನು ಆರಂಭದಲ್ಲಿ ಕುಕೀ ಸ್ವೀಕರಿಸಲು ಸೆಟ್ ಮಾಡಲಾಗಿರುತ್ತದೆ. ನೀವು ವೆಬ್ ಸೈಟ್ ನಿಂದ ಕುಕೀ ಗಳನ್ನು ತಿರಸ್ಕರಿಸಲು ಅಥವಾ ನಿಮ್ಮ ಕಂಪ್ಯೂಟರ್ ನ ಹಾರ್ಡ್ ಡ್ರೈವ್ ನಿಂದ ಕುಕೀಗಳನ್ನು ತೆಗೆದುಹಾಕಲು ನೀವು ಬ್ರೌಸರನ್ನು ಸೆಟ್ ಮಾಡಬಹುದು, ಆದರೆ ನೀವೊಂದು ವೇಳೆ ಹಾಗೆ ಮಾಡಿದರೆ, ವೇದಿಕೆಯ ಕೆಲವೊಂದು ಭಾಗಗಳನ್ನು ಪ್ರವೇಶಿಸಲು ಅಥವಾ ಬಳಸಲು ನಿಮಗೆ ಸಾಧ್ಯವಾಗದಿರಬಹುದು ಅಥವಾ ವೇದಿಕೆಯಲ್ಲಿನ ಕೆಲವು ಆಫರಿಂಗ್ ಗಳು ಉದ್ದೇಶಿಸಿದಂತೆ ಕಾರ್ಯ ನಿರ್ವಹಿಸದಿರಬಹುದು. ಹಾಗೆಯೇ ಕೆಲವು ಬ್ರೌಸರ್ ಗಳು “ಟ್ರ್ಯಾಕ್ ಮಾಡಬೇಡಿ” ಎಂಬ ಲಕ್ಷಣಗಳನ್ನು ಹೊಂದಿದ್ದು, ಅವು ನಿಮ್ಮನ್ನು ಟ್ರ್ಯಾಕ್ ಮಾಡದಂತೆ ವೆಬ್ ಸೈಟ್ ಗೆ ಹೇಳಲು ನಿಮಗೆ ಅನುಮತಿಸುತ್ತದೆ. ಈ ಲಕ್ಷಣಗಳು ಎಲ್ಲಾ ಏಕರೂಪವಾಗಿಲ್ಲ. ಒಂದು ವೇಳೆ ನೀವು ಕುಕೀಗಳನ್ನು ಬ್ಲಾಕ್ ಮಾಡಿದರೆ, ವೇದಿಕೆಯಲ್ಲಿನ ಕೆಲವು ಲಕ್ಷಣಗಳು ಕಾರ್ಯನಿರ್ವಹಿಸದೇ ಇರಬಹುದು. ನೀವೊಂದು ವೇಳೆ, ಕುಕೀಗಳನ್ನು ಬ್ಲಾಕ್ ಅಥವಾ ತಿರಸ್ಕರಿಸಿದರೆ ಇಲ್ಲಿ ವಿವರಿಸಲಾದ ಎಲ್ಲಾ ಟ್ರ್ಯಾಕಿಂಗ್ ಗಳು ಸ್ಥಗಿತಗೊಳ್ಳುವುದಿಲ್ಲ. ದಯವಿಟ್ಟು ನೀವು ಆರಿಸಿದ ನಿರ್ದಿಷ್ಟ ಆಯ್ಕೆಗಳು ಬ್ರೌಸರ್ ಮತ್ತು ಡಿವೈಸ್ ನಿರ್ದಿಷ್ಟವಾಗಿವೆ ಎಂಬುದನ್ನು ಗಮನಿಸಿ.

ಎ. ನೀವು ವೇದಿಕೆ ಮತ್ತು / ಅಥವಾ ಸೇವೆಗಳನ್ನು ಪ್ರವೇಶಿಸಿದಾಗೆಲ್ಲಾ ನಿಮ್ಮ ಅನುಭವ ಹೆಚ್ಚಿಸಲು ಅಥವಾ ನಿಮ್ಮ ಅನುಭವ ವೈಯಕ್ತೀಕರಿಸಲು ರೆಕಾರ್ಡ್ ಕೀಪಿಂಗ್ ಉದ್ದೇಶಗಳಿಗಾಗಿ ಹಾರ್ಡ್ ಡ್ರೈವ್ ನಲ್ಲಿ ಕುಕೀಗಳನ್ನು ಇಡಬಹುದು.  ಕುಕೀಗಳು ನೀವು ಭೇಟಿ ನೀಡುವ ವೇದಿಕೆಯ ಮೂಲಕ ನಿಮ್ಮ ಕಂಪ್ಯೂಟರ್ ನ ಹಾರ್ಡ್ ಡ್ರೈವ್ ನಲ್ಲಿ ಇರಿಸಲಾದ ಸಣ್ಣ ಟೆಕ್ಸ್ಟ್ ಫೈಲ್ ಗಳಾಗಿವೆ. ಕುಕೀಗಳು ನಿಮ್ಮ ಚಟುವಟಿಕೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಗುರುತಿಸಲು ಮತ್ತು ವೇದಿಕೆಯಲ್ಲಿನ ನಿಮ್ಮ ಆದ್ಯತೆಗಳು ಮತ್ತು ಹಿಸ್ಟರಿಗೆ ಸಂಬಂಧಿಸಿದ ಮಾಹಿತಿ ಉಳಿಸಿಕೊಳ್ಳಲು ಸಹಾಯ ಮಾಡುತ್ತವೆ.

ಬಿ. ನಿಮಗೆ ಹೆಚ್ಚು ಸಂಬಂಧಿಸಿದಂತಹ ಜಾಹೀರಾತುಗಳಿಂದ ಹೊರಗುಳಿಯದ ಹೊರತಾಗಿ ನಿಮಗೆ ಮತ್ತು ನಿಮ್ಮ ಆಸಕ್ತಿಗಳಿಗೆ ಹೆಚ್ಚು ಸೂಕ್ತ ಜಾಹೀರಾತು ನೀಡಲು ಜೋಶ್ ಮತ್ತು / ಅಥವಾ ಅದರ ಸರ್ವೀಸ್ ಪ್ರೊವೈಡರ್ ಗಳು ಜಾಹೀರಾತು ಕುಕೀಗಳನ್ನು ಬಳಸಬಹುದು.

ಸಿ. ನೀವು ವೆಬ್ ಬ್ರೌಸರ್ ನಲ್ಲಿನ ಕುಕೀ ಲಕ್ಷಣವನ್ನು ಟರ್ನಿಂಗ್ ಆಫ್ ಮಾಡುವ ಮೂಲಕ ಕುಕೀ ನಿಷ್ಕ್ರಿಯ ಮಾಡುವ ಆಯ್ಕೆ ಆರಿಸಬಹುದು. ಆದ್ದಾಗ್ಯೂ ಈ ಲಕ್ಷಣವನ್ನು ನಿಷ್ಕ್ರಿಯಗೊಳಿಸುವುದರಿಂದ ವೇದಿಕೆಯಲ್ಲಿನ ಕೆಲವು ಭಾಗಗಳು ಸೂಕ್ತವಾಗಿ ಕಾರ್ಯನಿರ್ವಹಿಸದಿರುಬಹುದು. ಇದು ವೇದಿಕೆ ಮತ್ತು ಸೇವೆಗಳ ಸಂಪೂರ್ಣ ಪ್ರಯೋಜನವನ್ನು ಪಡೆಯುವುದನ್ನು ನಿರ್ಬಂಧಿಸಬಹುದು.

8. ಮಾಹಿತಿಯನ್ನು ಜೋಡಿಸುವುದು

ನಿಮ್ಮ ಆಸಕ್ತಿಗಳು, ಇಷ್ಟಗಳು ಮತ್ತು / ಅಥವಾ ಆದ್ಯತೆಗಳಿಗೆ ಹೆಚ್ದು ಸಮಂಜಸವಾದ ಕೊಡುಗೆಗಳು, ಪ್ರಚಾರಗಳು ಮತ್ತು ಮಾಹಿತಿಯನ್ನು ಒದಗಿಸಲು ವೇದಿಕೆ ಮತ್ತು ಸೇವೆಗಳಾದ್ಯಂತ ನಿಮ್ಮ ವೈಯಕ್ತಿಕ ಮತ್ತು ಇತರ ಮಾಹಿತಿಗಳನ್ನು ಜೋಶ್ ಸಂಯೋಜನೆ ಮಾಡಬಹುದು. ಜೋಶ್ ನ ವೇದಿಕೆಯಲ್ಲಿ ನೀವು ಅದರೊಂದಿಗೆ ಹಂಚಿಕೊಳ್ಳುವ ಮಾಹಿತಿ ಮತ್ತು ಸೇವೆಗಳಿಗೆ ಸಂಬಂಧಿಸಿದಂತೆ ನೀವು ಮೂರನೇ ವ್ಯಕ್ತಿಗಳಿಗೆ ಒದಗಿಸಿದ ಮಾಹಿತಿಯೊಂದಿಗೆ ಸಂಯೋಜಿಸಬಹುದು. ವಿಷಯಗಳನ್ನು ಒದಗಿಸಲು, ಜಾಹೀರಾತು, ಪ್ರಚಾರಗಳು, ಮತ್ತು ಕೊಡುಗೆಗಳು ಹಾಗೂ ವೇದಿಕೆ ಹಾಗೂ ಸೇವೆಗಳ ಬಳಕೆದಾರ ಅನುಭವವನ್ನು ಸುಧಾರಿಸುವುದಕ್ಕಾಗಿ ಅವರು ನಮ್ಮೊಂದಿಗೆ ಮಾಹಿತಿ ಹಂಚಿಕೊಳ್ಳಲು ನಿಮ್ಮಿಂದ ಅಧಿಕಾರ ಪಡೆದಿರುತ್ತಾರೆ. ಜೋಶ್ ನಿಮ್ಮ ಮಾಹಿತಿ ಹೊಂದಿರುವವರು ಮತ್ತು ಮಾಹಿತಿಯನ್ನು ಸಂಯೋಜಿಸಲು ಅಧಿಕಾರ ಹೊಂದಿರುವವರು ನಿಮ್ಮ ಮಾಹಿತಿಯನ್ನು ಮೂರನೇ ವ್ಯಕ್ತಿಯೊಂದಿಗೆ ಹಂಚಿಕೊಳ್ಳಬಹುದು.

9. ಜೋಶ್ ನಿಮ್ಮ ದತ್ತಾಂಶವನ್ನು ಎಷ್ಟು ಸಮಯದವರೆಗೆ ಉಳಿಸಿಕೊಳ್ಳುತ್ತದೆ.

ಜೋಶ್ ನಿಮಗೆ ಸೇವೆಯನ್ನು ಒದಗಿಸಲು ಅಗತ್ಯವಿರುವ ಅವಧಿಯವರೆಗೆ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಅದರೊಂದಿಗೆ ಉಳಿಸಿಕೊಳ್ಳುತ್ತದೆ. ಒಂದು ವೇಳೆ, ನಿಮಗೆ ಸೇವೆ ಒದಗಿಸಲು ನಿಮ್ಮ ಮಾಹಿತಿಯ ಅಗತ್ಯ ನಮಗೆ ಇಲ್ಲದಿದ್ದರೆ, ಅಂತಹ ದತ್ತಾಂಶವನ್ನು ನಾವು ಕಾನೂನುಬದ್ಧ ವ್ಯಾಪಾರ ಉದ್ದೇಶ ಇರುವವರೆಗೆ ಮಾತ್ರ ಉಳಿಸಿಕೊಳ್ಳುತ್ತೇವೆ. ಕೆಲವೊಂದು ಸಂದರ್ಭಗಳಲ್ಲಿ ನಮ್ಮ ಕಾನೂನಿನ ಅನುಮತಿಯಿದ್ದಾಗ ಈ ದತ್ತಾಂಶವನ್ನು ನಮ್ಮ ಕಾನೂನು ಬಾಧ್ಯತೆಗೆ ಅನುಗುಣವಾಗಿ ಯಾವುದೇ ಸ್ಥಾಪನೆ ಉದ್ದೇಶಕ್ಕೆ ಅಗತ್ಯವಿದ್ದಲ್ಲಿ ಹೆಚ್ಚು ಕಾಲ ಉಳಿಸಿಕೊಳ್ಳುತ್ತೇವೆ.

ನಮ್ಮ ಉಳಿಸಿಕೊಳ್ಳುವಿಕೆ ಅವಧಿಯನ್ನು ನಿರ್ಧರಿಸಲು ಒಳಗೊಂಡಿರುವ ಮಾನಕಗಳು:

  • ನಾವು ನಿಮ್ಮೊಂದಿಗೆ ನಿರಂತರ ಹೊಂದಿರುವ ಸಂಬಂಧದ ಅವಧಿ ಮತ್ತು ನಿಮಗೆ ಒದಗಿಸುವ ಸೇವೆಗಳು (ಉದಾ: ನೀವು ಸೇವೆಗಳನ್ನು ಬಳಸುವ ಅವಧಿಯವರೆಗೆ)
  • ನಾವು ಯಾವುದೇ ಕಾನೂನಾತ್ಮಕ ಬಾಧ್ಯತೆಗಳಿದ್ದಲ್ಲಿ (ಉದಾ: ಕೆಲವೊಂದು ಕಾನೂನುಗಳು ನಾವು ದಾಖಲೆಗಳನ್ನು ಅಳಿಸುವ ಮೊದಲು ನಿರ್ದಿಷ್ಟ ಸಮಯದವರೆಗೆ ಉಳಿಸಿಕೊಳ್ಳುವ ಅವಶ್ಯಕತೆಯಿರುತ್ತದೆ.)
  • ನಮ್ಮ ಕಾನೂನು ಸ್ಥಿತಿಗತಿಗಳನ್ನು ಪರಿಗಣಿಸಿ ದಾಖಲೆಗಳ ಉಳಿಸುವಿಕೆ ಸೂಕ್ತವಾಗಿರುತ್ತದೆ (ಮಿತಿಯ ಕಾನೂನು, ದಾವೆ ಅಥವಾ ನಿಯಂತ್ರಕ ತನಿಖೆಗಳು)

ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಕಾನೂನಿನ ಪ್ರಕಾರ ಅಗತ್ಯವಿರುವವರೆಗೆ ಮತ್ತು ಸಂಗ್ರಹಿಸಿದ ಉದ್ದೇಶದವರೆಗೆ ಮಾತ್ರ ಜೋಶ್ ತನ್ನೊಡನೆ ಇರಿಸಿಕೊಳ್ಳುತ್ತದೆ. ಆ ಉಳಿಸಿಕೊಳ್ಳುವಿಕೆ ಅವಧಿಯ ಕೊನೆಯಲ್ಲಿ ಜೋಶ್ ತನ್ನಲ್ಲಿ ಇರಿಸಿಕೊಂಡ ಮಾಹಿತಿಯನ್ನು ಅಳಿಸಿ ಹಾಕಬಹುದು ಅಥವಾ ಅದನ್ನು ಅನಾಮಧೇಯಗೊಳಿಸಬಹುದು ಅಥವಾ ಗುಪ್ತನಾಮವಾಗಿಸಬಹುದು.

10. ನಿಮ್ಮ ದತ್ತಾಂಶವನ್ನು ಜೋಶ್ ಬಳಕೆ ಮಾಡುವುದನ್ನು ನೀವು ಹೇಗೆ ನಿಲ್ಲಿಸಬಹುದು

ಎ. ಜೋಶ್ ನಿಮ್ಮ ಆದ್ಯತೆಗಳಿಗೆ ಗೌರವ ನೀಡುತ್ತದೆ ಮತ್ತು ನಮ್ಮಿಂದ ನೇರವಾಗಿ ಮಾರ್ಕೆಟಿಂಗ್ ಕಮ್ಯುನಿಕೇಷನ್ ನಿಲ್ಲಿಸಲು ನಿಮಗೆ ಆಯ್ಕೆಯನ್ನು ಒದಗಿಸುತ್ತದೆ. ನೀವು ಈ ಕೆಳಗಿನವುಗಳಲ್ಲಿ ಯಾವುದೇ ಆಪ್ಷನ್ ಕ್ಲಿಕ್ ಮಾಡಿ ನಮ್ಮಿಂದ ನೇರ ಮಾರ್ಕೆಟಿಂಗ್ ಕಮ್ಯುನಿಕೇಷನ್ ಮಾಡುವುದನ್ನು ನಿಲ್ಲಿಸಬಹುದು.

1. ಕ್ಲಿಕ್ ‘ಅನ್ ಸಬ್ ಸ್ಕ್ರೈಬ್/ ಅಥವಾ ನಿರ್ದಿಷ್ಟ ವಿಭಾಗ, ಸೇವೆ ಅಥವಾ ತಂಡದಿಂದ ಕಮ್ಯುನಿಕೇಷನ್ಸ್ ಇಮೇಲ್ ನಿಂದ ಆಪ್ಟ್ ಔಟ್ ಆಪ್ಷನ್ ಕ್ಲಿಕ್ ಮಾಡಬಹುದು.

2. ನಿಮ್ಮ ಅಕೌಂಟ್ ಗೆ ಲಾಗಿನ್ ಆಗಿರಿ ಮತ್ತು ನಿಮ್ಮ ಖಾಸಗಿ ಆದ್ಯತೆಯನ್ನು ಬದಲಾಯಿಸಿರಿ.

ಬಿ. ನೀವು ಮಾರ್ಕೆಟಿಂಗ್ ಕಮ್ಯೂನಿಕೇಷನ್ಸ್ ನಿಂದ ಹೊರಗುಳಿದರೆ, ಜೋಶ್ ನಿಂದ ಪ್ರಚಾರೇತರ ಇಮೇಲ್ ಗಳು/ ನೋಟಿಫಿಕೇಷನ್ ಗಳನ್ನು ಇನ್ನೂ ಕೂಡ ಸ್ವೀಕರಿಸುತ್ತೀರಿ. ನಿಮ್ಮ ಅಕೌಂಟ್ ಬಗ್ಗೆ ಇಮೇಲ್ ಗಳು, ವೇದಿಕೆ ಮತ್ತು /ಅಥವಾ ಸೇವೆಗಳಿಗೆ ಸಂಬಂಧಿಸಿದ ಅಪ್ ಡೇಟ್ ಗಳು, ಮತ್ತು /ಅಥವಾ ಇತರ ಯಾವುದೇ ವ್ಯವಹಾರ ಕಮ್ಯುನಿಕೇಷನ್ಸ್ ನಂತಹ ಮೇಲ್ ಗಳು ಬರುತ್ತಿರುತ್ತವೆ.

6. ನಿಮಗೆ ಗೌಪ್ಯತಾ ನೀತಿಯ ಬಗ್ಗೆ ಸಹಮತವಿಲ್ಲದಿದ್ದರೆ, ಅಥವಾ ನೀತಿಯಲ್ಲಿ ಒದಗಿಸಲಾದ ಬಳಕೆಗಾಗಿ ನಿಮ್ಮ ಮಾಹಿತಿಯನ್ನು ಹಂಚಿಕೊಳ್ಳಲು ಇಷ್ಟವಿಲ್ಲದಿದ್ದರೆ, ನಿಮ್ಮ ಸಾಧನದಿಂದ ವೇದಿಕೆಯನ್ನು ಅಳಿಸಿಹಾಕುವ ಮೂಲಕ ಅನ್ ಇನ್ ಸ್ಟಾಲ್ ಮಾಡಬಹುದು ಅಥವಾ ವೇದಿಕೆ ಮತ್ತು ಸೇವೆಗಳನ್ನು ನಿಲ್ಲಿಸಬಹುದು.

11. ಈ ಗೌಪ್ಯತಾ ನೀತಿಯನ್ನು ಬದಲಾವಣೆ ಮತ್ತು ಅಪ್ ಡೇಟ್ ಮಾಡುವುದು.

ನಾವು ಕಾಲಕಾಲಕ್ಕೆ ಈ ಗೌಪ್ಯತಾ ನೀತಿಯನ್ನು ಅಪ್ ಡೇಟ್ ಮಾಡುತ್ತೇವೆ. ಈ ಗೌಪ್ಯತಾ ನೀತಿಯನ್ನು ಅಪ್ ಡೇಟ್ ಮಾಡುವಾಗ ಈ ನೀತಿಯ ಮೇಲ್ಭಾಗದಲ್ಲಿ “ಕೊನೆಯದಾಗಿ ಅಪ್ ಡೇಟ್ ಮಾಡಿದ) ದಿನಾಂಕವನ್ನು ಅಪ್ ಡೇಟ್ ಮಾಡುತ್ತೇವೆ ಮತ್ತು ಹೊಸ ಗೌಪ್ಯತಾ ನೀತಿ ಹಾಗೂ ಕಾನೂನಿನ ಪ್ರಕಾರ ಅಗತ್ಯವೆನಿಸುವ ಇತರ ಯಾವುದೇ ಸೂಚನೆಯನ್ನು ನಾವು ನಿಮಗೆ ತಿಳಿಸುತ್ತೇವೆ. ಗೌಪ್ಯತಾ ನೀತಿಯನ್ನು ಅಪ್ ಡೇಟ್ ಮಾಡಿದ ದಿನಾಂಕದಿಂದ ನಂತರ ನೀವು ವೇದಿಕೆಗೆ ಪ್ರವೇಶ ಅಥವಾ ಬಳಕೆಯು ನೀವು ಅಪ್ಡೇಟ್ ಮಾಡಿದ ನೀತಿಯನ್ನು ಸ್ವೀಕರಿಸಿದ್ದೀರಿ ಎಂಬುದನ್ನು ಪ್ರತಿನಿಧಿಸುತ್ತದೆ.  ನೀವೊಂದು ವೇಳೆ ಅಪ್ ಡೇಟ್ ಮಾಡಿದ ನೀತಿಯನ್ನು ಒಪ್ಪದಿದ್ದರೆ, ನೀವು ವೇದಿಕೆಯನ್ನು ಪ್ರವೇಶಿಸುವುದು ಅಥವಾ ಬಳಸುವುದನ್ನು ನಿಲ್ಲಿಸಬೇಕು.  

ಜೋಶ್ ಕಾಲಕಾಲಕ್ಕೆ ಈ ಗೌಪ್ಯತಾ ನೀತಿಯನ್ನು ನವೀಕರಿಸಬಹುದು ಮತ್ತು ಪರಿಷ್ಕರಿಸಬಹುದಾಗಿದೆ. ಪರಿಷ್ಕರಿಸಿದ ಗೌಪ್ಯತಾ ನೀತಿಯನ್ನು ಇಲ್ಲಿ ಪೋಸ್ಟ್ ಮಾಡಲಾಗುತ್ತದೆ. ಈ ಗೌಪ್ಯತಾ ನೀತಿಯಲ್ಲಿ ಆಗಬೇಕಾದ ಬದಲಾವಣೆಗಳ ಬಗ್ಗೆ ತಿಳಿಸಲು ಆಗಾಗ ಈ ಪುಟವನ್ನು ಪರಿಶೀಲಿಸಲು ನಿಮ್ಮನ್ನು ಪ್ರೋತ್ಸಾಹಿಸಲಾಗುತ್ತದೆ. ಈ ಗೌಪ್ಯತಾ ನೀತಿಯನ್ನು ನೀತಿಯನ್ನು ಆಗಾಗ ಪರಿಶೀಲಿಸಿ ಮತ್ತು ಆಗಿರುವ ಮಾರ್ಪಾಡುಗಳ ಬಗ್ಗೆ ತಿಳಿದುಕೊಳ್ಳುವುದು ನಿಮ್ಮ ಜವಾಬ್ದಾರಿ ಎಂದು ನೀವು ಈ ಮೂಲಕ ಒಪ್ಪಿಕೊಂಡಿರುತ್ತೀರಿ. ಒಂದು ವೇಳೆ, ಈ ಗೌಪ್ಯತಾ ನೀತಿಯಲ್ಲಿನ ಯಾವುದೇ ಬದಲಾವಣೆಯನ್ನು ನೀವು ಒಪ್ಪದಿದ್ದರೆ, ನೀವು ವೇದಿಕೆ ಮತ್ತು ಸೇವೆಗಳಿಗೆ ಪ್ರವೇಶಿಸುವುದು ಮತ್ತು ಬಳಸುವುದರಿಂದ ನೀವು ದೂರವಿರಬಹುದು. ಪರಿಷ್ಕೃತ ನೀತಿಯನ್ನು ಪೋಸ್ಟ್ ಮಾಡಿದ ಮೇಲೆ ನೀವು ವೇದಿಕೆ ಮತ್ತು / ಅಥವಾ ಸೇವೆಗಳನ್ನು ಮುಂದುವರಿಸಿದರೆ ಅದು ನಿಮ್ಮ ಸ್ವೀಕಾರ ಮತ್ತು ಒಪ್ಪಿಗೆಯನ್ನು ಸೂಚಿಸುತ್ತದೆ ನೀವು ಬದಲಾದ ನೀತಿಗೆ ನೀವು ಬದ್ಧರಾಗಿರುತ್ತೀರಿ ಎಂದು ಒಪ್ಪಿಕೊಳ್ಳುತ್ತೀರಿ.

12. ನೋಟೀಸ್ ಮತ್ತು ಕುಂದುಕೊರತೆ ನಿವಾರಣಾ ಕಾರ್ಯವಿಧಾನಗಳು

ಆಪ್ ಮೂಲಕ ಪ್ರವೇಶಿಸಬಹುದಾದ ವಿಷಯ ಮತ್ತು ಜಾಹೀರಾತುಗಳಿಗೆ ಯಾವುದೇ ರೀತಿಯಲ್ಲಿ ಜೋಶ್ ಜವಾಬ್ದಾರಿಯಾಗಿರುವುದಿಲ್ಲ ಎಂದು ನಿರ್ದಿಷ್ಟವಾಗಿ ಸೂಚನೆ ನೀಡಲಾಗಿದೆ. ಮೂರನೇ ವ್ಯಕ್ತಿಯ ಹಕ್ಕುಗಳನ್ನು ಉಲ್ಲಂಘಿಸಲು ಮತ್ತು / ಅಥವಾ ಜೋಶ್ ನ ಬೌದ್ಧಿಕ ಆಸ್ತಿ ಅಥವಾ ಇತರ ಹಕ್ಕುಗಳನ್ನು ಉಲ್ಲಂಘಿಸಬಹುದಾದ ವೇದಿಕೆಯ ಬಳಕೆದಾರರ ಖಾತೆಗಳನ್ನು ತೆಗೆದುಹಾಕಲು ಮತ್ತು / ಅಥವಾ ಪ್ರವೇಶವನ್ನು ನಿಷ್ಕ್ರಿಯಗೊಳಿಸಲು ಜೋಶ್ ತನ್ನ ಸ್ವ- ವಿವೇಚನೆಯಿಂದ ಕಾಯ್ದಿರಿಸಿಕೊಂಡಿದೆ

ಕುಂದುಕೊರತೆ ನಿವಾರಣಾ ಕಾರ್ಯತಂತ್ರಗಳು

ಜೋಶ್ ಕುಂದುಕೊರತೆಗಳನ್ನು ನಿವಾರಿಸಲು ಈ ಕೆಳಗಿನ ತಂತ್ರಗಳನ್ನು ಅಳವಡಿಸಿದೆ:

ಸೇವಾ ನಿಯಮಗಳು, ಒಪ್ಪಂದ, ಗೌಪ್ಯತಾ ನೀತಿ ಮತ್ತು ಸಮುದಾಯ ಮಾರ್ಗಸೂಚಿಗಳಿಗೆ ಸಂಬಂಧಿಸಿದ ದೂರುಗಳು ಅಥವಾ ಕಾಳಜಿಗಳ ಉಲ್ಲಂಘನೆಗೆ ಸಂಬಂಧಿಸಿದ ದೂರುಗಳು ಅಥವಾ ಆಕ್ಷೇಪಗಳನ್ನು ಇಲ್ಲಿ ಉಲ್ಲೇಖಿಸಲಾಗಿರುವ ಪ್ರಕ್ರಿಯೆಗಳ ಮೂಲಕ “ನಿವಾಸಿ ಕುಂದುಕೊರತೆ ಅಧಿಕಾರಿ”ಗೆ ತಿಳಿಸಬೇಕು.

ಎ. ಆಪ್ ನಲ್ಲಿ ಸ್ವಯಂ ವರದಿ ಮಾಡುವುದು: ಯಾವುದೇ ಆಕ್ಷೇಪಾರ್ಹ ವಿಷಯದ ಮೇಲೆ ಆಪ್ ನಲ್ಲಿರುವ ರಿಪೋರ್ಟ್ ಕಂಟೆಂಟ್ ಬಳಸಿಕೊಂಡು ನೀವು ವಿಷಯವನ್ನು ವರದಿ ಮಾಡಬಹುದು.

(ಬಿ) ಇ ಮೇಲ್: 2020ರ ಮಾಹಿತಿ ತಂತ್ರಜ್ಞಾನ ಕಾಯ್ದೆಗೆ ಅನುಗುಣವಾಗಿ ಮತ್ತು ಅದರಡಿಯಲ್ಲಿ ಮಾಡಲಾದ ನಿಯಮಗಳ ಪ್ರಕಾರ, ಕುಂದುಕೊರತೆ ಅಧಿಕಾರಿಯ ಸಂಪರ್ಕ ಮಾಹಿತಿಯನ್ನು ಕೆಳಗೆ ನೀಡಲಾಗಿದೆ.

ಶ್ರೀ ನಾಗರಾಜ್

ಇಮೇಲ್: grievance.officer@myJosh.in 

ಸಿ. ಪರ್ಯಾಯವಾಗಿ, ನಮಗೆ ಪತ್ರ ಬರೆಯುವ ಮೂಲಕ

ರಿಗೆ,

ಶ್ರೀ ನಾಗರಾಜ್

ಕುಂದುಕೊರತೆ ನಿವಾರಣಾ ಅಧಿಕಾರಿ

ವರ್ಸೇ ಇನ್ನೋವೇಷನ್ ಪ್ರೈವೇಟ್ ಲಿಮಿಟೆಡ್

11ನೇ ಮಹಡಿ, ವಿಂಗ್ ‘ಇ’ ಹೆಲಿಯೊಸ್ ಬಿಸಿನೆಸ್ ಪಾರ್ಕ್

ಔಟರ್ ರಿಂಗ್ ರಸ್ತೆ, ಕಾಡುಬೀಸನಹಳ್ಳಿ,

ಬೆಂಗಳೂರು – 560 103, ಕರ್ನಾಟಕ, ಭಾರತ

ನಮ್ಮ ಉತ್ಪನ್ನವನ್ನು ಬಳಸುವ ಬಳಕೆದಾರರಿಗೆ ಯಾವುದೇ ದೂರು ಅಥವಾ ಇತರ ಯಾವುದೇ ಸಮಸ್ಯೆಗಳು ಎದುರಾದಲ್ಲಿ, ಈ ಕೆಳಗಿನ ವಿಳಾಸಕ್ಕೆ ಇಮೇಲ್ ಮೂಲಕ ದೂರು ಸಲ್ಲಿಸಬಹುದು. ದೂರಿನಲ್ಲಿ ಈ ಅಂಶಗಳು ಒಳಗೊಂಡಿರಬೇಕು: (1) ಸೂಕ್ತ ಅಕೌಂಟ್ ಹೊಂದಿರುವವರ ಯೂಸರ್ ನೇಮ್ (2) ಸಮಸ್ಯೆಗೆ ಸಂಬಂಧಿಸಿದ ವಿಷಯ/ವೀಡಿಯೋ ಮತ್ತು (3) ಅಂತಹ ತೆಗೆದುಹಾಕುವ ಮನವಿಗೆ ಸೂಕ್ತ ಕಾರಣ(ಗಳು)

ಜೋಶ್ ಕಂಪನಿಗೆ ದೂರನ್ನು ಇತ್ಯರ್ಥಪಡಿಸಲು ಅಗತ್ಯವಿರುವ ಮಾಹಿತಿಗಳನ್ನು ದೂರು ಹೊಂದಿರಬೇಕು. ಜೋಶ್ ಗೆ ಸಲ್ಲಿಸಬೇಕಾಗಿರುವ ಎಲ್ಲಾ ದೂರುಗಳನ್ನು ಜಂಟಿಯಾಗಿ ಲಿಖಿತ ರೂಪದಲ್ಲಿ ವೈಯಕ್ತಿಕವಾಗಿ ಸಲ್ಲಿಸಬಹುದು ಅಥವಾ ನೋಂದಾಯಿತ ಮೇಲ್ ನಲ್ಲಿ ಕಳುಹಿಸಬೇಕು ಮತ್ತು ರಶೀದಿಯನ್ನು ಹಿಂದಿರುಗಿಸುವಂತೆ ಮನವಿ ಮಾಡಬೇಕು ಅಥವಾ ಮೇಲಿನ ವಿಳಾಸಕ್ಕೆ ಫ್ಯಾಸಿಮೈಲ್ ಅಥವಾ ಇ ಮೇಲ್ ಮಾಡಬೇಕು.

ಈ ದಾಖಲೆಯನ್ನು 2021ರ ಮಾಹಿತಿ ತಂತ್ರಜ್ಞಾನ ನಿಯಮಗಳು (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮೀಡಿಯಾ ನೀತಿ ಸಂಹಿತೆ) ಕಾಯ್ದೆಯ ಪ್ರಕಾರ, ಆಪ್ ನ ಪ್ರವೇಶ ಅಥವಾ ಬಳಕೆಗಾಗಿ ನಿಯಮಗಳು ಮತ್ತು ನಿಬಂಧನೆಗಳು, ಗೌಪ್ಯತಾ ನೀತಿ ಮತ್ತು ಷರತ್ತಿನ ಪ್ರಕಾರ ಪ್ರಕಟಿಸಲಾಗಿದೆ.

ನಾನು ಈ ಬಳಕೆದಾರರ ಒಪ್ಪಂದದ ಷರತ್ತುಗಳನ್ನು ಓದಿದ್ದೇನೆ ಮತ್ತು ಅರ್ಥಮಾಡಿಕೊಂಡಿದ್ದೇನೆ ಮತ್ತು ಈ ಮೂಲಕ ಸ್ವಯಂ ಇಚ್ಛೆಯಿಂದ ನಾನು ಷರತ್ತುರಹಿತವಾಗಿ ಇದಕ್ಕೆ ಬದ್ಧವಾಗಿರಲು ಒಪ್ಪಿಕೊಂಡಿದ್ದೇನೆ.

ಈ ಗೌಪ್ಯತಾ ನೀತಿಯ ಬಗ್ಗೆ ನಿಮಗೊಂದು ವೇಳೆ ಯಾವುದೇ ದೂರು ಅಥವಾ ಕಾಳಜಿಗಳಿದ್ದಲ್ಲಿ, ನೀವು ಜೋಶ್ ಕುಂದುಕೊರತೆ ಪರಿಹಾರ ಅಧಿಕಾರಿಯನ್ನು ಇಮೇಲ್ ಅಥವಾ ಮೇಲ್ ಮೂಲಕ ಸಂಪರ್ಕಿಸಬಹುದು. ನೀವು ನಿಮ್ಮ ದೂರುಗಳನ್ನು “ಗೌಪ್ಯತಾ ದೂರು” ಎಂದು ವಿಷಯ ನಮೂದಿಸಿ (ಇಮೇಲ್ ವಿಳಾಸ ಹಾಕಿ) ಇಮೇಲ್ ಮೂಲಕ ದೂರು ಕಳುಹಿಸಬಹುದು. ನೀವು ಕುಂದು ಕೊರತೆ ಪರಿಹಾರ ಅಧಿಕಾರಿಯನ್ನು ಮೇಲಿನ ವಿಧಾನದ ಮೂಲಕ ಇಮೇಲ್ ಅಥವಾ ಲಿಖಿತ ಪತ್ರ ಬರೆಯುವ ಮೂಲಕ ಕೂಡ ಸಂಪರ್ಕಿಸಬಹುದು.

tower
inter circlw intercircle intercircle intercircle

Ohh Nooo!

There is no internet connection, please check your connection

TRY AGAIN

Ohh Nooo!

Landscape mode not supported, Please try Portrait.