ಜನವರಿ 2023

ಸಮುದಾಯ ಮಾರ್ಗಸೂಚಿಗಳು

ಪೀಠಿಕೆ

ಈ ಸಮುದಾಯ ಮಾರ್ಗಸೂಚಿಗಳು (“ಮಾರ್ಗಸೂಚಿಗಳು”) ವರ್ಸೇ ಇನ್ನೋವೇಷನ್ ಪ್ರೈವೇಟ್ ಲಿಮಿಟೆಡ್. ನಿರ್ವಹಣೆ ಮಾಡುತ್ತಿರುವ ನಮ್ಮ ‘ಜೋಶ್’ ವೆಬ್ ಸೈಟ್/ಮೊಬೈಲ್ ಅಪ್ಲಿಕೇಷನ್ (ಪ್ಲ್ಯಾಟ್ ಫಾರ್ಮ್) ನ್ನು “ನಿಮ್ಮ” ಬಳಕೆಯನ್ನು ನಿಯಂತ್ರಿಸುತ್ತದೆ. (“ವರ್ಸೇ” ಅಥವಾ “ನಮ್ಮ” ಅಥವಾ “ನಮ್ಮ” ಅಥವಾ “ಜೋಶ್”) ಒಂದು ಖಾಸಗಿ ಕಂಪನಿಯಾಗಿದ್ದು, ಭಾರತೀಯ ಕಾನೂನಡಿಯಲ್ಲಿ ಸ್ಥಾಪಿಸಲ್ಪಟ್ಟಿದೆ ಮತ್ತು ಇದರ ನೋಂದಾಯಿತ ಕಛೇರಿಯ ವಿಳಾಸ ಈ ಕೆಳಗಿನಂತಿದೆ. ಹೆಲಿಯೋಸ್ ಬಿಸಿನೆಸ್ ಪಾರ್ಕ್, 11ನೇ ಮಹಡಿ, ‘ಇ’ ವಿಂಗ್, ಹೆಲಿಯೋಸ್ ಬಿಸಿನೆಸ್ ಪಾರ್ಕ್ ಔಟರ್ ರಿಂಗ್ ರೋಡ್, ಕಾಡುಬೀಸನಹಳ್ಳಿ, ಬೆಂಗಳೂರು – 560 103. ಕರ್ನಾಟಕ, ಭಾರತ.

ಪಾರಿಭಾಷಿಕ ಪದಗಳಾದ “ನೀವು”, “ನಿಮ್ಮ”, “ಬಳಕೆದಾರ” ಮತ್ತು “ಬಳಕೆದಾರರು” ಇವುಗಳನ್ನು ಸಂದರ್ಭಕ್ಕೆ ತಕ್ಕಂತೆ ನೀವು ಓದಬಹುದು ಮತ್ತು ಉಲ್ಲೇಖಿಸಬಹುದಾಗಿದೆ.

ಈ ದಾಖಲೆಯು 2000ರ ಮಾಹಿತಿ ತಂತ್ರಜ್ಞಾನ ಕಾಯ್ದೆಯ ನಿಬಂಧನೆಗಳ ಅನುಸಾರ ಪ್ರಕಟಿಸಲಾಗಿದ್ದು, ಇದನ್ನು 2011ರ ಮಾಹಿತಿ ತಂತ್ರಜ್ಞಾನ ನಿಯಮಗಳು (ಸಮಂಜಸ ಭದ್ರತಾ ಚಟುವಟಿಕೆಗಳು ಮತ್ತು ಕಾರ್ಯವಿಧಾನ ಹಾಗೂ ಸೂಕ್ಷ್ಮ ವೈಯಕ್ತಿಕ ದತ್ತಾಂಶ ಮತ್ತು ಮಾಹಿತಿ) ಒಳಗೊಂಡಂತೆ ಮತ್ತು 2021ರ ಮಾಹಿತಿ ತಂತ್ರಜ್ಞಾನ ನಿಯಮಗಳ (ಮಧ್ಯವರ್ತಿ ಮಾರ್ಗದರ್ಶಿ ಮತ್ತು ಡಿಜಿಟಲ್ ಮಾಧ್ಯಮ ನೈತಿಕ ಸಂಕೇತ) ಪ್ರಕಾರ ಓದಬೇಕು.

ಎ. ನಿಮ್ಮ ಸ್ವೀಕಾರ

ಈ ವೇದಿಕೆಯಲ್ಲಿ ಯಾವುದೇ ವಿಷಯಗಳನ್ನು ನೋಡುವುದು ಅಥವಾ ಪೋಸ್ಟಿಂಗ್ ಮಾಡುವ ಮೊದಲು ದಯವಿಟ್ಟು ಈ ಮಾರ್ಗಸೂಚಿಗಳನ್ನು ಜಾಗರೂಕತೆಯಿಂದ ಓದಿರಿ. ಈ ವೇದಿಕೆಯಲ್ಲಿನ ಯಾವುದೇ ವಿಷಯಗಳನ್ನು ನೋಡುವುದು ಮತ್ತು ಪೋಸ್ಟಿಂಗ್ ಮಾಡಿದಲ್ಲಿ ನೀವು ಈ ಮಾರ್ಗಸೂಚಿಯ ಷರತ್ತುಗಳು ಮತ್ತು ನಿಯಮಗಳಿಗೆ ಬದ್ದರಾಗಿದ್ದೇವೆ ಎಂದು ಒಪ್ಪಿಕೊಂಡಂತಾಗುತ್ತದೆ.

ಈ ಮಾರ್ಗಸೂಚಿಗಳು ಸೇವೆಗಳ ನಿಯಮಗಳ ಒಂದು ಅವಿಭಾಜ್ಯ ಅಂಗವಾಗಿದೆ. ನೀವು ವೇದಿಕೆಯನ್ನು ಬಳಸಲು ಆರಂಭಿಸಿದ ನಂತರ ನೀವು ಬಳಕೆಯ ನಿಯಮಗಳು, ಖಾಸಗಿ ನೀತಿಗಳು ಮತ್ತು ಈ ಸಮುದಾಯ ಮಾರ್ಗಸೂಚಿಗಳಿಗೆ ಬದ್ಧರಾಗಿರುತ್ತೀರಿ.

ಈ ವೇದಿಕೆಯು ವಿವಿಧ ಮೂಲಗಳಿಂದ ವಿಷಯಗಳನ್ನು ಒಟ್ಟುಗೂಡಿಸಲು ಸಹಕರಿಸುತ್ತದೆ. ವರ್ಸೇ ಬೇಕೆಂದಾಗ ಮಧ್ಯವರ್ತಿಯಾಗಿ ವಿವಿಧ ರೀತಿಯ ವಿಷಯಗಳಿಗೆ ಪ್ರವೇಶವನ್ನು ಕಲ್ಪಿಸುತ್ತದೆ. ಈ ನೀತಿಗಳ ಉದ್ದೇಶಕ್ಕಾಗಿ ವರ್ಸೇಗಾಗಿ ಯಾವುದೇ ಉಲ್ಲೇಖಗಳು ಅದರ ಅಂಗಸಂಸ್ಥೆಗಳು, ವ್ಯಾಪಾರ ಪಾಲುದಾರರ, ಪೋಷಕ ಕಂಪನಿ, ಸಹಸಂಸ್ಥೆಗಳು, ಮತ್ತು ಸೋದರಿ ಸಂಸ್ಥೆಗಳ ಕಾಳಜಿಯನ್ನು ಒಳಗೊಂಡಿರುತ್ತದೆ.

ಜಗತ್ತನ್ನು ಹೆಚ್ಚು ಪ್ರವೇಶಿಸಲು ಮತ್ತು ಸಂಪರ್ಕಿಸಲು ಜನರಿಗೆ ಶಕ್ತಿಯನ್ನು ನೀಡಿ ಪರಸ್ಪರ ಹಂಚಿಕೊಳ್ಳಲು ಸಹಕರಿಸುವುದು ನಮ್ಮ ಉದ್ದೇಶವಾಗಿದೆ. ಪ್ರತಿ ದಿನ ಜನರು ನಮ್ಮ ವೇದಿಕೆಗೆ ಭೇಟಿ ನೀಡಿ ತಮ್ಮ ಕಥೆಗಳನ್ನು ಹಂಚಿಕೊಳ್ಳುತ್ತಾರೆ ನಂತರ ಇತರರ ದೃಷ್ಟಿಕೋನದಲ್ಲಿ ಅದನ್ನು ನೋಡುತ್ತಾರೆ ಮತ್ತು ಸ್ನೇಹಿತರು ಮತ್ತು ಕಾರಣಗಳ ಬಗ್ಗೆ ಸಂಪರ್ಕ ಸಾಧಿಸುತ್ತಾರೆ. ವೇದಿಕೆಯಲ್ಲಿ ನಡೆಯುವ ಸಂಭಾಷಣೆಗಳು ಒಂದು ಬಿಲಿಯನ್ ಗಿಂತಲೂ ಅಧಿಕ ಜನರಿರುವ ಒಂದು ಸಮುದಾಯದ ವೈವಿಧ್ಯತೆಯ ಮೇಲೆ ಪರಿಣಾಮ ಬೀರುತ್ತದೆ.

ನಮ್ಮ ವೇದಿಕಯನ್ನು ಬಳಸುವಾಗ ಜನರು ಸುರಕ್ಷಿತ ಅನುಭವ ಹೊಂದಿರಬೇಕೆಂಬುದು ನಾವು ಬಯಸುತ್ತೇವೆ. ಆ ಕಾರಣಕ್ಕಾಗಿ ನಾವು ಸಮುದಾಯ ಮಾರ್ಗಸೂಚಿಗಳ ಸೆಟ್ ನ್ನು ರಚಿಸಿದ್ದು ಅದು ಈ ಕೆಳಗಿನಂತಿವೆ. ಈ ನೀತಿಗಳು ವೇದಿಕೆಯಲ್ಲಿ ಯಾವ ರೀತಿಯ ವಿಷಯಗಳು ಪ್ರವೇಶಿಸಬಹುದು ಮತ್ತು ನಮಗೆ ಯಾವ ವಿಷಯಗಳು ವರದಿಯಾಗುತ್ತವೆ ಮತ್ತು ತಳ್ಳಿಹಾಕಲ್ಪಡುತ್ತವೆ ಎಂಬುದರ ಬಗ್ಗೆ ನಿಮಗೆ ತಿಳಿಯಲು ಸಹಕಾರಿಯಾಗುತ್ತದೆ. ನಮ್ಮ ಜಾಗತಿಕ ವೈವಿಧ್ಯತೆಗಳಿಂದಾಗಿ ನಿಮಗೆ ಸಮ್ಮತಿಯಿಲ್ಲದಿರುವ ಅಥವಾ ನಿಮಗೆ ತೊಂದರೆಯುಂಟುಮಾಡುವ ಯಾವುದೇ ಅಂಶಗಳು ನಮ್ಮ ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸಿದಿರಬಹುದು ಎಂಬುದನ್ನು ದಯವಿಟ್ಟು ಮನದಟ್ಟು ಮಾಡಿಕೊಳ್ಳಿರಿ.

ಆದಾಯ ತೆರಿಗೆ ಕಾಯ್ದೆಯಡಿಯಲ್ಲಿ ವೇದಿಕೆಯನ್ನು ವರ್ಸೇ ಒಂದು ಮಧ್ಯವರ್ತಿಯಾಗಿ ನಿರ್ವಹಿಸುತ್ತದೆ.

ನೀತಿ/ಒಪ್ಪಂದದ ಉದ್ದೇಶಕ್ಕಾಗಿ (“ಪಾಲಿಸಿ”), ವಿಷಯವು ಯಾವುದೇ ಸೀಮಿತವಾಗಿರದ ಪಠ್ಯ, ಚಿತ್ರಣಗಳು, ಆಡಿಯೋ, ವೀಡಿಯೋ ಪ್ರದರ್ಶನ, ಪ್ರಸಾರವಾದ, ಪ್ರಕಟಿಸಿದ, ಆಯೋಜಿಸಿದ, ವೇದಿಕೆಯಲ್ಲಿ ಸಾರ್ವಜನಿಕರಿಗೆ ತಿಳಿಸಲಾದ ಯಾವುದೇ ವಸ್ತು ಸೇರಿದಂತೆ ಒಳಗೊಂಡಿರಬಹುದಾಗಿದೆ. ಸ್ಪಷ್ಟತೆಗಾಗಿ ವಿಷಯವು ಟೀಕೆಗಳು ಮತ್ತು ಹೈಪರ್ಲಿಂಕ್ ಗಳನ್ನು ಸಹ ಒಳಗೊಂಡಿರುತ್ತದೆ.

ನೀವು ವೇದಿಕೆಯನ್ನು ಬಳಸಿದಾಗ, ನೀವು ಈ ನೀತಿಯ ಎಲ್ಲಾ ನಿಯಮಗಳನ್ನು, ಸೇವಾ ನಿಯಮಗಳು ಮತ್ತು ಖಾಸಗಿ ಪಾಲಿಸಿಗಳನ್ನು ಒಪ್ಪಿಕೊಳ್ಳುತ್ತೀರಿ. ಒಂದು ವೇಳೆ, ನೀವು ಈ ಯಾವುದೇ ನಿಯಮಗಳನ್ನು ಒಪ್ಪದಿದ್ದರೆ, ದಯವಿಟ್ಟು ವೇದಿಕೆಯನ್ನು ಬಳಸುವುದನ್ನು ನಿಲ್ಲಿಸಿ.

ಬಿ. ಈ ವೇದಿಕೆಯಲ್ಲಿನ ವಿಷಯಗಳು

ವರ್ಸೇ ಕೇವಲ ಒಂದು ಮಧ್ಯವರ್ತಿ ಸಂಸ್ಥೆಯಾಗಿದೆ ಮತ್ತು 2000ರ ಮಾಹಿತಿ ತಂತ್ರಜ್ಞಾನ ಕಾಯ್ದೆಯ ನಿಬಂಧನೆಗಳಡಿಯಲ್ಲಿ ಗುರುತಿಸಲಾದ ತಂತ್ರಜ್ಞಾನ  ಒದಗಿಸುವ ಒಂದು ಸಂಸ್ಥೆಯಾಗಿದ್ದು ಅದರ ನಿಯಮಗಳೊಂದಿಗೆ ಓದುವುದು. ವೇದಿಕೆಯಲ್ಲಿ ವಿಷಯ ಪೂರೈಕೆದಾರರ ಮೂಲಗಳಿಂದ ಅಥವಾ ಬಳಕೆದಾರರಿಂದ ಪೋಸ್ಟ್ ಮಾಡಲಾದ ವಿಷಯಗಳಾಗಿರುತ್ತವೆ. ವರ್ಸೇಯು ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ನಿಯಂತ್ರಣವನ್ನು ಮಾಡುವುದಿಲ್ಲ ಮತ್ತು ವಿಷಯಗಳ ಸರಿಯಾದತೆಗೆ ವಿಷಯದ ಕಾನೂನುಬದ್ಧತೆಗೆ ಊರ್ಜಿತತೆಯನ್ನು ಸಮರ್ಥಿಸುವುದಿಲ್ಲ. ವರ್ಸೇ ಯು ಎಲ್ಲಾ ವಾರಂಟಿಗಳು ನಿರಾಕರಿಸುತ್ತದೆ. ಮತ್ತು ಯಾವುದೇ ನಾಗರಿಕ ಅಥವಾ ಅಪರಾಧ ಕಾನೂನಡಿಯಲ್ಲಿ ಯಾವುದೇ ಉಲ್ಲಂಘನೆಗಳಿಗೆ ಜವಾಬ್ದಾರಿಯಾಗಿರುವುದಿಲ್ಲ.

ವೇದಿಕಯಲ್ಲಿನ ವಿಷಯವನ್ನು ವರ್ಸೇ ಯ ಮಾಲೀಕತ್ವದಲ್ಲಿರುವುದಿಲ್ಲ. ವೇದಿಕೆಯಲ್ಲಿ ಲಭ್ಯವಾಗುವ ಅಥವಾ ಪೋಸ್ಟ್ ಮಾಡಲಾದ ವಿಷಯಗಳಿಗೆ ಅದು ಜವಾಬ್ದಾರಿಯಾಗಿರುವುದಿಲ್ಲ.

ಶಿಕ್ಷಣ, ಮನರಂಜನೆ, ಟೀಕೆ, ಅಥವಾ ಮಾಹಿತಿ ಬಿತ್ತರಗಳು ಒಳಗೊಂಡಂತೆ ಕಾನೂನಾತ್ಮಕ ಮತ್ತು ವಾಣಿಜ್ಯ ಉದ್ದೇಶಗಳಿಗಲ್ಲದ ಕೇವಲ ಉತ್ತಮ ನಂಬಿಕಾರ್ಹ ವಿಷಯಗಳನ್ನು ಪೋಸ್ಟ್ ಮಾಡಲು ನೀವು ಒಪ್ಪಿಕೊಂಡಿರುತ್ತೀರಿ.

ನೀವು ಸ್ವಯಂಚಾಲಿತ ಸಾಧನ, ಸ್ಕ್ರಿಪ್ಟ್, ಬೋಟ್, ಸ್ಪೈಡರ್, ಕ್ರಾವ್ಲರ್ ಅಥವಾ ಸ್ಕ್ರಾಪರ್ ಬಳಸಿಕೊಂಡು ಸೀಮಿತವಲ್ಲದ ಯಾವುದೇ ಅನಧಿಕೃತ ಮೂಲಗಳ ಮೂಲಕ ವಿಷಯಗಳನ್ನು ಪ್ರವೇಶಿಸಬಾರದು ಅಥವಾ ಪೋಸ್ಟ್ ಮಾಡುವಂತಿಲ್ಲ.

ವೇದಿಕೆಯಲ್ಲಿ ಯಾವುದೇ ಕೆಟ್ಟ ಉದ್ದೇಶಗಳೊಂದಿಗೆ ಅಥವಾ ಅನಧಿಕೃತ ರೀತಿಯನ್ನೊಳಗೊಂಡಿರುವ ವಿಷಯಗಳನ್ನು ಬಳಸದಿರಿ.

ನೀವು ಪೋಸ್ಟ್ ಮಾಡಿದ ವಿಷಯ ಕಾನೂನಾತ್ಮಕ ಮತ್ತು ಯಾವುದೇ ಅನ್ವಯಿತ ಕಾನೂನುಗಳು, ನಿಯಮಗಳು, ನಿಬಂಧನೆಗಳು, ನೀತಿಗಳು, ಮಾರ್ಗಸೂಚಿಗಳು ಮತ್ತು/ಅಥವಾ ನಿಯಮಗಳು ಸಂಬಂಧಿಸಿದ ದೇಶಗಳಿಗೆ ಅನ್ವಯಿಸಿದ್ದು ಅದು ಯಾವುದೇ ಅನ್ವಯಿತ ನಿಯಮಗಳನ್ನು ಉಲ್ಲಂಘಿಸಿರುವುದಿಲ್ಲ ಮತ್ತು ನೀವು ಪ್ರಕಟಿಸಿದ ವಿಷಯಗಳು, ವರ್ಸೇ ಯಿಂದ ಆ ದೇಶಗಳ ಸಾರ್ವಜನಿಕರಿಗೆ ಸಂವಹನ ಮಾಡಲ್ಪಡುತ್ತವೆ ಅಥವಾ ವಿತರಿಸಲ್ಪಡುತ್ತವೆ ಎಂಬುದುನ್ನು ನೀವು ಒಪ್ಪಿಕೊಳ್ಳುತ್ತೀರಿ.

ವಿಷಯಗಳು ಮತ್ತು ವರ್ತನಾ ನೀತಿಗಳು ನಮ್ಮ ಬಳಕೆದಾರರಿಗೆ ಒಮದು ಸಕಾರಾತ್ಮಕ ಅನುಭವವನ್ನು ಖಾತ್ರಿಪಡಿಸಲು ಸಹಾಯ ಮಾಡುತ್ತದೆ. ವೇದಿಕೆಯಲ್ಲಿ ಅರ್ಹವೆನಿಸಿ, ಪ್ರದರ್ಶಿತಗೊಂಡು ಹಾಗೆಯೇ ಉಳಿಯುವುದಕ್ಕೋಸ್ಕರ ನಿಮ್ಮ ವಿಷಯಗಳು ನಮ್ಮ ನೀತಿಗಳಿಗನುಗುಣವಾಗಿ ಉತ್ತಮ ಅನುಸರಣಾ ಅಭ್ಯಾಸವನ್ನು ಕೈಗೊಂಡಿರಬೇಕು ಮತ್ತು ವಿಷಯಗಳು ಈ ರೀತಿ ಇರಬಾರದು: 

1. ದ್ವೇಷ ಭಾಷಣ ಮತ್ತು ತಾರತಮ್ಯತೆ

ವೇದಿಕೆಯಲ್ಲಿ ಇತರರನ್ನು ಘನತೆ, ಗೌರವ ಮತ್ತು ಸಹಾನುಭೂತಿಯಿಂದ ಕಾಣಿರಿ. ನಾವು ವೇದಿಕೆಯಲ್ಲಿ ಭಿನ್ನಾಭಿಪ್ರಾಯವುಳ್ಳ ಸೂಕ್ತ ಮತ್ತು ಸದುದ್ದೇಶದ ಅಭಿವ್ಯಕ್ತಿಗಳನ್ನು ಕೂಡ ಪ್ರೋತ್ಸಾಹಿಸುತ್ತೇವೆ. ನಾವು ಯಾವುದೇ ರೀತಿಯ ದ್ವೇಷಯುಕ್ತ, ವ್ಯಕ್ತಿಗತ ಹಾನಿ, ಪ್ರಚಾರ ಗಿಟ್ಟಿಸೋ ಭಾಷಣ, ಅಥವಾ ಇತರ ಬಳಕೆದಾರರಿಗೆ ಹಾನಿ ಮಾಡುವ ಉದ್ದೇಶದ ಅಥವಾ ಮಾನಸಿಕ ಒತ್ತಡ ಅಥವಾ ವೇದನೆಯನ್ನುಂಟು ಮಾಡುವಂತಹ ಅನಾಗರಿಕ ರೀತಿಯ ಭಿನ್ನಾಭಿಪ್ರಾಯಗಳಿಗೆ ನಾವು ಅವಕಾಶ ನೀಡುವುದಿಲ್ಲ. ದ್ವೇಷಪೂರಿತ ಅಥವಾ ತಾರತಮ್ಯತೆಯಿಂದ ಕೂಡಿದ ಭಾಷಣಗಳ ಉದಾಹರಣೆಗಳಲ್ಲಿ, ಹಿಂಸೆ, ಜನಾಂಗೀಯ ದ್ವೇಷ, ಅಥವಾ ಜನಾಂಗೀಯ ಆಕ್ಷೇಪಾರ್ಹವಾಗುವ, ಅಥವಾ ಯಾವುದೇ ವ್ಯಕ್ತಿಯ ರಾಷ್ಟ್ರೀಯ ಮೂಲ, ಲಿಂಗ, ಲಿಂಗ ಗುರುತಿಸುವಿಕೆ, ಧಾರ್ಮಿಕ ಸಂಬಂಧ, ವಿಶೇಷಚೇತನತೆ, ಅಥವಾ ರೋಗಗಳ ಬಗ್ಗೆ ಯಾರನ್ನಾದರೂ ಟೀಕಿಸುವ ಭಾಷಣಗಳು ಸೇರಿವೆ. ಹಾಗೆಯೇ ನಾವು ಇತರ ಬಳಕೆದಾರರನ್ನು ಪ್ರೋತ್ಸಾಹಿಸುವಂತಹ ವಿಷಯಗಳನ್ನೊಳಗೊಂಡ ಇಂತಹ ಹಂಚಿಕೆಯನ್ನು ಕೂಡ ನಿರ್ಬಂಧಿಸುತ್ತೇವೆ. ಅಂತೆಯೇ ನೀವು ದ್ವೇಷಭಾವನೆಯನ್ನು ಬಿತ್ತುವ ಚಿತ್ರಣಗಳು ಅಥವಾ ಸಂಕೇತಗಳನ್ನು ಬಿಂಬಿಸುವಂತಹ ಯಾವುದೇ ಚಿತ್ರಣಗಳನ್ನು ನಿಮ್ಮ ಪ್ರೊಫೈಲ್ ಚಿತ್ರಣ ಅಥವಾ ಪ್ರೊಫೈಲ್ ಹೆಡರ್ ಆಗಿ ಬಳಸುವುದಕ್ಕೆ ನಿಮಗೆ ಅನುಮತಿ ಇರುವುದಿಲ್ಲ. ಹಾಗೆಯೇ ನೀವು ನಿಮ್ಮ ಯೂಸರ್ ನೇಮ್, ಡಿಸ್ ಪ್ಲೇ ನೇಮ್, ಅಥವಾ ಪ್ರೊಫೈಲ್ ಬಯೋ ಇತ್ಯಾದಿಗಳನ್ನು ನಿಂದನಾರ್ಹ ವರ್ತನೆಯಲ್ಲಿ ತೊಡಗಿರುವಂತೆ ಅಥವಾ ಇತರೆ ಬಳಕೆದಾರರಿಗೆ ಉದ್ದೇಶಪೂರ್ವಕವಾಗಿ ತೊಂದರೆಕೊಡುವಂತೆ ಅಥವಾ ದ್ವೇಷವನ್ನು ವ್ಯಕ್ತಪಡಿಸುವಂತೆ ಪ್ರದರ್ಶಿಸುವ ರೀತಿಯಲ್ಲಿ ನೀವು ಬದಲಾಯಿಸುವಂತಿಲ್ಲ.

ನಿರ್ದಿಷ್ಟ ವಿಷಯಗಳನ್ನು ಪೋಸ್ಟ್ ಮಾಡುವಂತಿಲ್ಲ, ಅಪ್ ಲೋಡ್ ಮಾಡುವಂತಿಲ್ಲ, ಸ್ಟ್ರೀಮ್ ಅಥವಾ ಹಂಚಿಕೊಳ್ಳುವಂತಿಲ್ಲ:

  • ದ್ವೇಷ ಮತ್ತು ತಾರತಮ್ಯತೆಗೆ ಸಂಬಂಧಿಸಿದ ವಿಷಯಗಳನ್ನೊಳಗೊಂಡ ಹೆಸರು, ಚಿಹ್ನೆಗಳು, ಲೋಗೋಗಳು, ನಕಾಶೆಗಳು, ಫ್ಲ್ಯಾಗ್ ಗಳು, ಸ್ಲೋಗನ್ ಗಳು ಅಥವಾ ಇತರ ಅಂಶಗಳನ್ನು ಪೋಸ್ಟ್, ಅಪ್ ಲೋಡ್, ಅಥವಾ ಹಂಚಿಕೊಳ್ಳುವಂತಿಲ್ಲ.
  • ಧಾರ್ಮಿಕ ಆಚರಣೆಗಳಿಗೆ ಸಂಬಂಧಿಸಿದ ಪ್ರಚಾರಗಳು, ಬೆಂಬಲಗಳು, ಅಥವಾ ಜಾಹೀರಾತುಗಳು ಸುಧಾರಣಾ ನೀತಿಗಳನ್ನೊಳಗೊಂಡ ವಿಷಯಗಳು
  • ಹಿಂಸೆ, ಅಸೂಯೆ, ವಿಭಜನೆ ಅಥವಾ ತಾರತಮ್ಯತೆಯನ್ನು ಹೆಚ್ಚಿಸು ವಿಷಯಗಳು
  • ಧರ್ಮ, ಜಾತಿ, ಸ್ತ್ರೀದ್ವೇಷ, ಎಲ್ ಜಿಬಿ ಟಿಕ್ಯೂ ಅಥವಾ ಇತರರೊಂದಿಗೆ ದ್ವೇಷ ಸಿದ್ದಾಂತವನ್ನು ಬೆಂಬಲಿಸುವ ವಿಷಯಗಳು

2. ಧಾರ್ಮಿಕ ಅಪರಾಧವೆಸಗುವ ಆಕ್ರಮಣಕಾರಿ ವಿಷಯಗಳು

ಇತರರು ನಿಮ್ಮಂತೆಯೇ ಏಕರೀತಿಯ ಅಭಿಪ್ರಾಯಗಳನ್ನು ಅಥವಾ ನಂಬಿಕೆಗಳನ್ನು ವಿನಿಮಯಮಾಡಿಕೊಳ್ಳುತ್ತಾರೋ ಅಥವಾ ಇಲ್ಲವೋ ಎಂಬುದನ್ನು ಲೆಕ್ಕಿಸದೇ ನೀವು ಯಾವಾಗಲೂ ಇತರರ ಧಾರ್ಮಿಕ ನಿಷ್ಠೆ ಹಾಗೂ ನಂಬಿಕೆಗಳನ್ನು ಗೌರವಿಸಬೇಕು. ನೀವು ಇತರರ ಭಾವನೆಗಳಿಗೆ ಅಥವಾ ಅವರ ಧಾರ್ಮಿಕತೆಗೆ ಅಥವಾ ಆಚಾರವಿಚಾರಗಳಿಗೆ ಧಕ್ಕೆ ಉಂಟುಮಾಡುವ ಯಾವುದೇ ವಿಷಯಗಳನ್ನು ನೀವು ಪ್ರಕಟಿಸುವಂತಿಲ್ಲ.

3. ಭಯೋತ್ಪಾದನೆ ಮತ್ತು ಉಗ್ರವಾದ

ನೀವು ವೇದಿಕೆಯಲ್ಲಿ ಯಾವುದೇ ಅಪಾಯಕಾರಿ ಚಟುವಟಿಕೆಗಳನ್ನು ಬೆದರಿಸುವಂತಿಲ್ಲ ಅಥವಾ ಪ್ರಚುರ ಪಡಿಸುವಂತಿಲ್ಲ. ನಿರ್ದಿಷ್ಟವಾಗಿ ಭಯೋತ್ಪಾದನೆ ಪ್ರಚೋದಿಸುವ, ಪ್ರತ್ಯೇಕಿಸುವ, ವ್ಯಕ್ತಿ ಅಥವಾ ಆಸ್ತಿಗೆ ಅಥವಾ ಹಾನಿಯುಂಟುವಾಡುವ ಕೆಲಸಗಳು, ದೇಶದ ಏಕತೆ, ಐಕ್ಯತೆ, ರಕ್ಷಣೆ, ಭದ್ರತೆ ಅಥವಾ ಸಾರ್ವಭೌಮತ್ವಕ್ಕೆ ಬೆದರಿಕೆಯೊಡ್ಡುವ ಕಾರ್ಯ, ವಿದೇಶಗಳೊಂದಿಗೆ ಸ್ನೇಹ ಸಂಬಂಧವನ್ನು ತೊಡೆಯುವ ಕೆಲಸ ಅಥವಾ ಇನ್ನೊಂದು ದೇಶವನ್ನು ಅವಮಾನಿಸುವಂತಹ ಕಾರ್ಯಗಳಿಗೆ ವೇದಿಕೆಯನ್ನು ಬಳಸುವಂತಿಲ್ಲ. ನೀವು ಉಗ್ರವಾದಿ ಅಥವಾ ರಾಷ್ಟ್ರವಿರೋಧಿ ಸಂಘಟನೆಗಳ ಪರವಾಗಿ ಕ್ರಮಗಳನ್ನು ತೆಗೆದುಕೊಳ್ಳುವಂತೆ ಬಳಕೆದಾರರನ್ನು ಪ್ರೋತ್ಸಾಹಿಸುವ ಅಥವಾ ಪ್ರಚಾರ ಮಾಡುವ ಅಂಶಗಳನ್ನೊಳಗೊಂಡ ವಿಷಯಗಳನ್ನು ಪೋಸ್ಟ್ ಮಾಡುವಂತಿಲ್ಲ. ಅಥವಾ ಅಂತಹ ಸಂಘಗಳ ಉದ್ದೇಶಗಳು ನೇಮಕಾತಿಗಾಗಿ ಯಾವುದೇ ಮಾಹಿತಿ ಪ್ರಸಾರಿಸುವಂತಿಲ್ಲ. ಹಾಗೆಯೇ ನೀವು ಕಾನೂನುಬಾಹಿರ ಪ್ರತಿಭಟನೆಗಳ ಸಂದರ್ಭದಲ್ಲಿ ಹಿಂಸಾತ್ಮಕ ಚಟುವಟಿಕೆಗಳಿಗೆ ಬೆಂಬಲ ಅಥವಾ ಅನುಮೋದನೆ ನೀಡುವಂತಹ ಕೆಲಸ ಮಾಡಬಾರದು ಅಥವಾ ಹಿಂಸೆ - ಭಯೋತ್ಪಾದನೆಗೆ ಪ್ರಚೋದನೆ ನೀಡುವಂತಹ ಪಿತೂರಿ ಹೂಡುವ ಸಂಪರ್ಕಜಾಲಗಳಿಗೆ ಬೆಂಬಲ ನೀಡುವಂತಹ ಪೋಸ್ಟ್ ಗಳನ್ನು ಹಾಕುವಂತಿಲ್ಲ.

4. ಹಿಂಸೆ ಮತ್ತು ಗ್ರಾಫಿಕ್ ವಿಷಯ

  • ಮಾನವ

ನೀವು ಇನ್ನೊಬ್ಬ ವ್ಯಕ್ತಿಗೆ ದೈಹಿಕವಾಗಿ ತೊಂದರೆ ಮಾಡುವಂತಹ ಪ್ರತ್ಯಕ್ಷ ಅಥವಾ ಪರೋಕ್ಷ ಬೆದರಿಕೆಗಳನ್ನು ಹಾಕಲು ವೇದಿಕೆಯನ್ನು ಬಳಸಬಾರದು. ಇದು ಕಳ್ಳತನ, ವಿಧ್ವಂಸಕತೆ, ಅಕ್ರಮ ಬಂಧನ, ದೈಹಿಕ, ಮಾನಸಿಕ ಅಥವಾ ಹಣಕಾಸು ತೊಂದರೆ ಇತ್ಯಾದಿ ಯಾವುದೇ ಹಾನಿಕಾರಕ ಬೆದರಿಕೆಯನ್ನು ಒಳಗೊಂಡಿದೆ. ವೇದಿಕೆಯು ತನ್ನ ಬಳಕೆದಾರರಿಗೆ ಸಾಮೂಹಿಕ ಹತ್ಯೆ, ಹಿಂಸಾತ್ಮಕ ಘಟನೆಗಳು, ಅಥವಾ ನಿರ್ದಿಷ್ಟ ಹಿಂಸಾತ್ಮಕ ವಿಧಾನಗಳ ಉಲ್ಲೇಖಗಳನ್ನು ಒಳಗೊಂಡಿರುವ ಪೋಸ್ಟ್ ಗಳನ್ನು ಹಾಕಲು ಅನುಮತಿ ನೀಡುವುದಿಲ್ಲ. ನಿರ್ದಿಷ್ಟವಾಗಿ ದುರ್ಬಲ ಸಮುದಾಯ ಅಥವಾ ಗುಂಪು ಪ್ರಾಥಮಿಕ ಟಾರ್ಗೆಟ್ ಅಥವಾ ಬಲಿಪಶುಗಳನ್ನಾಗಿಸಿಕೊಂಡು ನಡೆಸುವ ಹಿಂಸಾತ್ಮಕ ಚಟುವಟಿಕೆಗಳನ್ನು ಆಯುವ ಅಥವಾ ಅದನ್ನು ವೈಭವೀಕರಿಸುವ ಪೋಸ್ಟ್ ಗಳನ್ನು ಹಾಕಲು ವೇದಿಕೆ ಸಮ್ಮತಿಸುವುದಿಲ್ಲ. ಹಾಗೆಯೇ ಸೀಮಿತವಾಗಿ ಯಾವುದೇ ವ್ಯಕ್ತಿ ಅಥವಾ ಗುಂಪಿನ ಭಾವನೆಗಳಿಗೆ ನೋವುಂಟುಮಾಡುವ ಅಥವಾ ದೈಹಿಕವಾಗಿ ತೊಂದರೆಯಾದಾಗ ಅದಕ್ಕೆ ಸಂಭ್ರಮಿಸುವ ಘಟನೆಗಳ ವಿಷಯಗಳನ್ನು ವೈಭವೀಕರಿಸಿ ಪೋಸ್ಟ್ ಮಾಡುವುದಕ್ಕೆ ವೇದಿಕೆ ಅನುಮತಿ ನೀಡುವುದಿಲ್ಲ. ಚಿತ್ರಹಿಂಸೆ, ಗಾಯ, ಮಾನಸಿಕ ತೊಂದರೆ, ಸಾವು, ದೈಹಿಕ ಹಿಂಸೆ, ಅಪಹರಣ, ಕಿಡ್ನ್ಯಾಪಿಂಗ್ ಅಥವಾ ಇತರ ಹಿಂಸಾತ್ಮಕ ವಿಧಾನಗಳನ್ನೊಳಗೊಂಡ ವಿಷಯಗಳನ್ನು ಪೋಸ್ಟ್ ಮಾಡುವುದನ್ನು ತಡೆಯಬೇಕು. ನಾವು ಇಂತಹ ವಿಷಯಗಳ ಬಗ್ಗೆ ಜಾಗೃತಿ ಮೂಡಿಸಲು ಸಹಾಯ ಮಾಡುವ ನಿಟ್ಟಿನಲ್ಲಿ ಕೆಲವೊಂದು ನಿರ್ಬಂಧಗಳ ಮೂಲಕ ನಾವು ವಿಷಯಗಳಿಗೆ ಅನುಮತಿಸುತ್ತೇವೆ.

ನೀವು ಪೋಸ್ಟ್, ಶೇರ್, ಅಪ್ ಲೋಡ್ ಅಥವಾ ಸ್ಟ್ರೀಮ್ ಮಾಡಬಾರದು

  • ವೈದ್ಯಕೀಯ ಸೆಟ್ಟಿಂಗ್ ಗಳ ಹೊರತಾಗಿ ಜನರು ಅಥವಾ ಮೃತದೇಹಗಳ ವೀಡಿಯೋಗಳನ್ನು ಅಪ್ ಲೋಡ್, ಪೋಸ್ಟ್, ಶೇರ್ ಮಾಡುವಂತಿಲ್ಲ.
  • ಪರಸ್ಪರರ ನಡುವೆ ನಡೆಯುವ ಹಿಂಸೆಯ ಫೋಟೋಗಳು ಮತ್ತು ವೀಡಿಯೋಗಳು
  • ಒಬ್ಬ ವ್ಯಕ್ತಿಯ ಹಿಂಸೆಯಿಂದಾದ ಸಾವಿನ ಬಗೆಗಿನ ವಿಷಯಗಳನ್ನು ತೋರಿಸುವಂತಿಲ್ಲ.
  • ಪ್ರಾಣಿ

ಶಾಕಿಂಗ್, ದುಃಖ ಉಂಟುಮಾಡುವ, ಅಥವಾ ನೈಜವಾಗಿ ಪ್ರಾಣಿಗಳನ್ನು ವಧೆಮಾಡುವ, ಛಿದ್ರಗೊಳಿಸುವ, ಅಂಗಾಂಗ ಕತ್ತರಿಸುವ, ಸುಟ್ಟ ಪ್ರಾಣಿಗಳು ಅಥವಾ ಪ್ರಾಣಿಗಳನ್ನು ಕ್ರೂರವಾಗಿ ಹಿಂಸಿಸುವಂತಹ ಗ್ರಾಫಿಕ್ ಗಳನ್ನು ವಿಪರೀತವಾಗಿ ವೈಭವೀಕರಿಸಿರುವ ವಿಷಯಗಳನ್ನು ಪೋಸ್ಟ್ ಮಾಡುವಂತಿಲ್ಲ.

ನೀವು ಪೋಸ್ಟ್, ಶೇರ್, ಅಪ್ ಲೋಡ್ ಅಥವಾ ಸ್ಟ್ರೀಮ್ ಮಾಡಬಾರದು

ಸ್ಪಷ್ಟ ಉತ್ಪಾದನೆಯಿಲ್ಲದಿರುವಂತಹ ಸಂದರ್ಭದಲ್ಲಿ, ಆಹಾರ ಸೇವನೆ ಅಥವಾ ಆಹಾರ ತಯಾರಿಕೆಯ ಸಂದರ್ಭದಲ್ಲಿ ಮಾನವರು ಪ್ರಾಣಿಗಳನ್ನು ಹತ್ಯೆ ಮಾಡುವುದನ್ನು ಪ್ರತಿನಿಧಿಸುವ ವೀಡಿಯೋಗಳನ್ನು ಪೋಸ್ಟ್, ಶೇರ್, ಅಪ್ಲೋಡ್, ಅಥವಾ ಸ್ಟ್ರೀಮ್ ಮಾಡಬಾರದು.

  • ಪ್ರಾಣಿ ಪ್ರಾಣಿಗಳ ನಡುವಿನ ಕಾದಾಟದಲ್ಲಿ ಅವುಗಳು ಛಿದ್ರವಾಗಿ ಪ್ರತ್ಯೇಕಗೊಂಡು ಮರುಜೋಡಣೆಗೊಳ್ಳದೇ ಘೋರ ರೀತಿಯಲ್ಲಿರುವ ಚಿತ್ರಣಗಳು ಅಥವಾ ವೀಡಿಯೋಗಳನ್ನು ಪ್ರತಿನಿಧಿಸುವ ವಿಷಯಗಳನ್ನು
  • ಜೀವಂತ ಪ್ರಾಣಿಗಳಿಗೆ ಮಾನವನ ದೌರ್ಜನ್ಯ ಅಥವಾ ಚಿತ್ರಹಿಂಸೆ ನೀಡುವ ವೀಡಿಯೋಗಳು ಅಥವಾ ಚಿತ್ರಣಗಳು
  • ಛಿದ್ರಗೊಂಡಿರುವ, ಸುಟ್ಟ, ಅಂಗಗಳ ನ್ಯೂನತೆ, ಅಥವಾ ಸುಟ್ಟು ಕರಕಲಾಗಿ ಉಳಿದ ದೇಹಗಳ ಚಿತ್ರಣಗಳು

5. ಕಿರಿಯರ ಸುರಕ್ಷತೆ

ಕಿರಿಯರ ಸುರಕ್ಷತೆ, 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಅಪ್ರಾಪ್ತರ ಬಗ್ಗೆ ಸುರಕ್ಷತೆ ವಹಿಸುವುದು ಜೋಶ್ ನ ಮಹತ್ತರ ಕಾಳಜಿಯಾಗಿದೆ ಮತ್ತು ವೇದಿಕೆಯು ಅವರನ್ನು ರಕ್ಷಿಸಲು ಬದ್ಧವಾಗಿರುತ್ತದೆ. ಹಾಗಾಗಿ, ಜೋಶ್ ಯಾವುದೇ ರೀತಿಯ ಲೈಂಗಿಕ ಚಟುವಟಿಕೆ ಅಥವಾ ಅಪ್ರಾಪ್ತರಿಗೆ ಅಥವಾ ಅಪ್ರಾಪ್ತ ವಯಸ್ಕರಂತೆ ಕಾಣುವವರಲ್ಲಿ ಅಂತಹ ಚಟುವಟಿಕೆಯಲ್ಲಿ ಭಾಗಿಯಾಗುವ ಬಗ್ಗೆ ಸೂಚಿಸುವುದನ್ನು ಜೋಶ್ ನಿಷೇಧಿಸುತ್ತದೆ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಚಿತ್ರಣ, ಮಕ್ಕಳ ಅಶ್ಲೀಲತೆ ಮತ್ತು ಅಂತಹ ಯಾವುದಾದರೂ ವಿಷಯಗಳು, ಕಾಲ್ಪನಿಕ ವಿಷಯಗಳು ಒಳಗೊಂಡಂತೆ (ಉದಾ: ಕಥೆಗಳು, “ಲೋಲಿ”/ಆನಿಮಿ ಕಾರ್ಟೂನ್ಸ್), ಇತ್ಯಾದಿಗಳನ್ನು ಒಳಗೊಂಡಂತೆ ಶಿಶುಕಾಮವನ್ನು ಪ್ರೋತ್ಸಾಹಿಸುವ ಅಥವಾ ಪ್ರಚಾರ ಮಾಡುವ ಚಿತ್ರಿಸುವ, ಮಕ್ಕಳ ಲೈಂಗಿಕ ಶೋಷಣೆ, ಅಥವಾ ಅಪ್ರಾಪ್ತ ವಯಸ್ಕರನ್ನು ಲೈಂಗಿಕವಾಗಿ ಬಳಸುವ ಅಥವಾ ಅಪ್ರಾಪ್ತ ವಯಸ್ಕರಂತೆ ಕಾಣುವವರನ್ನು ಬಳಸಿಕೊಳ್ಳುವಂತಹ ಚಿತ್ರಣಗಳನ್ನು ನಿಷೇಧಿಸುತ್ತದೆ. ಸನ್ನಿವೇಶವನ್ನು ಅವಲಂಬಿಸಿ, ಕೆಲವೊಂದು ಪ್ರಕರಣಗಳಲ್ಲಿ ಅಪ್ರಾಪ್ತ ವಯಸ್ಕರು ಸಂಪೂರ್ಣ ಬಟ್ಟೆ ಧರಿಸಿದ್ದು ಬಹಿರಂಗವಾಗಿ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿರದಂತಹ ಚಿತ್ರಗಳು ಸೇರಿವೆ. ನಾವು ಬಾಹ್ಯ ಲೈಂಗಿಕತೆ ಮತ್ತು ಅದರ ವೈಭವೀಕರಣದ ವಿಷಯಗಳನ್ನು ಬಿಂಬಿಸುವ ಆನಿಮೇಟೆಡ್ ವಿಷಯಗಳನ್ನು ವೇದಿಕೆಯಲ್ಲಿ ಹಾಕಲು ಅವಕಾಶ ನೀಡುವುದಿಲ್ಲ. ಲೈಂಗಿಕ ವಿಷಯಗಳು ಅನೇಕ ಅಪಾಯಗಳನ್ನು ಒಳಗೊಂಡಿರುತ್ತದೆ ಕೆಲವು ಕಾನೂನು ವ್ಯಾಪ್ತಿಯಲ್ಲಿ ದಂಡ ಪಾವತಿ ಪ್ರಚೋದನೆ ಮತ್ತು ನಮ್ಮ ಬಳಕೆದಾರರಿಗೆ ಒಮ್ಮತವಿಲ್ಲದ ಚಿತ್ರಣಗಳನ್ನು ಹಂಚಿಕೊಳ್ಳುವ ಮೂಲಕ ಹಾನಿ ಮಾಡುವುದು (ಉದಾ: ಅಶ್ಲೀಲ ಸೇಡು) ಒಳಗೊಂಡಿರುತ್ತದೆ. ಹಾಗೆಯೇ ಕೆಲವೊಂದು ಸಂಸ್ಕೃತಿಗಳಲ್ಲಿ ಬಹಿರಂಗವಾಗಿ ಲೈಂಗಿಕ ವಿಷಯಗಳನ್ನು ವ್ಯಕ್ತಪಡಿಸುವುದು ಅಪರಾಧವಾಗಿದೆ. ನಾವು ಶಿಕ್ಷಣ, ಸಾಕ್ಷ್ಯಚಿತ್ರ, ವೈಜಾÕನಿಕ, ಅಥವಾ ಕಲಾತ್ಮಕ ಉದ್ದೇಶಗಳಿಗಾಗಿ ನಗ್ನತೆ ಮತ್ತು ಬಾಹ್ಯವಾಗಿ ಲೈಂಗಿಕ ಅಶ್ಲೀಲತೆಗಳನ್ನೊಳಗೊಂಡ ವಿಷಯಗಳನ್ನು ಕೆಲವು ನಿರ್ಬಂಧಗಳ ಮೂಲಕ ಹಾಕಲು ಅನುಮತಿಸುತ್ತೇವೆ. ನೀವೊಂದು ವೇಳೆ ಅಪ್ರಾಪ್ತ ವಯಸ್ಕರನ್ನೊಳಗೊಂಡ ವಿಷಯಗಳ ತುಣುಕು ಅಥವಾ ಅಪ್ರಾಪ್ತರಂತೆ ಕಾಣುವ ವ್ಯಕ್ತಿಗಳ ಬಗ್ಗೆ ನಿಮಗೆ ಖಾತ್ರಿಯಿಲ್ಲದಿದ್ದಲ್ಲಿ ಅಂತಹವುಗಳನ್ನು ಪೋಸ್ಟ್ ಮಾಡಬೇಡಿ.

ನಿರ್ದಿಷ್ಟ ವಿಷಯಗಳನ್ನು ಪೋಸ್ಟ್, ಶೇರ್, ಅಪ್ ಲೋಡ್ ಅಥವಾ ಸ್ಟ್ರೀಮ್ ಮಾಡಬಾರದು.

  • ಅಪ್ರಾಪ್ತರು ಲೈಂಗಿಕತೆಯತೆಯಲ್ಲಿ ತೊಡಗಿರುವ ರೀತಿ ಅಥವಾ ಅಪ್ರಾಪ್ತರನ್ನು ಲೈಂಗಿಕವಾಗಿಸುವ ವಿಷಯವನ್ನೊಳಗೊಂಡ ಪೋಸ್ಟ್ ಗಳನ್ನು ಹಾಕಬಾರದು.
  • ಅಪ್ರಾಪ್ತರೊಂದಿಗೆ ನಗ್ನತೆ, ಅಥವಾ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ಚಿತ್ರಣಗಳು ಒಳಗೊಂಡಂತೆ ಮಕ್ಕಳ ದೌರ್ಜನ್ಯ ಪ್ರೋತ್ಸಾಹಿಸುವ ವಿಷಯಗಳನ್ನು
  • ಅಪ್ರಾಪ್ತರು ಬಟ್ಟೆ ಬಿಚ್ಚುತ್ತಿರುವ ಚಿತ್ರವನ್ನು ಪ್ರತಿನಿಧಿಸುವ ವಿಷಯವನ್ನು

6. ವಯಸ್ಕರ ನಗ್ನತೆ ಮತ್ತು ಲೈಂಗಿಕ ವಿಷಯಗಳು

ಜೋಶ್ ನಿರ್ದಿಷ್ಟವಾಗಿ ನಗ್ನತೆ, ಅಶ್ಲೀಲತೆ ಅಥವಾ ಇತರ ಯಾವುದೇ ಲೈಂಗಿಕ ಅಶ್ಲೀಲತೆಗೆ ಸಂಬಂಧಿಸಿದ ವಿಷಯಗಳನ್ನು ವೇದಿಕೆಯಲ್ಲಿ ಹಾಕಲು ಅನುಮತಿ ನೀಡುವುದಿಲ್ಲ. ಹಾಗೆಯೇ ಯಾವುದೇ ಒಪ್ಪಿಗೆಯಿಲ್ಲದ ಲೈಂಗಿಕ ಚಟುವಟಿಕೆ ಬೆಂಬಲಿಸುವುದು ಅಥವಾ ಒಪ್ಪಿಗೆಯಿಲ್ಲದ ಲೈಂಗಿಕ ಚಟುವಟಿಕೆಯ ಚಿತ್ರಣ ಶೇರ್ ಮಾಡುವುದು ಅಥವಾ ಅದಕ್ಕೆ ಪೂರಕವಾಗಿರುವ ಚಿತ್ರಣ ಅಥವಾ ವಯಸ್ಕ ಲೈಂಗಿಕತೆಗಾಗಿನ ಮನವಿಯನ್ನು ಬೆಂಬಲಿಸುವ ವಿಷಯಗಳಿಗೂ ಅನುಮತಿ ನೀಡುವುದಿಲ್ಲ. ನಗ್ನತೆ ಮತ್ತು ಲೈಂಗಿಕತೆ ವಿಷಯವು ಯಾವುದೇ ರೀತಿಯಲ್ಲಿ ಬಾಹ್ಯವಾಗಿ ಸ್ತನ, ಜನನಾಂಗ, ಗುದ, ಅಥವಾ ಪೃಷ್ಠ ಅಥವಾ ಇತರ ಯಾವುದೇ ಲೈಂಗಿಕ ಚಟುವಟಿಕೆಯನ್ನು ಅನುಸರಿಸುವ, ಪ್ರದರ್ಶಿಸುವಂತಹ ಯಾವುದೇ ನಡವಳಿಕೆ ಅಂಶವನ್ನು ಬಾಹ್ಯವಾಗಿ ಬಿಂಬಿಸುವುದನ್ನು ಒಳಗೊಂಡಿದೆ. ನಾವು ಶಿಕ್ಷಣ, ಸಾಕ್ಷ್ಯಚಿತ್ರ, ಸಾರ್ವಜನಿಕ ಜಾಗೃತಿ ಅಥವಾ ಕಲಾತ್ಮಕ ಉದ್ದೇಶಗಳಿಗಾಗಿ ಬಳಸುವ ವಿಷಯಗಳಿಗಷ್ಟೇ ಅನುಮತಿ ನೀಡುತ್ತೇವೆ.

7. ಸೈಬರ್ ಬೆದರಿಕೆ ಮತ್ತು ಕಿರುಕುಳ

ಬಳಕೆದಾರರು ತಾವಾಗಿಯೇ ಯಾವುದೇ ನಾಚಿಕೊಳ್ಳದೆ ಭಯಗೊಳ್ಳದೇ, ಅವಮಾನ, ಬೆದರಿಕೆ, ಅಥವಾ ಕಿರುಕುಳವಿಲ್ಲದೇ ಸುರಕ್ಷಿತವಾಗಿ ವ್ಯಕ್ತಪಡಿಸುವಂತಿರಬೇಕು. ನಾವು ನಿಂದನೀಯ ವಿಷಯಗಳು ವ್ಯಕ್ತಿಗಳ ಮೇಲೆ ಹೇಗೆ ಪರಿಣಾಮ ಬೀರಬಹುದೆಂಬುದನ್ನು ನಾವು ಆಳವಾಗಿ ತಿಳಿದಿದ್ದೇವೆ ಮತ್ತು ನಾವು ನಿಂದನಾರ್ಹ ವಿಷಯ ಅಥವಾ ನಡವಳಿಕೆ ನಿಂದನೆಯ ಅಂಶವನ್ನು ನಾವು ಸಹಿಸುವುದಿಲ್ಲ. ವ್ಯಕ್ತಿಯ ವೈಯಕ್ತಿಕ ಚಟುವಟಿಕೆಯನ್ನು ಅವಮಾನಿಸುವ ಅಥವಾ ತುಚ್ಛೀಕರಿಸುವ ಗುರಿಯನ್ನು ಹೊಂದಿರುವ ವಿಷಯಗಳನ್ನು ನಾವು ವೇದಿಕೆಯಿಂದ ತೆಗೆದುಹಾಕುತ್ತೇವೆ. ಬಳಕೆದಾರರು ಇತರ ಯಾವುದೇ ವ್ಯಕ್ತಿಯನ್ನು ಅವಮಾನ ಅಥವಾ ತುಚ್ಛೀಕರಿಸುವ ಉದ್ದೇಶ ಹೊಂದಿದೆ ಎಂಬುದನ್ನು ವರದಿ ಮಾಡಬೇಕಾಗುತ್ತದೆ.

8. ಆತ್ಮಹತ್ಯ ಮತ್ತು ಸ್ವಯಂ – ಹಾನಿ

ಆತ್ಮಹತ್ಯೆ, ಸ್ವಯಂ ಹಾನಿ ಅಥವಾ ಅಪಾಯಕಾರಿ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಪ್ರೇರೇಪಿಸುವ ಅಂಶಗಳನ್ನೊಳಗೊಂಡಿರುವ ವಿಷಯಗಳಿಗೆ ವೇದಿಕೆಯು ಅನುಮತಿಸುವುದಿಲ್ಲ. ಸ್ವಯಂ ಹಾನಿ, ಸ್ವಯಂ ಗಾಯದ ವೈಭವೀಕರಣ ಅಥವಾ ಆತ್ಮಹತ್ಯೆ ಅಂತೆಯೇ ಆತ್ಮಹತ್ಯೆ ಅಥವಾ ಸ್ವಯಂ ಹಾನಿ ಹೇಗೆ ಮಾಡಿಕೊಳ್ಳಬೇಕೆಂಬುದರ ಬಗ್ಗೆ ಸಲಹೆ ಮಾಡುವಂತಹ ವಿಷಯಗಳನ್ನು ಬಿಂಬಿಸುವುದನ್ನು ಕೂಡ ವೇದಿಕೆ ಅನುಮತಿಸುವುದಿಲ್ಲ. ಗಂಭೀರ ವಿಷಯಗಳಲ್ಲಿ ತೊಡಗಿಸಿಕೊಳ್ಳುವವರಿಗೆ ಬೆಂಬಲ ನೀಡುವಂತಹ ಚಟುವಟಿಕೆಗಳಲ್ಲಿ ತೊಡಗುವಂತಹ ವಿಷಯಗಳಿಗೆ ಅನುಮತಿ ಇರುತ್ತದೆ.

9. ಖಾಸಗಿತನದ ಮೇಲೆ ಆಕ್ರಮಣ

ಬಳಕೆದಾರರು ಇತರರ ಖಾಸಗಿತನದ ಮೇಲೆ ಗೌರವವನ್ನು ನೀಡುವುದನ್ನು ಜೋಶ್ ನಿರೀಕ್ಷಿಸುತ್ತದೆ. ಒಬ್ಬ ವ್ಯಕ್ತಿಯ ಯಾವುದೇ ವೈಯಕ್ತಿಕ ಮಾಹಿತಿ ಅಥವಾ ಅವರ ಖಾಸಗಿತನಕ್ಕೆ ಧಕ್ಕೆ ತರುವಂತಹ ಮಾಹಿತಿಯನ್ನು ಪ್ರಕಟಿಸುವುದು, ಹಂಚಿಕೊಳ್ಳುವುದು ಅಥವಾ ಪ್ರಕಟಿಸುವಂತೆ ಪ್ರೋತ್ಸಾಹಿಸುವುದರಿಂದ ನೀವು ದೂರವಿರಬೇಕು. ಒಬ್ಬರ ವೈಯಕ್ತಿಕ ದತ್ತಾಂಶ ಅಥವಾ ಸೂಕ್ಷ್ಮ ವೈಯಕ್ತಿಕ ಮಾಹಿತಿ, ಸಂಪರ್ಕ ಮಾಹಿತಿ, ವಿಳಾಸ, ಹಣಕಾಸು ಮಾಹಿತಿ, ಆಧಾರ್ ಸಂಖ್ಯೆ, ಪಾಸ್ ಪೋರ್ಟ್ ಮಾಹಿತಿ ಅಥವಾ ಅಂತಹ ಮಾಹಿತಿಯನ್ನು ಪ್ರಕಟಿಸುವಂತೆ ಅಥವಾ ಬಳಸುವಂತೆ ಬೆದರಿಕೆಯೊಡ್ಡುವಂತಹ ವಿಷಯಗಳನ್ನು ವೇದಿಕೆಯು ಕಡ್ಡಾಯವಾಗಿ ನಿರ್ಬಂಧಿಸುತ್ತದೆ ಮತ್ತು ಅದಕ್ಕೆ ಅನುಮತಿಯಿರುವುದಿಲ್ಲ.

10. ತಪ್ಪು ಮಾಹಿತಿ ಮತ್ತು ನಕಲಿ ಸುದ್ದಿ

ನಾವು ಮೋಸ, ವಂಚನೆ ಅಥವಾ ತಪ್ಪುದಾರಿಗೆ ಎಳೆಯುವಂತಹ ವಿಷಯಗಳನ್ನೊಳಗೊಂಡಿರುವ ಆಡಿಯೋ, ವೀಡಿಯೋ ಅಥವಾ ಚಿತ್ರಣಗಳನ್ನು ಅಥವಾ ದೃಢೀಕರಿಸಲಾಗದಿರುವಂತಹ ಚಟವಟಿಕೆಗಳನ್ನು ಪ್ರತನಿಧಿಸುವಂತಹ ವಿಷಯಗಳನ್ನು ಹಾಕಲು ಅನುಮತಿಸುವದಿಲ್ಲ. ಗುಂಪುಗಳಿಗೆ ಅಥವಾ ವ್ಯಕ್ತಿಗಳಿಗೆ ಪ್ರಮುಖವಾಗಿ ತೊಂದರೆಯುಂಟುಮಾಡುವಂತಹ ವಿಷಯಗಳು ಅಂದರೆ ಸಮಂಜಸವಾದ ವ್ಯಕ್ತಿಗೆ ಮೂಲಭೂತವಾಗಿ ವಿಭಿನ್ನ ಅಭಿಪ್ರಾಯ ಅಥವಾ ಅರ್ಥೈಸಿಕೊಳ್ಳಬಹುದಾದ ಅಂಶಗಳನ್ನೊಳಗೊಂಡ ವಿಷಯಗಳನ್ನು ವೇದಿಕೆಯಲ್ಲಿ ಹಾಕಲು ಅನುಮತಿ ನೀಡುವುದಿಲ್ಲ. ಚುನಾವಣಾ ಅಥವಾ ನಾಗರಿಕ ಪ್ರಕ್ರಿಯೆಗಳಲ್ಲಿ ನಂಬಿಕೆ ಇಡಬಹುದಾದ ಮತ್ತು ಇತರ ಮಹತ್ವದ ಅಂಶಗಳು ಅವರ ವ್ಯಕ್ತಿಜೀವನಕ್ಕೆ ಹಾನಿ ಉಂಟುಮಾಡಬಹುದಾದ ವಿಷಯಗಳನ್ನು ನಾವು ಪ್ರಕಟಿಸಲು ಅವಕಾಶ ನೀಡುವುದಿಲ್ಲ. ಬಳಕೆದಾರರು ಕೃತಕ ಅಥವಾ ಕುಶಲತೆಯ ವಿಧಾನಗಳನ್ನು ಬಳಸಿ ಫಾಲೋವರ್ಸ್ ಅಥವಾ ವೀಕ್ಷಣೆ, ಕಮೆಂಟ್ಸ್ ಹಾಗೆಯೇ ಹಂಚಿಕೆಗಳನ್ನು ಹೆಚ್ಚಿಸಿಕೊಳ್ಳುವ ವಿಧಾನಗಳಿಂದ ದೂರವಿರಬೇಕು.

11. ಗುರುತಿನ ಕಳ್ಳತನ ಮತ್ತು ಸೋಗು ಹಾಕುವಿಕೆ

ವಿಷಯದ ಮೂಲದ ಬಗ್ಗೆ ಬಳಕೆದಾರರನ್ನು ತಪ್ಪುದಾರಿಗೆಳೆಯಲು ಇನ್ನೊಬ್ಬ ವ್ಯಕ್ತಿಯಂತೆ, ಬ್ರಾಂಡ್, ಅಥವಾ ಸಂಘಟನೆಯಂತೆ ಪೋಸ್ ಅಥವಾ ಸೋಗು ಹಾಕಬೇಡಿ. ನಿಮ್ಮನ್ನು ಸ್ವಯಂ ಅಗಿ ಪರಿಶೀಲಿಸಲು ಮತ್ತು ನಿಮ್ಮ ಪ್ರೊಫೈಲ್ ನಲ್ಲಿ ಒದಗಿಸಲಾದ ವಿವರಗಳು ನಿಖರವಾಗಿವೆ ಎಂದು ಖಾತರಿಪಡಿಸಲು ನಿಮ್ಮನ್ನು ಪ್ರೋತ್ಸಾಹಿಸಲಾಗುತ್ತದೆ ಮತ್ತು ಯಾವುದೇ ರೀತಿಯಲ್ಲಿ ನಿಮ್ಮನ್ನು ತಪ್ಪಾಗಿ ಪ್ರತಿನಿಧಿಸಲಾಗುವುದಿಲ್ಲ.

12. ಅಸಭ್ಯ ಭಾಷೆ ಮತ್ತು ಅಶ್ಲೀಲತೆ

ನಾವು ವಿಶೇಷವಾಗಿ ಹಿಂಸೆ ಅಥವಾ ವೇದನೆಯನ್ನು ಪ್ರಚುರಪಡಿಸುವ ಅಥವಾ ವೈಭವೀಕರಿಸುವ ಅತೀ ಭಯಾನಕ ಅಥವಾ ಶಾಕಿಂಗ್ ವಿಷಯಗಳನ್ನು ವೇದಿಕೆಯಲ್ಲಿ ಹಾಕಲು ಅನುಮತಿ ನೀಡುವುದಿಲ್ಲ. ನಾವು ಕೆಲವೊಂದು ಸಂದರ್ಭದಲ್ಲಿ ಉದಾಹರಣೆಗೆ, ಸುದ್ದಿಗೆ ಅರ್ಹವೆನಿಸಿದ ಅಥವಾ ಕೆಲವೊಂದು ವಿಷಯಗಳ ಬಗ್ಗೆ ಜಾಗೃತಿ ಮೂಡಿಸುವಂತಹ ವಿಷಯಗಳಿಗೆ ವಿನಾಯಿತಿ ನೀಡುತ್ತೇವೆ. ಹಿಂಸೆಯ ನೈಜ ಅಪಾಯವಿರುವ ಅಥವಾ ಸಾರ್ವಜನಿಕ ಸುರಕ್ಷತೆಗೆ ಬೆದರಿಕೆಯಿರುವಂತಹ ವಿಷಯಗಳಿದ್ದಾಗ ಅದನ್ನು ಗುರುತಿಸಿ ಖಾತೆಯನ್ನು ನಿಷೇಧಿಸುತ್ತೇವೆ ಮತ್ತು ಸೂಕ್ತ ಹಾಗೂಅಗತ್ಯವೆನಸಿದಾಗ ಸೂಕ್ತ ಕಾನೂನು ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಕಾರ್ಯ ನಿರ್ವಹಿಸುತ್ತೇವೆ.

13. ದುರುದ್ದೇಶ ಪೂರಿತ ಕಾರ್ಯಕ್ರಮಗಳು

ದೃಢೀಕರಿಸಲಾಗದ ಅಥವಾ ತಪ್ಪು ಅಥವಾ ತಪ್ಪುದಾರಿಗೆ ಸೆಳೆಯುವಂತಹ ಮಾಹಿತಿಗಳನ್ನು ಉದ್ದೇಶಪೂರ್ವಕವಾಗಿ ಪೋಸ್ಟ್ ಮಾಡಬೇಡಿ ಅಥವಾ ಹಂಚಿಕೊಳ್ಳಬೇಡಿ, ಆದರೆ ಅದು ವಾಸ್ತವವೆಂದು ಗ್ರಹಿಸಬಹುದು. ನಾವು ಫೋಟೋಶಾಪ್ ಮಾಡಿದ ಚಿತ್ರಣ ಅಥವಾ ಡಾಕ್ಟರ್ಡ್ ವೀಡಿಯೋಗಳು ಒಳಗೊಂಡಂತೆ ಮಾರ್ಪಡಿಸುವ ಅಥವಾ ಮಾಧ್ಯಮ ಕುಶಲತೆಗೆ ಶೂನ್ಯ ಸಹಿಷ್ಣುತಾ ನೀತಿ ಹೊಂದಿದ್ದೇವೆ. ನಾಗರಿಕ ಕೇಂದ್ರಿತ ಪ್ರಕ್ರಿಯೆಗಳಿಗೆ ಪರಿಣಾಮ ಬೀರುವಂತಹ ವಿಷಯಗಳನ್ನು ನಾವು ಸಹಿಸುವುದಿಲ್ಲ. ಹಾಗೆಯೇ ನಾವು ರಾಜಕೀಯ ಚುನಾವಣೆಗಳ ಫಲಿತಾಂಶದ ಮೇಲೆ ಮಧ್ಯಪ್ರವೇಶಿಸಬಹುದಾದ ಯಾವುದೇ ವಿಷಯಗಳಿಗೆ ನಾವು ಅನುಮತಿ ನೀಡುವುದಿಲ್ಲ. ಸಾಧ್ಯವಾದಷ್ಟು ಮಟ್ಟಿಗೆ ವೇದಿಕೆಯಲ್ಲಿ ನೀವು ಪೋಸ್ಟ್ ಮಾಡುವ ವಿಷಯಗಳು ವಿಶ್ವಾಸಾ ರ್ಹ ಮತ್ತು ವಸ್ತುನಿಷ್ಠ ಮತ್ತು ದೃಢೀಕೃತ ಮೂಲಗಳಿಂದ ಪಡೆದುಕೊಳ್ಳಲಾಗಿದೆ ಎಂಬುದನ್ನು ಖಾತರಿಪಡಿಸಿಕೊಳ್ಳಬೇಕು.

14. ಕಾನೂನುಬಾಹಿರ ಚಟುವಟಿಕೆಗಳು ಮತ್ತು ನಿಯಂತ್ರಿತ ಸರಕುಗಳು

ನಾವು ವ್ಯಾಪಾರ, ಮಾರಾಟ, ಪ್ರಚಾರ ಮತ್ತು ಕೆಲವೊಂದು ನಿಯಂತ್ರಿತ ಸರಕುಗಳು ಹಾಗೆಯೇ ಅಪರಾಧ ಚಟುವಟಿಕೆಗಳನ್ನು ಪ್ರಚಾರಮಾಡುವ ಚಿತ್ರಣ ಒಳಗೊಂಡಿರುವ ವಿಷಯಗಳನ್ನು ನಾವು ನಿಷೇಧಿಸುತ್ತೇವೆ. ಕೆಲವೊಂದು ವಿಷಯಗಳನ್ನು ವಿಶ್ವದ ಅಥವಾ ಹೆಚ್ಚಿನ ಭಾಗಗಳಲ್ಲಿ ನಿಯಂತ್ರಿತ ಅಥವಾ ಕಾನೂನುಬಾಹಿರ ಎಂದು ಪರಿಗಣಿಸಲ್ಪಡುವ ಚಟುವಟಿಕೆಗಳು ಅಥವಾ ಸರಕುಗಳಿಗೆ ಸಂಬಂಧಿಸಿದ ವಿಷಯಗಳನ್ನು ಅದೊಂದು ವೇಳೆ, ಈ ಪ್ರಶ್ನಾರ್ಹ ಚಟುವಟಿಕೆಗಳು ಅಥವಾ ಸರಕುಗಳ ಪೋಸ್ಟಿಂಗ್ ವ್ಯಾಪ್ತಿಯಲ್ಲಿ ಕಾನೂನುಬದ್ಧವಾಗಿದ್ದರೂ ಸಹ

ನಾವು ವೇದಿಕೆಯಿಂದ ತೆಗೆದುಹಾಕಬಹುದಾಗಿದೆ. ನಾವು ಸಾರ್ವಜನಿಕರಿಗೆ ಮೌಲ್ಯ ವರ್ಧಿಸುವಂತಹ ಶೈಕ್ಷಣಿಕ, ವೈಜಾÕನಿಕ, ಕಲಾತ್ಮಕ ಮತ್ತು ಸುದ್ದಿಗೆ ಅರ್ಹವಾಗುವಂತಹ ವಿಷಯಗಳಿಗೆ ವಿನಾಯಿತಿ ನೀಡುತ್ತೇವೆ. ಯಾವುದೇ ವಿಷಯವು ಆಯುಧಗಳು, ಸ್ಫೋಟಕ ಸಾಮಗ್ರಿಗಳು, ಬಂದೂಕುಗಳೂ, ಕಾನೂನು ಬಾಹಿರ ಸರಕು ಮತ್ತು ಸೇವೆಗಳು, ನಿಯಂತ್ರಿತ ಸರಕುಗಳೂ, ಡ್ರಗ್ಸ್, ನಿಷೇಧಿತ ವಸ್ತುಗಳು, ಲೈಂಗಿಕ ಚಟುವಟಿಕೆಗಳಿಗೆ ಮಾರುವ ಅಥವಾ ಮನವಿ ಮಾಡುವಂತಹ ಅಂಶಗಳನ್ನು ಪ್ರಚಾರ ಮಾಡುವ ವಿಷಯಗಳನ್ನು ವೇದಿಕೆಯಲ್ಲಿ ಹಾಕಲು ಅನುಮತಿಯಿರುವುದಿಲ್ಲ ಮತ್ತು ಅವುಗಳನ್ನು ಕಡ್ಡಾಯವಾಗಿ ನಿಷೇಧಿಸುತ್ತೇವೆ.

ಹಣ ವಸೂಲಿ ಅಥವಾ ಜೂಜಾಟವನ್ನು ಪ್ರೋತ್ಸಾಹಿಸುವ ಸಂಬಂಧದ ವಿಷಯಗಳನ್ನು ಕಡ್ಡಾಯವಾಗಿ ನಿಷೇಧಿಸುತ್ತೇವೆ.

ಕಂಪ್ಯೂಟರ್ ಸಂಪನ್ಮೂಲಗಳ ಕಾರ್ಯಕ್ಷಮತೆಯನ್ನು ನಿಯಂತ್ರಿಸವು ಗುರಿ ಹೊಂದಿದ ಕಂಪ್ಯೂಟರ್ ವೈರಸ್ ಗಳು, ಮಾಲ್ ವೇರ್, ಅಥವಾ ಇತರ ಯಾವುದೇ ರೀತಿಯ ಕಂಪ್ಯೂಟರ್ ಸಂಕೇತಗಳಿಗೆ ಸಂಬಂಧಿಸಿದ ವಿಷಯಗಳನ್ನು ವೇದಿಕೆಯಲ್ಇ ಅಪ್ ಲೋಡ್ ಮಾಡಲು ನಾವು ಅನುಮತಿಸುವುದಿಲ್ಲ. ದಯವಿಟ್ಟು ನೀವು ಪೋಸ್ಟ್ ಮಾಡಿದ ವಿಷಯಗಳು ಕಾನೂನುಬಾಹಿರ, ಅನೈತಿಕ ಅಥವಾ ನೀತಿಬಾಹಿರವಾಗಿರುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ.

15. ಬೌದ್ಧಿಕ ಆಸ್ತಿ (ಕಾಪಿರೈಟ್ ಮತ್ತು ಟ್ರೇಡ್ ಮಾರ್ಕ್ ಉಲ್ಲಂಘನೆ)

ನೀವು ಪೋಸ್ಟ್ ಮಾಡುವ ಎಲ್ಲಾ ಬೌದ್ಧಿಕ ಆಸ್ತಿಗಳ ಹಕ್ಕು ನಿಮ್ಮಲ್ಲಿಯೇ ಇರುತ್ತದೆ ಅಥವಾ ನೀವು ಈ ವೇದಿಕೆಯಲ್ಲಿ ಅಂತಹ ವಿಷಯಗಳನ್ನು ಪೋಸ್ಟ್ ಮಾಡಲು, ಪ್ರದರ್ಶಿಸಲು, ಮರುಉತ್ಪಾದಿಸಲು, ಪ್ರತಿಗಳನ್ನು ಮಾಡಲು, ಬಿತ್ತರಿಸಲು, ಸಾರ್ವಜನಿಕರಿಗೆ ಸಂವಹಿಸಲು ನಿಮ್ಮಲ್ಲಿ ಸೂಕ್ತ ಪರವಾನಗಿ ಇದೆ ಎಂಬುದಾಗಿ ನೀವು ಅಂಗೀಕರಿಸುತ್ತೀರಿ, ದೃಢೀಕರಿಸುತ್ತೀರಿ ಮತ್ತು ಒಪ್ಪಿಕೊಳ್ಳುತ್ತೀರಿ.

ವೇದಿಕೆಯಲ್ಲಿನ ಎಲ್ಲಾ ಬೌದ್ಧಿಕ ಆಸ್ತಿಯ ಹಕ್ಕು ನೋಂದಾಯಿಸಿರಲಿ ಅಥವಾ ನೋಂದಾಯಿಸಿಲ್ಲದಿರಲಿ ಆದರೆ ಅದರ ಸಾಫ್ಟವೇರ್, ಇಂಟರ್ ಫೇಸ್, ವೆಬ್ ಪೇಜ್ ಗಳು, ಡಾಟಾಬೇಸ್ ಗಳು, ಹೆಸರು ಮತ್ತು ಲೋಗೋಗಳು ವರ್ಸೇಗಷ್ಟೇ ಸೀಮಿತವಾಗಿರುತ್ತವೆ ಎಂದು ನೀವು ಅಂಗೀಕರಿಸುತ್ತೀರಿ, ದೃಢೀಕರಿಸುತ್ತೀರಿ ಮತ್ತು ಒಪ್ಪಿಕೊಳ್ಳುತ್ತೀರಿ. ನೀವು ಮೇಲೆ ತಿಳಿಸಲಾದ ಯಾವುದೇ ರೀತಿಯ ಬೌದ್ಧಿಕ ಆಸ್ತಿಯ ವಿರುದ್ದ ಯಾವುದೇ ಹಕ್ಕು ಸಾಧಿಸುವಂತಿಲ್ಲ.

ನೀವು ಪೋಸ್ ಮಾಡಿದ ವಿಷಯಗಳಿಗೆ ನೀವೇ ಕರ್ತೃಗಳಾಗಿರುತ್ತೀರಿ. ವೇದಿಕೆಯಲ್ಲಿನ ಎಲ್ಲಾ ಹಕ್ಕುಗಳು ವರ್ಸೇಯ ಮಾಲೀಕತ್ವದಲ್ಲಿರುತ್ತದೆ.

ವೇದಿಕೆಯಲ್ಲಿ ವಿಷಯಗಳನ್ನು ಪೋಸ್ಟ್ ಮಾಡಿದಾಗ ನೀವು ವರ್ಸೇಗೆ ಒಂದು ವಿಶೇಷವಲ್ಲದ, ಶಾಶ್ವತ, ವಿಶ್ವಾದ್ಯಂತದ, ವರ್ಗಾಯಿಸಬಹುದಾದ, ವಾಪಸ್ ಪಡೆಯಲಾಗದ, ರಾಯಧನಮುಕ್ತವಾದ, ಬಳಸಲು ಅಸೀಮಿತ ಪರವಾನಗಿಯಿರುವ, ವಾಣಿಜ್ಯ ಉದ್ದೇಶದ ಬಳಕೆಗಾಗಿ, ಸಂಗ್ರಹಿಸಲು, ಪ್ರಕಟಿಸಲು, ಪ್ರದರ್ಶಿಸಲು, ವಿತರಿಸಲು ಮತ್ತು ನೀವು ಪೋಸ್ಟ್ ಮಾಡಿದಂತಹ ವಿಷಯಗಳನ್ನು ದಾಸ್ತಾನಿಡಲು ಪರವಾನಗಿ ನೀಡುತ್ತೀರಿ. ನೀವು ಪೋಸ್ಟ್ ಮಾಡಿದಂತಹ ವಿಷಯಗಳಿಗೆ ಯಾವುದೇ ಪರವಾನಗಿಮುಕ್ತ, ರಾಯಧನ, ಅಥವಾ ವಿಷಯಕ್ಕೆ ಸಂಬಂಧಿಸಿದ ಇತರ ಯಾವುದೇ ಅನ್ವಯಿತ ಪರಿಗಣನೆಗಳಿಗೆ ಪಾವತಿಸಲು ನೀವು ಒಪ್ಪಿಕೊಂಡಿರುತ್ತೀರಿ, ಅರ್ಥಮಾಡಿಕೊಂಡಿರುತ್ತೀರಿ ಮತ್ತು ಖಾತ್ರಿಪಡಿಸಿರುತ್ತೀರಿ.

ನೀವು ವರ್ಸೇಗೆ ನೀವು ವೇದಿಕೆಯಲ್ಲಿ ಪೋಸ್ ಮಾಡಿದ ವಿಷಯಗಳನ್ನು ಬಳಸುವ ಹಕ್ಕಿಗೆ ಅನುಮತಿ ನೀಡಿರುತ್ತೀರಿ.

ಈ ನೀತಿಯಲ್ಲಿ ಸ್ಪಷ್ಟವಾಗಿ ನಿಗದಿಪಡಿಸದ ಹೊರತಾಗಿ ನೀವು ವಿಷಯಗಳು, ಸಾಫ್ಟವೇರ್, ಸಾಧನಗಳು, ಅಥವಾ ಸೇವೆಗಳನ್ನು ಸಂಪೂರ್ಣವಾಗಿ ಅಥವಾ ಭಾಗಶಃವಾಗಿ ನಕಲು, ಮಾರ್ಪಾಡು, ಪ್ರಕಟಣೆ, ವರ್ಗಾವಣೆ, ಅಪ್ ಲೋಡ್, ವರ್ಗಾವಣೆ ಅಥವಾ ಮಾರಾಟದಲ್ಲಿ ಭಾಗವಹಿಸುವುದು, ಮರುಉತ್ಪಾದನೆ (ಈ ವಿಭಾಗದಲ್ಲಿ ಒದಗಿಸಿದ ಹೊರತಾಗಿ) ಈ ಕೆಲಸದ ಆಧಾರದ ಮೇಲೆ ಬೇರೆ ಮಾಹಿತಿ ಸೃಜಿಸುವುದು, ವಿತರಿಸುವುದು, ನಿರ್ವಹಿಸುವುದು, ಪ್ರದರ್ಶಿಸುವುದು, ಅಥವಾ ಯಾವುದೇ ರೀತಿಯಲ್ಲಿ ಶೋಷಣೆ ಮಾಡಿಕೊಳ್ಳುವಂತಿಲ್ಲ.

ಅನಧಿಕೃತ ಉದ್ದೇಶಗಳಿಗಾಗಿ ವೇದಿಕೆಯಲ್ಲಿ ಪೋಸ್ಟ್ ಮಾಡಲಾದ ವಿಷಯಗಳನ್ನು ಬಳಸಬಾರದು.

ಒಂದು ವೇಳೆ ನೀವು ವೇದಿಕೆಯಿಂದ ಯಾವುದೇ ವಿಷಯಗಳನ್ನು ತೆಗೆದುಹಾಕಿದ್ದರೆ ಅಥವಾ ಸ್ಥಗಿತಗೊಳಿಸಿದರೆ, ವರ್ಸೇಯು ನೀವು ಪೋಸ್ಟ್ ಮಾಡಿದ ವಿಷಯವನ್ನು ತನ್ನ ಸ್ವವಿವೇಚನೆಯಲ್ಲಿ ಉಳಸಿಕೊಳ್ಳಬಹುದು ಮತ್ತು ಬಳಸಹಬುದು ಮತ್ತು ಯಾವುದೇ ಕಾನೂನು ಉದ್ದೇಶಗಳಿಗಾಗಿ ಬಳಸಿಕೊಳ್ಳಬಹುದಾಗಿದೆ. ವರ್ಸೇ ಮತ್ತು ಅದರ ಬಳಕೆದಾರರು ನೀವು ಪೋಸ್ಟ್ ಮಾಡಿದ ಯಾವುದೇ ವಿಷಯಗಳನ್ನು ನೀವು ಬಳಕೆಯನ್ನು ರದ್ದುಗೊಳಿಸಿದ ಬಳಿಕವು ಉಳಿಸಿಕೊಳ್ಳಬಹುದು ಮತ್ತು ಬಳಸುವಿಕೆಯನ್ನು ಮುಂದುವರೆಸಬಹುದು ಸಂಗ್ರಹಿಸಿಟ್ಟುಕೊಳ್ಳಬಹುದು.

ನೀವೊಂದು ವೇಳೆ ವೇದಿಕೆಯಿಂದ ವಿಷಯಗಳನ್ನು ತೆಗೆದುಹಾಕಿದ್ದರೂ ಕೂಡ ವರ್ಸೇ ಅದನ್ನು ಬಳಸುವ ಹಕ್ಕನ್ನು ತನ್ನಲ್ಲಿ ಉಳಿಸಿಕೊಂಡಿರುತ್ತದೆ.

ಸಿ. ಪ್ರಾತಿನಿಧಿತ್ವ ಮತ್ತು ವಾರಂಟಿಗಳು

ನೀವು ಪೋಸ್ಟ್ ಮಾಡಿದ ವಿಷಯಗಳು ಈ ನೀತಿಯ ಯಾವುದೇ ಷರತ್ತುಗಳನ್ನು ಉಲ್ಲಂಘಿಸುವುದಿಲ್ಲ, ಅಥವಾ ನೀವು ಪೋಸ್ಟ್ ಮಾಡುತ್ತಿರುವ ಪ್ರದೇಶದಲ್ಲಿನ ಜಾರಿಯಲ್ಲಿರುವ ಕಾನೂನನ್ನು ಉಲ್ಲಂಘಿಸುತ್ತಿಲ್ಲ ಮತ್ತು ವಿಷಯವನ್ನು ಪ್ರದರ್ಶಿಸಬಹುದಾಗಿದ್ದು, ಬಿತ್ತರಿಸಬಹುದಾಗಿದ್ದು ಪ್ರಕಟಿಸಬಹುದಾಗಿದ್ದು, ಬಳಸಬಹುದು ಸಾರ್ವಜನಿಕರಿಗೆ ಸಂವಹಿಸಬಹುದು, ಮರುಉತ್ಪಾದಿಸಬಹುದು ಅಥವಾ ನಕಲು ಮಾಡಬಹುದಾಗಿದ್ದು ಎಂಬುದಾಗಿ ನೀವು ಪ್ರಾತಿನಿಧಿಕವಾಗಿ ಒಪ್ಪುತ್ತೀರಿ ಮತ್ತು ವಾರಂಟಿ ನೀಡುತ್ತೀರಿ.

ಮುಂದುವರೆದು, ವೇದಿಕೆಯಲ್ಲಿ ನೀವು ಪೋಸ್ಟ್ ಮಾಡುವ ವಿಷಯಗಳಿಗೆ ಮತ್ತು ಆ ವಿಷಯಗಳಲ್ಲಿನ ಮೇಲೆ ಇತರ ಕೃತಿಗಳನ್ನು ಒಳಗೊಂಡಂತೆ, ನೀವು ನಿಮ್ಮ ಜವಾಬ್ದಾರಿಗಳನ್ನು ನಿರ್ವಹಿಸಲು ಸೂಕ್ತ ಪರವಾನಗಿ ಇದ್ದು ಅದರ ಪ್ರತಿನಿಧಿಯಾಗಿ, ಒಪ್ಪಂದ ಮತ್ತು ವಾರಂಟಿಯನ್ನು ನೀಡುತ್ತೀರಿ.

ನೀವು ಮಾಡುವ ಪೋಸ್ಟ್ ಕಾನೂನಾತ್ಮಕವಾಗಿದೆ ಮತ್ತು ನಿಮಗೆ ಅದನ್ನು ಪೋಸ್ಟ್ ಮಾಡಲು ಹಕ್ಕಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.

ಈ ನೀತಿಯಡಿಯಲ್ಲಿ ವರ್ಸೇಯು ಯಾವುದೇ ವಾರಂಟಿಯನ್ನು ಮಾಡುವುದಿಲ್ಲ. ಮತ್ತು ವ್ಯಕ್ತಪಡಿಸಿದ ಅಥವಾ ಅಳವಡಿಸಿದ, ಎಲ್ಲಾ ಒಳಗೊಂಡಂತೆ ಆದರೆ ಸೀಮಿತವಾಗಿಲ್ಲದ ಎಲ್ಲಾ ವಾರಂಟಿಗಳನ್ನು ತಿರಸ್ಕರಿಸುತ್ತದೆ.

  • ವ್ಯಾಪಾರೀಕರಣ, ನಿರ್ದಿಷ್ಟ ಫಿಟ್ನೆಸ್ ಉದ್ದೇಶಕ್ಕಾಗಿ ಮತ್ತು ವೇದಿಕೆ(ಗಳು) ಅಥವಾ ಇತರ ಯಾವುದೇ ಅಂಶಗಳಿಗೆ ಸಂಬಂಧಿಸಿದಂತೆ ಉಲ್ಲಂಘನೆಯಾಗದಿರುವ ವ್ಯಕ್ತಪಡಿಸುವ ಅಥವಾ ಹೇರಿತ ವಾರಂಟಿಗಳು.
  • ಯಾವುದೇ ಮತ್ತು ಎಲ್ಲಾ ವಿಷಯಗಳಿಗನುಗುಣವಾಗಿರುವ ವಾರಂಟಿಗಳು
  • ಯಾವುದೇ ಲಭ್ಯ ಜಾಹೀರಾತಿಗೆ ಮಾತ್ರ ಸೀಮಿತವಾಗಿರದ ಸೇವೆಗಳು, ತಂತ್ರಜಾÕನಗಳು ಸೇರಿದಂತೆ ವೇದಿಕೆಗಳ ನಿರ್ವಹಣೆ ಅಥವಾ ಗುಣಮಟ್ಟಕ್ಕೆ ಸಂಬಂಧಿಸಿದ ವಾರಂಟಿಗಳು; ಮತ್ತು
  • ವೇದಿಕೆ(ಗಳು) ಮತ್ತು /ಅಥವಾ ಅದು ನೀಡುವ ಸೇವೆಗಳು ತಡೆರಹಿತವಾಗಿ, ಕಾಲಕಾಲಕ್ಕೆ ಅಥವಾ ದೋಷಮುಕ್ತವಾಗಿರುತ್ತವೆ ಎಂದು ಖಾತರಿಪಡಿಸುತ್ತದೆ.

ವೇದಿಕೆಗೆ ಸಂಬಂಧಿಸಿದಂತೆ ವರ್ಸೇಯು ಯಾವುದೇ ವಾರಂಟಿಯನ್ನು ಮಾಡುವುದಿಲ್ಲ.

ಡಿ. ನಷ್ಟ ಪರಿಹಾರ

ನೀವು ಪೋಸ್ಟ್ ಮಾಡಿದ ವಿಷಯಗಳಿಂದ ಅಥವಾ ನಿಮ್ಮಿಂದ ನೀತಿಯ ಯಾವುದೇ ಉಲ್ಲಂಘನೆಯಾದಲ್ಲಿ ಅಥವಾ ಇತರ ಯಾವುದೇ ಕಾನೂನು ಬಾಹಿರ ಚಟುವಟಿಕೆ ಮಾಡಿದ್ದಲ್ಲಿ, ವರ್ಸೇ ಮತ್ತು ಅದರ ಅಂಗಸಂಸ್ಥೆ, ವ್ಯಾಪಾರ ಪಾಲುದಾರರು, ಮತ್ತು ಅದರ ನಿರ್ದೇಶಕರು, ಅಧಿಕಾರಿಗಳು ಮತ್ತು ಉದ್ಯೋಗಿಗಳು ಅಟಾರ್ನಿ ಶುಲ್ಕಗಳು ಮತ್ತು ವೆಚ್ಚಗಳು ಸೇರಿದಂತೆ ಮೂರನೇ ಪಾರ್ಟಿಯು ಬೇಡಿಕೆ ಒಡ್ಡುವಷ್ಟು ಮೊತ್ತದ ನಷ್ಟಪರಿಹಾರವನ್ನು ನೀವು ಭರಿಸಬೇಕಾಗುತ್ತದೆ.

ವೇದಿಕೆಯಲ್ಲಿ ನಿಮ್ಮ ಪೋಸ್ಟ್ ನಿಂದಾಗಿ ವರ್ಸೇಯ ವಿರುದ್ಧ ಯಾವುದೇ ಮೊಕದ್ದಮೆ ದಾಖಲಾದಲ್ಲಿ ಆ ನಷ್ಟವನ್ನು ನೀವು ಭರಿಸಬೇಕಾಗುತ್ತದೆ.

ಕಾನೂನಿನ ಪ್ರಕಾರ ಅನುಮತಿಸಲಾದ ಗರಿಷ್ಟ ಪ್ರಮಾಣ, ವರ್ಸೇ ಮತ್ತು/ಅಥವಾ ಅದರ ಅಂಗಸಂಸ್ಥೆಗಳು ಯಾವುದೇ ಪರೋಕ್ಷ, ಆಕಸ್ಮಿಕ, ವಿಶೇಷ, ಪರಿಣಾಮಕಾರಿ ಅಥವಾ ದಂಡನೀಯ ಹಾನಿ, ಅಥವ ಲಾಭದ ನಷ್ಟ ಅಥವಾ ಆದಾಯ, ಪ್ರತ್ಯಕ್ಷ ಅಥವಾ ಪರೋಕ್ಷ ನಷ್ಟ, ಅಥವಾ ದತ್ತಾಂಶ ನಾಶ, ಬಳಕೆ, ಸದುದ್ದೇಶ ಅಥವಾ ಇತರ ನಷ್ಟಗಳಿಗೆ ಜವಾಬ್ದಾರರಾಗಿರುವುದಿಲ್ಲ. ಇತರ ನಷ್ಟಗಳ ಫಲಿತಾಂಶ (ಎ)ವೇದಿಕೆಯನ್ನು ನೀವು ಪ್ರವೇಶಿಸಲು ಅಥವಾ ಬಳಸಲು ಅಸಮರ್ಥರಾದಾಗ (ಬಿ)ವೇದಿಕೆಯಲ್ಲಿ ಕಾನೂನಿನ ಪ್ರಕಾರ ಅನುಮತಿಸಲಾದ ಗರಿಷ್ಟ ಪ್ರಮಾಣ, ವರ್ಸೇ ಮತ್ತು/ಅಥವಾ ಅದರ ಅಂಗಸಂಸ್ಥೆಗಳು ಯಾವುದೇ ಪರೋಕ್ಷ, ಆಕಸ್ಮಿಕ, ವಿಶೇಷ, ಪರಿಣಾಮಕಾರಿ ಅಥವಾ ದಂಡನೀಯ ಹಾನಿ, ಅಥವ ಲಾಭದ ನಷ್ಟ ಅಥವಾ ಆದಾಯ, ಪ್ರತ್ಯಕ್ಷ ಅಥವಾ ಪರೋಕ್ಷ ನಷ್ಟ, ಅಥವಾ ದತ್ತಾಂಶ ನಾಶ, ಬಳಕೆ, ಸದುದ್ದೇಶ ಅಥವಾ ಇತರ ನಷ್ಟಗಳಿಗೆ ಜವಾಬ್ದಾರರಾಗಿರುವುದಿಲ್ಲ. ಇತರ ನಷ್ಟಗಳ ಫಲಿತಾಂಶ (ಎ)ವೇದಿಕೆಯನ್ನು ನೀವು ಪ್ರವೇಶಿಸಲು ಅಥವಾ ಬಳಸಲು ಅಸಮರ್ಥರಾದಾಗ (ಬಿ)ವೇದಿಕೆಯಲ್ಲಿ ಯಾವುದೇ ಮಿತಿಯಿಲ್ಲದೇ, ಇತರ ಬಳಕೆದಾರು ಅಥವಾ ಮೂರನೇ ಪಾರ್ಟಿಯ ಮಾನಹಾನಿಕರ, ಅಥವಾ ಕಾನೂನುಬಾಹಿರ ನಡವಳಿಕೆ ಸೇರಿದಂತೆ ವೇದಿಕೆಯಲ್ಲಿ ಇತರ ಬಳಕೆದಾರರು ಮತ್ತು ಮೂರನೇ ಪಾರ್ಟಿಯ ನಡವಳಿಕೆ ಅಥವಾ (ಸಿ) ಅನಧಿಕೃತ ಪ್ರವೇಶ, ಬಳಕೆ ಅಥವಾ ನಿಮ್ಮ ವಿಷಯ ಅಥವಾ ಟ್ರಾನ್ಸ್ ಮಿಷನ್ ನ ಬದಲಾವಣೆ. ಯಾವುದೇ ಸನ್ನಿವೇಶದಲ್ಲಿ ವೇದಿಕೆಗೆ ಸಂಬಂಧಿಸಿದ ಎಲ್ಲಾ ಕ್ಲೈಮ್ ಗಳಿಗೆ ವರ್ಸೇ ಯ ಒಟ್ಟು ಹೊಣೆಗಾರಿಕೆ 5,000 (5 ಸಾವಿರ ಮಾತ್ರ) ರೂಪಾಯಿಯನ್ನು ಮೀರಬಾರದು.

ಇ. ನಮ್ಮ ಹೊಣೆಗಾರಿಕೆ ಸೀಮಿತವಾಗಿದೆ

ಈ ಹೊಣೆಗಾರಿಕೆಯ ಮಿತಿಯು ನೀವು ಮತ್ತು ವರ್ಸೇ ನಡುವಿನ ಚೌಕಾಸಿಯನ್ನು ಅವಲಂಬಿಸಿದ ಭಾಗವಾಗಿದೆ ಮತ್ತು ಎಲ್ಲಾ ಹೊಣೆಗಾರಿಕೆಯ (ಉದಾ: ವಾರಂಟಿ, ಟಾರ್ಟ್, ನಿರ್ಲಕ್ಷ್ಯ, ಒಪ್ಪಂದ, ಕಾನೂನು) ಕ್ಲೈಮ್ ಗಳಿಗೆ ಅನ್ವಯಿಸುತ್ತದೆ. ಒಂದು ವೇಳೆ ವರ್ಸೇ ಅಥವಾ ಅದರ ಅಂಗಸಂಸ್ಥೆಗಳು ಯಾವುದೇ ರೀತಿಯಾದಂತಹ ಹಾನಿ ಮತ್ತು ಈ ಪರಿಹಾರಗಳು ಅವರ ಅಗತ್ಯ ಉದ್ದೇಶಗಳನ್ನು ಪೂರೈಸಲು ವಿಫಲವಾದಲ್ಲಿ ಕೂಡ ಅನ್ವಯವಾಗುತ್ತದೆ.

ಎಫ್. ನೋಟೀಸ್ ಮತ್ತು ಕುಂದು ಕೊರತೆ ಪರಿಹಾರ ಕಾರ್ಯವಿಧಾನಗಳು

ವೇದಿಕೆಯ ಮೂಲಕ ವಿಷಯ ಅಥವಾ ಜಾಹೀರಾತುಗಳ ಪ್ರವೇಶಕ್ಕಾಗಿ ಜವಾಬ್ದಾರಿಯಾಗಿಲ್ಲ ಎಂಬುದನ್ನು ವಿಶೇಷವಾಗಿ ವರ್ಸೇ ಯು ನೋಟಿಸ್ನಲ್ಲಿ ತಿಳಿಸಲಾಗಿದೆ. ವರ್ಸೇಯು ತನ್ನ ಸ್ವಯಂ ವಿವೇಚನೆಯಿಂದ ಮೂರನೇ ಪಾರ್ಟಿಯ ಹಕ್ಕುಗಳನ್ನು ಉಲ್ಲಂಘಿಸಲು ಹಕ್ಕು ಪಡೆದಿರುವ ವಿಷಯಕ್ಕೆ ಪ್ರವೇಶವನ್ನು ತೆಗೆದುಹಾಕಲು ಮತ್ತು / ಅಥವಾ ನಿಷ್ಕ್ರಿಯಗೊಳಿಸಲು ಮತ್ತು /ಅಥವಾ ವರ್ಸೇಯ ಬೌದ್ಧಿಕ ಆಸ್ತಿ ಅಥವಾ ಇತರ ಹಕ್ಕುಗಳನ್ನು ಉಲ್ಲಂಘಿಸಬಹುದಾದ ಪ್ಲ್ಯಾಟ್ ಫಾರ್ಮ್ ನ ಬಳಕೆದಾರರ ಖಾತೆಗಳನ್ನು ಕೊನೆಗೊಳಿಸಲು ಹಕ್ಕನ್ನು ತನ್ನಲ್ಲೇ ಕಾಯ್ದಿರಿಸಿಕೊಂಡಿದೆ.

  • ಕುಂದು ಕೊರತೆ ಪರಿಹಾರ ಕಾರ್ಯವಿಧಾನ

ವರ್ಸೇ ಕುಂದು ಕೊರತೆಗಳನ್ನು ಪರಿಹರಿಸಲು ಈ ಕೆಳಗಿನ ವಿಧಾನಗಳನ್ನು ಅಳವಡಿಸಿಕೊಂಡಿದೆ.

ಕುಂದುಕೊರತೆಗಳು ಅಥವಾ ಸೇವೆಗಳ ಷರತ್ತುಗಳ ಉಲ್ಲಂಘನೆಯ ಬಗೆಗಿನ ಕಾಳಜಿ, ಖಾಸಗಿ ನೀತಿ, ಮತ್ತು ಸಮುದಾಯ ಮಾರ್ಗಸೂಚಿಗಳನ್ನು “ನಿವಾಸಿ ಕುಂದುಕೊರತೆ ನಿವಾರಣಾ ಅಧಿಕಾರಿಗೆ” ತಿಳಿಸಬೇಕು. ನಿವಾಸಿ ಕುಂದುಕೊರತೆ ನಿವಾರಣಾ ಅಧಿಕಾರಿಗೆ grievance.officer@myjosh.in ಇಮೇಲ್ ಅಥವಾ ಈ ಕೆಳಗಿನ ಪಟ್ಟಿಯಲ್ಲಿ ವಿವರಿಸಿದಂತೆ ನಮೂದಿಸಿ ಮೇಲ್ ಮಾಡಬೇಕು. ದೂರು ಇತ್ಯರ್ಥಪಡಿಸಲು ವರ್ಸೇಗೆ ಅಗತ್ಯ ಮಾಹಿತಿಗಳನ್ನು ಹೊಂದಿರಬೇಕು.

ನೀವು ಇಲ್ಲಿ ಸಂಪರ್ಕಿಸಬಹುದು :

ವಿವರ:

ಹೆಸರು / ಶೀರ್ಷಿಕೆ

ಇಮೇಲ್

ಕುಂದು ಕೊರತೆ ನಿವಾರಣೆಗಾಗಿ ಕುಂದು

ಕೊರತೆ ಅಧಿಕಾರಿ : ಶ್ರೀ ನಾಗರಾಜ್

grievance.officer@myjosh.in

ಕಾನೂನು ಜಾರಿ ಸಮನ್ವಯತೆಗಾಗಿ

ನೋಡಲ್ ಅಧಿಕಾರಿ: ಶ್ರೀ ಸುನಿಲ್ ಕುಮಾರ್ ಡಿ

nodal.officer@myjosh.in

ದೂರು ನಿಯಂತ್ರಣಕ್ಕಾಗಿ

ದೂರು ಅಧಿಕಾರಿ

compliance.officer@myjosh.in

ವೇದಿಕೆಯಲ್ಲಿ ಪ್ರಕಟಿಸಲಾದ ವಿಷಯ ಅಥವಾ ಜಾಹೀರಾತಿನಿಂದ ಯಾವುದೇ ವ್ಯಕ್ತಿ /ಸಂಸ್ಥೆ ಬಾಧಿತವಾಗಿದ್ದರೆ ಅವರು ಅಂತಹ ವಿಷಯ ಅಥವಾ ಜಾಹೀರಾತಿನ ವಿರುದ್ಧ ದೂರು ದಾಖಲಿಸಬಹುದು. ಬಾಧಿತ ವ್ಯಕ್ತಿಯ /ಸಂಸ್ಥೆಯ ಕಾನೂನಾತ್ಮಕ ಉತ್ತರಾಧಿಕಾರಿ, ಮಧ್ಯವರ್ತಿ ಅಥವಾ ವಕೀಲರು ಅಂತಹ ವಿಷಯ ಅಥವಾ ಲೇಖನದ ಮೇಲೆ ದೂರು ದಾಖಲಿಸಬಹುದು. ಒಂದು ವೇಳೆ ದೂರು ಅಪರಾಧ ವ್ಯಾಪ್ತಿಯೊಳಗಡೆ ಬರದಿದ್ದರೆ, ವಿಷಯ ಅಥವಾ ಜಾಹೀರಾತಿನ ಬಗ್ಗೆ ಆಗ ಸಂಬಂಧಿಸದ ವ್ಯಕ್ತಿಯು/ ಸಂಸ್ಥೆಯು ವಿಷಯ ಅಥವಾ ಜಾಹೀರಾತಿನ ವಿರುದ್ಧ ಸೂಕ್ತ ದೂರು ದಾಖಲಿಸಲಾಗುವುದಿಲ್ಲ. ನೀವೊಂದು ವೇಳೆ ಬಾಧಿತರ ಪರವಾದ ಮಧ್ಯವರ್ತಿ ಅಥವಾ ವಕೀಲರು ಆಗಿದ್ದಲ್ಲಿ, ಆಗ ನೀವು ಬಾಧಿತರ ಪರವಾಗಿ ದೂರು ದಾಖಲಿಸಲು ಹಕ್ಕು ಸ್ಥಾಪಿಸುವ ಸಂಬಂಧ ಸೂಕ್ತ ಪುರಾವೆ ದಾಖಲೆಗಳನ್ನು ಸಲ್ಲಿಸಬೇಕಾದ ಅಗತ್ಯವಿರುತ್ತದೆ.

ವರ್ಸೇ ಇನ್ನೋವೇಷನ್ ಪ್ರೈವೇಟ್ ಲಿಮಿಟೆಡ್

11ನೇ ಮಹಡಿ, ವಿಂಗ್ ‘ಇ’ ಹೆಲಿಯೋಸ್ ಬಿಸಿನೆಸ್ ಪಾರ್ಕ್,

ಔಟರ್ ರಿಂಗ್ ರಸ್ತೆ, ಕಾಡುಬೀಸನಹಳ್ಳಿ,

ಬೆಂಗಳೂರು – 560103, ಕರ್ನಾಟಕ, ಭಾರತ

ನಮ್ಮ ಉತ್ಪನ್ನದ ಬಳಕೆದಾರರು ಯಾವುದೇ ದೂರು ಅಥವಾ ಇತರ ವಿಷಯಗಳನ್ನು ಈ ಕೆಳಗಿನ ವಿಳಾಸಕ್ಕೆ ಇ ಮೇಲ್ ಮೂಲಕ ಸಲ್ಲಿಸಬಹುದು. ದೂರು ಇವುಗಳನ್ನು ಹೊಂದಿರಬೇಕಾಗುತ್ತದೆ. 1. ಸೂಕ್ತ ಖಾತಾ ಹೋಲ್ಡರ್ ನ ಯೂಸರ್ ನೇಮ್ 2. ನಿರ್ದಿಷ್ಟ ವಿಷಯ/ಸಂಬಂಧಿಸಿದ ವೀಡಿಯೋ ಮತ್ತು 3. ತೆಗೆದುಕೊಂಡ ಮನವಿಗಾಗಿನ ಕಾರಣ(ಗಳು)

ಜೋಶ್ ಕಂಪನಿಗೆ ದೂರನ್ನು ಇತ್ಯರ್ಥಪಡಿಸಲು ಅಗತ್ಯವಿರುವ ಮಾಹಿತಿಗಳನ್ನು ದೂರು ಹೊಂದಿರಬೇಕು. ಜೋಶ್ ಗೆ ಸಲ್ಲಿಸಬೇಕಾಗಿರುವ ಎಲ್ಲಾ ದೂರುಗಳನ್ನು ಜಂಟಿಯಾಗಿ ಲಿಖಿತ ರೂಪದಲ್ಲಿ ವೈಯಕ್ತಿಕವಾಗಿ ಸಲ್ಲಿಸಬಹುದು ಅಥವಾ ನೋಂದಾಯಿತ ಮೇಲ್ ನಲ್ಲಿ ಕಳುಹಿಸಬೇಕು ಮತ್ತು ರಶೀದಿಯನ್ನ ಹಿಂದಿರುಗಿಸುವಂತೆ ಮನವಿ ಮಾಡಬೇಕು ಅಥವಾ ಮೇಲಿನ ವಿಳಾಸಕ್ಕೆ ಫ್ಯಾಸಿಮೈಲ್ ಅಥವಾ ಇ ಮೇಲ್ ಮಾಡಬೇಕು.

ನಾನು ಈ ಬಳಕೆದಾರರ ಒಪ್ಪಂದದ ಷರತ್ತುಗಳನ್ನು ಓದಿದ್ದೇನೆ ಮತ್ತು ಅರ್ಥಮಾಡಿಕೊಂಡಿದ್ದೇನೆ ಮತ್ತು ಈ ಮೂಲಕ ಸ್ವಯಂ ಇಚ್ಛೆಯಿಂದ ನಾನು ಷರತ್ತುರಹಿತವಾಗಿ ಇದಕ್ಕೆ ಬದ್ಧವಾಗಿರಲು ಒಪ್ಪಿಕೊಂಡಿದ್ದೇನೆ.

ಒಂದು ವೇಳೆ, ಈ ಖಾಸಗಿ ನೀತಿಯ ಬಗ್ಗೆ ಯಾವುದೇ ದೂರು ಅಥವಾ ಕಾಳಜಿಗಳಿದ್ದಲ್ಲಿ, ನೀವು ಜೋಶ್ ನ ಕುಂದುಕೊರತೆ ಅಧಿಕಾರಿಯನ್ನು ಇ ಮೇಲ್ ಅಥವಾ ಮೇಲ್ ಮೂಲಕ ಸಂಪರ್ಕಿಸಬಹುದು. ನೀವು ನಿಮ್ಮ ದೂರುಗಳನ್ನು ಈ ಇಮೇಲ್ ವಿಳಾಸ grievance.officer@myjosh.inಕ್ಕೆ “ಖಾಸಗಿ ದೂರು” ಎಂದು ನಮೂದಿಸಿ ಕಳುಹಿಸಬಹುದು. ನೀವು ಕುಂದುಕೊರತೆ ಅಧಿಕಾರಿಯನ್ನು ಮೇಲಿನ ವಿಧಾನದ ಮೂಲಕ ಇ ಮೇಲ್ ಅಥವಾ ಲಿಖಿತ ಪತ್ರದ ಮೂಲಕ ಸಂಪರ್ಕಿಸಬಹುದು.

tower
inter circlw intercircle intercircle intercircle

Ohh Nooo!

There is no internet connection, please check your connection

TRY AGAIN

Ohh Nooo!

Landscape mode not supported, Please try Portrait.